spot_img
spot_img

ಪ್ರಶಸ್ತಿ ಪುರಸ್ಕಾರಗಳ ಜೊತೆಗೆ ಬಾಂಧವ್ಯದ ಬೆಸುಗೆಯನ್ನು ಚುಟುಕು ಸಾಹಿತ್ಯ ಪರಿಷತ್ ಬೆಸೆದಿದೆ – ಡಾ.ಬಸು.ಬೇವಿನಗಿಡದ

Must Read

- Advertisement -

ಸವದತ್ತಿಃ “ಒಬ್ಬರಿಗೊಬ್ಬರು ಬದುಕಿನ ಸಂವೇದನೆಗಳನ್ನು ವ್ಯಕ್ತಪಡಿಸಲು ಇಂತಹ ಕಾರ್ಯಕ್ರಮಗಳು ಅವಶ್ಯಕ. ಪ್ರಶಸ್ತಿ ಪುರಸ್ಕಾರಗಳ ಜೊತೆಗೆ ಬಾಂಧವ್ಯದ ಬೆಸುಗೆಯನ್ನು ಚುಟುಕು ಸಾಹಿತ್ಯ ಪರಿಷತ್ ಹಮ್ಮಿಕೊಂಡ ಶೃದ್ಧಾಂಜಲಿ ಮತ್ತು ಸನ್ಮಾನ ಸಮಾರಂಭ ಉಂಟು ಮಾಡಿದೆ ಎಂದು ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಆಕಾಶವಾಣಿ ಧಾರವಾಡ ಕೇಂದ್ರದ ಡಾ.ಬಸು ಬೇವಿನಗಿಡದ ತಿಳಿಸಿದರು.

ಅವರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಸವದತ್ತಿ ವತಿಯಿಂದ ಶ್ರೀ ಚಿದಂಬರೇಶ್ವರ ದೇವಸ್ಥಾನ ಗುರ್ಲಹೊಸೂರಿನಲ್ಲಿ ಅಗಲಿದ ಹಿರಿಯ ಚೇತನಗಳಾದ ನಾಡೋಜ ಚನ್ನವೀರ ಕಣವಿ,ಚಂದ್ರಶೇಖರ ಪಾಟೀಲ,ಇಬ್ರಾಹಿಂ ಸುತಾರ,ಬಸಲಿಂಗಯ್ಯ ಹಿರೇಮಠ ಇವರುಗಳಿಗೆ ಶೃದ್ಧಾಂಜಲಿ ಹಾಗೂ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತರೂ ಸವದತ್ತಿ ತಾಲೂಕಿನ ಮುನವಳ್ಳಿಯವರಾದ ಡಾ.ಬಸು ಬೇವಿನಗಿಡದ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಅಶೋಕ ಮಳಗಲಿ,ಸವದತ್ತಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಯಕ್ಕುಂಡಿಯ ಸರ್ಕಾರಿ ಕಾಲೇಜಿನ ಪ್ರಾಚಾರ್ಯರಾದ ಡಾ.ವೈ.ಎಂ.ಯಾಕೊಳ್ಳಿಯವರ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಗೌರವ ಸ್ವೀಕರಿಸಿ ಮಾತನಾಡಿದರು.

- Advertisement -

ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಚಿದಂಬರೇಶ್ವರ ದೇವಸ್ಥಾನದ ಶ್ರೀ ದಂಡಪಾಣಿ ದೀಕ್ಷಿತರು, ಅಧ್ಯಕ್ಷತೆಯನ್ನು ಚುಟುಕು ಸಾಹಿತ್ಯ ಪರಿಷತ್ ತಾಲೂಕು ಘಟಕ ಸವದತ್ತಿಯ ಅಧ್ಯಕ್ಷರಾದ ಜಿ.ವಾಯ್.ಕರಮಲ್ಲಪ್ಪನವರ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಬಿ.ವ್ಹಿ.ಬಿ.ನರಗುಂದ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದ ಪ್ರಾರಂಭದಲ್ಲಿ ನಾಡಗೀತೆಯನ್ನು ಸಾಮೂಹಿಕವಾಗಿ ಹೇಳಲಾಯಿತು.

ನಂತರ ನಿವೃತ್ತ ಉಪನ್ಯಾಸಕ ಬಿ.ಎಸ್.ಜಗಾಪೂರ ಅಗಲಿದ ಹಿರಿಯ ಚೇತನಗಳಾದ ನಾಡೋಜ ಚನ್ನವೀರ ಕಣವಿ.ಚಂದ್ರಶೇಖರ ಪಾಟೀಲ.ಇಬ್ರಾಹಿಂ ಸುತಾರ. ಬಸಲಿಂಗಯ್ಯ ಹಿರೇಮಠರವರ ವ್ಯಕ್ತಿತ್ವ ಕುರಿತು ನುಡಿ ನಮನಗಳನ್ನು ಸಲ್ಲಿಸಿದರು.ತದನಂತರ ಮೌನ ಆಚರಿಸುವ ಮೂಲಕ ಶೃದ್ಧಾಂಜಲಿ ಸಲ್ಲಿಸಲಾಯಿತು.

- Advertisement -

ಡಾ.ಬಸು ಬೇವಿನಗಿಡದ. ಶ್ರೀ ಅಶೋಕ ಮಳಗಲಿ. ಡಾ.ವೈ.ಎಂ.ಯಾಕೊಳ್ಳಿಯವರ ಸನ್ಮಾನ ಕಾರ್ಯಕ್ರಮವನ್ನು ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ನಡೆಸಿದರು.

”ಚುಟುಕು ಸಾಹಿತ್ಯ ಪರಿಷತ್ ಮುಂದಿನ ದಿನಗಳಲ್ಲಿ ಮಕ್ಕಳಿಗೆ ಓದುವ ಮತ್ತು ಸಾಹಿತ್ಯದ ಆಸ್ವಾದನೆ ಹೊಂದುವ ಚಟುವಟಿಕೆಗಳು ಜರುಗಲಿ”ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಅಶೋಕ ಮಳಗಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

“ಚುಟುಕು ಸಾಹಿತ್ಯ ಪರಿಷತ್ ಮತ್ತು ಕನ್ನಡ ಸಾಹಿತ್ಯ ಪರಿಷತ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.ಮುಂಬರುವ ದಿನಗಳಲ್ಲಿ ಜಂಟಿಯಾಗಿ ಸಾಹಿತ್ಯದ ಚಟುವಟಿಕೆಗಳನ್ನು ಅಯೋಜಿಸಲಾಗುವುದು.ಸವದತ್ತಿ ತಾಲೂಕಿನ ಹಿರಿಯ ಸಾಹಿತಿಗಳ ಸಾಹಿತ್ಯಾವಲೋಕನ ಕಾರ್ಯಕ್ರಮಗಳನ್ನು ತಿಂಗಳಿಗೊಂದರಂತೆ ಆಯೋಜಿಸುವ ಮೂಲಕ ನಮ್ಮ ತಾಲೂಕಿನ ಸಾಹಿತ್ಯಾವಲೋಕನ ಜರುಗುವ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು”ಎಂದು ಡಾ.ವೈ.ಎಂ.ಯಾಕೊಳ್ಳಿಯವರು ಸನ್ಮಾನಪರ ನುಡಿಗಳನ್ನು ಹೇಳಿದರು.

ಇದೇ ಸಂದರ್ಭದಲ್ಲಿ ಸವದತ್ತಿ ತಾಲೂಕ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಘಟಕದ ಅಧ್ಯಕ್ಷರಾದ ಎಚ್.ಆರ್.ಪೆಟ್ಲೂರ.ಪ್ರದಾನ ಕಾರ್ಯದರ್ಶಿಗಳಾದ ಎಫ್.ಜಿ.ನವಲಗುಂದ.ಬಿ.ಐ.ಇ.ಆರ್.ಟಿಗಳಾದ ವೈ.ಬಿ.ಕಡಕೋಳ.ಸಿವ್ಹಿ.ಬಾರ್ಕಿ.ಶಿಕ್ಷಕರಾದ.ಎಸ್.ಎಸ್.ಘಾನೇಕರ್.ಪಿ.ಎಸ್.ಶಿಂಧೆ.ಆರ್.ಬಿ.ಪೂಜೇರ.ಮೊದಲಾದವರು ಡಾ.ವೈ.ಎಂ.ಯಾಕೊಳ್ಳಿಯವರನ್ನು ಹಾಗೂ ಬಿ.ವ್ಹಿ.ಬಿ.ನರಗುಂದ ಅವರನ್ನು ಸನ್ಮಾನಿಸಿ ಗೌರವಿಸಿದರು.

ಚುಟುಕು.ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ವೈ.ಕರಮಲ್ಲಪ್ಪನವರ ಮಾತನಾಡಿ “ಚುಟುಕು ಸಾಹಿತ್ಯ ಪರಿಷತ್ ಮೂಲಕ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಓದನ್ನು ರೂಢಿಸುವ ಮತ್ತು ಚುಟುಕು ಕವಿಗೋಷ್ಠಿ ಹಮ್ಮಿಕೊಳ್ಳುವ ಜೊತೆಗೆ ಸಾಹಿತ್ಯಾತ್ಮಕ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು” ಎಂದರು. ದಿವ್ಯ ಸಾನಿಧ್ಯವನ್ನು ಚಿದಂಬರೇಶ್ವರ ದೇವಸ್ಥಾನದ ಶ್ರೀ ದಂಡಪಾಣಿ ದೀಕ್ಷಿತರು “ಸಾಹಿತ್ಯದ ಯಾವುದೇ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ತಮಗೆ ನಮ್ಮ ದೇವಸ್ಥಾನದ ವೇದಿಕೆ ಸದಾ ತೆರೆದ ಬಾಗಿಲು. ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷರಾದ ಜೋಶಿಯವರನ್ನು ಸಂಪರ್ಕಿಸಿ ವಿಶಿಷ್ಟ ಕಾರ್ಯಕ್ರಮವನ್ನು ಇಲ್ಲಿ ಮುಂದಿನ ದಿನಗಳಲ್ಲಿ ಆಯೋಜಿಸುವಂತಾಗಲಿ.ಅದಕ್ಕೆ ನಮ್ಮ ಸಂಪೂರ್ಣ ಸಹಕಾರವಿದೆ.ಜೊತೆಗೆ ನಾಡಿನ ವಿವಿಧ ಸಾಹಿತಿಗಳು ಕೂಡ ಸವದತ್ತಿ ತಾಲೂಕಿನ ಸಾಹಿತ್ಯದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತಾಗಲಿ”ಎಂದು ತಮ್ಮ ಆಶೀರ್ವಚನ ನುಡಿಗಳಲ್ಲಿ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಚುಟುಕು ಸಾಹಿತ್ಯ ಪರಿಷತ್ ಸದಸ್ಯರಾದ ಆನಂದ ಏಣಗಿ.ನಾಗೇಶ ನಾಯ್ಕ, ವೈ.ಬಿ.ಕಡಕೋಳ, ಎಸ್.ಎಂ.ವಾರಪ್ಪನವರ, ದೊಡಮನಿ, ಪಿ.ಆರ್.ಸಾಸ್ವಿಹಳ್ಳಿ ಡಿ.ಎ.ಮೇಟಿ, ಡಿ.ಎಫ್.ನಾಯ್ಕರ, ಜಗಲಿ, ಬಿ.ಆರ್.ಮೆಣಸಿನಕಾಯಿ, ಯತ್ನಟ್ಟಿ  ದೈಹಿಕ ಶಿಕ್ಷಣಾಧಿಕಾರಿ ವೈ.ಎಂ.ಶಿಂಧೆ, ಉಪನ್ಯಾಸಕರಾದ ಡಾ.ಎ.ಬಿ.ವಗ್ಗರ, ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಕವಿ ನಾಗೇಶ ನಾಯ್ಕ ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು. ಎಸ್.ಎಂ.ವಾರೆಪ್ಪನವರ ನಿರೂಪಿದರು.ಪಿ.ಆರ್.ಸಾಸವಿಹಳ್ಳಿ ವಂದಿಸಿದರು.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group