ಸಕ್ಕರೆ ಕಾರ್ಖಾನೆ ಕಾರ್ಮಿಕರ ವೇತನ ಬೇಡಿಕೆ ಈಡೇರಿಕೆ ಶೀಘ್ರ – ಶಿವಾನಂದ ಪಾಟೀಲ

Must Read

ಬೆಂಗಳೂರು – ರಾಜ್ಯದ ಸಕ್ಕರೆ ಕಾರ್ಖಾನೆಯ ಕಾರ್ಮಿಕರ ಮಹತ್ವದ ಬೇಡಿಕೆಗಳಲ್ಲಿ ಒಂದಾದ 8ನೇ ವೇತನವನ್ನು ಅತೀ ಶೀಘ್ರದಲ್ಲಿಯೇ ಈಡೇರಿಸುತ್ತೇನೆಂದು ಸಕ್ಕರೆ ಸಚಿವರಾದ ಶಿವಾನಂದ ಪಾಟೀಲ ಅವರು ಹೇಳಿದರು.

ಅವರು ಬೆಂಗಳೂರು ಫ್ರೀಡಂ ಪಾರ್ಕಿನಲ್ಲಿ ನಡೆದ ಕರ್ನಾಟಕ ಶುಗರ ವರ್ಕರ್ಸ್ ಫೆಡರೇಶನ್ ರಾಜ್ಯಾಧ್ಯಕ್ಷರಾದ ಬಿ ನಾಗರಾಜ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದವರ ಕಾರ್ಮಿಕರ ಹಿತ ಕಾಪಾಡಿ ಬೆನ್ನೆಲುಬಾಗಿ ನಿಲ್ಲಲು ಸದಾ ಸಿದ್ಧನಿದ್ದೇನೆ. ಕೆಲವು ಸಕ್ಕರೆ ಕಾರ್ಖಾನೆಯ ಮಾಲೀಕರು 7 ನೇ ವೇತನ ಒಪ್ಪಂದಕ್ಕೆ ತಡೆಯಾಜ್ಞೆ ನೀಡಿದ್ದು ಶೋಚನೀಯ ಸಂಗತಿ. ಕಾರ್ಖಾನೆಯು ಮಾಲಿಕರ ಜೊತೆ ಸಭೆ ನಡೆಸಿ ಸಮಸ್ಯೆ ಬಗೆ ಹರಿಸುತ್ತೇನೆ.8ನೇ ವೇತನವನ್ನು ಬರುವ ನವೆಂಬರ ತಿಂಗಳೊಳಗೆ ಜಾರಿಗೆ ಬರುವಂತೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಕರ್ನಾಟಕ ಶುಗರ್ ವರ್ಕರ್ಸ್ ಫೆಡರೇಶನ್ ರಾಜ್ಯಾಧ್ಯಕ್ಷರಾದ ಬಿ ನಾಗಾರಾಜ ಮಾತನಾಡಿ, ಕಾರ್ಮಿಕರು ಅತೀ ಕಡಿಮೆ ಸಂಬಳದಲ್ಲಿ ಕೆಲಸ ಮಾಡುತ್ತಿದ್ದು ಜೀವನ ನಡೆಸಲು ಕಷ್ಟಕರವಾಗಿದೆ. 7ನೇ ವೇತನ ಒಪ್ಪಂದದ ಸಮಸ್ಯೆ ಬಗೆಹರಿಸಿ 8ನೇ ವೇತನ ಒಪ್ಪಂದವನ್ನು ಜಾರಿಗೆ ಬರುವಂತೆ ಆದೇಶ ಹೊರಡಿಸುವ ಭರವಸೆ ನೀಡಿದ್ದಕ್ಕೆ ನಮ್ಮ ಪ್ರತಿಭಟನೆಯನ್ನು ಹಿಂಪಡೆಯುತ್ತೇವೆ ಒಂದು ವೇಳೆ ಆಗದೆ ಹೋದರೆ ಮುಂದಿನ ದಿನಗಳಲ್ಲಿ ಕಾರ್ಮಿಕರೆಲ್ಲ ಒಗ್ಗಟ್ಟಿನಿಂದ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ಕರ್ನಾಟಕ ಯುವ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಸುನೀಲ ಎಂ ಬೆಂಬಲ ನೀಡಿದರು. ಈ ಸಮಯದಲ್ಲಿ ಕರ್ನಾಟಕ ಶುಗರ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಡಿ ಎನ್ ಕೃಷ್ಣೆಗೌಡ. ಗೋದಾವರಿ ಸಕ್ಕರೆ ಕಾರ್ಖಾನೆಯ ಮಜದೂರ ಯೂನಿಯನ್ ಕಾರ್ಯಾಧ್ಯಕ್ಷ ಬಸವರಾಜ ಮೇಲಪ್ಪಗೋಳ. ಬಸವರಾಜ ಭದ್ರಶೆಟ್ಟಿ, ನಾಗಪ್ಪ ಮಾಳಿ, ಸಂಗನಗೌಡ ಬಿ ಪಾಟಿಲ, ಚನ್ನಪ್ಪ ಅಥಣಿ,  ವಿನೋದ ಕಮತೆ, ರವಿ ಕುರಬರ, ಕಲ್ಲಪ್ಪ ವಾಜಂತ್ರಿ, ಮಲಗೌಡ ಮಾಳಗಿ. ಆರ್ ಎನ್ ದೇಶನೂರ, ಎಸ್ ಎಸ್ ರೇಷ್ಮೆ, ವಿಠ್ಠಲ ಸನದಿ, ಮುರಿಗೆಪ್ಪ ಮಾಲಗಾರ, ಜಗದೀಶ ಕಮಲಾಕರ,  ಉಮೇಶ ಹೋಲ್ಕರ, ಸದಾಶಿವ ನಿಪನಾಳ, ಸಲೀಂ ಮುಧೋಳ,  ಆರ್ ಡಿ ಪೂಜಾರಿ, ವಿ ಎನ್ ಬನಹಟ್ಟಿ,  ಅಲ್ಲಪ್ಪ ಕಂಕಣವಾಡಿ, ಸುರೇಶ ಹೊಸಕೋಟಿ, ಶ್ರೀಶೈಲ ದ್ಯಾವಣಗೋಳ ಸೇರಿದಂತೆ ರಾಜ್ಯದ ವಿವಿಧ ಕಾರ್ಖಾನೆಯ ಕಾರ್ಮಿಕರು ಭಾಗವಹಿಸಿದ್ದರು.

Latest News

ಲೇಖನ : ಒತ್ತಡದ ಬದುಕಿಗೆ ನೆಮ್ಮದಿಯ ಔಷಧಿ

ಅತ್ಯಾಧುನಿಕ ತಂತ್ರಜ್ಞಾನದಿಂದಾಗಿ ನಮ್ಮ ಹಿಂದಿನ ಹಿರಿಯರು ಪಡುತ್ತಿದ್ದ ಶ್ರಮಜೀವನ ಈಗಿಲ್ಲ. ಆದರೂ ವರ್ಗ ವಯಸ್ಸು ಲಿಂಗಭೇದವನ್ನು ಲೆಕ್ಕಿಸದೇ ದಿನದಿಂದ ದಿನೇ ಒತ್ತಡ ಹೆಚ್ಚುತ್ತಲೇ ಇದೆ. ಶಾಂತವಿರಬೇಕೆನ್ನುವ...

More Articles Like This

error: Content is protected !!
Join WhatsApp Group