ಮೂಡಲಗಿ: ಮಕ್ಕಳಲ್ಲಿ ಉತ್ತಮ ಸಂಸ್ಕೃತಿ, ಸಂಸ್ಕಾರ ಬೆಳೆಸಲು ಪೂರಕವಾದ ವಾತಾವರಣ ನಿರ್ಮಾಣ ಮಾಡುವುದು ಶಿಕ್ಷಕರ ಕರ್ತವ್ಯ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಹೇಳಿದರು.
ಬುಧವಾರ ಜು 06 ರಂದು ತಾಲೂಕಿನ ಕಲ್ಲೋಳಿ ಪಟ್ಟಣದ ಪಿಜೆಎನ್ ಪ್ರೌಢ ಶಾಲೆಯಲ್ಲಿ ಡಾ.ಶ್ಯಾಮಪ್ರಸಾದ ಮುಖರ್ಜಿ ಅವರ ಜನ್ಮದಿನದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಭಾಷೆ, ಕಲೆ, ಸಾಹಿತ್ಯ ಇವುಗಳ ಅಗಾಧ ಜ್ಞಾನವನ್ನು ಬೆಳೆಸಿಕೊಂಡು ಉನ್ನತ ಹುದ್ದೆಯನ್ನು ಅಲಂಕರಿಸಲು ಚೆನ್ನಾಗಿ ಓದಿ ಜೀವನದಲ್ಲಿ ಯಶಸ್ವಿಯಾಗಿ ಎಂದರಲ್ಲದೇ ಸರ್ಕಾರದ ಯೋಜನೆಗಳು ಮಕ್ಕಳಿಗೆ ಮುಟ್ಟುವಂತೆ ಪಾಲಕರೊಂದಿಗೆ ಶಿಕ್ಷಕರು ಶ್ರಮವಹಿಸಬೇಕೆಂದು ಕರೆ ನೀಡಿದರು.
ಸಂಸ್ಥೆಯ ಉಪಾಧ್ಯಕ್ಷ ಬಿ.ಎಸ್. ಗೋರೋಶಿ, ಕಾರ್ಯದರ್ಶಿ ಪ್ರಕಾಶ ಕುರಬೇಟ, ಗೋಕಾಕ ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಕೆ. ಶಿವಕುಮಾರ ಮುಖ್ಯೋಪಾಧ್ಯಾಯ ಶ್ರೀಮತಿ ಕೆ.ಎಂ.ಭರನಟ್ಟಿ, ಪಿ. ಎಸ್. ಗಿರಡ್ಡಿ, ಎಸ್. ಆರ್. ನಾಯಕ, ಎ. ವಾಯ ಮಹಿಮಗೋಳ, ಎ.ಎಫ್ ಕಗದಾಳ, ಡಿ.ಎಸ್. ಕಾರ್ಗಿ, ಎಸ್À. ಎಂ ಮಠಪತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಬಿ.ಎಸ್. ಶೇಗುಣಸಿ ಸ್ವಾಗತಿಸಿದರು. ಅರುಣ ಅಕ್ಕಿ ಕಾರ್ಯಕ್ರಮ ನಿರೂಪಿಸಿದರು ವಿ. ವಾಯ್ ಕೊಳದೂರ ವಂದಿಸಿದರು.