spot_img
spot_img

ಎಫ್ ಡಿಎ, ಎಸ್ ಡಿಎ ಸಿಬ್ಬಂದಿಗೆ ತಂತ್ರಜ್ಞಾನ ತರಬೇತಿ ಕಾರ್ಯಾಗಾರ

Must Read

spot_img
- Advertisement -

ಮೂಡಲಗಿ: ಇಂದಿನ ತಂತ್ರಾoಶಯುಕ್ತ ಆಡಳಿತದಲ್ಲಿ ಪ್ರಮುಖವಾಗಿ ಗಣಕಯಂತ್ರದ ಜ್ಞಾನ ಅತ್ಯವಶ್ಯಕವಾಗಿದೆ. ಶಿಕ್ಷಣ ಇಲಾಖೆಯ ಆಶೋತ್ತರಗಳನ್ನು ಈಡೇರಿಸುವಲ್ಲಿ ಲಿಪಿಕ ನೌಕರರ ಕೊಡುಗೆ ಅಪಾರವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು.

ಅವರು ಪಟ್ಟಣದ ಕೆ.ಎಚ್ ಸೋನವಾಲಕರ ಸರಕಾರಿ ಪ್ರೌಢ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ತಾಲೂಕಾ ಲಿಪಿಕ ನೌಕರ ಸಂಘಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ಎಫ್.ಡಿ.ಎ ಮತ್ತು ಎಸ್.ಡಿ.ಎ ಸಿಬ್ಬಂದಿಗಳಿಗೆ ತಂತ್ರಜ್ಞಾನ ಆಧಾರಿತ ಆಡಳಿತಾತ್ಮಕ ತರಬೇತಿಯ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿ, ಶಿಕ್ಷಣ ಇಲಾಖೆಯ ಎಚ್.ಆರ್.ಎಮ್.ಎಸ್, ಖಜಾನೆ-೨, ಜಿ.ಪಿ.ಎಫ್, ಕೆಜಿಐಡಿ, ಎಫ್.ಎ, ವೇತನ ಬಡ್ತಿ, ಇಲಾಖೆಯ ಪ್ರೋತ್ಸಾಹಕ ಯೋಜನೆಗಳಾದ ಉಪಹಾರ ಯೋಜನೆ, ಸಮವಸ್ತ, ಶಿಷ್ಯವೇತನ, ಪಠ್ಯಪುಸ್ತಕ, ಸ್ಯಾಟ್ಸ್, ಎನ್.ಎಸ್.ಪಿ, ಎಸ್.ಎಸ್.ಪಿ, ಒಒಎಸ್‌ಸಿ, ಕಾಮಗಾರಿಗಳು, ಪರೀಕ್ಷೆಗಳಾದ ಎಸ್.ಎಸ್.ಎಲ್.ಸಿ, ಎನ್.ಟಿ.ಎಸ್.ಇ, ಎನ್.ಎಮ್.ಎಮ್.ಎಸ್ ಇತ್ಯಾದಿ ತಂತ್ರಾoಶಗಳ ಕುರಿತು ತಿಳುವಳಿಕೆ ಖಡ್ಡಾಯವಾಗಿದೆ. ಗಣಕಯಂತ್ರದ ಮೂಲಕ ಮಾಡುವದಾಗಿದೆ. ಇವೆಲ್ಲಾ ಕಾರ್ಯಗಳು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಲು ಅಗತ್ಯ ತಂತ್ರಾoಶಗಳ ಜ್ಞಾನ ಅತ್ಯಾವಶ್ಯಕವಾಗಿದೆ.

- Advertisement -

ಹೆಚ್ಚಾಗಿ ಲಿಪಿಕ ನೌಕರರಾಗಿ ಕಾರ್ಯನಿರ್ವಹಿಸುವವರು ಅನುಕಂಪ ಆಧಾರಿತ ನೌಕರರಾಗಿರುವದರಿಂದ ಅವರಿಗೆ ನೂರಿತ ತಂತ್ರಾoಶಗಳ ಜ್ಞಾನಹೊಂದಿದವರಿoದ ಇಂತಹ ತರಬೇತಿ ಕಾರ್ಯಾಗಾರಗಳು ಅವಶ್ಯಕವಾಗಿವೆ. ಮೂಡಲಗಿ ಶೈಕ್ಷಣಿಕ ವಲಯದಲ್ಲಿ ಪ್ರಥಮ ಭಾರಿಗೆ ೮೯ ಪ್ರೌಢ ಶಾಲೆಗಳ ಲಿಪಿಕ ನೌಕರರಿಗೆ ತರಬೇತಿ ಏರ್ಪಡಿಸಿದ್ದು ಇದರ ಸದುಪಯೋಗಪಡಿಸಿಕೊಂಡು ಇಲಾಖೆಯ, ನೌಕರರ ಹಾಗೂ ಮಕ್ಕಳಿಗೆ ಉಪಯುಕ್ತವಾಗುವ ನಿಟ್ಟಿನಲ್ಲಿ ಕಾರ್ಯಪ್ರವರ್ತಕರಾಗಬೇಕು. ಗಣಕಯಂತ್ರ, ಲ್ಯಾಪ್ ಟಾಪ್, ಮೊಬೈಲ್ ತಂತ್ರಜ್ಞಾನ ಅತ್ಯಾವಶ್ಯಕವಾಗಿದೆ ಎಂದರು.

ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಟಿ ಬಸವರಾಜ, ಸತೀಶ ಬಿ.ಎಸ್, ಆರ್.ವಿ. ಯರಗಟ್ಟಿ, ರಾಜು ಸಪ್ತಸಾಗರ, ರಮೇಶ ಜಂಬಗಿ ಕಾರ್ಯನಿರ್ವಹಿಸಿದರು.

ಕಾರ್ಯಾಗಾರದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ರೇಣುಕಾ ಆಣಿ, ಆರ್.ಎ ತಳವಾರ, ಚೇತನ ಕುರಿಹುಲಿ, ಹೊನ್ನಮ್ಮ ಜಗದಾಳ, ಸುಲೋಚನಾ ಪೂಜೇರ, ಸಮ್ಮೇದ ಬಾಬನ್ನವರ, ಸಲೀಂ ಚೌವುಸ್, ಸಂತೋಷ ಹುಕ್ಕೇರಿ, ಬಸೀರ ನದಾಫ್, ಸವಿತಾ ಎಕನಾಕಿ ಹಾಗೂ ೮೯ ಪ್ರೌಢ ಶಾಲೆಗಳ ಪ್ರಥಮ ಮತ್ತು ದ್ವಿತೀಯ ದರ್ಜೆಯ ಸಹಾಯಕರು ಹಾಜರಿದ್ದರು.

- Advertisement -
- Advertisement -

Latest News

ಬೀದರ್ ನಲ್ಲಿ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ದಾಳಿ

ಬೀದರ - ನಗರದಲ್ಲಿ ಈ ದಿನ ಬೆಳ್ಳಂಬೆಳಿಗ್ಗೆಯೇ ಲೋಕಾಯುಕ್ತರು ಸದ್ದು ಮಾಡಿದ್ದು ಏಕಕಾಲಕ್ಕೆ ಮೂರು ಕಡೆ ದಾಳಿ ಮಾಡಿ ಹಲವು ದಾಖಲೆ ವಶಪಡಿಸಿಕೊಂಡಿದ್ದಾರೆ. ಪಶು ವಿವಿಯಲ್ಲಿ ಕೆಲಸ...
- Advertisement -

More Articles Like This

- Advertisement -
close
error: Content is protected !!
Join WhatsApp Group