spot_img
spot_img

ಕನ್ನಡದ ಅಭಿಮಾನ ಮತ್ತು ಸ್ವಾಭಿಮಾನದ ಸಂಗಮ ಕರ್ನಾಟಕದ ಮಹಾರಾಜರು – ವಿನಯ್ ರಾಜ್

Must Read

- Advertisement -

ಬೆಂಗಳೂರು: ೬೬ ನೇ ಕನ್ನಡ ರಾಜ್ಯೋತ್ಸವ ಆಚರಣೆ ಪ್ರಯುಕ್ತ ನವೆಂಬರ್ ೨ ರಂದು ಫಲದ ಸಂಸ್ಥೆಯ ಉದ್ಯೋಗಿಗಳಾದ ಶಶಿ ಪ್ರಸಾದ್ ಅವರು – ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ನವೀನ್ ಅವರು – ವೀರ ಮದಕರಿ ಮತ್ತು ವಿನಯ್ ರಾಜ್ – ಇಮ್ಮಡಿ ಪುಲಕೇಶಿ ಹಾಗು ಮಹೇಶ್ – ಮಯೂರ ವರ್ಮ ಮತ್ತು ಸುನಿಲ್ – ಶ್ರೀ ಕೃಷ್ಣದೇವರಾಯ ಮತ್ತು ಮಂಜುನಾಥ್ ಎಂ.ಸಿ – ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಭಾವ ಚಿತ್ರ ಇರುವ ನಿಲುವಂಗಿ (ಟೀಶರ್ಟ್) ಧರಿಸಿ ಈ ಕನ್ನಡ ರಾಜ್ಯೋತ್ಸವನ್ನು ಅರ್ಥ ಪೂರ್ಣವಾಗಿ ಸರಳವಾಗಿ ಆಚರಣೆಯನ್ನು ಮಾಡಿದ್ದಾರೆ ಸಿಲಿಕಾನ್ ಸಿಟಿ ಯಿಂದ ೨೦ ಕಿ.ಮೀ ದೊರದಲ್ಲಿರುವ ಕನ್ನಲ್ಲಿ ಗ್ರಾಮದಲ್ಲಿ ಫಲದ ಸಂಸ್ಥೆಯ ಉದ್ಯೋಗಿಗಳು.

ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ವಿನಯ್ ರಾಜ್ ಅವರು, ಇಂದಿನ ಯುವ ಪೀಳಿಗೆ ಗತ ವೈಭವದ ಭಾಷೆ ಕನ್ನಡ ಹಾಗೂ ಸುಮಾರು ೨೦೦೦ ವರ್ಷಗಳ ಇತಿಹಾಸ ಇರುವ ಭಾಷೆ ಕನ್ನಡ ಎಂದು ತಿಳಿಸುವ ಹಾಗೂ ಉಳಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಸಾಗಬೇಕಿದೆ ಎಂದು ನುಡಿದರು.

- Advertisement -

ನೆಲ, ಜಲ, ಭಾಷೆ ಮತ್ತು ದನಿಯ ರಕ್ಷಣೆಗಾಗಿ ಹೋರಾಡಿದ ಹಾಗೂ ಮಧುರವಾದ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಅಪಾರವಾದ ಕೊಡುಗೆ ನೀಡಿ ಪೋಷಿಸಿದಂಥ ನಾಡಿನ ಮಹಾರಾಜರ ಬಗ್ಗೆ ಇಂದಿನ ಯುವ ಜನಾಂಗಕ್ಕೆ ತಿಳಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಎಂದರು.

ನವೆಂಬರ್ ತಿಂಗಳಲ್ಲಿ ಮಾತ್ರ ಕನ್ನಡ ಸಾಹಿತ್ಯ ಮತ್ತು ಕನ್ನಡದ ಹಬ್ಬ ಆಚರಿಸಿ ನೆನಪು ಮಾಡಿಕೊಂಡು ಇರುವ ಬದಲು ಪ್ರತಿನಿತ್ಯ ಕನ್ನಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಕರುನಾಡ ಹಬ್ಬದ ಸಲುವಾಗಿ ನಾವುಗಳು ಇಂದು ನಾಡಿನ ಮಹಾರಾಜರಾದ ಹಾಗೂ ರಾಜ್ಯದ ಮಹಾನ್ ಚೇತನಗಳಾದ ಕನ್ನಡದ ಮೊಟ್ಟ ಮೊದಲ ದೊರೆ ಇಮ್ಮಡಿ ಪುಲಕೇಶಿ ಕರ್ನಾಟಕ ದೇಶದಿಂದ ಹಿಡಿದು ಅರಬ್ ದೇಶದವರೆಗೂ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುತ್ತಾ ಕನ್ನಡ ಸಾಹಿತ್ಯ ಹಾಗೂ ಭಾಷೆಯನ್ನು ಸಮೃದ್ಧಿ ಗೊಳಿಸಿದ ಹಾಗೂ ಕದಂಬರ ದೊರೆ ಮಯೂರ ವರ್ಮ, ಶ್ರೀಕೃಷ್ಣದೇವರಾಯ, ವೀರ ಮದಕರಿ,ಸಂಗೊಳ್ಳಿ ರಾಯಣ್ಣ ಹಾಗೂ (ನಲ್ಮೆಯ ಮಹಾರಾಜಾ) ನಾಲ್ವಡಿ ಕೃಷ್ಣರಾಜ ಒಡಯರ್ ಇವರಿಗೆ ಕನ್ನಡ ಭಾಷೆ ಯ ಮೇಲೆ ಅಪಾರವಾದ ಗೌರವ ಹಾಗೂ ಪ್ರೀತಿ ನಾಡಿನ ಮಹಾರಾಜರುಗಳಿಗೆ , ಕನ್ನಡದ ಅಭಿಮಾನ ಮತ್ತು ಸ್ವಾಭಿಮಾನದ ಸಂಗಮ ಕರ್ನಾಟಕದ ಮಹಾರಾಜರು ಇಂತಹ ಮಹಾನ್ ಚೇತನಗಳಿಗೆ ಗೌರವ ವಂದನೆ ಸಲ್ಲಿಸುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಿದೆ ಆ ಸಲುವಾಗಿ ಇಂದು ಅವರ ಚಿತ್ರ ಇರುವ ಟೀ ಶರ್ಟ್ ಧರಿಸಿದ್ದೇವೆ ಎಂದರು.

- Advertisement -

ಇಮ್ಮಡಿ ಪುಲಕೇಶಿ – (ಕ್ರಿ.ಶ. 610–642 )

ಪುಲಕೇಶಿ ತನ್ನ ರಾಜವಂಶದ ಮೊದಲ ಸಾರ್ವಭೌಮ ಆಡಳಿತಗಾರನಾಗಿದ್ದನು ಮತ್ತು ಅವನ ರಾಜವಂಶದ “ನಿಜವಾದ ಸ್ಥಾಪಕ” ಎಂದು ಕರೆಯಲಾಗುತ್ತದೆ. ಕೆ.ಎ.ನೀಲಕಂಠ ಶಾಸ್ತ್ರಿಗಳಂತಹ ಕೆಲವು ವಿದ್ವಾಂಸರು, ಪುಲಕೇಶಿ ಆರಂಭದಲ್ಲಿ ಕದಂಬ ಸಾಮಂತರಾಗಿದ್ದರು ಮತ್ತು ನಂತರ ವಾತಾಪಿಯ ಸುತ್ತಲಿನ ಪ್ರದೇಶವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಮೂಲಕ ಸ್ವಾತಂತ್ರ್ಯವನ್ನು ಘೋಷಿಸಿದರು. ದುರ್ಗಾ ಪ್ರಸಾದ್ ದೀಕ್ಷಿತರಂತಹ ಇತರರು, ಅವರು ಮಣಾಪುರದ ರಾಷ್ಟ್ರಕೂಟರ ಸಾಮಂತರಾಗಿದ್ದರು ಮತ್ತು ಹಿಂದಿನ ಕದಂಬ ಪ್ರದೇಶವನ್ನು ತಮ್ಮ ಅಧೀನವಾಗಿ ವಶಪಡಿಸಿಕೊಂಡರು ಎಂದು ಸಿದ್ಧಾಂತ ಮಾಡುತ್ತಾರೆ.

ಮಯೂರ ವರ್ಮ – (ಕ್ರಿ.ಶ. ೩೪೫-೩೬೫)

ಮಯೂರವರ್ಮ (ಕ್ರಿ.ಶ. ೩೪೫-೩೬೫) ತಾಳಗುಂದ (ಆಧುನಿಕ ಕರ್ನಾಟಕದ ರಾಜ್ಯದ ಶಿವಮೊಗ್ಗ ಜಿಲ್ಲೆ) ಬನವಾಸಿ – ಕದಂಬ ವಂಶದ ಮೂಲ ವ್ಯಕ್ತಿಯಾಗಿರುತ್ತಾನೆ. ಬನವಾಸಿ ಕದಂಬರು ಹಳೆ ಕರ್ನಾಟಕದ ಮೊದಲ ರಾಜ ಮನೆತನವಾಗಿರುತ್ತದೆ.ಹಳೆ ಕರ್ನಾಟಕದ ಜಾಗಗಳು ಮೊದಲು ಹೊರಗಿನ ಇತರೆ ರಾಜರುಗಳ ಆಳ್ವಿಕೆಯಲ್ಲಿದು, ನಂತರ ಬನವಾಸಿ ಕದಂಬರು ಕನ್ನಡ ಭಾಷೆಯನ್ನು ಮೂಲವಾಗಿ ಹೊಸ ಭೌಗೋಳಿಕ ಮತ್ತು ರಾಜಕೀಯ ರಾಜ್ಯವಾಗಿ ಹೊರ ಹೊಮ್ಮಿದ್ದು ಇದು ಆಧುನಿಕ ಕರ್ನಾಟಕದ ಒಂದು ಮಹತ್ವ ವಾದ ಮೈಲಿಗಲ್ಲಾಗಿ ಇತಿಹಾಸವಾಗಿರುತ್ತದೆ. ಕನ್ನಡ ಭಾಷೆಯ ಮೊದಲ ಬರಹಗಳು ಬನವಾಸಿ ಕದಂಬರ ಕೊಡುಗೆಯಾಗಿರುತ್ತದೆ. ಕರ್ನಾಟಕದ ಇತಿಹಾಸಕ್ಕೆ ಮತ್ತು ಕನ್ನಡಕ್ಕೆ ಬನವಾಸಿ ಕದಂಬರ ಕಾಣಿಕೆಗಾಗಿ ಕದಂಬರ ಮೂಲ ವ್ಯಕ್ತಿ ಮಯೂರವರ್ಮನು ಮಹತ್ವವನ್ನು ಪಡೆದಿರುತ್ತಾನೆ.

ಕೃಷ್ಣದೇವರಾಯ (ಕ್ರಿ.ಶ. ೧೫೦೯-೧೫೨೯)

ಕೃಷ್ಣದೇವರಾಯ ೧೫೦೯ ರಿಂದ ೧೫೨೯ ರಲ್ಲಿ ಆಳಿದ ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ. ಅವರು ತುಳುವ ರಾಜವಂಶದ ಮೂರನೇ ಆಡಳಿತಗಾರರಾಗಿದ್ದರು ಮತ್ತು ಅದರ ಶ್ರೇಷ್ಠ ಆಡಳಿತಗಾರ ಎಂದು ಪರಿಗಣಿಸಲಾಗಿದೆ. ದೆಹಲಿ ಸುಲ್ತಾನರ ಅವನತಿಯ ನಂತರ ಅವರು ಭಾರತದಲ್ಲಿ ಅತಿದೊಡ್ಡ ಸಾಮ್ರಾಜ್ಯವನ್ನು ಹೊಂದಿದ್ದರು.ಅದರ ಉತ್ತುಂಗದಲ್ಲಿ ಸಾಮ್ರಾಜ್ಯದ ಅಧ್ಯಕ್ಷರಾಗಿ, ಅವರನ್ನು ಅನೇಕ ಭಾರತೀಯರು ಐಕಾನ್ ಎಂದು ಪರಿಗಣಿಸಿದ್ದಾರೆ. ಕೃಷ್ಣದೇವರಾಯ ಕನ್ನಡ ರಾಜ್ಯ ರಾಮ ರಮಣ (ಲಿಟ್, “ಕನ್ನಡ ಸಾಮ್ರಾಜ್ಯದ ಲಾರ್ಡ್”), ಆಂಧ್ರ ಭೋಜ (ಲಿಟ್, “ಆಂಧ್ರ ವಿದ್ವಾಂಸ ರಾಜ ಅಥವಾ ಆಂಧ್ರದ ರಾಜ ಭೋಜ”), ಗೌಬ್ರಹ್ಮಣ ಪ್ರತಿಪಾಲಕ (ಲಿಟ್, “ಗೋವುಗಳು ಮತ್ತು ಬ್ರಾಹ್ಮಣರ ರಕ್ಷಕ”) ಎಂಬ ಬಿರುದುಗಳನ್ನು ಪಡೆದರು. ಮತ್ತು ಮೂರು ರಾಯರ ಗಂಡ (ಬೆಳಕು, “ಮೂರು ರಾಜರ ರಾಜ”). ಅವರು ಬಿಜಾಪುರ, ಗೋಲ್ಕೊಂಡ, ಬಹಮನಿ ಸುಲ್ತಾನರು ಮತ್ತು ಒಡಿಶಾದ ಗಜಪತಿಗಳ ಸುಲ್ತಾನರನ್ನು ಸೋಲಿಸುವ ಮೂಲಕ ಭಾರತದ ಪರ್ಯಾಯ ದ್ವೀಪದ ಪ್ರಬಲ ಆಡಳಿತಗಾರರಾದರು ಮತ್ತು ಭಾರತದ ಅತ್ಯಂತ ಶಕ್ತಿಶಾಲಿ ಹಿಂದೂ ಆಡಳಿತಗಾರರಲ್ಲಿ ಒಬ್ಬರಾಗಿದ್ದರು. ವಾಸ್ತವವಾಗಿ, ಮೊಘಲ್ ಚಕ್ರವರ್ತಿ ಬಾಬರ್ ಉತ್ತರ ಭಾರತದ ಶಕ್ತಿಗಳ ಸ್ಟಾಕ್ ಅನ್ನು ತೆಗೆದುಕೊಳ್ಳುತ್ತಿದ್ದಾಗ, ಕೃಷ್ಣದೇವರಾಯನನ್ನು ಅತ್ಯಂತ ಶಕ್ತಿಶಾಲಿ ಎಂದು ಬಿರುದು ನೀಡಲಾಯಿತು , ಮತ್ತು ಉಪಖಂಡದಲ್ಲಿ ಅತ್ಯಂತ ವಿಸ್ತಾರವಾದ ಸಾಮ್ರಾಜ್ಯವನ್ನು ಹೊಂದಿದ್ದನು.

ವೀರ ಮದಕರಿ – (ಕ್ರಿ.ಶ.೧೭೪೨-೧೭೮೨)

ಒಂಟಿಸಲಗ ಮದಕರಿ ನಾಯಕ ಅಥವಾ ಮದಕರಿ ನಾಯಕ ಅಥವಾ ಕರಿಗುಂಡಿ ನಾಯಕ ಭಾರತದ ಚಿತ್ರದುರ್ಗದ ಕೊನೆಯ ನಾಯಕ ದೊರೆ. ಅವರು ವಾಲ್ಮೀಕಿ ಜಾತಿಗೆ ಸೇರಿದವರು ಮತ್ತು ಚಿತ್ರದುರ್ಗ ಮತ್ತು ಸಿರ್ಸಿ ಮತ್ತು ಕರಿಗುಂಡಿಯ ನಾಯಕರಲ್ಲಿ ಶ್ರೇಷ್ಠ ಎಂದು ಪರಿಗಣಿಸಲಾಗಿದೆ. ಅವರು ೧೭೫೪ ರಿಂದ ೧೭೭೯ ರವರೆಗೆ ಆಳಿದರು. ನಿಡಗಲ್ಲು ಕೋಟೆಯನ್ನು ಗೆಲ್ಲಲು ಸಹಾಯ ಮಾಡಿದ ನಂತರ ಅವರು ಪೇಶ್ವೆ ಮಾಧವರಾವ್ I ನಿಂದ ಎಪ್ಪತೇಳು ಪಾಳೇಗಾರರ ಗಂಡ / ಮಿಂಡ (೭೭ ಪಾಳೇಗಾರರ ಮೇಲೆ ಉನ್ನತ ಆಡಳಿತಗಾರ) ಎಂಬ ಬಿರುದನ್ನು ಪಡೆದರು. ೧೭೪೨ ಅಕ್ಟೋಬರ್ ೧೩ ರಂದು ಜನಿಸಿದರು ಜಾನಕಲ್, ಹೊಸದುರ್ಗ, ಚಿತ್ರದುರ್ಗ ಜಿಲ್ಲೆ ೧೭೭೯ ರಲ್ಲಿ ನಿಧನರಾದರು.

ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ (೧೫ ಆಗಸ್ಟ್ ೧೭೯೬ – ೨೬ ಜನವರಿ ೧೮೩೧)

ಸಂಗೊಳ್ಳಿ ರಾಯಣ್ಣ ಮಿಲಿಟರಿ (ಸೈನಿಕ) ಮತ್ತು ಕರ್ನಾಟಕದ ಕಿತ್ತೂರು ರಾಜಪ್ರಭುತ್ವದ ಯೋಧ. ರಾಣಿ ಚೆನ್ನಮ್ಮನ ಆಳ್ವಿಕೆಯಲ್ಲಿ ಕಿತ್ತೂರು ಸಾಮ್ರಾಜ್ಯದ ಸೇನಾನಿಯಾಗಿದ್ದ ಅವರು ಸಾಯುವವರೆಗೂ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯೊಂದಿಗೆ ಹೋರಾಡಿದರು. ಅವರ ಜೀವನವು ೨೦೧೨ ರ ಕನ್ನಡ ಚಲನಚಿತ್ರ ಸಂಗೊಳ್ಳಿ ರಾಯಣ್ಣನ ವಿಷಯವಾಗಿತ್ತು. ಸಂಗೊಳ್ಳಿ ರಾಯಣ್ಣ, ೧೮ ನೇ ಶತಮಾನದ ಕಿತ್ತೂರು ಸಾಮ್ರಾಜ್ಯದ ಸೈನಿಕ.

ನಾಲ್ವಡಿ ಕೃಷ್ಣರಾಜ ಒಡೆಯರ್ (೪ ಜೂನ್ ೧೮೮೪ – ೩ಆಗಸ್ಟ್ ೧೯೪೦)

ಮಹಾರಾಜ ಕೃಷ್ಣರಾಜ ಒಡೆಯರ್ IV( ನಾಲ್ಬಡಿ ಕೃಷ್ಣರಾಜ್ ಒಡೆಯರ್ ) ಮೈಸೂರು ಸಾಮ್ರಾಜ್ಯದ ಇಪ್ಪತ್ತನಾಲ್ಕನೇ ಮಹಾರಾಜರಾಗಿದ್ದರು, ೧೮೯೫ ರಿಂದ ೧೯೪೦ ರಲ್ಲಿ ಅವರ ಮರಣದವರೆಗೆ. ಅವರನ್ನು ಜನಪ್ರಿಯವಾಗಿ “ರಾಜರ್ಷಿ” ಕರೆಯಲಾಗುತ್ತದೆ. ,ಮಹಾತ್ಮ ಗಾಂಧಿಯವರು ನೀಡಿದ ಹೆಸರು, ಅವರ ಆಡಳಿತ ಸುಧಾರಣೆಗಳು ಮತ್ತು ಸಾಧನೆಗಳಿಗಾಗಿ ಅಕ್ಷರಶಃ “ಋಷಿ ರಾಜ” ಎಂದರ್ಥ , ಕನ್ನಡದಲ್ಲಿ ಅನೇಕ ಕಾವ್ಯಗಳನ್ನು ರಚಿಸಿದ್ದಾರೆ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೧೯೧೫ ರಲ್ಲಿ ಸ್ಥಾಪನೆ , ಹೆಣ್ಣು ಶಿಕ್ಷಣಕ್ಕೆ ವಿಶೇಷ ಪ್ರಾಮುಖ್ಯತೆ ಮತ್ತು ವಿಧವೆಯ ಹೆಣ್ಣುಮಕ್ಕಳಿಗೆ ವಿದ್ಯಾರ್ಥಿವೇತನ ಅನೇಕ ಮಹಾನ್ ಕಾರ್ಯಗಳನ್ನು ಕಾರ್ಯ ರೂಪಕ್ಕೆ ತಂದಂಥ ಮಹಾರಾಜರು.

ಕನ್ನಡದ ಅಸ್ಮಿತೆ

ಎರಡು ಸಾವಿರ ವರುಷಗಳಿಗಿಂತಲೂ ಹಿಂದಿನಿಂದ ಬೆಳೆದುಳಿದುಕೊಂಡು ಬಂದಿರುವ ಕನ್ನಡ , ಜಗತ್ತಿನ ೧೫ ಪ್ರಾಚೀನ ಭಾಷೆಗಳಲ್ಲಿ ಒಂದಾಗಿದೆ ಎಂಬುದು ಬಹು ಪಾಲು ಭಾಷಾತಜ್ಞರ ಅಭಿಪ್ರಾಯ. ಮುಖ್ಯವಾಗಿ ಕೆಳವರ್ಗದವರ ಬದುಕನ್ನು ಉತ್ತಮಗೊಳಿಸುವತ್ತ , ಸಾಮಾಜಿಕ – ಆರ್ಥಿಕ ವಲಯಗಳಲ್ಲಿ ಪ್ರಯತ್ನಗಳು ಆಗಬೇಕಾದ ಅಗತ್ಯ ಮತ್ತು ಅನಿವಾರ್ಯ ಇದ್ದೆ ಇದೆ. ಆಗಮಾತ್ರ ಕನ್ನಡ ಹುಟ್ಟುವುದು ಮತ್ತು ಕಟ್ಟುವುದು , ಜಗದಗಲಕ್ಕೂ ಸಾಧ್ಯ.

ವ್ಯಕ್ತಿಯ ಭೌತಿಕ ಬದುಕು ಸಂಪನ್ನ ವಾಗಿದ್ದಾಗ ಸಹಜವಾಗಿಯೇ ಬೌದ್ಧಿಕ ಬದುಕಿನ ಸಾಮರ್ಥ್ಯ ವಿಸ್ತರಿಸುತ್ತದೆ. ವ್ಯಕ್ತಿ ಸಮೂಹದಿಂದ ಕೂಡಿದ ಸಮಾಜವು ಬದುಕಿನ ನೈಜ ಕೊಡುಗೆಯನ್ನು ನೀಡಿ ನಮ್ಮ ಕನ್ನಡಿಗರ ಬದುಕು ಹಸನಾಗಲಿ ಎಂದು ಆಶಿಸೋಣ ಅಲ್ಲವೇ?


ಮಾಹಿತಿ: ವಿವಿಧ ಮೂಲಗಳಿಂದ

ಬರಹ: ತೀರ್ಥಹಳ್ಳಿ ಅನಂತ ಕಲ್ಲಾಪುರ

- Advertisement -
- Advertisement -

Latest News

‘Silent killer’ ಎಂದು ಕರೆಯಲ್ಪಡುವ ಒಂದು ಹಾವುಂಟು !

ಈ ಹಾವನ್ನು ಈ ರೀತಿ ಕರೆಯಲು ಹಲವು ಕಾರಣಗಳುಂಟು. ಈ ಹಾವು ರಾತ್ರಿ ವೇಳೆಯಲ್ಲಿಯೇ ಹೆಚ್ಚು ಓಡಾಟ ಮಾಡುವುದು (ನಿಶಾಚರಿ). ಮತ್ತೆ ಈ ಹಾವು ಮನುಷ್ಯರಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group