ಬೀದರ – ಬಿಜೆಪಿಯು ತನಿಖಾ ಸಂಸ್ಥೆಗಳನ್ನು ತನ್ನ ಖಾಸಗಿ ಸಂಸ್ಥೆಗಳನ್ನಾಗಿ ಉಪಯೋಗಿಸುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಇಡಿ ತನಿಖೆ ಹಿನ್ನೆಲೆಯಲ್ಲಿ ಬೀದರನಲ್ಲಿ ಪತ್ರಕರ್ತರೊಡನೆ ಮಾತನಾಡಿದ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಎರಡು ಸಾವಿರ ನಾಯಕರ ಮೇಲೆ ದಾಳಿ ಆಗಿದೆ ಅವರೆಲ್ಲ ಬಿಜೆಪಿ ಸೇರಿದ ಕೂಡಲೇ ಪವಿತ್ರರಾಗುತ್ತಾರೆ. ಉದಾಹರಣೆಗೆ ಮುಕುಲ್ ರಾಯ್ ಇದ್ದಾರೆ, ಬಂಗಾಳ ದವರು. ಆಸ್ದಾಂ ರಾಜ್ಯದ ಮುಖ್ಯ ಮಂತ್ರಿ ಹೇಮಂತ್ ಅವರ ಮೇಲೆಲ್ಲ ಇಡಿ ದಾಳಿ ಆಯಿತು. ಅವರು ಎಲ್ಲರೂ ಬಿಜೆಪಿ ಹೋದರೆ ಪವಿತ್ರ ಆದರಾ ಎಂದು ಪ್ರಶ್ನೆ ಮಾಡಿದರು.
ಇಡಿ ಇಲಾಖೆಯಲ್ಲಿ ಐದು ಸಾವಿರ ಪ್ರಕರಣಗಳ ಇವೆ. ಎರಡು ಪರ್ಸೆಂಟ್ ಮಾತ್ರ ತನಿಖೆ ಆಗಿವೆ. ಕೇಂದ್ರ ಸರ್ಕಾರ ಇಡಿ ತನಿಖಾ ಇಲಾಖೆಯ ದುರುಪಯೋಗ ಮಾಡಿಕೊಂಡು ಕೇವಲ ಪ್ರತಿ ಪಕ್ಷದವರ ಮೇಲೆ ದಾಳಿ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಸುಳ್ಳು ನೂರು ಸಾರಿ ಹೇಳಿದರೂ ಅದು ಎಂದಿಗೂ ಸತ್ಯ ಆಗಲು ಸಾಧ್ಯವಿಲ್ಲ.ಕೇಂದ್ರ ಸರ್ಕಾರ ಗಾಂಧಿ ಕುಟುಂಬವನ್ನು ಹೆದರಿಸಲು ಹೊರಟಿದೆ. ಮೋತಿಲಾಲ್ ನೆಹರೂ ಅವರು ಈ ರಾಷ್ಟ್ರಕ್ಕೆ ಸ್ವತಂತ್ರ ತಂದು ಕೊಡಲು ಆನಂದ ಭವನ ತನ್ನ ಮನೆಯನ್ನು ಬಿಟ್ಟು ಸಮರ್ಪಣೆ ಮಾಡಿದ ಕುಟುಂಬ, ಜವಾಹರಲಾಲ ನೆಹರು ಹತ್ತು ಹನ್ನೆರಡು ವರ್ಷ ಜೈಲು ಅನುಭವಿಸಿದರು.ಇಂದಿರಾ ಗಾಂಧಿಯವರು ಖಲಿಸ್ತಾನ ಆಗಬಾರದು ಎಂದು ತನ್ನ ಜೀವ ಬಲಿದಾನ ಕೊಟ್ಟರು, ರಾಜೀವ ಗಾಂಧಿ ದೇಶಗೋಸ್ಕರ ತನ್ನ ಜೀವ ಕೊಟ್ಟರು. ಆದರೆ ನರೇಂದ್ರ ಮೋದಿ ಅವರು ಗುಜರಾತಿನಲ್ಲಿ ನರಮೇಧ ನಡೆಸಿದರು.ನಮ್ಮ ಕಾಂಗ್ರೆಸ್ ಸರ್ಕಾರ ನಿಮಗೆ ರಕ್ಷಣೆ ಕೊಟ್ಟಿದೆ ಇವಾಗ ನಮ್ಮ ನಾಯಕರಿಗೆ ಕಿರುಕುಳ ಕೊಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಅಗ್ನಿಪಥ ವಿರುದ್ಧ ವಾಗ್ದಾಳಿ:
ಕೇಂದ್ರದ ಅಗ್ನಿಪಥ ಎಂಬ ಯೋಜನೆಯಿಂದ ಇಡೀ ದೇಶ ಹೊತ್ತಿ ಉರಿಯುತ್ತಿದೆ. ದೇಶದ ಎಲ್ಲಾ ಕಡೆ ಭಯದ ವಾತಾವರಣ ನಿರ್ಮಾಣವಾಗಿದ್ದು ಅರಾಜಕತೆ ನಿರ್ಮಾಣ ಆಗಿದೆ ಎಂದು ಖಂಡ್ರೆ ಟೀಕಿಸಿದರು.
ವರದಿ: ನಂದಕುಮಾರ ಕರಂಜೆ, ಬೀದರ