spot_img
spot_img

ಜಿಲ್ಲಾಧಿಕಾರಿ ನಡೆ ತಹಶೀಲ್ದಾರ ಕಚೇರಿ ಕಡೆ

Must Read

spot_img
- Advertisement -

ಗುಂಟಾ ಪ್ಲಾಟ್ ಗಳಿಂದ ಪುರಸಭೆಗೆ ಆದಾಯ ಬರುವಂತೆ ನೋಡಿಕೊಳ್ಳಿ

ಸಿಂದಗಿ: ಪಟ್ಟಣದಲ್ಲಿರುವ ಗುಂಟಾ ಪ್ಲಾಟ್‍ಗಳಲ್ಲಿ ನಿರ್ಮಾಣವಾದ ಮನೆಗಳಿಗೆ ಮೂಲಭೂತ ಸೌಲಭ್ಯಗಳನ್ನು ನೀಡಿದ್ದೀರಿ ಅವುಗಳಿಂದ ಒಂದು ನಯಾಪೈಸೆ ಉತ್ಪನ್ನವಿಲ್ಲದಿದ್ದರೆ ಹೇಗೆ ಅವುಗಳ ಸೌಲಭ್ಯಗಳ ಅನುಗುಣವಾಗಿ ಕರ ಭರಣಾ ಮಾಡಿಕೊಳ್ಳಬೇಕು ವರದಿ ಕಲೆ ಹಾಕಿ ಮತ್ತು ಸಾರ್ವಜನಿಕರಿಂದ ಬರುವ ಅರ್ಜಿಗಳನ್ನು ಸಕಾಲದಲ್ಲಿ ಹಾಕಿ ಬೇಗ ಸೌಲಭ್ಯ ನೀಡಿ ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾಮಣ್ಣವರ ಅವರು ಮುಖ್ಯಾಧಿಕಾರಿ ರಾಜಶ್ರೀ ತುಂಗಳ ಅವರಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ನಡೆ ಪ್ರತಿ ತಾಲೂಕಿನ ತಹಶೀಲ್ದಾರ ಕಛೇರಿ ಕಡೆ ಕಾರ್ಯಕ್ರಮಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಪುರಸಭೆಗೆ ಜಿಲ್ಲಾಧಿಕಾರಿಗಳು ದಿಢೀರ್ ಭೇಟಿ ನೀಡಿ,ಸಿಬ್ಬಂದಿ ಕೊರತೆ ನೆಪ ಮಾಡದೇ ಸಾರ್ವಜನಿರಿಗೆ ಸರಿಯಾದ ದಾಖಲೆಗಳನ್ನು ನೀಡಿ ಅಲ್ಲದೆ ಸದಸ್ಯರ ಕೊರಂ ಭರ್ತಿ ಆಗದಿರುವುದರಿಂದ ಸಾಮಾನ್ಯ ಸಭೆಗಳಾಗಿಲ್ಲ ಅದಕ್ಕೆ ಕ್ರಿಯಾ ಯೋಜನೆಯಾಗಿಲ್ಲ.ಎಲ್ಲ ವಾರ್ಡುಗಳ ಮಾಹಿತಿ ಸಂಗ್ರಹಿಸಿ ಕ್ರಿಯಾ ಯೋಜನೆ ರೂಪಿಸಿ ಅದನ್ನು ಅನುಮೋದನೆಗೆ ರವಾನಿಸುವೆ ಎಂದರು.

- Advertisement -

ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರಾಜಶೇಖರ ಕೂಚಬಾಳ ಮಾತನಾಡಿ, ಪಟ್ಟಣದ ಎಸ್‍ಸಿ ಕಾಲೋನಿಗಳಲ್ಲಿ ಅಭಿವೃದ್ಧಿಗಾಗಿ ಇರುವ ಎಸ್‍ಸಿಪಿ ಟಿಎಸ್‍ಪಿ ಅನುದಾನವನ್ನು ಆ ಕೇರಿಗಳಲ್ಲಿ ಬಳಕೆಯಾಗದೇ ಎಲ್ಲೆಂದರಲ್ಲಿ ಬಳಕೆ ಮಾಡಿದ್ದಾರೆ ಅದನ್ನು ಕೂಡಲೇ ಪರಿಶೀಲಿಸಿ ಆ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮ ಜರುಗಿಸಬೇಕು ಪಟ್ಟಣದ ಉದ್ಯಾನವನಗಳು ಅತಿಕ್ರಮಣವಾಗಿ ವ್ಯಾಪಾರಿ ಸ್ಥಳಗಳಾಗಿವೆ ಅವುಗಳನ್ನು ಕೂಡಲೇ ತೆರವುಗೊಳಿಸಿ ಶಿಸ್ತಿನ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಸಾಯಬಣ್ಣ ದೇವರಮನಿ ಮಾತನಾಡಿ, ಪಟ್ಟಣದ ಸುಣಗಾರ ಬಡಾವಣೆ, ಕಂಠೇಪ್ಪ ಲೇಔಟ್, ಅರಳಗುಂಡಗಿ ಲೇಔಟ್‍ಗಳು ಗೂಂಟಾ ಲೇಔಟ್‍ಗಳಿದ್ದು ಅಲ್ಲಿ ಪುರಸಭೆಯಿಂದ ಎಲ್ಲ ಸೌಲಭ್ಯಗಳು ಇವೆ ಅಲ್ಲದೆ ದೊಡ್ಡ ದೊಡ್ಡ ಕಟ್ಟಡಗಳಾಗಿವೆ ಅವುಗಳಿಂದ ಪುರಸಭೆಗೆ ಬಿಡಿಗಾಸು ಆದಾಯವಿಲ್ಲ ಅವುಗಳನ್ನು ಸಕ್ರಮವೆಂದು ಘೋಷಿಸಿ ಅವುಗಳ ಕರ ವಸೂಲಾತಿಯಾಗಬೇಕು ಮತ್ತು ಹೊಸ ಆಸ್ತಿ ಖರೀದಿದಾರರ ನೋಂದಣಿಯಾಗಬೇಕಾದರೆ ಹಣ ಸಂದಾಯವಾದರೂ ಕೂಡಾ ರಜಿಸ್ಟರದಲ್ಲಿ ನಮೂದಿಸದಿರುವ ಕಾರಣ ಮರಳಿ ಭರಣಾ ಮಾಡುವ ದುಸ್ಥಿತಿ ಎದುರಿಸುವಂತಾಗಿದ್ದು ಬ್ಯಾಂಕಿಗೆ ಭರಣಾ ಮಾಡಿದ ರಸೀದಿಯನ್ನು ಪರಿಗಣಿಸಿ ಗ್ರಾಹಕರಿಗೆ ಆಗುವ ತೊಂದರೆಯನ್ನು ನಿವಾರಿಸಬೇಕು ಅಲ್ಲದೆ 2011ರ ಜನಗಣತಿ ಪ್ರಕಾರ 46 ಸಾವಿರ ಜನಸಂಖ್ಯೆಯಿದೆ ಅದು ಇಲ್ಲಿಯವರೆಗೆ ಹಾಗೆ ಉಳಿದುಕೊಂಡು ಅನುದಾನ ಕೊರತೆ ಅನುಭವಿಸುವಂತಾಗಿದೆ ಕಾರಣ ಪುರಸಭೆಯನ್ನು ಮೇಲ್ದರ್ಜೆಗೇರಿಸಿ ಅಭಿವೃದ್ದಿಗೆ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ತಹಶೀಲ್ದಾರ ನಿಂಗಣ್ಣ ಬಿರಾದಾರ, ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ, ಉಪಾಧ್ಯಕ್ಷ ಹಾಸೀಂ ಆಳಂದ, ಸೈಪನ್ ನಾಟೀಕಾರ, ರಜಾಕ ಮುಜಾವರ, ಕಾಜು ಬಂಕಲಗಿ, ಬಸು ಸಜ್ಜನ್ ಸೇರಿದಂತೆ ಹಲವರಿದ್ದರು.

- Advertisement -
- Advertisement -

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -

More Articles Like This

- Advertisement -
close
error: Content is protected !!
Join WhatsApp Group