spot_img
spot_img

ಹೊಸತನ, ಹೊಸ ಪ್ರಯೋಗ ಹಾಗೂ ವಿಭಿನ್ನ ಶೈಲಿಯ ಕಥೆ ಮತ್ತು ಸಂಭಾಷಣೆ ಇರುವ ಚಿತ್ರ “ಠಾಣೆ” – ಎಸ್ .ಭಗತ್ ರಾಜ್ – ನಿರ್ದೇಶಕ

Must Read

- Advertisement -

ಸ್ಯಾಂಡಲ್ ವುಡ್ ನಲ್ಲಿ ಹೊಸತನ ಹಾಗೂ ಹೊಸ ಪ್ರಯೋಗಗಳನ್ನು ಮಾಡಲು ವಿಭಿನ್ನ ಶೈಲಿಯ ಕಥೆ ಹಾಗೂ ನಿರೂಪಣೆ ಮತ್ತು ಸಂಭಾಷಣೆ ಬರೆದು ಯುವ ನಿರ್ದೇಶಕ ಎಸ್ .ಭಗತ್ ರಾಜ್ ನಿರ್ದೇಶನ ಮಾಡುತ್ತಿರುವ ಠಾಣೆ ಚಿತ್ರದ ಪೋಸ್ಟರ್ ಅನ್ನು ಇತ್ತೀಚೆಗೆ ಆಕ್ಷನ್ ಪ್ರಿನ್ಸ್ ಧುವ್ರ ಸರ್ಜಾ ಅವರು ಬಿಡುಗಡೆ ಮಾಡಿದರು.

ಕೆಂಗೇರಿ ಉಪನಗರದ ನೈಸ್ ರಸ್ತೆ ಬಳಿ ಮಾರ್ಟಿನ್ ಚಿತ್ರದ ಚಿತ್ರೀಕರಣ ವೇಳೆಯಲ್ಲಿ ಠಾಣೆ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಆಕ್ಷನ್ ಪ್ರಿನ್ಸ್ ಧುವ್ರ ಸರ್ಜಾ ಅವರು, ಚಿತ್ರದ ನಿರ್ದೇಶಕ ಎಸ್.ಭಗತ್ ರಾಜ್ ಅವರ ಠಾಣೆ ಚಿತ್ರವು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುತ್ತದೆ ಎಂದು ನುಡಿದು ನಿರ್ದೇಶಕರಾದ ಎಸ್ . ಭಗತ್ ರಾಜ್ ಮತ್ತು ಚಿತ್ರ ತಂಡಕ್ಕೆ ಶುಭ ಹಾರೈಸಿ ಚಿತ್ರವು ಶತದಿನ ಪೂರೈಸಲಿ ಎಂದು ನುಡಿದರು.

ಪ್ರೇಕ್ಷಕರು ಥಿಯೇಟರ್ ಗೆ ಬಂದು ನೋಡುವಂತಹ ಅತ್ಯುತ್ತಮ ಚಿತ್ರ ಇದಾಗಲಿದೆ ಎಂದು ಧ್ರುವ ಸರ್ಜಾ ಠಾಣೆ ಚಿತ್ರದ ಪೋಸ್ಟರ್ ನೋಡಿ ರೋಮಾಂಚನ ಗೊಂಡು ಚಿತ್ರದ ಪೋಸ್ಟರ್ ಕಥೆ ಹೇಳುತ್ತಿದೆ ಎಂದು ನುಡಿದರು.

- Advertisement -

ಮೈಸೂರಿನ ಸಂಪತ್ ಪ್ರಸಾದ್ ಮತ್ತು ಶ್ಯಾಮಲ ದಂಪತಿಯ ಸುಪುತ್ರ ಎಸ್.ಭಗತ್ ರಾಜ್ ಮೈಸೂರಿನಲ್ಲಿ 29 ಜುಲೈ 1986 ರಲ್ಲಿ ಜನಿಸಿ , ದ್ವಿತೀಯ ಪಿಯುಸಿ ವರೆಗೆ ವಿದ್ಯಾ ಭ್ಯಾಸ ಮಾಡಿದ್ದು ಕಳೆದ 9 ವರ್ಷ ಗಳಿಂದ ಬಣ್ಣದ ಲೋಕದಲ್ಲಿ ಸೇವೆ ಸಲ್ಲಿಸುತ್ತಾ ಇದ್ದು , ನಟ, ನಿರ್ದೇಶಕ ಕಾಶಿನಾಥ್, ರಾಮನಾಥ್ ಋಗ್ವೇದಿ, ಗುರುಪ್ರಸಾದ್ ಮುಂತಾದವರ ಬಳಿ ಕಾರ್ಯ ನಿರ್ವಹಿಸಿರುವ ಎಸ್ ಭಗತ್ ರಾಜ್ , ತಾವು ಧರಿಸಿದ್ದ ಸೂಟ್ ಮೇಲೆ ಒಂದು ಕಥೆ ರಚಿಸಿ, ನಿರ್ದೇಶಿಸಿರುವ “ದಿ ಸೂಟ್” ಭಗತ್ ರಾಜ್ ನಿರ್ದೇಶನದ ಮೊದಲ ಚಿತ್ರ. “ಠಾಣೆ” ಎರಡನೇ ಚಿತ್ರ.

ಈ ಸಂದರ್ಭದಲ್ಲಿ – ಕಥೆ – ಚಿತ್ರ ಕಥೆ – ಸಂಭಾಷಣೆ ಬರೆದು ನಿರ್ದೇಶನ – ಮಾಡಿರುವ ಎಸ್ .ಭಗತ್ ರಾಜ್ ಅವರ ಜೊತೆ ನಡೆಸಿದ ಸುಧೀರ್ಘ ಸಂದರ್ಶನ.

- Advertisement -

Times of ಕರ್ನಾಟಕ: ಸಮಾಜಕ್ಕೆ “ಠಾಣೆ” – ಚಿತ್ರ ಏನು ಸಂದೇಶ ನೀಡಲು ಹೊರಟಿದೆ?

ಎಸ್.ಭಗತ್ ರಾಜ್: ನವಿರಾದ ಪ್ರೇಮ ಕಥೆ ಇದ್ದು – ಅಮಾಯಕರನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೇಗೆ ದುರುಪಯೋಗ ಮಾಡಿಕೊಳ್ಳುತ್ತಾರೆ ಅದಕ್ಕಾಗಿ ನಾಯಕ ನಟ ಯಾವ ರೀತಿ ಹೋರಾಡಿ ಅಮಾಯಕರನ್ನು ಹೇಗೆ ಕಾಪಾಡುತ್ತಾನೆ ಎಂಬುದನ್ನು ಈ ಚಿತ್ರದ ಮೂಲಕ ಸಂದೇಶ ನೀಡಲು ಚಿತ್ರ ತಂಡ ಹೊರಟಿದೆ.

Times of ಕರ್ನಾಟಕ: ಚಿತ್ರದ ನಾಯಕ ನಟ?

ಎಸ್.ಭಗತ್ ರಾಜ್: ಕಳೆದ ಹದಿನೈದು ವರ್ಷಗಳಿಂದ ರಂಗಭೂಮಿ ಕಲಾವಿದನಾಗಿ ಗುರುತಿಸಿಕೊಂಡಿರುವ, ರವಿವರ್ಮ, ಕೌರವ ವೆಂಕಟೇಶ್ ಸೇರಿದಂತೆ ಅನೇಕ ಸಾಹಸ ನಿರ್ದೇಶಕರ ಬಳಿ ಕೆಲಸ ಮಾಡಿರುವ ಪ್ರಕಸಂ ತಂಡದ ಬೆಂಗಳೂರಿನ ಪ್ರವೀಣ್ “ಠಾಣೆ” ಚಿತ್ರದ ನಾಯಕ.

Times of ಕರ್ನಾಟಕ: ಚಿತ್ರದ ನಾಯಕಿ?

ಎಸ್.ಭಗತ್ ರಾಜ್: ಭರತ ನಾಟ್ಯ ಸೇರಿದಂತೆ ಅನೇಕ ರಂಗಭೂಮಿ ಕಲೆಗಳಲ್ಲಿ ನೈಪುಣ್ಯತೆ ಪಡೆದಿರುವ ಮೈಸೂರಿನ ಹರಿಣಾಕ್ಷಿ ಈ ಚಿತ್ರದ ನಾಯಕಿ.

Times of ಕರ್ನಾಟಕ: ಚಿತ್ರದ ಕಥೆ ಬಗ್ಗೆ ಹೇಳಿ.

ಎಸ್.ಭಗತ್ ರಾಜ್: “ಠಾಣೆ” 1962 ರ ಕಾಲಘಟ್ಟದಲ್ಲಿ ನಡೆಯುವ ಕಥೆ. ನಗರಗಳು ಬೆಳೆದರು, ಸ್ಲಂಗಳು ಬೆಳೆಯುವುದಿಲ್ಲ. ಅದು ಬೆಳೆಯಲು ಕೆಲವರು ಬಿಡುವುದು ಇಲ್ಲ. ಸ್ಲಂ ನಲ್ಲೇ ಹುಟ್ಟಿಬೆಳೆದ ಯುವಕ‌ನೊಬ್ಬ ಅಲ್ಲಿನ ಜನರಿಗೆ ನ್ಯಾಯ ಕೊಡಿಸಲು ಹೋರಾಡುವ ಕಥೆಯಿದು.

Times of ಕರ್ನಾಟಕ: ಚಿತ್ರೀಕರಣ ಎಲ್ಲಿ ಎಲ್ಲಿ ಮಾಡಲಾಗಿದೆ?

ಎಸ್.ಭಗತ್ ರಾಜ್: ಬೆಂಗಳೂರಿನ ಹಳೆ ಬಡಾವಣೆಗಳಾದ ಶ್ರೀರಾಮಪುರ, ಶಿವಾಜಿ ನಗರ ಮುಂತಾದ ಕಡೆ ಹಳೆಯ ಜಾಗಗಳನ್ನು ಹುಡುಕಿ ಚಿತ್ರೀಕರಣ ಮಾಡಲಾಗಿದೆ.

Times of ಕರ್ನಾಟಕ: ಚಿತ್ರದಲ್ಲಿ ಎಷ್ಟು ಹಾಡುಗಳು ಇವೆ?

ಎಸ್.ಭಗತ್ ರಾಜ್: ಎರಡು ಸುಮಧುರ ಹಾಡುಗಳಿಗೆ ಮಾನಸ ಹೊಳ್ಳ ಸಂಗೀತ ನೀಡಿದ್ದಾರೆ.

Times of ಕರ್ನಾಟಕ: ಛಾಯಾಗ್ರಹಣ -ಸಂಕಲನ – ಸಾಹಸ?

ಎಸ್.ಭಗತ್ ರಾಜ್: ಸಾಗರದ ಪ್ರಶಾಂತ್ ಸಾಗರ್ ಛಾಯಾಗ್ರಹಣ, ಹಿರಿಯ ಸಂಕಲನಕಾರ ಸುರೇಶ್ ಅರಸ್ .ನಿರ್ಮಾಣ ನಿರ್ವಹಕ ರವಿಚಂದ್ರನ್. ಸಂಕಲನ, ಪ್ರವೀಣ್ ಜಾನ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಕೌರವ ವೆಂಕಟೇಶ್ ಹಾಗೂ ಟೈಗರ್ ಶಿವ ಸಾಹಸ ಸಂಯೋಜನೆಯಲ್ಲಿ ಐದು ಸಾಹಸ ಸನ್ನಿವೇಶಗಳು ಮೂಡಿಬಂದಿದೆ. ನಾಯಕ ಪ್ರವೀಣ್ ಅವರಿಗೂ ಸಾಹಸ ಸಂಯೋಜನೆ ಮಾಡಿ ಅನುಭವವಿರುವುದರಿಂದ ಅವರ ಅಭಿನಯದಲ್ಲಿ ಸಾಹಸ ಸನ್ನಿವೇಶಗಳು ಅದ್ಭುತವಾಗಿ ಮೂಡಿಬಂದಿದೆ. “ಠಾಣೆ” ಚಿತ್ರದಲ್ಲಿ ಪ್ರವೀಣ್, ಕಾಳಿ ಎಂಬ ಪಾತ್ರದ ಮೂಲಕ ಚಿತ್ರರಂಗಕ್ಕೆ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. C/O ಶ್ರೀರಾಮಪುರ ಎಂಬ ಅಡಿಬರಹ ಈ ಚಿತ್ರಕ್ಕಿದೆ. ಪಿ.ಸಿ.ಡಿ 2 ಫಿಲಂ ಫ್ಯಾಕ್ಟರಿ ಲಾಂಛನದಲ್ಲಿ ಗಾಯತ್ರಿ ಎಂ ನಿರ್ಮಿಸಿರುವ “ಠಾಣೆ” ಚಿತ್ರದಲ್ಲಿ ಪಿ.ಡಿ.ಸತೀಶ್, ಬಾಲರಾಜ್ವಾಡಿ . ಭೀಷ್ಮ ರಾಮಯ್ಯ. ಸೇರಿದಂತೆ ಅನೇಕ ರಂಗಭೂಮಿ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

Times of ಕರ್ನಾಟಕ: ಕೊನೆಯದಾಗಿ ಪ್ರೇಕ್ಷಕರಿಗೆ ಏನು ಹೇಳಲು ಬಯಸುತ್ತೀರಾ?

ಎಸ್.ಭಗತ್ ರಾಜ್: ಪ್ರೇಕ್ಷಕರು ಚಿತ್ರ ಮಂದಿರಕ್ಕೆ ಬಂದು ಚಿತ್ರವನ್ನು ನೋಡಿ ಹರಸಿ ಬೆಳೆಸಬೇಕು.


ಸಂದರ್ಶನ: ತೀರ್ಥಹಳ್ಳಿ ಅನಂತ ಕಲ್ಲಾಪುರ

- Advertisement -
- Advertisement -

Latest News

‘Silent killer’ ಎಂದು ಕರೆಯಲ್ಪಡುವ ಒಂದು ಹಾವುಂಟು !

ಈ ಹಾವನ್ನು ಈ ರೀತಿ ಕರೆಯಲು ಹಲವು ಕಾರಣಗಳುಂಟು. ಈ ಹಾವು ರಾತ್ರಿ ವೇಳೆಯಲ್ಲಿಯೇ ಹೆಚ್ಚು ಓಡಾಟ ಮಾಡುವುದು (ನಿಶಾಚರಿ). ಮತ್ತೆ ಈ ಹಾವು ಮನುಷ್ಯರಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group