ದಾನ ದಾನವರಿಗೆ ಮಾಡದೆ ಮಾನವರಿಗೆ ಮಾನವೀಯತೆಯಿಂದ ಮಾಡಬೇಕು

Must Read

ಲೇಖಕಿ ಜಯಶ್ರೀ ಅಬ್ಬಿಗೇರಿಗೆ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಯ ಗರಿ

ಬೆಳಗಾವಿ: ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜನೀಯರಿಂಗ್ ಪ್ರತಿಷ್ಠಾನ ಟ್ರಸ್ಟ ನೀಡುವ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಸ.ಪ.ಪೂ.ಕಾಲೇಜು ಹಿರೇಬಾಗೇವಾಡಿಯ ಉಪನ್ಯಾಸಕಿ, ಲೇಖಕಿ, ಅಂಕಣಕಾರ್ತಿ ಜಯಶ್ರೀ...

ಮಲ್ಲಪ್ಪ ಕಂಕಣವಾಡಿ ಅವರಿಗೆ ಪಿಎಚ್‍ಡಿ

ಮೂಡಲಗಿ: ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಮಲ್ಲಪ್ಪ ಕೆಂಚಪ್ಪ ಕಂಕಣವಾಡಿ ಅವರು ದೈಹಿಕ ಶಿಕ್ಷಣ ವಿಷಯದಲ್ಲಿ ಡಾ: ಹೆಚ್.ಎಸ್.ಜಂಗೆ ಅವರ...

ಪೋಸ್ಟ್ ಕಾರ್ಡಗಳಲ್ಲಿ ಪ್ರಧಾನಿಗೆ ಶುಭಾಶಯ

ಸಿಂದಗಿ: ಭಾರತೀಯ ಜನತಾ ಪಾರ್ಟಿ ಸಿಂದಗಿ ಮಂಡಲ ವತಿಯಿಂದ ನಗರದ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ವಿಶ್ವ ನಾಯಕ ನಮ್ಮ ಭಾರತದ ಹೆಮ್ಮೆಯ ಪ್ರಧಾನಮಂತ್ರಿ ಮೋದೀಜಿ...

ಅಂಗವಿಕಲತೆಗೂ ಅಂಗಾಂಗದಾನಕ್ಕೂ ಏನಾದರೂ ಸಂಬಂಧವಿದೆಯೆ? ಫೇಸ್‌ಬುಕ್‌ನಲ್ಲಿ ನಡೆದ ಚರ್ಚೆಯವಿಚಾರವಾಗಿದೆ. ಪ್ರಕೃತಿಯಿಂದ ಹುಟ್ಟಿದ ಮಾನವನಿಗೆ ಪ್ರಕೃತಿ ವಿರುದ್ದ ನಡೆಯೋ ಅಧಿಕಾರ ಕೊಟ್ಡಿರೋದೆ ಅಜ್ಞಾನದ ವಿಜ್ಞಾನ.

ವಿಶೇಷಜ್ಞಾನ ದಲ್ಲಿ ಆಧ್ಯಾತ್ಮ ವೂ ಇದೆ. ಪ್ರಕೃತಿಗೆ ತಿರುಗಿ ಕೊಟ್ಟು ಹೋಗೋದು ಅವನ ಸತ್ಕರ್ಮದ ಫಲವಾಗಬೇಕಿತ್ತು ಆದರೀಗ ಅಂಗಾಂಗವನ್ನು ಮಾರಿಕೊಂಡು ಅಂಗವಿಕಲರ ಜನ್ಮ ಹೆಚ್ಚಾಗಿದೆ. ಇದನ್ನು  ಧಾರ್ಮಿಕವಾಗಿ ಚರ್ಚೆ ಮಾಡಿ ಅರಿವು ಮೂಡಿಸುವುದು ಅಗತ್ಯವಿದೆ. ಹಿಂದೂ ಧರ್ಮದವರ ರಕ್ತ ಪರ ಧರ್ಮದವರೂ ಪಡೆಯಬಹುದು. ಪರಧರ್ಮದವರ ರಕ್ತವನ್ನು ಹಿಂದೂಗಳೂ ಪಡೆಯಬಹುದು. ಹಾಗೆ ಅಂಗಾಂಗ ದಾನ ನಡೆದಿದೆ.

ಆದರೆ ಸಂಖ್ಯಾಬಲದ ಪ್ರಶ್ನೆ ಬಂದಾಗ ನಾವು ಹಿಂದುಳಿದವರ ಸಾಲಲ್ಲಿ ನಿಂತರೆ ಜ್ಞಾನಕ್ಕೆ ಬೆಲೆಯಿಲ್ಲ. ಇದೇ ಭಾರತೀಯರ ಸಮಸ್ಯೆಗೆಕಾರಣವಾಗುತ್ತಿದೆ. ದುಷ್ಟರಿಗೆ ದಾನದ ರೂಪದಲ್ಲಿ ಕೊಟ್ಟರೂ  ಕಷ್ಟ. ಹಣಪಡೆದರೂ ನಷ್ಟ.ಪಂಚಭೂತಗಳಿಂದಾದ ಸೃಷ್ಟಿಯಾದ ಶರೀರವನ್ನು ಹೇಗೆ ಬಳಸಿದರೆ ಪಂಚಭೂತಗಳಿಗೆ ಶಕ್ತಿಬರುತ್ತದೆ ಎನ್ನುವ ಜ್ಞಾನ ಮಾನವನಿಗಿದ್ದಿದ್ದರೆ ಇಷ್ಟೊಂದು ಅಜ್ಞಾನ ಬೆಳೆಯುತ್ತಿರಲಿಲ್ಲ ಪಂಚಭೂತಗಳೆಂದರೆ ಗಾಳಿ, ನೀರು, ಆಕಾಶ, ಭೂಮಿ,ಅಗ್ನಿ ಇವುಗಳಿಗೆ ದೇಹ ಸಮರ್ಪಣೆ ಮಾಡೋದಕ್ಕೆ ಅಗ್ನಿ ಸ್ಪರ್ಷವಾಗಬೇಕೆನ್ನುತ್ತಾರೆ ಅದೂ ಪ್ರಾಕೃತಿಕ ಕಟ್ಟಿಗೆಯ ಬಳಕೆಯಾದರೆ ಉತ್ತಮ ಎನ್ನುತ್ತಾರೆ. ಇಲ್ಲವಾದರೆಜೀವ ಅತಂತ್ರಸ್ಥಿತಿಗೆ ತಲುಪುತ್ತದೆ ಇದ್ದವರಿಗೆ ಸಮಸ್ಯೆ ಹೆಚ್ಚುತ್ತದೆ ಎನ್ನುತ್ತಾರೆ.

- Advertisement -

ಅಗ್ನಿ ಸ್ಪರ್ಷದಿಂದ ಪೂರ್ಣ ಶರೀರವೇ ಪ್ರಕೃತಿಯಲ್ಲಿ ವಿಲೀನವಾಗಿ ಹೊಸ ಶರೀರ ಪಡೆಯುವುದರಿಂದ ಮತ್ತೆ ಜನ್ಮತಾಳಿದಾಗ ಅಂಗವಿಕಲತೆ ಇರೋದಿಲ್ಲ. ಈಗಿನ ಶರೀರದ ಒಂದು ಅಂಗದಾನ ಮಾಡಿದ್ದರೂ ಅದರ ಲೋಪ ಧೋಷ ಮುಂದಿರುತ್ತದೆ ಎನ್ನಬಹುದೆ? ಮಾನವ ಕಾರಣಮಾತ್ರದವನಷ್ಟೆ. ಆತ್ಮೋನ್ನತಿಗಾಗಿ ಶರೀರವಿದೆ. ಹೀಗಿರುವಾಗ ಭೌತಿಕದಲ್ಲಿ ವ್ಯವಹಾರಕ್ಕಾಗಿ ದೇಹ ಬಳಸಿ ದಾನವೆಂದು ಬಿಟ್ಟು ಕೊಟ್ಟರೆ ಪ್ರಕೃತಿ ವಿರುದ್ದ ನಡೆದಂತಲ್ಲವೆ? ದಯವಿಟ್ಟು ಈ ವಿಚಾರದಲ್ಲಿ ಚರ್ಚೆ ನಡೆಸಿ ತಿಳಿದರೆ ಉತ್ತಮವೆನಿಸುತ್ತದೆ.

ಅಗೋಚರ ಶಕ್ತಿಗಳನ್ನು ಹೇಗೆಂದರೆ ಹಾಗೆ ಬಳಸುವುದೆ ಅಧರ್ಮ. ಜ್ಞಾನವಿಜ್ಞಾನದ ನಡುವಿನ ವ್ಯವಹಾರ ಜ್ಞಾನ ಅತಂತ್ರಸ್ಥಿತಿಗೆ ಜೀವ ಹೋಗುತ್ತಿದೆ. ವೈದ್ಯಕೀಯ ಕ್ಷೇತ್ರ ತುಂಬಾ ಮುಂದೆ ನಡೆದಿದೆ. ಆದರೆ ಆಧ್ಯಾತ್ಮ ಕ್ಷೇತ್ರ ಹಿಂದೆ ನಿಂತು ನೋಡುತ್ತಿದೆ. ಹಿಂದಿನ ಪುರಾಣಗಳಲ್ಲಿ ಕೆಲವು ಋಷಿಮುನಿಗಳು ದೇಹತ್ಯಾಗ ಮಾಡಿ ಅದನ್ನು ಬಳಸಿಕೊಳ್ಳಲು ಹೇಳಿದ್ದನ್ನು ಅಪಾರ್ಥ ಮಾಡಿಕೊಂಡವರು ಹೆಚ್ಚು. ದದೀಚಿ ಮುನಿಗಳ ಎಲುಬಿನಿಂದ ಆಯುಧ ತಯಾರಿಸಿಕೊಂಡು ಅಸುರರ ವಧೆಮಾಡಿರೋದು ಧರ್ಮ ರಕ್ಷಣೆಗಾಗಿತ್ತು. ಹಾಗೆ ಇಲ್ಲಿ ಯಾರ ಜೀವ  ಉಳಿಸಲು ದಾನ ನೀಡುತ್ತೇವೆ ಎನ್ನುವುದರ ಅರಿವಿಲ್ಲದೆ ಯಾರೋ  ಹೇಳಿದ್ದಾರೆ, ಕೇಳಿದ್ದಾರೆ ಎಂದರೆ ಅದರ ಸದುಪಯೋಗ ಆಗುತ್ತಿದೆಯೆ? ದುರ್ಭಳಕೆ ಆಗುತ್ತಿದೆಯೆ? ಎನ್ನುವ ಬಗ್ಗೆ ಚಿಂತನೆ ನಡೆಸಿದರೆ ಉತ್ತಮ.

ಬಡವರ ಜೀವಕ್ಕೆ ಬೆಲೆ ಇಲ್ಲದೆ ಅವರ ಅಂಗಾಂಗಕ್ಕೆ ಬೆಲೆಕೊಟ್ಟು ಖರೀದಿಸುವ ವ್ಯವಹಾರದಿಂದ ಸಮಾಜ ಬದಲಾವಣೆ ಆಗುವುದೆ? ಹೋದ ಜೀವಕ್ಕೆ ಮರುಜನ್ಮವಿಲ್ಲವೆ? ಇದ್ದರೂ ಸಂಪೂರ್ಣ ಅಂಗಾಂಗಗಳಿರುತ್ತದೆಯೆ? ಇವೆಲ್ಲವೂ ಆಧ್ಯಾತ್ಮದ ಪ್ರಕಾರ ಚರ್ಚೆ ಮಾಡಿದಾಗಲೆ ಉತ್ತರ ಸಿಗಲು ಸಾಧ್ಯವಿದೆ. ಒಟ್ಟಿನಲ್ಲಿ ಮಾನವನ ಶರೀರ ಒಂದು ಮಾಧ್ಯಮವಷ್ಟೆ. ಇದರೊಳಗೆ ದೇವಾಸುರರ ಶಕ್ತಿಯಿದ್ದು ಆತ್ಮಶಕ್ತಿ ಹೆಚ್ಚಿಸಿಕೊಳ್ಳಲು ಬೇಕಾದ ವಿದ್ಯೆ ಕಲಿತು ತನ್ನ ಆತ್ಮೋದ್ದಾರಕ್ಕಾಗಿ ಕಷ್ಟಪಟ್ಟು ಜೀವನ ನಡೆಸಿದರೆ ಪ್ರಕೃತಿಯಿಂದ ಹುಟ್ಟಿದ ದೇಹವನ್ನು ಪ್ರಕೃತಿಗೆ ತಿರುಗಿ ಕೊಡುವ ಜ್ಞಾನವಿರುತ್ತದೆ. ಇಲ್ಲವಾದರೆ ಅದನ್ನು ಒಂದು ಸಾಧನ ಮಾಡಿಕೊಂಡು ಕೆಲವರು ದುರ್ಬಳಕೆ ಮಾಡಿ ಕೊಂಡರೆ ಜೀವಕ್ಕೆ ತೃಪ್ತಿ ಸಿಗದೆ, ಅತಂತ್ರಸ್ಥಿತಿಗೆ ತಲುಪುತ್ತದೆ ಎನ್ನುತ್ತಾರೆ.

ಈ ಕಾರಣಕ್ಕಾಗಿಯೇ ಹಿಂದಿನ ಕಾಲದಿಂದಲೂ ಅಂತ್ಯಸಂಸ್ಕಾರಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಟ್ಟು ಹೋದ ಜೀವಾತ್ಮನ ಶಾಂತಿಗಾಗಿ ಧಾರ್ಮಿಕ ಕ್ರಿಯೆಗಳ ಮೂಲಕ ಸದ್ಗತಿ ದೊರೆಯುವ ದಾನ ಧರ್ಮ ಹೋಮಗಳಿಂದ ತೃಪ್ತಿ ಪಡಿಸಿದ್ದರು. ಈಗ ಇದ್ದಾಗಲೆ ಮಾಡದ ದಾನ ಧರ್ಮ ಹೋದ ಮೇಲೆ ಮಕ್ಕಳು ಮಾಡಲು ಕಷ್ಟ. ಹೀಗಾಗಿ ಶರೀರವನ್ನು ದಾನ ಮಾಡಿ ದೊಡ್ಡ ವ್ಯಕ್ತಿ ಎನಿಸಿಕೊಳ್ಳುವುದರಲ್ಲಿ ಯಾವುದೇ ಧರ್ಮ ಇಲ್ಲ. ಮೆದುಳು ನಿಷ್ಕ್ರಿಯ ಎನ್ನುವ ಕಾರಣಕ್ಕಾಗಿಯೇ ಎಷ್ಟೋ ಜನರ ಅಂಗಾಂಗ ದಾನ ಮಾಡಿರೋದರ ಹಿಂದೆ ಯಾವ ಉದ್ದೇಶವಿದೆ? ಹೆಸರು ,ಹಣವನ್ನು ಹೋದ ಜೀವ ತೆಗೆದುಕೊಂಡು ಹೋಗೋದಿಲ್ಲ.

ಇದ್ದವರು ಬಳಸಿಕೊಳ್ಳುತ್ತಾರೆ.ಇನ್ನು ಅಂಗಾಂಗಗಳೂ ಯಾರ ದೇಹ ಸೇರುವುದೆನ್ನುವುದನ್ನೂ ತಿಳಿಯಲಾಗದು ಏನೇ ಇರಲಿ ಬೇರೆಯವರ ಹಣ,ಅಧಿಕಾರ,ಆಸ್ತಿ,ಹಣ ಪಡೆದ ಮಾನವನ ಜೀವನ ಯಾವತ್ತೂ ಸುಖವಿರದು. ಇನ್ನು ಬೇರೆಯವರ ಅಂಗಾಂಗ ಪಡೆದವರ ಜೀವನದಲ್ಲಿ ಎಂತಹ ಬದಲಾವಣೆ ಆಗಬಹುದು? ವೈಜ್ಞಾನಿಕ ಸಂಶೋಧನೆಗಳಿಂದ ತಾತ್ಕಾಲಿಕ ಜೀವಉಳಿಸಬಹುದು ಆದರೆ ಶಾಶ್ವತವಾದ ಆತ್ಮನ ಗತಿ? ಇದರ ಬಗ್ಗೆ ಆಧ್ಯಾತ್ಮ ಚಿಂತಕರಾದವರು ಸೂಕ್ಮವಾಗಿ ಎಚ್ಚರಿಕೆ ಕೊಟ್ಟಿದ್ದರೂ ವೈಜ್ಞಾನಿಕ ಯುಗದ ವಿಪರೀತ ಜ್ಞಾನದಿಂದ ಮಾನವನಿಗೆ ಜೀವ ಮಾತ್ರ ಮುಖ್ಯ ವಾಗಿ ಬಡವರ ಅಂಗಾಂಗಕ್ಕೆ ಬೆಲೆಕೊಟ್ಟು ಖರೀದಿಸಿದರೆ ಜೀವಾತ್ಮನಿಗೆ ಮುಕ್ತಿ ಸಿಗುವುದೆ? ದಾನ ಮಾಡೋದಾದರೆ ಉತ್ತಮವಾದದ್ದನ್ನು ಮಾಡಬೇಕಂತೆ, ವಿದ್ಯೆ,ಜ್ಞಾನ, ಅನ್ನ, ಧನ,ಸಂಪತ್ತು,ವಸ್ತು…. ಅದರಲ್ಲಿಯೂ ಅತ್ಯುತ್ತಮ ಎಂದರೆ ಪ್ರತಿಫಲಾಪೇಕ್ಷೆಯಿರಬಾರದಂತೆ ಇದೀಗ ಕಷ್ಟ.

ಹೆಚ್ಚಾಗಿರೋದನ್ನು ಕೊಡಬಹುದು. ಉತ್ತಮರಿಗೆ ಕೊಡಬಹುದು. ಆದರೆ ಸತ್ತ ನಂತರದ ದಾನ ಶುದ್ದವಾಗಿರಬೇಕು. ಇಲ್ಲವಾದರೆ ಪಡೆದವರಿಗೇ ಹೆಚ್ಚು ಸಮಸ್ಯೆಗಳು ಕಾಡುತ್ತದೆನ್ನುತ್ತಾರೆ. ಜೀವ ಕೇವಲ ಮಾನವನಿಗೆ ಮಾತ್ರ ಮುಖ್ಯವಲ್ಲ ಇತರ ಪ್ರಾಣಿ ಪಕ್ಷಿಗಳಿಗೂ ಮುಖ್ಯವೆ. ಆದರೆ ಮಾನವ ಇನ್ನೊಬ್ಬ ಮಾನವನ ಉಳಿಸಲು ಜೀವ ಬಿಡಲಾಗದು. ಹಿಂದಿನ ಧರ್ಮಯುದ್ದದಲ್ಲಿ ದೇಶಕ್ಕಾಗಿ ಧರ್ಮಕ್ಕಾಗಿ ಜೀವ ಕೊಡುತ್ತಿದ್ದರು. ಈಗ ಹಣಕ್ಕಾಗಿ ಜೀವ ತೆಗೆಯುವವರಲ್ಲಿ ಯಾವುದೇ ಧರ್ಮ ಇರದು. ಇನ್ನು ಅಂಗಾಂಗ ಪಡೆಯುವವರಲ್ಲಿ ಇರುವುದೆ?

ಈ ವಿಚಾರದಲ್ಲಿ ಸಾತ್ವಿಕ ಚರ್ಚೆ ನಡೆಸಿದರೂ ಇಂದು ಒಪ್ಪಲು ಕಷ್ಟ. ಹೀಗಾಗಿ ಸಾಮಾನ್ಯರ ಜೀವಕ್ಕೆ ಬೆಲೆಯಿಲ್ಲವಾಗುತ್ತಿದೆ. ಕಾಲದ ಪ್ರಭಾವವೆಂದು ಸುಮ್ಮನಿರಬೇಕೆ? ಆಗೋದನ್ನು ಹೋಗೋದನ್ನು ಯಾರೂ ತಡೆಯಲಾಗಿಲ್ಲ. ತಡೆದರೂ ಶಾಶ್ವತವಾಗಿ ಯಾರೂ ಭೂಮಿ ಮೇಲಿರೋದಿಲ್ಲ. ಈಗ ಜೀವಾತ್ಮ ಪರಮಾತ್ಮನ ಜೋಡಣೆ ಮಾಡಲಾಗದವರಿಗೆ ಅಂಗಾಂಗ ಜೋಡಣೆಯಿಂದ ಪ್ರಗತಿ ಕಾಣುತ್ತಿದೆ.

ಇದರ ನಂತರದ ಜೀವನ ಗತಿ? ಇದೊಂದು ಫೇಸ್‌ಬುಕ್‌ ಚರ್ಚೆಯ ವಿಚಾರವಾಗಿದೆ. ಸತ್ಯವೆನಿಸಿದ್ದರೆ ಹಂಚಿಕೊಳ್ಳಬಹುದು. ತಪ್ಪೆನಿಸಿದ್ದರೆ ಸುಮ್ಮನಿರಬಹುದು. ಎಲ್ಲರಿಗೂ ಅವರವರ ಅಭಿಪ್ರಾಯವೇ ಸರಿಯೆನಿಸುತ್ತದೆ. ಆದರೆ ಸತ್ಯ ಸತ್ಯವೆ.ಮಿಥ್ಯ ಮಿಥ್ಯವೆ ಆಗಿರುತ್ತದೆ. ದೇಹ ದೇವರ ಗುಡಿ ಆಗೋದಕ್ಕೆ ದಾನವೂ ಶುದ್ದವಾಗಿರಬೇಕಷ್ಟೆ. ನಮ್ಮ ಕರ್ಮಕ್ಕೆ ತಕ್ಕಂತೆ ಜನ್ಮವಿರುತ್ತದೆ. ಕರ್ಮದ ಜೊತೆಗೆ ಧರ್ಮವಿದ್ದರೆ ಉತ್ತಮ. ಧರ್ಮದಲ್ಲಿ ಸತ್ಯವಿರಬೇಕು. ಒಂದನ್ನು ಬಿಟ್ಟು ಇನ್ನೊಂದು ಮುಂದೆ ನಡೆದರೆ ಜೀವ ಅತಂತ್ರಸ್ಥಿತಿಗೆ ತಲುಪುತ್ತದೆ. ಇದನ್ನು ನಾವೆಲ್ಲರೂ ಸೂಕ್ಮವಾಗಿ ಗಮನಿಸಿದರೆ ಹಲವು ಶಾಸ್ತ್ರ ಪುರಾಣ,ಆಚರಣೆಗಳಲ್ಲಿ ಶುದ್ಧತೆಯನ್ನು ಅಳವಡಿಸಿಕೊಳ್ಳಲು ಸಾಧ್ಯ. ಇಲ್ಲವಾದರೆ ಇದೊಂದು ಕಾಟಾಚಾರವಾಗಿ ಭ್ರಷ್ಟಾಚಾರಕ್ಕೆ ಸಹರಿಸುತ್ತದೆ.

ದಾನ ದಾನವರಿಗೆ ಮಾಡದೆ, ಮಾನವರಿಗೆ ಮಾನವೀಯತೆಗೆ ಮಾಡೋದೆ ಉತ್ತಮ. ಹಿಂದಿನ ಮಹಾತ್ಮರಿಗೂ ಈಗಿನ ಮಹಾಪ್ರಜೆಗಳಿಗೂ ವ್ಯತ್ಯಾಸವಿದೆ. ಅಂದು ರಾಜಕೀಯ ಗುಣವಿರಲಿಲ್ಲ.ಈಗ ರಾಜಯೋಗದ ಅರ್ಥ ತಿಳಿದಿಲ್ಲ. ಯಾರ ಅಂಗಾಂಗದಿಂದ ಯಾರ ಜೀವನ ಉಳಿಸಬೇಕು?. ಇವೆಲ್ಲದರ ಕೆಟ್ಟ ಪರಿಣಾಮ ಯಾರು ಅನುಭವಿಸೋದು? ಸಹಾಯ, ಸಹಕಾರ, ದಾನ, ಧರ್ಮ ಜ್ಞಾನದ ಮೇಲಿದ್ದರೆ ಉತ್ತಮ ಬದಲಾವಣೆ ಸಾಧ್ಯವಿದೆ. ಆಧ್ಯಾತ್ಮ ಶೋಧನೆ ವಿಜ್ಞಾನದ ಸಂಶೋಧನೆಗಿಂತ ದೊಡ್ಡದು. ಇದನ್ನು ಧಾರ್ಮಿಕ ಗುರು ಹಿರಿಯರು ತಮ್ಮ ಸುತ್ತ ಮುತ್ತ. ನಡೆಯುತ್ತಿರುವ ರಾಜಕೀಯ ಶಕ್ತಿ ಯನ್ನು ಸರಿಯಾದ ದಾರಿಯಲ್ಲಿ ನಡೆಸಲು ಬಳಸಿದರೆ ಭಾರತದ ಆತ್ಮಜ್ಞಾನಕ್ಕೆ ಬೆಲೆಯಿರುತ್ತದೆ.

ಅದು ಬಿಟ್ಟು ತಾವೇ ರಾಜಕಾರಣಿಗಳ ಹಿಂದೆ ನಡೆದರೆ ಇರುವ ಮಾರ್ಗ ಮುಚ್ಚಿಹೋಗುತ್ತದೆನ್ನಬಹುದು. ಇಲ್ಲಿ ಯಾರೂ ಪರಿಪೂರ್ಣ ರಲ್ಲ,ಸರ್ವಜ್ಞ ರಲ್ಲ. ಅವರವರ ಲೋಪದೋಷಗಳನ್ನು ತಿಳಿದು ನಡೆಯಲು ಜ್ಞಾನದ ಅಗತ್ಯವಿದೆ. ಅಂಗಾಂಗ ಜೋಡಣೆಯಿಂದ ಯಾರಿಗೆ ಲಾಭ? ನಷ್ಟ? ಇದೊಂದು ತಾತ್ಕಾಲಿಕ ಪರಿಹಾರ. ಹೇಗೆ ಆಯುರ್ವೇದ ಅಲೋಪತಿಕ್ ಔಷಧವಿದೆಯೋ ಹಾಗೆ. ವಿಪರ್ಯಾಸವೆಂದರೆ, ಇಂದಿನ ವೈಜ್ಞಾನಿಕ ಯುಗದಲ್ಲಿ ತನ್ನ ರಕ್ತದಾನ ಮಾಡುವುದರಿಂದ ಆರೋಗ್ಯ ಚೆನ್ನಾಗಿ ಇರುತ್ತದೆನ್ನುವ ಕಾರಣಕ್ಕಾಗಿಯೇ ಯುವಪೀಳಿಗೆ ರಕ್ತ ದಾನ ಮಾಡುತ್ತಿರುವುದು ಸಾಮಾನ್ಯವಾಗಿದೆ.

ಆದರೆ, ರಕ್ತಹಂಚಿಕೊಂಡು ಹುಟ್ಟಿದವರೊಡನೆ ಸಂಬಂಧ ಕಡಿದುಕೊಂಡು ದೂರವಾಗುತ್ತಿರುವುದೂ ಹೆಚ್ಚಾಗಿದೆ.ಹಾಗಾದರೆ ದಾನದ ಮಹತ್ವ ಏನಿರಬಹುದು?ಇದನ್ನು ಎಲ್ಲಾ ದಾನದಲ್ಲಿಯೂ ಕಾಣಬಹುದು. ಗಮನಿಸಬೇಕಷ್ಟೆ. ದಾನದ ಉದ್ದೇಶ ಹಣ, ಹೆಸರು,ಅಧಿಕಾರ,ಸ್ಥಾನ ಪಡೆಯೋದೆ ಆದರೆ ಇವು ಯಾವುದೂ ಜೀವ ಹೋದ ಮೇಲೆ ಇರೋದಿಲ್ಲವಲ್ಲ.

ಜ್ಞಾನದಿಂದ ದಾನ ಧರ್ಮ ಕಾರ್ಯ ನಡೆಸಿದರೆ ಉತ್ತಮ. ಆಕಾಶದೆತ್ತರ ಹಾರಿಸೋ ಶಕ್ತಿ, ಪಾತಾಳಕ್ಕೆ ತಳ್ಳುವ ಶಕ್ತಿ ಭೂಮಿಗಿದೆ. ಆದರೆ, ಭೂಮಿಯನ್ನೇ ಅರ್ಥ ಮಾಡಿಕೊಳ್ಳದೆ ಆಳೋ ಶಕ್ತಿ ಮಾನವ ಅಸತ್ಯ, ಅನ್ಯಾಯ ಅಧರ್ಮದಿಂದ ಪಡೆದರೆ ಮುಕ್ತಿ ಸಿಗುವುದೆ? ಅಂಗವಿಕಲತೆ ಕರ್ಮಫಲ, ಅಂಗಾಂಗದಾನ ಧರ್ಮವೆ? ಇದಕ್ಕೆ ಯಾರಲ್ಲಿ ಉತ್ತರವಿದೆ?


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಲೇಖಕಿ ಜಯಶ್ರೀ ಅಬ್ಬಿಗೇರಿಗೆ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಯ ಗರಿ

ಬೆಳಗಾವಿ: ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜನೀಯರಿಂಗ್ ಪ್ರತಿಷ್ಠಾನ ಟ್ರಸ್ಟ ನೀಡುವ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಸ.ಪ.ಪೂ.ಕಾಲೇಜು ಹಿರೇಬಾಗೇವಾಡಿಯ ಉಪನ್ಯಾಸಕಿ, ಲೇಖಕಿ, ಅಂಕಣಕಾರ್ತಿ ಜಯಶ್ರೀ...
- Advertisement -

More Articles Like This

- Advertisement -
close
error: Content is protected !!