spot_img
spot_img

ಲಿಂಗಾಯತ ಧರ್ಮದ ವಿರೋಧಿ ವೀರಶೈವ ಮಹಾ ಸಭಾ – ಶ್ರೀಕಾಂತ್ ಸ್ವಾಮಿ

Must Read

ಬೀದರ – ವೀರಶೈವ ಮಹಾಸಭಾವೇ ಲಿಂಗಾಯತ ಧರ್ಮ ವಿರೋಧಿಯಾಗಿದೆ ಎಂದು ರಾಜ್ಯ ಲಿಂಗಾಯತ ಧರ್ಮದ ಸಂಚಾಲಕ ಶ್ರೀಕಾಂತ್ ಹೇಳಿದರು.

ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಹೋರಾಟ ಮಾಡಲು ಯಾವ ನಾಯಕರ ಅವಶ್ಯಕತೆ ಬೇಕಾಗಿಲ್ಲ.ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ, ಎಂ.ಬಿ ಪಾಟೀಲ ಇಬ್ಬರೂ ನಮಗೆ ಅವಶ್ಯಕತೆ ಇಲ್ಲ ನಾವೇ ಸ್ವತಂತ್ರವಾಗಿ ಹೋರಾಟ ಮಾಡುತ್ತೇವೆ ಎಂದು ಅವರು ಪತ್ರಕರ್ತರೊಡನೆ ಮಾತನಾಡುತ್ತ ತಿಳಿಸಿದರು.

ರಾಹುಲ್ ಗಾಂಧಿ ಕೂಡ ಬಸವಣ್ಣನವರ ಅನುಯಾಯಿಗಳಾಗಿದ್ದಾರೆ. ಬಸವಣ್ಣನವರ ಇಷ್ಠ ಲಿಂಗ ದೀಕ್ಷೆ ಪಡೆದುಕೊಂಡಿದ್ದಾರೆ. ರಾಹುಲ್ ಗಾಂಧಿ ಇಷ್ಟ ಲಿಂಗ ದೀಕ್ಷೆ ಪಡೆದು ಕೊಂಡಿದ್ದು ನಮ್ಮ ಲಿಂಗಾಯತ ಧರ್ಮಕ್ಕೆ ಆನೆ ಬಲ ಬಂದಂತಾಗಿದೆ ಎಂದರು.

ರಂಭಾಪುರಿ ಸ್ವಾಮಿ ಕುತಂತ್ರದಿಂದ ಸಿದ್ದ ರಾಮಯ್ಯ ಹೇಳಿಕೆ ನೀಡಿರಬಹದು.

ರಂಭಾಪುರಿ ಸ್ವಾಮಿಗಳು ಯಾವ ಧರ್ಮದಲ್ಲಿ ಇದ್ದಾರೆ ಎಂಬುದು ಅನುಮಾನ ಎಂದ ಅವರು, ರಂಭಾಪುರಿ ಸ್ವಾಮಿ ಒಂದು ಸಲ ಲಿಂಗಾಯತ ಧರ್ಮ ಎಂದು ಹೇಳುತ್ತಾರೆ. ಇನ್ನೊಂದು ಸಲ ವೀರಶೈವ ಲಿಂಗಾಯತ  ಧರ್ಮ ಎಂದು ಹೇಳುತ್ತಾರೆ ಅವರು ಯಾವ ಧರ್ಮದಲ್ಲಿದ್ದಾರೆ ಎಂಬುದೇ ತಿಳಿಯದು ಎಂದು ಶ್ರೀಕಾಂತ್ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!