ಸಿಂದಗಿ ಸೌಂದರ್ಯಕರಣಕ್ಕೆ ಮುನ್ನುಡಿ ಬರೆದಿರುವ ಪುರಸಭೆ ಅಧ್ಯಕ್ಷರಿಗೂ ಸರ್ವ ಸದಸ್ಯರಿಗೂ ಆಡಳಿತ ವರ್ಗಕ್ಕೆ ಹಾಗೂ ಪೋಲಿಸ್ ಅಧಿಕಾರಿಗಳಿಗೂ ಮತ್ತು ಸಿಬ್ಬಂದಿಗಳಿಗೂ ಸಿಂದಗಿ ಯೋಜನಾ ಅಭಿವೃದ್ಧಿ ಪ್ರಾಧಿಕಾರ ಅಭಿನಂದಿಸುತ್ತದೆ ಎಂದು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಕಾಂಬಳೆ ತಿಳಿಸಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಕ್ರಮವಾಗಿ ನೆಲೆಯೂರಿದ ಗೂಡಂಗಡಿಗಳ ತೆರವುಗೊಳಿಸಿದ ಪುರಸಭೆ ಕಾರ್ಯ ಅತ್ಯಂತ ಯೋಗ್ಯವಾದ ನಿರ್ಣಯ ವಿಜಯಪುರ ಜಿಲ್ಲೆಯಯಲ್ಲಿಯೆ ಶಿಕ್ಷಣ, ವ್ಯಾಪಾರ ಕ್ಷೇತ್ರದಲ್ಲಿ ಅತ್ಯಂತ ಮುಂಚೂಣಿ ನಗರವಾದ ಸಿಂದಗಿ ಪಟ್ಟಣ ರಸ್ತೆಗಳು ಅಕ್ರಮ ಒತ್ತುವರಿಯಿಂದ ನಗರ ಸೌಂದರ್ಯ ಮಾಸಿ ಹೋಗಿತ್ತು .ಅಭಿವೃದ್ಧಿ ಮತ್ತು ಸೌಂದರ್ಯದಿಂದ ಹಿಂದುಳಿದು ಎಲ್ಲ ರಂಗಗಳಲ್ಲೂ ಮುಂದುವರೆದರೂ ಅಕ್ರಮ ಒತ್ತುವರಿಯ ಗೂಡಂಗಡಿಗಳ ಕಪ್ಪು ಚುಕ್ಕೆಯಾಗಿತ್ತು.
ಆದರೆ ಈಗಿನ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರು ಸದಸ್ಯರು ಆಡಳಿತ ನಡೆಸಿದ ಕಾರ್ಯಾಚರಣೆಯ ಫಲದಿಂದ ರಸ್ತೆಗಳು ಅಗಲೀಕರಣಗೊಂಡು ಸುಂದರವಾದ ಫುಟ್ಪಾತ್ ಹಾಗೂ ಬೇಸಿಗೆ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಮರಗಳು ನೆಡುವ ಮುಖಾಂತರ, ಮಿನಿ ಬಸ್ ನಿಲ್ದಾಣಗಳು ಸ್ಥಾಪಿಸುವ ಸಲುವಾಗಿ ಇಟ್ಟ ಈ ದಿಟ್ಟ ಹೆಜ್ಜೆಯನ್ನು ನಗರ ಯೋಜನಾ ಪ್ರಾಧಿಕಾರ ವತಿಯಿಂದ ಸ್ವಾಗತಿಸುತ್ತೇನೆ ಎಂದಿದ್ರಿಂದಾರೆ.
ವ್ಯಾಪರಸ್ಥರಾರು ಧೃತಿಗೆಡಬೇಕಾಗಿಲ್ಲ ಜನಪ್ರಿಯ ಶಾಸಕರಾದ ಅಶೋಕ ಮನಗೂಳಿ ಅವರು ನಿಮ್ಮ ಜೊತೆ ಇದ್ದು, ಬರುವ ದಿನದಲ್ಲಿ ಸಿಂದಗಿ ನಗರದಲ್ಲಿ ಮೆಗಾ ಮಾರುಕಟ್ಟೆ ನಿರ್ಮಾಣ ಮಾಡುವ ಯೋಚನೆ ಇದೆ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸಿಕೊಡುತ್ತಾರೆ. ವ್ಯಾಪಾರಿಗಳು ಯಾವುದೇ ವದಂತಿಗಳಿಗೆ ಕಿವಿಗೊಡದೆ ನಗರದ ಅಭಿವೃದ್ಧಿಯಲ್ಲಿ ಸಹಕಾರ ನೀಡಿ ತಾವು ಅಭಿವೃದ್ಧಿಗೆ ಕಾರಣೀಭೂತರಾಗಬೇಕು ಎಂದು ಕಾಂಬಳೆ ಕಳಕಳಿಯ ಮನವಿ ಮಾಡಿಕೊಂಡಿದ್ದಾರೆ.