ಸವದತ್ತಿ – ಲೋಕಸಬಾ ಉಪ ಚುನಾವಣೆ 2021 .17ರ ಸವದತ್ತಿ ಯಲ್ಲಮ್ಮಾ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕೆಲಸ ಈಗಾಗಲೇ ಪ್ರಾರಂಭವಾಗಿದೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯ ಅದೂ ಕೊಡಾ ನಡೆಯುತ್ತಿದೆ.
ತಾಲೂಕಿನ ಗೊರವನಕೊಳ್ಳ. ಕಟಮಳ್ಳಿ .ಕಟಮಳ್ಳಿ ತಾಂಡಾ. ಗ್ರಾಮಗಳಲ್ಲಿ ಮತದಾನದ ಜಾಗೃತಿ ಮೂಡಿಸಲು ಸೆಕ್ಟರ ಸಂಖೆ 8 ರಲ್ಲಿ. ಇವಿಎಮ್ ವಿವಿಪ್ಯಾಟ್ ಪ್ರಾತ್ಯಕ್ಷಿಕೆಯನ್ನು ನೀಡುವುದರ ಮೂಲಕ ಜಾಗೃತಿ ಮೂಡಿಸಲಾಯಿತು ಮತದಾರರಲ್ಲಿರುವ ಗೊಂದಲಗಳನ್ನು ಪರಿಹರಿಸಿ ಅರ್ಹ ಎಲ್ಲ ಮತದಾರರು ಕಡ್ಡಾಯವಾಗಿ ಮತದಾನ ಮಾಡುವಂತೆ ತಿಳಿವಳಿಕೆ ನೀಡಲಾಯಿತು
ಈ ಸಂದರ್ಭದಲ್ಲಿ ಸೆಕ್ಟರ ಅಧಿಕಾರಿಗಳಾದ ಲೋಕೊಪಯೋಗಿ ಇಲಾಖೆ ಉಪ ವಿಬಾಗದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಾದ ಎಚ್ ಎ ಕದ್ರಾಪುರಕರ. ಹಾಗೂ ಮಾಸ್ಟರ ಟ್ರೇನರ ಎಪ್ ಜಿ ನವಲಗುಂದ.ಗ್ರಾಮ ಲೆಕ್ಕಾಧಿಕಾರಿ ಯಾಸ್ಮೀನ್ ಯಾದವಾಡ. ಹಾಗೂ ಶಾಲಾ ಪ್ರಧಾನ ಗುರುಮಾತೆ ಆಶಾ ಜೋಶಿ.ಬಿಎಲ್‍ಓ ಸೇರಿದಂತೆ ಗ್ರಾಮಪಂಚಾಯತ ಸಿಬ್ಬಂದಿಗಳು ಉಪಸ್ಥಿತರಿದ್ದರು