ಬೀದರ – ಬಸವಣ್ಣನವರ ಕರ್ಮ ಭೂಮಿ ಬಸವಕಲ್ಯಾಣ ಉಪ ಚುನಾವಣೆಯ ದಿವಂಗತ ಬಿ ನಾರಾಯಣ ರಾವ್ ಅವರ ಪತ್ನಿಯಾದ ಶ್ರೀಮತಿ ಮಲ್ಲಮ್ಮ ಅವರನ್ನು ಕಾಂಗ್ರೆಸ್ ಪಕ್ಷವು ಕಣಕ್ಕಿಳಿಸುವ ಮೂಲಕ ಎದುರಾಳಿ ಪಾಳಯದಲ್ಲಿ ನಡುಕ ಹುಟ್ಟಿಸುವಂತೆ ಮಾಡಿದ ಕಾಂಗ್ರೆಸ್.
ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ದಿವಂಗತ ಬಿ. ನಾರಾಯಣ ರಾವ್ ಅವರ ಪತ್ನಿಯಾದ ಶ್ರೀಮತಿ ಮಲ್ಲಮ್ಮ ಅವರನ್ನು ಕಣಕಿಳಿಸಿ ಅನುಕಂಪದ ಅಸ್ತ್ರವನ್ನು ಬಳಸಿ ಲಾಭವನ್ನು ಪಡೆಯಲು ಕಾಂಗ್ರೆಸ್ ಪಕ್ಷ ಲೆಕ್ಕ ಮಾಡಿದೆ.ಬಸವಕಲ್ಯಾಣ ಮತ ಕ್ಷೇತ್ರ ವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತಿರುವುದನ್ನು ಒಂದು ಕಡೆ ಕಾಂಗ್ರೆಸ್ ಪಕ್ಷ ಮಾಡಿದರೆ ಎದುರಾಳಿ ಪಕ್ಷವಾದ ಬಿ ಜೆ ಪಿ ಮತ್ತು ಜೆಡಿಎಸ್ ಪಕ್ಷಗಳು ಇನ್ನು ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ.
ಭಾರತೀಯ ಜನತಾ ಪಕ್ಷ ಬಸವಕಲ್ಯಾಣ ಜನರ ಬಹುದಿನದ ಕನಸಾದ ಅನುಭವ ಮಂಟಪದ ಕಾಮಗಾರಿ ಪ್ರಾರಂಭ ಮಾಡಿ ಈ ಕ್ಷೇತ್ರ ವನ್ನು ಗೆಲ್ಲುವ ಹುನ್ನಾರ ಮಾಡುತಿರುವುದು . ಆದರೆ ಕಳೆದ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖೂಬಾ ಅವರು ಪಕ್ಷಬಿಟ್ಟ ಮೇಲೆ ಈ ಕ್ಷೇತ್ರ ಕಳೆದು ಹೊಸದನ್ನು ಮತ್ತೆ ಪಡೆಯಲು ಸ್ಥಳಿಯ ಅಭ್ಯರ್ಥಿಗಳ ಹುಡುಕಾಟದಲ್ಲಿ ಇರುವ ಜೆಡಿಎಸ್ ಪಕ್ಷ ಕೂಡಾ ಇನ್ನು ತನ್ನ ಅಭ್ಯರ್ಥಿಗಳ ಆಯ್ಕೆಯ ಪ್ರಕ್ರಿಯೆಯಲ್ಲಿ ತೊಡಗಿದ್ದು ಸಂಚಲನ ಮೂಡಿಸಿದೆ.
ಒಟ್ಟಿನಲ್ಲಿ ಹೇಳುವದಾದರೆ ಕಾಂಗ್ರೆಸ್ ಪಕ್ಷವು ಪ್ರಥಮವಾಗಿ ತನ್ನ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ಕಾಂಗ್ರೆಸ್ ಪಕ್ಷವು ಕ್ರಿಕೆಟ್ ಮ್ಯಾಚ್ ನಲ್ಲಿ ಟಾಸ್ ಗೆದ್ದ ಮೊದಲು ಬ್ಯಾಟಿಂಗ್ ಖುಷಿಯಲ್ಲಿದೆ ಎಂದು ಹೇಳಬಹುದು.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ