- Advertisement -
ಮೂಡಲಗಿ: ತನ್ನ ಕಟ್ಟಡಕ್ಕೆ ಅಡ್ಡಿಯಾಗುತ್ತದೆ ಅಂತ ರಸ್ತೆ ಪಕ್ಕದಲ್ಲಿದ್ದ ಅಂಬೇಡ್ಕರ್ ಭಾವಚಿತ್ರವಿದ್ದ ಕಟ್ಟೆಯನ್ನು ಮನೆ ಮಾಲಿಕ ಧ್ವಂಸ ಮಾಡಿದ ಘಟನೆಯೊಂದು ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಸುಣಧೋಳಿ ಗ್ರಾಮದಲ್ಲಿ ನಿನ್ನೆ ರಾತ್ರಿ ಘಟನೆ ನಡೆದಿದೆ
ಗ್ರಾಮದ ಶಿವಾನಂದ ಸಿದ್ದಪ್ಪ ಪಾಟೀಲ ಎಂಬಾತನೇ ಅಂಬೇಡ್ಕರ್ ಕಟ್ಟೆ ದ್ವಂಸ ಮಾಡಿದ ಆರೋಪಿ ಎನ್ನಲಾಗುತ್ತಿದೆ. ತಡರಾತ್ರಿ ನಡೆದ ಘಟನೆಯಿಂದ ಸ್ಥಳೀಯ ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಶಿವಾನಂದ ಗ್ರಾಮದಲ್ಲಿ ಕಟ್ಟುತ್ತಿದ್ದ ಕಾಂಪ್ಲೇಕ್ಸ್ ಗೆ ಭಾವಚಿತ್ರವಿರುವ ಕಟ್ಟೆ ಅಡ್ಡಿಯಾಗುತ್ತೆ ಎಂಬ ಕಾರಣಕ್ಕೆ ಈ ಕಟ್ಟೆ ಧ್ವಂಸದಂತಹ ಕೆಲಸ ಮಾಡಿದ್ದಾನೆ ಎನ್ನಲಾಗುತ್ತಿದ್ದು, ಘಟನೆಯಿಂದ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣವಾಗಿದೆ. ದಲಿತ ಸಂಘಟನೆಗಳಿಂದ ಗ್ರಾಮದಲ್ಲಿ ಟೈಯರ್ ಗೆ ಬೆಂಕಿ ಇಟ್ಟು ಪ್ರತಿಭಟನೆ ನಡೆಸಲಾಗಿದೆ. ಶಿವಾನಂದನನ್ನು ವಶಕ್ಕೆ ಪಡೆದು ಕುಲಗೋಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.