ಒಂದೇ ಮನವಿಗೆ ಸ್ವಚ್ಛವಾದ ಅಂಕಲಗಿ ಬಸ್ ಸ್ಟ್ಯಾಂಡ್ ಶೌಚಾಲಯ : ಗೋಕಾಕ ಡೀಪೋ ಮ್ಯಾನೇಜರ್ ಗೆ ಧನ್ಯವಾದ

Must Read

ಗೋಕಾಕ – ತಾಲೂಕಿನ ಅಂಕಲಗಿಯ ಬಸ್ ನಿಲ್ದಾಣದ ಮೂತ್ರಾಲಯಗಳು ಅಸ್ವಚ್ಛತೆಯ ಅಪರಾವತಾರವಾಗಿದ್ದು ಇಲ್ಲಿ ಮೂತ್ರ ಮಾಡಲು ಹೋಗುವವರು ದೇಹದಲ್ಲಿ ರೋಗ ಸೇರಿಸಿಕೊಂಡೇ ಬರುವುದು ಗ್ಯಾರಂಟಿಯಾಗುವಂತಿವೆ ಎಂದೆಲ್ಲ ಪತ್ರಿಕೆ ಬರೆಯಲು ತೊಡಗುವ ಮುನ್ನವೇ ಶೌಚಾಲಯದ ಸ್ವಚ್ಛತೆ ಆರಂಭವಾಗಿದ್ದು ಸಾರ್ವಜನಿಕರು ಸಂತಸಗೊಂಡಿದ್ದಾರೆ

ಇಲ್ಲಿನ ಮೂತ್ರಾಲಯಗಳಲ್ಲಿ ಒಳಗೆಲ್ಲ ಖಾಲಿ ನೀರಿನ ಬಾಟಲಿಗಳು, ಮದ್ಯದ ಬಾಟಲಿಗಳು ತುಂಬಿಕೊಂಡು ಕಾಲಿಡಲು ಜಾಗವೇ ಇಲ್ಲದಂತಾಗಿ ಪ್ರಯಾಣಿಕರು ಮುಂದೆ ಮುಂದೆಯೇ ಮೂತ್ರ ಮಾಡಿ ಅದೇ ಗಲೀಜು ತುಂಬಿಕೊಂಡು ಶೌಚಾಲಯವೆನ್ನುವುದು ನಿಜವಾದ ಹಂದಿಗೂಡಿನಂತಾಗಿತ್ತು ಈ ಬಗ್ಗೆ ನಮ್ಮ Times of ಕರ್ನಾಟಕ ಪತ್ರಿಕೆಯಿಂದ ಶೌಚಾಲಯದ ಫೋಟೋ ತೆಗೆದು ಗೋಕಾಕ ಡೀಪೋ ಮ್ಯಾನೇಜರ್ ಸುನಿಲ ಹೊನವಾಡ ಅವರಿಗೆ ಕಳಿಸಿಕೊಡಲಾಗಿತ್ತು

ಅಂಕಲಗಿ ಬಸ್ ಶೌಚಾಲಯದ ಸ್ವಚ್ಛತಾಕಾರ್ಯ ಆರಂಭವಾಗಿರುವುದು

ಶೌಚಾಲಯಗಳು ಹೀಗೆ ಇದ್ದಿದ್ದರಿಂದ ಪುರುಷರು ಬಸ್ ನಿಲ್ದಾಣದ ಕಾಂಪೌಂಡಿಗೆ ಎದುರಾಗಿ ಮೂತ್ರ ಮಾಡುತ್ತಾರೆ, ಅಲ್ಲಲ್ಲಿ ಗಿಡಗಂಟಿ ಬೆಳೆದು ಅವರಿಗೆ ಮತ್ತಷ್ಟು ಅನುಕೂಲಕರವಾಗಿದೆ ಆದರೆ ಹೆಣ್ಮಕ್ಕಳು ಏನು ಮಾಡಬೇಕು ? ಈ ಬಗ್ಗೆ ಒಂಚೂರು ಗಮನಹರಿಸದೇ ಇರುವ ಅಲ್ಲಿನ ಕಂಟ್ರೋಲರ್ ( ಇದ್ದಾರೋ ಇಲ್ಲವೋ ?) ಇದನ್ನು ಯಾರು ಸ್ವಚ್ಛ ಮಾಡಬೇಕು ಎಂಬುದಾಗಿ ಅವರ ಜೊತೆ ಫೋನ್ ನಲ್ಲಿ ಮಾತನಾಡಿದ ತಕ್ಷಣವೇ ಕಾರ್ಯ ಪ್ರವೃತ್ತರಾದ ಡೀಪೋ ಮ್ಯಾನೇಜರ್ ಹೊನವಾಡ ಅವರು ಸ್ವಚ್ಛತಾ ಕಾರ್ಯ ಆರಂಭಗೊಂಡಿರುವ ಫೋಟೋಗಳನ್ನು ಕಳಿಸಿದರು. ಅಲ್ಲದೆ ಇಲ್ಲಿನ ಕಂಟ್ರೋಲರ್ ಅವರಿಗೆ ಸ್ವಲ್ಪ ಅನಾರೋಗ್ಯದ ಕಾರಣ ಗಮನಹರಿಸಲಾಗಲಿಲ್ಲ ಎಂದೂ ವಿಷಾದವ್ಯಕ್ತಪಡಿಸಿದರು.

ಪ್ರಯಾಣಿಕರ ಬಗ್ಗೆ ಕಾಳಜಿ ವಹಿಸಿ ಅವರು ಶೌಚಾಲಯಗಳ ಸ್ವಚ್ಛತಾ ಕಾರ್ಯ ಆರಂಭಿಸಿದ್ದು ಎಲ್ಲೆಡೆ ಪ್ರಶಂಸೆಗೆ ಒಳಗಾಗಿದೆ. ಇದೇ ರೀತಿ ಅವರು ತಮ ನಿಯಂತ್ರಣದಲ್ಲಿ ಬರುವ ಎಲ್ಲ ಬಸ್ ನಿಲ್ದಾಣಗಳ ಶೌಚಾಲಯಗಳನ್ನು ಸ್ವಚ್ಛವಾಗಿ ಇರುವಂತೆ ಮಾಡಬೇಕೆಂಬುದು ಸಾರ್ವಜನಿಕರ ಹಾಗೂ ಪತ್ರಿಕೆಯ ಅಭಿಪ್ರಾಯವಾಗಿದೆ.

ವರದಿ : ಉಮೇಶ ಬೆಳಕೂಡ, ಮೂಡಲಗಿ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group