ಅಚ್ಛೇ ದಿನ್ ತರುವುದಾಗಿ ಹೇಳಿದ ಬಿಜೆಪಿ ಬೆಲೆಯೇರಿಕೆ ಕೊಡುಗೆ ನೀಡಿದೆ – ಸಿದ್ಧರಾಮಯ್ಯ ಕಿಡಿ

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

ಸಿಂದಗಿ: ಕಳೆದ ಕಾಂಗ್ರೆಸ್ ಸರಕಾರದಲ್ಲಿ ಜಾರಿ ಮಾಡಿದ ಎಲ್ಲ ಯೋಜನೆಗಳನ್ನು ಈಗಿನ ಆಡಳಿತ ನಡೆಸುತ್ತಿರುವ ಭ್ರಷ್ಟ ಬಿಜೆಪಿ ಸರಕಾರ ರದ್ದುಗೊಳಿಸಿ ಜನರನ್ನು ಸಂಕಷ್ಟಕ್ಕೀಡಾಗುವಂತೆ ಮಾಡುತ್ತಿದೆ ಅಚ್ಚೇ ದಿನ್  ತರುವುದಾಗಿ ಹೇಳಿದ್ದ ಮೋದಿ ಇದೀಗ ದೇಶದ ಜನರಿಗೆ ಬೆಲೆ ಏರಿಕೆಯ ಕೊಡುಗೆ ನೀಡಿದ, ಅಭಿವೃದ್ಧಿ ಮಾಡದ ಬಿಜೆಪಿ ಸರಕಾರಕ್ಕೆ ಪಾಠ ಕಲಿಸಬೇಕಾದರೆ ಅಶೋಕ ಮನಗೂಳಿಯವರನ್ನು ಗೆಲ್ಲಿಸಿ ಈ ಸರಕಾರಕ್ಕೆ ತಕ್ಕ ಉತ್ತರ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಪಟ್ಟಣದ ಎಚ್.ಜಿ.ಕಾಲೇಜು ಆವರಣದಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯೋಜಿಸಲಾದ ಅಭ್ಯರ್ಥಿ ಪರ ಮತಯಾಚನೆ ಸಮಾರಂಭದಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಶಾದಿಭಾಗ್ಯ, ಕ್ಷೀರಭಾಗ್ಯ, ಶೂಭಾಗ್ಯ, ಸೈಕಲ್ ಭಾಗ್ಯ, ಪ್ರತಿ ಕುಟುಂಬದ ಸದಸ್ಯನಿಗೆ 7 ಕೆ ಜಿ ಅಕ್ಕಿ, ಗೋದಿ ಸೇರಿದಂತೆ ಹತ್ತು ಹಲವಾರು ಭಾಗ್ಯಗಳನ್ನು ಪುಕ್ಕಟೆಯಾಗಿ ನೀಡಿದ್ದೇವೆ ಆದರೆ ಈಗಿನ ಬಿಜೆಪಿ ಸರಕಾರ ಎಲ್ಲ ಭಾಗ್ಯಗಳನ್ನು ಬಂದ್ ಮಾಡುವ ಮೂಲಕ ಜನಸಾಮಾನ್ಯರಿಗೆ ಹೊರೆಯಾಗುವಂಥ ಡಿಸೇಲ್, ಪೇಟ್ರೋಲ್, ಗ್ಯಾಸ್ ಸಿಲಿಂಡರ್ ಹಾಗೂ ದಿನಬಳಕೆ ವಸ್ತುಗಳ ಬೆಲೆಗಳನ್ನು ಗಗನಕ್ಕೇರಿಸಿದ್ದಲ್ಲದೆ ಟ್ಯಾಕ್ಸ ರೂಪದಲ್ಲಿ ಜನರನ್ನು ಲೂಟಿ ಮಾಡುತ್ತಿದೆ ಇಂತಹ ಸರಕಾರ ಬೇಕಾ? ಇಂತಹ ಭ್ರಷ್ಟ ಸರಕಾರವನ್ನು ಕಿತ್ತೊಗೆದು ಮತ್ತೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲು ಇದು ಮುನ್ನುಡಿಯಾಗಬೇಕು ಎಂದರು.

- Advertisement -

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮಾತನಾಡಿ, ರಾಜ್ಯದಲ್ಲಿ ವಿಜಯಪುರ ಮತ್ತು ಬಾಗಲಕೋಟ ಜಿಲ್ಲೆಯಲ್ಲಿ ಸುಮಾರು 2 ಲಕ್ಷ ರೈತರ ಜಮೀನುಗಳೀಗೆ ನೀರಾವರಿ ಕಲ್ಪಿಸಿಕೊಟ್ಟಿದ್ದು ಕಾಂಗ್ರೆಸ್ ಸರಕಾರ.ಆದರೆ ಬಿಜಪಿ ಪಕ್ಷದ ನಾಯಕರು ಎಲ್ಲವೂ ನಾವೇ ಮಾಡಿದ್ದು ಎಂದು ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಈ ಕ್ಷೇತ್ರದ ಕೊರವಾರ ಸೇರಿದಂತೆ 20 ಹಳ್ಳಿಗಳು ನೀರಾವರಿಯಿಂದ ವಂಚಿತವಾಗಿವೆ ಎಂದು ದಿ.ಎಂ.ಸಿ.ಮನಗೂಳಿಯವರು ನನ್ನ ಹತ್ತಿರ ಬಂದು ಮನವಿ ಮಾಡಿಕೊಂಡಿದ್ದರು ತಕ್ಷಣವೇ ಹಣಕಾಸು ಇಲಾಖೆಯಿಂದ ರೂ 90 ಕೋಟಿ ಹಣ ಬಿಡುಗಡೆ ಮಾಡಿದ್ದೇನೆ ಕೊರವಾರ ಬ್ರ್ಯಾಂಚ್ ಕಾಲುವೆ ಕಾಮಗಾರಿಗೆ ಟೆಂಡರ ಕರೆದ ಮಾತ್ರಕ್ಕೆ ನಾವೇ ಮಾಡಿದ್ದು ಎಂದು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಇದನ್ನೆಲ್ಲ ನೋಡಿದರೆ ಬಂಡವಾಳ ಹೂಡದೇ ಲಾಭ ಪಡೆಯುವ ಹುನ್ನಾರದಲ್ಲಿ ಬಿಜೆಪಿ ನಾಯಕರಿದ್ದಾರೆ ಇದನ್ನು ಈ ಭಾಗದ ಜನತೆಗೆ ಗೊತ್ತಿರದ ವಿಷಯವೇನು ಅಲ್ಲ. ಇಂತಹ ಸುಳ್ಳು ಹೇಳುವ ಜನರನ್ನು ನಂಬಬೇಡಿ, ಎಂ.ಸಿ.ಮನಗೂಳಿ ಅವರ ನಿಧನದಿಂದಾಗಿ ಅನಿವಾರ್ಯ ಕಾರಣಕ್ಕೆ ಚುನಾವಣೆ ಎದುರಾಗಿದೆ ಅವರು ನಿಧನರಾಗುವದಕ್ಕೂ ಮುಂಚೆ ಡಿ.ಕೆ.ಶಿವಕುಮಾರ ಹಾಗೂ ನನ್ನನ್ನು ಭೇಟಿಯಾಗಿ ನನ್ನ ಮಗ ಅಶೋಕನನ್ನು ನಿಮ್ಮ ಪಕ್ಷದಲ್ಲಿ ಬೆಳೆಸಬೇಕು ಎಂದಿದ್ದರು. ಅವರ ಮಾತಿನಂತೆ ಅಶೋಕ ಮನಗೂಳಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಈ ಎಲ್ಲ ಬೆಳವಣಿಗೆಗಳು ನೋಡಿದರೆ 25 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದರು.

ಮಾಜಿ ಸಚಿವ ಎಂ.ಬಿ.ಪಾಟೀಲ ಮಾತನಾಡಿ, ಈ ರಾಜ್ಯದಲ್ಲಿ ಸಂಪೂರ್ಣ ನೀರಾವರಿ ಕ್ಷೇತ್ರವನ್ನಾಗಿ ಮಾಡಿದ್ದು ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ನಾವು ಮಾಡಿದ್ದೇವೆ ಎಂದು ಸುಳ್ಳು ಹೇಳಿಕೊಂಡು ಅಧಿಕಾರ ನಡೆಸುವ ಬಿಜೆಪಿ ಸರಕಾರಕ್ಕೆ ಮುಂಬರುವ ಚುನಾವಣೆಯಲ್ಲಿ ಜನತೆ ತಕ್ಕ ಉತ್ತರ ನೀಡುತ್ತಾರೆ. ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಲಕಡೆಯೂ ಅಚ್ಚೇದಿನ ಬರುತ್ತೆ ಅಂತ ಬಿಜೆಪಿಯವರು ಹೇಳ್ತಾ ಇದ್ರು ಆದ್ರೆ ಈಗ ಆಗ್ತಾ ಇರೋದು ಎಲ್ಲ ಬೆಲೆಗಳು ಗಗನಕ್ಕೆ ಏರುತ್ತಿವೆ, ಡೀಸೇಲ್, ಪೆಟ್ರೋಲ್, ಗ್ಯಾಸ,ಬೇಳೆಕಾಳುಗಳು ಸೇರಿದಂತೆ ಎಲ್ಲವುಗಳ ಬೆಲೆಯೂ ಗಗನಕ್ಕೇ ಏರಿದೆ ಎಂದರಲ್ಲದೆ ಮೋದಿ ಸರಕಾರ ಬಡವರಿಗೆ, ಮಧ್ಯಮ ವರ್ಗದ ಜನರಿಗೆ ಮೋಸ ಮಾಡಿದೆ. ಈ ಭಾಗದಲ್ಲಿ ಕಾಂಗ್ರೆಸ್ ಪಕ್ಷದಿಂದ ಅನೇಕ ಜನಪರ ನೂರೆಂಟು ಕೆಲಸಗಳು ಕಾರ್ಯರೂಪಕ್ಕೆ ಬಂದಿವೆ ಆ ಕಾರಣಕ್ಕೆ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಕನಿಷ್ಠ 35ರಿಂದ 40 ಸಾವಿರ ಮತಗಳ ಅಂತರದಿಂದ ಗೆದ್ದೆ ಗೆಲ್ಲುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದರು.

ಇಂಡಿ ಶಾಸಕ ಯಶವಂತ್ರಾಯಗೌಡ ಪಾಟೀಲ, ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ, ಜಿಲ್ಲಾಧ್ಯಕ್ಷ ರಾಜು ಆಲಗೂರ, ಮಾಜಿ ಶಾಸಕ ಶರಣಪ್ಪ ಸುಣಗಾರ ಅಭ್ಯರ್ಥೀ ಅಶೋಕ ಮನಗೂಳಿ ಮಾತನಾಡಿದರು.

ಅಯೂಬ ದೇವರಮನಿ, ಮಲ್ಲಣ್ಣಾ ಸಾಲಿ, ಕೆಪಿಸಿಸಿ ಸದಸ್ಯ ಮುಸ್ತಾಕ ಮುಲ್ಲಾ, ಶಿವನಗೌಡ ಬಿರಾದಾರ, ಎಪಿಎಂಸಿ ಅಧ್ಯಕ್ಷ ಸಿದ್ದಣ್ಣ ಹಿರೇಕುರಬರ, ಯೋಗಪ್ಪಗೌಡ ಪಾಟೀಲ, ಎಂ.ಎ.ಖತೀಬ, ಗುರಣ್ಣಗೌಡ ಬಿರಾದಾರ, ನಿಂಗನಗೌಡ ಪಾಟೀಲ, ಭೀಮರಾಯ ಅಮರಗೋಳ, ಭೀಮಾಶಂಕರ ಬಡಿಗೇರ, ಇರ್ಫಾನ ಮುಲ್ಲಾ, ಇರ್ಫಾನ ಅಳಂದ, ಶಫೀ ಜಮಾದಾರ, ನಿಂಗಣ್ಣ ಚಟ್ಟಿ ಬಾಗವಹಿಸಿದ್ದರು.

ಬ್ಲಾಕ್ ಸಮಿತಿ ಅದ್ಯಕ್ಷ ವಿಠ್ಠಲ ಕೊಳ್ಳುರ, ಸ್ವಾಗತಿಸಿದರು. ರಾಜಶೇಖರ ಕೂಚಬಾಳ ನಿರೂಪಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!