spot_img
spot_img

14ನೇ ಸತ್ಸಂಗ ಸಮ್ಮೇಳನ ಉದ್ಘಾಟಿಸಿದ ಡಾ. ಶಿವಕುಮಾರ ಸ್ವಾಮೀಜಿ

Must Read

ಮನುಷ್ಯ ಮನುಷ್ಯರಂತೆ ಬದುಕುವುದನ್ನು ಕಲಿಯಬೇಕು’

ಮೂಡಲಗಿ: ‘ವಿದ್ಯೆ, ದಾನ, ಧರ್ಮ, ಧ್ಯಾನ, ಉತ್ತಮ ಆಚಾರಗಳಿಲ್ಲದ ಮನುಷ್ಯನ ಬದುಕು ವ್ಯರ್ಥವಾದದ್ದು’ ಎಂದು ಬೀದರದ ಚಿದಂಬರಾಶ್ರಮದ ಸಿದ್ಧಾರೂಢ ಮಠದ ಡಾ. ಶಿವಕುಮಾರ ಸ್ವಾಮೀಜಿಗಳು ಹೇಳಿದರು. 

ಇಲ್ಲಿಯ ವಿ.ಬಿ. ಸೋನವಾಲಕರ ಶಾಲೆಯ ಆವರಣದಲ್ಲಿ ವಿಶ್ವಶಾಂತಿಗಾಗಿ ಜರುಗುತ್ತಿರುವ 14ನೇ ಸತ್ಸಂಗ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು ಕರ್ಮ ಮತ್ತು ಧರ್ಮದ ದಾರಿಯಲ್ಲಿ ನಡೆದು ಮನುಷ್ಯ ತನ್ನ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು. ಯಾವ ಮನುಷ್ಯನು ಧರ್ಮ, ನೀತಿ, ನಿಯಮಗಳ ಕಟ್ಟಳೆಗಳಲ್ಲಿ ನಡೆಯುವುದಿಲ್ಲ ಆತ ಮೃಗಗಳಿಗಿಂತ ಕೀಳು ಎನಿಸುವನು. ಮನುಷ್ಯ ಮನುಷ್ಯನಾಗಿ ಬದುಕುವುದನ್ನು ಕಲಿಯಬೇಕು ಎಂದರು. 

ಮನುಷ್ಯನು ದೇವರಿಗೆ, ಮಹಾತ್ಮರಿಗೆ, ಸತ್ಪುರುಷರಿಗೆ ಪ್ರಿಯರಾಗಿ ಬದುಕುವುದನ್ನು ಕಲಿಯಬೇಕು. ಮನುಷ್ಯನ ನಡೆ, ನುಡಿಗಳು ಮಹಾತ್ಮರನ್ನು ಪ್ರಸನ್ನರನ್ನಾಗಿಸಬೇಕು. ನಿತ್ಯ ಸತ್ಸಂಗದಲ್ಲಿ ಭಾಗಿಯಾಗಿ ಜೀವನವನ್ನು ಸುಂದರವಾಗಿಸಿಕೊಳ್ಳಬೇಕು ಎಂದರು.

ಕಲಬುರ್ಗಿಯ ಪೂರ್ಣಪ್ರಜ್ಞಾ ಯೋಗಾಶ್ರಮದ ಮಾತೋಶ್ರೀ ಲಕ್ಷ್ಮೀತಾಯಿ ಹಾಗೂ ಇಟ್ನಾಳದ ಸಿದ್ದೇಶ್ವರ ಆಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರು ‘ಶಾಂತ ರೊಸೆದು ಬಣ್ಣಿಸುವ ವರ್ತನವನು’ ವಿಷಯ ಕುರಿತು ಪ್ರವಚನ ಮಾಡಿದರು.  

ಸತ್ಸಂಗದ ಮೊದಲ ದಿನದ ಅನ್ನದಾಸೋಹಿ ಶರಣ ಈರಪ್ಪಾ ಬಾಗಿ ಅವರನ್ನು ಸನ್ಮಾನಿಸಿ ಗೌರವಿಸಿದರು.

ಸತ್ಸಂಗ ಸಮಿತಿಯ ವೀರಣ್ಣ ಹೊಸೂರ, ಶಂಕರಯ್ಯ ಹಿರೇಮಠ, ಬಿ.ವೈ. ಶಿವಾಪುರ, ಈಶ್ವರ ಸತರಡ್ಡಿ, ವಿಲಾಸ ನಾಸಿ, ನೇಮೂ ಬೇವಿನಕಟ್ಟಿ, ಅಜ್ಜಪ್ಪ ಬಳಿಗಾರ ಮತ್ತಿತರರು ಇದ್ದರು.

ಸತ್ಸಂಗ:

ವಿಶ್ವಶಾಂತಿಗಾಗಿ ನಡೆಯುತ್ತಿರುವ ಸಂತ್ಸಂಗ ಸಮ್ಮೇಳನವು ಜ. 18 ರ ವರೆಗೆ ಮೂಡಲಗಿಯ ಬಿ.ವಿ. ಸೋನವಾಲಕರ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಜರುಗುತ್ತದೆ. ಹಲವಾರು ಮಹಾತ್ಮರು, ಪೂಜ್ಯರು ಭಾಗವಹಿಸಿ ಪ್ರವಚನ ಮಾಡಲಿದ್ದಾರೆ. ಪ್ರತಿ ದಿನ ಪ್ರವಚನ ನಂತರ ಅನ್ನಪ್ರಸಾದ ಇರುವುದು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ರಿಯಾಯಿತಿ ದರದಲ್ಲಿ ಸಂತಾನ ಪ್ರಾಪ್ತಿ ಚಿಕಿತ್ಸೆ

ಬೆಳಗಾವಿ: ಮಕ್ಕಳಿಲ್ಲದ ಬಡ ದಂಪತಿಗಳಿಗೆ ರಿಯಾಯಿತಿ ದರದಲ್ಲಿ ಸಂತಾನ ಪ್ರಾಪ್ತಿ ಚಿಕಿತ್ಸೆ ಕೊಡಿಸಲು ಕೊಲ್ಲಾಪುರದ ಸಿದ್ಧಗಿರಿ ಮಠದ ದತ್ತಿ ಆಸ್ಪತ್ರೆಯಲ್ಲಿ ಐವಿಎಫ್ ಕೇಂದ್ರ ಸ್ಥಾಪಿಸಲಾಗಿದೆ ಎಂದು ಮುಜರಾಯಿ,...
- Advertisement -

More Articles Like This

- Advertisement -
close
error: Content is protected !!