ಟೈಮ್ಸ್ ಆಫ್ ಕರ್ನಾಟಕ ವರದಿಗೆ ಸ್ಪಂದನೆ ; ಅಕ್ರಮ ಮರಳು ದಂಧೆಯ ಬಗ್ಗೆ ಸ್ಪಷ್ಟೀಕರಣ ನೀಡಿದ ಎಸಿ

Must Read

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...

ಸ್ನೇಹಿತರ ದಿನಾಚರಣೆಯ ಶುಭಾಷಯಗಳು

ನಮ್ಮಲ್ಲಿ ಎಷ್ಟೋ ದಿನಾಚರಣೆಗಳಿವೆ. ಇದರಲ್ಲಿ ಸ್ನೇಹಕ್ಕೆ ಕೊಡುವ ಬೆಲೆ ಯಾವುದಕ್ಕೂ ಕೊಡಲಾಗದು ಎನ್ನುತ್ತಾರೆ. ಕಾರಣ ಇಲ್ಲಿ ಸ್ವಾರ್ಥ ಅಹಂಕಾರವಿರದೆ ಶುದ್ದ ಭಾವನೆಗಳ ಸಮ್ಮಿಲನವಿರುತ್ತದೆ. ಬಡವ ಬಡವನನ್ನು...

ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಲು ಒತ್ತಾಯ

ಸಿಂದಗಿ: ರಾಜ್ಯದಲ್ಲಿ ಪಿಂಜಾರ, ನದಾಫ್ ಸಮುದಾಯಗಳು ಶಿಕ್ಷಣ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದ್ದು ಈ ಜನಾಂಗ ಉದ್ದಾರವಾಗಬೇಕಾದರೆ ಪಿಂಜಾರ್ ಅಭಿವೃದ್ಧಿ ನಿಗಮ ಅವಶ್ಯಕತೆ ಇದೆ. ಪ್ರವರ್ಗ...

ಸಿಂದಗಿ: “ಅಕ್ರಮ ಮರಳು ಸಾಗಾಟ ನಿರಂತರ ; ಜಾಣ ಕುರುಡರಾದ ಅಧಿಕಾರಿಗಳು ” ಎಂಬ ಶೀರ್ಷಿಕೆಯಲ್ಲಿ ನಮ್ಮ ಟೈಮ್ಸ ಆಫ್ ಕರ್ನಾಟಕ ವೆಬ್ ಪತ್ರಿಕೆಯಲ್ಲಿ ದಿ. ೧೨ ರಂದು ಅಕ್ರಮ ಮರಳು ದಂಧೆಯ ಬಗ್ಗೆ ವರದಿ ಪ್ರಕಟವಾಗಿತ್ತು.ಇದರ ಬಗ್ಗೆ ಇಂಡಿಯ ಕಂದಾಯ ಉಪವಿಭಾಗದ ಉಪವಿಭಾಗಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.

೨ ಪುಟಗಳಲ್ಲಿ ೫ ಅಂಶಗಳಲ್ಲಿ ಉಪವಿಭಾಗಾಧಿಕಾರಿಗಳು ಸ್ಪಷ್ಟೀಕರಣ ನೀಡಿದ್ದಾರೆ.ಭೀಮಾ ನದಿ ಪಾತ್ರದಲ್ಲಿ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ಹಸಿರು ನ್ಯಾಯ ಪೀಠದಿಂದ 2016 ರಲ್ಲಿಯೇ ತಡೆಯಾಜ್ಞೆ ಇದೆ.ಹಲವು ವರ್ಷಗಳಿಂದ ಈ ಪ್ರಕರಣವು ಹಸಿರು ನ್ಯಾಯ ಪೀಠದ ಮುಂದಿದೆ.ಇದರ ಹಿನ್ನೆಲೆ ಭೀಮಾ ನದಿ ಪಾತ್ರದಲ್ಲಿ ಯಾವುದೇ ಮರಳಿನ ಬ್ಲಾಕ್ ಗಳನ್ನು ಗುರುತಿಸಿಲ್ಲ.ಅಲ್ಲದೆ ಟೆಂಡರ್ ಪ್ರಕ್ರಿಯೆಯನ್ನು ಮಾಡಿರುವುದಿಲ್ಲ.ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಈಗಾಗಲೆ ಸಂಬಂಧಿಸಿದ ಇಲಾಖೆ ಹಾಗೂ ಸರಕಾರದ ಗಮನಕ್ಕೆ ತಂದಿದೆ ಎಂದು ಹೇಳಿದ್ದಾರೆ.

ಇನ್ನು ಅನಧಿಕೃತ ಮರಳು ಸಾಗಾಣಿಕೆಗೆ ಸಂಬಂಧಿಸಿದಂತೆ ಸಿಂದಗಿ ತಾಲೂಕಿನ ಮೊರಟಗಿ ಗ್ರಾಮದಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಲಾಗಿದ್ದು,ಸಿಸಿ ಕ್ಯಾಮರಾ ಅಳವಡಿಸಿದೆ.ಸ್ಥಳದಲ್ಲಿ ಹಲವು ಇಲಾಖೆಗಳ ಸಿಬ್ಬಂದಿಯನ್ನು ನಿಯೋಜಿಸಿ ಕಾರ್ಯನಿರ್ವಹಿಸಲಾಗುತ್ತಿದೆ.ಇನ್ನು ಇದುವರೆಗೆ ೩೦೦೦ ಕ್ಕೂ ಹೆಚ್ಚು ಅಧಿಕೃತ ಪರವಾನಿಗೆ ಹೊಂದಿದ್ದ ವಾಹನಗಳ ಸಾರಿಗೆಗೆ ಅನುಮತಿಸಿ,ಅನಧಿಕೃತ ಸಾಗಾಟದಲ್ಲಿ ತೊಡಗಿದ್ದ ವಾಹನಗಳ ಮೇಲೆ ನಿಯಮಾನುಸಾರ ಅಂದಾಜು ೬ ರಿಂದ ೭ ಲಕ್ಷ ರೂ. ದಂಡ ವಿಧಿಸಿ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

- Advertisement -

ಇದಕ್ಕೆ ಸಂಬಂಧಪಟ್ಟಂತೆ ೧೦ ಕ್ಕೂ ಹೆಚ್ಚು ಎಫ್ ಐಆರ್ ಗಳನ್ನು ದಾಖಲಿಸಲಾಗಿದ್ದು,ಅನಧಿಕೃತ ಮರಳು ಸಾಗಾಣಿಕೆಗಳ ಕುರಿತು ಸೂಕ್ತ ಪುರಾವೆಗಳೊಂದಿಗೆ ಜಿಲ್ಲಾಡಳಿತ/ತಾಲೂಕಾಡಳಿತ ತಿಳಿಸಿದ್ದಲ್ಲಿ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟನೆ ನೀಡಿದ್ದಾರೆ.

- Advertisement -
- Advertisement -

Latest News

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...
- Advertisement -

More Articles Like This

- Advertisement -
close
error: Content is protected !!