ಮೂಡಲಗಿ: ಭಾರತೀಯರು ನಂಬುವ ಮಹಾಭಾರತದ ಹುಟ್ಟಿಗೆ ಕಾರಣವಾದ ಸತ್ಯವತಿ ಗಂಗಾ ಮತಸ್ಥ ಸಮಾಜದವಳು ಎನ್ನುವುದು ಹೆಮ್ಮೆಯ ಸಂಗತಿ. ಹೀಗಾಗಿ ಗಂಗಾ ಪರಮೇಶ್ವರಿ ಆರ್ಥಿಕ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಕಳೆದ 10 ವರ್ಷಗಳಿಂದ ಸಮಾಜದ ಬೇಕು-ಬೇಡಗಳಿಗೆ ಸ್ಪಂದಿಸುತ್ತಿರುವ ನಿಮ್ಮೆಲ್ಲರ ಶ್ರಮ ಶ್ಲಾಘನೀಯವಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಸೋಮವಾರ ಮಾ-13 ರಂದು ಮೂಡಲಗಿ ನಗರದ ಶ್ರೀ ಗಂಗಾ ಪರಮೇಶ್ವರಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿಯ ದಶಮಾನೋತ್ಸವ ಹಾಗೂ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು, ಮೂಡಲಗಿ ನಗರ ಒಂದು ಸಹಕಾರಿ ಕ್ಷೇತ್ರದಲ್ಲಿ ಬಹಳ ದೊಡ್ಡ ಕ್ರಾಂತಿಯಾಗಿದೆ. ಕೇವಲ ಇದೊಂದು ನಗರದಲ್ಲಿ ನೂರಾರೂ ಸಹಕಾರಿ ಸಂಸ್ಥೆಗಳು ಜನ್ಮ ತಾಳಿ ಅತ್ಯಂತ ಅದ್ಬುತವಾಗಿ ನಡೆಯುತ್ತಿವೆ. ಈ ಸಹಕಾರ ಚಳವಳಿ ಹೀಗೆಯೇ ನಡೆಯಲಿ ಮತ್ತು ಬರುವ ದಿನಗಳಲ್ಲಿ ಗಂಗಾ ಮತಸ್ಥ ಸಮಾಜದವರು ಇಲ್ಲಿ ಸಮುದಾಯ ಭವನ ಕಟ್ಟಲು ಸಂಕಲ್ಪ ಮಾಡಿದರೇ ನನ್ನ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ಅನುದಾನದ ಸಹಾಯ ಸೌಲಭ್ಯ ನೀಡುತ್ತೇನೆಂದು ಸಂಸದ ಈರಣ್ಣ ಕಡಾಡಿ ಭರವಸೆ ನೀಡಿದರು.
ಪೂಜ್ಯರಾದ ದತ್ತಾತ್ರಯಬೋಧ ಸ್ವಾಮಿಗಳು, ಪೂಜ್ಯ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು, ಪೂಜ್ಯ ಮಲ್ಲಿಕಾರ್ಜುನ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸುಭಾಸ ಢವಳೇಶ್ವರ, ನಿಂಗಪ್ಪ ಫಿರೋಜಿ, ಭೀಮಪ್ಪ ಗಡಾದ, ಕೃಷ್ಣಾ ನಾಶಿ, ನೇಮು ಬೇವಿನಕಟ್ಟಿ, ವಿಲಾಸ ನಾಶಿ, ಶಿವು ಚಂಡಕಿ, ಪ್ರಕಾಶ ಮಾದರ, ಮಲ್ಲಪ್ಪ ಮದಗುಣಕಿ, ಡಾ. ಬಿ.ಎಂ ಪಾಲಭಾಂವಿ, ಈರಪ್ಪ ಢವಳೇಶ್ವರ, ಬಸಪ್ಪ ನಾಗರಾಳ, ಸದಾಶಿವ ತಳವಾರ, ರಾಜಕುಮಾರ ನಾಶಿ, ಬಸು ತಳವಾರ, ಸಂಸ್ಥೆಯ ನಿರ್ದೇಶಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.