ಸಿಂದಗಿ: ಬಿಜೆಪಿ ಅಭ್ಯರ್ಥಿ ರಮೇಶ ಬೂಸನೂರ ಅವರು ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಸಿಂದಗಿಯಲ್ಲಿ ಪ್ರಮುಖ ವೃತ್ತ ಮತ್ತು ಬೀದಿಗಳಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಕಳೆದ ಸೆಪ್ಟಂಬರ 28 ಚುನಾವಣೆ ಘೋಷಣೆಯಾಗಿದ್ದಾಗಿನಿಂದ ಕ್ಷೇತ್ರದಲ್ಲಿ 7 ಜನ ಸಚಿವರು ಹಾಗೂ ಮಾಜಿ ಡಿಸಿಎಂ ಸೇರಿದಂತೆ ರಾಜ್ಯದ ಅನೇಕ ಘಟಾನುಘಟಿಗಳು ಸಿಂದಗಿಯಲ್ಲಿ ಬೀಡು ಬಿಟ್ಟು ಭೂತ್ ಮಟ್ಟದ ಕಾರ್ಯಕರ್ತರ, ಸಬೆಗಳನ್ನು ನಡೆಸಿ 7 ಜಿಪಂ ಕ್ಷೇತ್ರದಲ್ಲಿ ಕಾರ್ಯಪಡೆಯನ್ನು ನಿರ್ಮಿಸಿ ಕೇಂದ್ರ ಹಾಗೂ ರಾಜ್ಯ ಸರಕಾರದ ಸಾಧನೆಗಳನ್ನು ಪ್ರತಿ ಮನೆಗೆ ಬಿತ್ತರಿಸಿ ಹೆಚ್ಚಿನ ಮತ ಪಡೆಯಲು ಪ್ರಯತ್ನಿಸಿದ ಪ್ರತಿಫಲವೇ ಈ ಗೆಲುವು ಎಂದು ಹೇಳಲಾಗುತ್ತಿದೆ.
ಕಳೆದ 10 ವರ್ಷದಲ್ಲಿ ಡಿಗ್ರಿ ಕಾಲೇಜು, ಆದರ್ಶ ಮಹಾವಿದ್ಯಾಲಯ, ಬಿಸಿಎಂ ಹಾಸ್ಟೆಲ್ ಸೇರಿದಂತೆ ಈ ಕ್ಷೇತ್ರಕ್ಕೆ ಅನೇಕ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದೇನೆ ಅಲ್ಲದೆ ಕಳೆದ 2013ರ ಚುನಾವಣೆ ಅನುಕಂಪದ ಅಲೆಯಲ್ಲಿ ಸೋತಿದ್ದೆ ಆದರೆ ಈ ಬಾರಿ ಈ ಕ್ಷೇತ್ರದ ಜನತೆ ನನ್ನ ಮೇಲೆ ಅನುಕಂಪ ತೋರಿ ಆರ್ಶೀವಾದ ಮಾಡಿದ್ದಾರೆ. ಈ ಕ್ಷೇತ್ರದಲ್ಲಿ ಘೋಷಣೆಯಾದ ಆಲಮೇಲ ತಾಲೂಕಿಗೆ ಇಲಾಖೆಗಳ ಮಂಜೂರು, ತೋಟಗಾರಿಕೆ ಕಾಲೇಜು ಮರುಸ್ಥಾಪನೆ , ಸಿಂದಗಿ ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿಯಿಂದ ಎಲ್ಲ ರಸ್ತೆಗಳು ಹಾಳಾಗಿದ್ದು ಅವುಗಳ ಸುಧಾರಣೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಮಾದರಿ ಕ್ಷೇತ್ರವನ್ನಾಗಿ ಮಾಡುವ ಗುರಿಹೊಂದಿದ್ದೇನೆ.
–ರಮೇಶ ಭೂಸನೂರ
ನೂತನ ಶಾಸಕರು, ಸಿಂದಗಿ.