ಮೂಡಲಗಿ – ಸ್ಥಳೀಯ ಆರಾಧ್ಯ ದೈವ, ವಾಕ್‍ಸಿದ್ದಿ ಪುರುಷ ಶ್ರೀ ಕಲ್ಮೇಶ್ವರಬೋಧ ಸ್ವಾಮಿಗಳ 117ನೇ ಜಯಂತಿ ಕಾರ್ಯಕ್ರಮವನ್ನು ಶ್ರೀ ಕಲ್ಮೇಶ್ವರ ವೃತ್ತದಲ್ಲಿ ಶುಕ್ರವಾರ ಆಚರಿಸಲಾಯಿತು.
ಶ್ರೀ ಕಲ್ಮೇಶ್ವರಬೋಧ ಸ್ವಾಮಿಗಳ ಮೂರ್ತಿಗೆ ವಿಶೇಷ ಪೂಜಾ ಕಾರ್ಯಕ್ರಮವನ್ನು ವೇದಮೂರ್ತಿ ಶ್ರೀ ಶಂಕ್ರಯ್ಯಾ ಹಿರೇಮಠ ಸ್ವಾಮಿಗಳು ನೆರವೇರಿಸಿದರು.
ಶ್ರೀ ಶಿವಬೋಧರಂಗ ಸಿದ್ದ ಸಂಸ್ಥಾನಮಠದ ಪೀಠಾಧಿಪತಿಗಳಾದ ಶ್ರೀ ದತ್ತಾತ್ರಯಬೋಧ, ಶ್ರೀ ಶ್ರೀಧರಬೋಧ ಸ್ವಾಮಿಗಳ ಸಾನ್ನಿಧ್ಯದಲ್ಲಿ ಜಯಂತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಪಟ್ಟಣದ ಮುಖಂಡರು, ಗಣ್ಯರು, ಅಧಿಕಾರಿವರ್ಗದವರು, ಶ್ರೀ ಕಲ್ಮೇಶ್ವರಬೋಧ ಕಮೀಟಿ ಸದಸ್ಯರು ಭಾಗವಹಿಸಿದ್ದರು.