spot_img
spot_img

ಸೌಹಾರ್ದ ಬ್ಯಾಂಕುಗಳ ಕೊಡುಗೆ ಅಪಾರವಾದದ್ದು – ಕಾಶೀನಾಥ ಕಾಮಗಳ

Must Read

ಸಿಂದಗಿ: ಇಡೀ ರಾಜ್ಯದಲ್ಲಿ ಸೌಹಾರ್ದ ಬ್ಯಾಂಕುಗಳ ಕೊಡುಗೆ ಅಪಾರವಾಗಿದ್ದು ಈ ಜಿಲ್ಲೆಯಲ್ಲಿ 484 ಸೌಹಾರ್ದ ಬ್ಯಾಂಕುಗಳು ನೊಂದಣೀಯಿದ್ದು ಅದರಲ್ಲಿ 2017ರಲ್ಲಿ ಪ್ರಾರಂಭವಾದ ಸೌಹಾರ್ದ ಬ್ಯಾಂಕು ಅಲ್ಪ ಅವಧಿಯಲ್ಲಿಯೇ ಗ್ರಾಹಕರ ಸಹಕಾರದಿಂದ ರೂ 60 ಕೋಟಿಗಳ ಠೇವಣಿ ಹೊಂದಿ ಮುಂಚೂಣಿಯಲ್ಲಿದೆ ಎಂದು ದಿ.ಡೈ.ಸೌ.ಸ.ನಿ ಸಂಸ್ಥಾಪಕ ಅಧ್ಯಕ್ಷ ಕಾಶಿನಾಥ ಕೆ. ಕಾಮಗಳ ಹೇಳಿದರು.

ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಬಡಾನೂರ ಬಿಲ್ಡಿಂಗ್‍ನಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ಯ ದಿ.ಡೈಮಂಡ್ ಸೌಹಾರ್ದ ಸಹಕಾರಿ ನಿ. ಇದರ ನೂತನ 8ನೇ ಶಾಖೆಯನ್ನು ಉದ್ಘಾಟಿಸಿ  ಮಾತನಾಡಿ, ಬ್ಯಾಂಕು ಕ್ಯೂಆರ್ ಕೋಡ್, ಎಟಿಎಂ, ಐಎಫ್‍ಎಸ್‍ಸಿ ಸೇವೆಯೊಂದಿಗೆ ಇಡೀ ರಾಜ್ಯದಲ್ಲಿ 200 ಎಟಿಎಂ ಪರವಾನಿಗೆ ಪಡೆಯಲಾಗಿದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಬೆಳಿಗ್ಗೆ 9.30 ರಿಂದಲೇ ಲೇವಾದೇವಿ ಮಾಡಲಾಗುತ್ತಿದೆ ಬರೀ 6 ವರ್ಷಗಳಲ್ಲಿ ಬ್ಯಾಂಕು ಎಷ್ಟು ಎತ್ತರಕ್ಕೆ ಬೆಳೆಯಲು ಗ್ರಾಹಕರ ಸಹಕಾರ ಮುಖ್ಯವಾಗಿದೆ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಬಬಲೇಶ್ವರ ಬೃಹನ್ಮಠದ ಪರಮಪೂಜ್ಯ ಶ್ರೀ  2022 ಜಗದ್ಗುರು ಮಹಾದೇವೇಶ್ವರ ಮಹಾಸ್ವಾಮಿಗಳು, ಸಹಕಾರಿ ಧುರೀಣ ಶಿವಪ್ಪಗೌಡ ಬಿರಾದಾರ, ದಿ.ಡೈಮಂಡ ಬ್ಯಾಂಕಿನ ನಿರ್ದೇಶಕರಾದ  ಲಚ್ಚಪ್ಪ ಭೂಸನೂರ, ಶಶಿಧರ ರೋಡಗಿ, ಡಿಸಿಸಿ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕರು ಸುಭಾಸ ಬಡಾನೂರ ಮಾತನಾಡಿದರು.

ಗುತ್ತಿಗೆದಾರ ನಾನಾಗೌಡ ಎಚ್. ಪಾಟೀಲ (ಡಂಬಳ), ದಿ.ಡೈ.ಸೌ.ಸ.ನಿ, ನಿರ್ದೇಶಕರಾದ ಕಿಡೆಪ್ಪ ಎನ್. ಮೇಟಿ, ಮಾರುತಿ ಐ. ನಿಕ್ಕಂ, ಶಶಿಧರ ಎಸ್, ರೋಜಿಗಿ,  ಕಿಶೋರ ಡಿ. ಪುರೋಹಿತ, ಬಸವರಾಜ ಕೃ. ಕಾಮಗಳ, ಶಿವು ಬಗಲಿ,  ವೈಶಾಲಿ ಕೆ. ಕಾಮಗಳ, ಜಯಶ್ರೀ ಶಿ. ದಳವಾಯ, ಸಾಹಬಾಯಿ ಕಾಲಂಡರೆ,  ಭೋಜಪ್ಪಗೌಡ ಬಿ. ಬಿರಾದಾರ (ಅಪ್ಪುಗೌಡ, ಶಿವಜಾತವಡೆಯ ಜಿ. ಹಿರೇಮಠ, ನಿಂಗಣ್ಣ ಎಸ್. ಮರಡಿ (ಖೈನೂರ), ಮಲಕಾಜಪ್ಪ ಎಮ್. ಹಂಗರಗಿ (ಯರಗಲ್ಲ), ಬಸವರಾಜ ಜಿ. ವಸ್ತ್ರದ, ಡಾ, ಚನವೀರಪ್ಪ ಎಮ್. ಮನಗೂಳಿ, ಪ್ರಕಾಶ ಎನ್. ಹಿರೇಕುರುಬರ, ಶ್ರೀನಿವಾಸ ಜಿ. ಕುಲಕರ್ಣಿ (ವಕೀಲರು), ಸುರೇಶ ಜಿ. ಪೂಜಾರಿ (ಗಣಿಹಾರ), ಬಸವರಾಜ ಸಿ. ಯರನಾಳ, ಪ್ರಶಾಂತ ಎಸ್. ಬಿರಾದಾರ (ಗಬಸಾವಳಗಿ), ವಿನಯ ಟಿ. ರಾಠೋಡ, ಶಿವಕುಮಾರ ಸಿ. ಕಾಳೆ (ಅಂತರಗಂಗಿ), ಉಮಾ ಎಸ್. ಬಡಾನೂರ (ಬಂದಾಳ), ಗಾಯತ್ರಿ ಎ. ಹಿರೇಮಠ ಸೇರಿದಂತೆ ಅನೇಕರು ಇದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!