ಶಿಕ್ಷಣವಿದ್ದರೆ ಬೇಕಾದ್ದನ್ನು ಸಾಧಿಸಬಹುದು.ಪ್ರತಿ ಸಾಧನೆ ಕೇವಲ ಶಿಕ್ಷಣದಲ್ಲಿ ಅಡಗಿದೆ. ಆ ನಿಟ್ಟಿನಲ್ಲಿ ಶಿಕ್ಷಣ ಮತ್ತು ಕರ್ತವ್ಯ ಒಳ್ಳೆಯದಾದರೆ ಸಾಧನೆ ತಾನಾಗಿಯೇ ಬರುತ್ತದೆ ಎಂದು ಲಿಂಗಾಯತ ಸಂಘಟನೆ ಅಧ್ಯಕ್ಷ ಈರಣ್ಣ ದೇಯನ್ನವರ ಹೇಳಿದರು.
ರವಿವಾರ ದಿ.18 ರಂದು ಬೆಳಗಾವಿಯ ಫ. ಗು ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾದ ಶಿಕ್ಷಕರ ಸತ್ಕಾರ ಮತ್ತು ಹೂಗಾರ ಮಾದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಸತ್ಕರಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸರ್ಕಾರದ 2022 ನೇ ಸಾಲಿನ ‘ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕಿ’ ಪ್ರಶಸ್ತಿ ಪಡೆದ ಶಿಕ್ಷಕಿ ಸುಶೀಲಾ ಗುರವರವರನ್ನು ಸತ್ಕರಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಶೀಲಾ ಗುರವ, ನಮ್ಮ ಕರ್ತವ್ಯದಲ್ಲಿ ತನುಮನ, ಅರ್ಪಣಾ ಮನೋಭಾವದಿಂದ ಸೇವೆ ಮಾಡುವುದರ ಜೊತೆಗೆ ವೃತ್ತಿಯ ಬಗ್ಗೆ ಕಳಕಳಿ ಇದ್ದರೆ ಬೇಕಾದ್ದನ್ನು ಸಾಧಿಸಬಹುದು. ಬದಲಾಗುತ್ತಿರುವ ಪದ್ಧತಿಗೆ ಅನುಗುಣವಾಗಿ ಬೋಧನೆಯಲ್ಲಿ ಬದಲಾವಣೆ ಮಾಡುತ್ತಾ ಸಾಗಬೇಕು ಎಂದು ತಾವು ತಮ್ಮ ವೃತ್ತಿಯಲ್ಲಿ ನಡೆದುಬಂದ ದಾರಿಯನ್ನು ವಿವರಿಸಿದರು.
ಇದೇ ಸಂದರ್ಭದಲ್ಲಿ ಶರಣ ಹೂಗಾರ ಮಾದಯ್ಯ ನವರ ಜಯಂತಿಯ ನಿಮಿತ್ತ ಆರ್. ಎಲ್. ಎಸ್ ಕಾಲೇಜಿನ ಉಪನ್ಯಾಸಕ ಬಸವರಾಜ ಹೂಗಾರ ಉಪನ್ಯಾಸ ನೀಡುತ್ತಾ ಮಾತನಾಡಿ, ಜಗ ಮಲಗಿರೋ ಸಮಯದಲ್ಲಿ ಸರ್ವರಿಗೂ ಹೂವು, ಪತ್ರಿ ಮುಟ್ಟಿಸಿ ಪೂಜೆಯಲ್ಲಿ ಅನುಕೂಲ ಮಾಡಿಕೊಟ್ಟ ಮಾದಯ್ಯ ಕಾಯಕ ಮತ್ತು ನಿಷ್ಠೆಗೆ ಮಾದರಿ ಆ ನಿಟ್ಟಿನಲ್ಲಿ ನಾವು ಕಾಯಕ ,ವಿದ್ವತ್ತು ಮತ್ತು ಅರ್ಪಣಾ ಮನೋಭಾವ ಜೊತೆಗೆ ಶ್ರದ್ಧೆ,ಕರ್ತವ್ಯ ಮತ್ತು ಶಿಸ್ತನ್ನು ಮೈಗೂಡಿಸಿಕೊಂಡರೆ ಹಾಗಾಗಿ ಯಶಸ್ಸಿನತ್ತ ತಲುಪಬಹುದು ಎಂದರು.
ಕಾರ್ಯಕ್ರಮದಲ್ಲಿ ಸೇವಾ ನಿರತ ಶಿಕ್ಷಕರನ್ನು,ಮಹಾರಾಷ್ಟ್ರದ ಸಾಮಾಜಿಕ ಹೋರಾಟಗಾರ ಅವಿನಾಶ ಘೋಸೆಕರ ಮತ್ತು ಹೂಗಾರ ಸಮಾಜದ ಜಿಲ್ಲಾ ಅಧ್ಯಕ್ಷರಾದ ಲಕ್ಷ್ಮಿಕಾಂತ ಹೂಗಾರ ಅವರನ್ನು ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಡಿ. ಎಸ್. ಹೂಗಾರ, ಶಂಕರ ಗುಡಸ ಶಶಿಭೂಷಣ ಪಾಟೀಲ, ವಿ ಕೆ. ಪಾಟೀಲ, ಸಂಗಮೇಶ ಅರಳಿ ,ಎಂ. ವೈ.ಮೆಣಸಿನಕಾಯಿ, ಶಿವಾನಂದ ತಲ್ಲೂರ, ಅಡಿವೇಶ ಇಟಗಿ ಬಿ.ಬಿ ಮಠಪತಿ, ಜ್ಯೋತಿ ಬದಾಮಿ, ಸುವರ್ಣಾ ತಿಗಡಿ, ಅಕ್ಕಮಹಾದೇವಿ ತೆಗ್ಗಿ ಸೇರಿದಂತೆ ಸಂಘಟನೆಯ ಸದಸ್ಯರು ಹೂಗಾರ ಸಮಾಜದ ಪ್ರಮುಖರು ಭಾಗಿಯಾಗಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಮಹಾದೇವಿ ಅರಳಿ ಪ್ರಾರ್ಥಿಸಿದರು. ಶ್ರೀದೇವಿ ನರಗುಂದ ವಚನ ವಿಶ್ಲೇಷಿಸಿದರು ಸುರೇಶ ನರಗುಂದ ನಿರೂಪಿಸಿದರು. ವಚನ ಮಂಗಳ ದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.