spot_img
spot_img

ಗುಂಡಿಮಯವಾದ ಸಿಂದಗಿ ನಗರ ; ಎಲ್ಲೆಂದರಲ್ಲಿ ಮಳೆ ನೀರು ನಿಂತು ನಗರ ಗಲೀಜು

Must Read

ಸಿಂದಗಿ: ನಗರದಲ್ಲಿ ಕಳೆದ 2 ದಿನಗಳಿಂದ ಸುರಿಯುತ್ತಿರುವ ಚಿಟಿಪಿಟಿ ಮಳೆಗೆ ಪಟ್ಟಣದ ಪ್ರಮುಖ ರಸ್ತೆಗಳು ಎಲ್ಲೆಂದರಲ್ಲಿ ತಗ್ಗು ಬಿದ್ದು ಹಾಳಾಗಿ ಹೋಗಿ ಕೆಸರು ಗದ್ದೆಗಳಾಗಿ ರೂಪುಗೊಂಡಿವೆ ಇಲ್ಲಿ ರಸ್ತೆಗಳು ಇದೆಯೋ ಅಥವಾ ಇಲ್ಲವೋ ಎಂಬ ಸಂಶಯ ಜನರಲ್ಲಿ ಕಾಡುತ್ತಿದೆ.

ರಾಷ್ಟ್ರೀಯ ಹೆದ್ದಾರಿ( ಜೆವರ್ಗಿ) ರಸ್ತೆಯಿಂದ ಸಿಂದಗಿ ಪಟ್ಟಣಕ್ಕೆ ಪ್ರವೇಶ ಮಾಡಬೇಕಾದರೆ ವಾಹನಗಳು ಸರ್ಕಸ್ ರೂಪದಲ್ಲಿ ನೃತ್ಯ ಮಾಡುತ್ತ ಹರಸಾಹಸ ಪಡುತ್ತ ಪಟ್ಟಣ ಯಾವಾಗ್ಗೆ ಸೇರುತ್ತೇವೆ ಎಂದುಕೊಳ್ಳುವುದು ಸರ್ವೇಸಾಮಾನ್ಯವಾದರೆ ಜನರು ಈ ರಸ್ತೆಗಳ ಮೇಲೆ ನಡೆಯೋದಂತೂ ತಂತಿಯ ಮೇಲೆ ಸರ್ಕಸ್ ಮಾಡಿದಂತಾಗಿ ನಗರದಲ್ಲಿ ಪ್ರಸ್ತುತ ಪುರಸಭೆ ಆಡಳಿತ ನಡೆಸುತ್ತಿದೆಯೋ ಇಲ್ಲವೋ ಎಂದು ಶಪಿಸುವಂತಾಗಿದೆ.

ಪಟ್ಟಣದ ಪ್ರಮುಖ ರಸ್ತೆಯಾಗಿರುವ ಡೋಹರ ಕಕ್ಕಯ್ಯ ವೃತ್ತದಿಂದ ಟಿಪ್ಪು ಸುಲ್ತಾನ ವೃತ್ತದ ಮಾರ್ಗವಾಗಿರುವ ಕಲಬುರಗಿಯಿಂದ ಸಿಂದಗಿಗೆ ಬರುವ ಟಿಪ್ಪು ಸುಲ್ತಾನ ವೃತ್ತದಲ್ಲಿನ ರಸ್ತೆ ಪುರಸಭೆಯ ಅವೈಜ್ಞಾನಿಕ ಕಾಮಗಾರಿಗಳಿಂದ ಮಳೆಯಿಂದ ಬಂದ ನೀರು ಚರಂಡಿ ಮುಖಾಂತರ ಹರಿದು ಹೋಗದೇ ರಸ್ತೆಯ ಮೇಲಿರುವ ತೆಗ್ಗು-ಗುಂಡಿಗಳಲ್ಲಿ ನಿಂತು ಸಾರ್ವಜನಿಕರ ಸಂಚಾರಕ್ಕೆ ಕುತ್ತು ತಂದಿದೆ.

ಇದೇ ರೀತಿ ನಗರದ ಸೋಂಪುರ ರಸ್ತೆಗೆ ಹೊಂದಿಕೊಂಡಿರುವ ಕುಲಕರ್ಣಿ ಲೇಔಟ್‍ನ ರಸ್ತೆಗಳು ಹಾಳಾಗಿ ಕೆಸರು ಗದ್ದೆಯಂತಾಗಿವೆ. ಇಲ್ಲಿನ ನಿವಾಸಿಗಳು ದ್ವಿಚಕ್ರ ವಾಹನದಲ್ಲಿ ತೆರಳುವಾಗ ಪ್ರತಿದಿನ ಒಬ್ಬರಲ್ಲ ಒಬ್ಬರು ಕೆಳಗೆ ಬಿದ್ದು ಗಾಯ ಮಾಡಿಕೊಳ್ಳುವುದು, ಒಂದೆಡೆಯಾದರೆ ಕೆಸರು ಗದ್ದೆಯ ರಸ್ತೆಗಳಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುವುದು ಸರ್ವೆ ಸಾಮಾನ್ಯ ಅನ್ನುವಂತಾಗಿದೆ.

ಆಕ್ರೋಶ: ಈ ಲೇಔಟ್ ಎನ್.ಎ ಆಗಿ ಪುರಸಭೆಯಿಂದ ಮಾನ್ಯತೆ ಪಡೆದಿದೆ ಮತ್ತು ಪುರಸಭೆಗೆ ಸಂಬಂಧಿಸಿದ ಅಭಿವೃದ್ಧಿ ಕರವನ್ನು ನಮ್ಮಿಂದ ಕಟ್ಟಿಸಿಕೊಂಡಿದ್ದಾರೆ. ನಾವು ಎಲ್ಲಾ ರೀತಿಯ ಕರಗಳನ್ನು ಕಟ್ಟಿದ್ದರೂ ಕೂಡಾ ನಮಗೆ ಸಿಗಬೇಕಾದ ಕನಿಷ್ಠ ಮೂಲ ಸೌಕರ್ಯಗಳನ್ನೂ ಕೂಡಾ ನಮಗೆ ನೀಡಿಲ್ಲ ಎಂದು ಇಲ್ಲಿನ ಸಾರ್ವಜನಿಕರು ಪುರಸಭೆಯತ್ತ ಆರೋಪಿಸಿ ತಮ್ಮ ಆಕ್ರೋಶ ಹೊರ ಹಾಕುತ್ತಿರುವುದು ಹೊಸದೇನಲ್ಲ.

ಸಮಸ್ಯೆಗೆ ಸ್ಪಂದಿಸದ ಪುರಸಭೆ; ಪುರಸಭೆಯ ಈ ರೀತಿಯ ಕಾರ್ಯವೈಖರಿಯಿಂದ ಸಾರ್ವಜನಿಕರು ಬೇಸತ್ತು ರೋಸಿ ಹೋಗಿದ್ದಾರೆ. ಸಾರ್ವಜನಿಕರು ಪ್ರತಿನಿತ್ಯ ನಗರದಲ್ಲಿನ ಅನೇಕ ತೊಂದರೆಗಳ ಬಗ್ಗೆ ದೂರು ಸಲ್ಲಿಸಿದರು ಕೂಡಾ ಪುರಸಭೆ ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ಪುರಸಭೆಯ ಮೇಲೆ ನಾಗರಿಕರು ಹಿಡಿ ಶಾಪ ಹಾಕುತ್ತಿದ್ದಾರೆ.


ಇದು ಕೇವಲ ಟಿಪ್ಪು ಸುಲ್ತಾನ್ ಸರ್ಕಲ್ ಬಳಿ ಇರುವ ರಸ್ತೆ, ಕುಲಕರ್ಣಿ ಲೇಔಟ್‍ಗೆ ಹೋಗುವ ರಸ್ತೆ ಹಾಗೂ ಶಿವಶಂಕರ ಬಡಾವಣೆಯ ರಸ್ತೆಗಳ ಸಮಸ್ಯೆಯಲ್ಲ ಪಟ್ಟಣದ ಪ್ರತಿಯೊಂದು ಬಡಾವಣೆಗಳಲ್ಲಿ ಇದೇ ಪರಿಸ್ಥಿತಿಯಿದೆ. ವಿಷಯಕ್ಕೆ ಸಂಬಂಧಿಸಿದಂತೆ ಶಾಸಕರು ಸಿಂದಗಿ ಪುರಸಭೆ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡಬೇಕು.

ಆನಂದ ಕುರುಡೆ
ನಗರ ನಿವಾಸಿ

ವರದಿ : ಪಂಡಿತ್ ಯಂಪೂರೆ, ಸಿಂದಗಿ

- Advertisement -
- Advertisement -

Latest News

ಶ್ರೀ ಕೃಷ್ಣ ಜನ್ಮಾಷ್ಟಮಿ

ಸರ್ವಾಸಾಂ ಜಯಂತೀನಾಂ ಶ್ರೇಷ್ಠಾ ಕೃಷ್ಣಾಷ್ಟಮೀ ಮತಾ ಯಸ್ಮಾತ್ ಸನ್ನಿಹಿತಾತ್ಯಂತಂ ತತ್ರೈವೋಪವಸೇನ್ನರಃ ಸರ್ವಾಸ್ವಪಿ ಜಯಂತೀಷು ಪೂಜಾ ಕಾರ್ಯಾ ವಿಸೇಷತಃ ಸಾನಿಧ್ಯ ಏವ ಕರ್ತವ್ಯ ಉಪವಾಸೋ ನ ದೂರಗಃ ಎಲ್ಲ ಜಯಂತಿಗಳಲ್ಲಿಯೂ ಶ್ರೀ ಕೃಷ್ಣ...
- Advertisement -

More Articles Like This

- Advertisement -
close
error: Content is protected !!