ಭೂಮಿಗೆ ಸತ್ಯಜ್ಞಾನದ, ಧರ್ಮ ಜ್ಞಾನದ ಅಗತ್ಯವಿದೆ

Must Read

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...

ಸ್ನೇಹಿತರ ದಿನಾಚರಣೆಯ ಶುಭಾಷಯಗಳು

ನಮ್ಮಲ್ಲಿ ಎಷ್ಟೋ ದಿನಾಚರಣೆಗಳಿವೆ. ಇದರಲ್ಲಿ ಸ್ನೇಹಕ್ಕೆ ಕೊಡುವ ಬೆಲೆ ಯಾವುದಕ್ಕೂ ಕೊಡಲಾಗದು ಎನ್ನುತ್ತಾರೆ. ಕಾರಣ ಇಲ್ಲಿ ಸ್ವಾರ್ಥ ಅಹಂಕಾರವಿರದೆ ಶುದ್ದ ಭಾವನೆಗಳ ಸಮ್ಮಿಲನವಿರುತ್ತದೆ. ಬಡವ ಬಡವನನ್ನು...

ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಲು ಒತ್ತಾಯ

ಸಿಂದಗಿ: ರಾಜ್ಯದಲ್ಲಿ ಪಿಂಜಾರ, ನದಾಫ್ ಸಮುದಾಯಗಳು ಶಿಕ್ಷಣ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದ್ದು ಈ ಜನಾಂಗ ಉದ್ದಾರವಾಗಬೇಕಾದರೆ ಪಿಂಜಾರ್ ಅಭಿವೃದ್ಧಿ ನಿಗಮ ಅವಶ್ಯಕತೆ ಇದೆ. ಪ್ರವರ್ಗ...

ಆಧ್ಯಾತ್ಮಿಕ ವಿಚಾರಗಳನ್ನು ತಕ್ಷಣ ಒಪ್ಪಿಕೊಳ್ಳುವುದು ಕಷ್ಟ.ಆದರೆ ಅದನ್ನು ಎಷ್ಟು ಸತ್ಯವೆಂದು ತಿಳಿಯಲು ಅದರೊಳಗೆ ಹೊಕ್ಕಿ ನೋಡಬಹುದು. ಆ ಕೆಲಸ ಮಾಡದೆ ಅದನ್ನು ವಿರೋಧಿಸುತ್ತಾ, ತಡೆಯುತ್ತಾ, ಭೌತಿಕ ಜಗತ್ತಿನಲ್ಲಿ ತಮ್ಮದೇ ಆದ ಧರ್ಮ, ಸಂಸ್ಕೃತಿ, ಸಂಪ್ರದಾಯ, ಜಾತಿ, ಮತ, ಪಂಗಡ ಪಕ್ಷಗಳನ್ನು ಹಣಬಲ, ಜನಬಲದಿಂದ ಹುಟ್ಟಿಸಿಕೊಂಡಷ್ಟೂ ಆಧ್ಯಾತ್ಮ ಪದಕ್ಕೆ ಅರ್ಥ ವಿಲ್ಲದಂತಾಗುತ್ತದೆ.

ಎಷ್ಟು ದೂರ ನಡೆದರೂ ತಿರುಗಿ ಬರಲೇಬೇಕು. “ಅಲ್ಲಿರುವುದು ನಮ್ಮನೆ ಇಲ್ಲಿ ಬಂದೆ ಸುಮ್ಮನೆ”. ಭಾರತೀಯರಿಗೆ ಭಾರತದ ಮೂಲ ಅರ್ಥವಾಗದೆ ವಿದೇಶದ ಕಡೆಗೆ ನಡೆದು ಅಲ್ಲಿ ಇದು ನನ್ನ ದೇಶ ಎನ್ನುವ ಸ್ವಾತಂತ್ರ್ಯ ವಿಲ್ಲ. ಆದರೆ ವಿದೇಶಿಗಳು ಭಾರತಕ್ಕೆ ಬಂದರೆ ಭಾರತೀಯರು ಕೊಡುವ ಅಧಿಕಾರ, ಸ್ಥಾನಮಾನ, ಗೌರವ ,ಅತಿಥಿ ಸತ್ಕಾರ ನಮ್ಮವರು ನಮಗೆ ಕೊಡೋದಿಲ್ಲ.ಹೀಗಾಗಿ ಇಲ್ಲಿನ ಧರ್ಮ ಕುಸಿದು ಪರಧರ್ಮ ಬೆಳೆದಿದೆ.

ಅವರು ಭಾರತೀಯತೆಯನ್ನು ಭಾರತದಲ್ಲಿ ಬೆಳೆಸೋದಿಲ್ಲ. ಅವರು ಅಲ್ಪಸಂಖ್ಯಾತರಾದರೂ ಒಗ್ಗಟ್ಟಿನಿಂದ ಅವರ ಧರ್ಮವನ್ನು ಬೆಳೆಸುತ್ತಾರೆ. ಇದಕ್ಕೆ ವಿರುದ್ದ ಭಾರತೀಯರು ವಿದೇಶಕ್ಕೆ ಹೀಗಿ ವಿದೇಶಿಗಳಂತೆ ಬದುಕುತ್ತಾರೆ. ಹೀಗಾಗಿ ನಮ್ಮ ಮೂಲ ಧರ್ಮ ಕರ್ಮ ಕುಸಿದಿರೋದನ್ನು ಇದ್ದಲ್ಲಿಯೇ ಭಾರತೀಯರು ಅರ್ಥ ಮಾಡಿಕೊಂಡರೆ ಯಾವ ಪರಧರ್ಮದ ವಿರುದ್ದ ಹೋರಾಟ ನಡೆಸೋ ಅಗತ್ಯವಿರುತ್ತಿರಲಿಲ್ಲ.

- Advertisement -

ಆಧ್ಯಾತ್ಮ ದಲ್ಲಿ ನಮ್ಮನ್ನು ನಾವು ಬದಲಾಯಿಸಿಕೊಳ್ಳಬೇಕಷ್ಟೆ. ಬದಲಾವಣೆ ಆದವರನ್ನು ದ್ವೇಷ ಮಾಡುತ್ತಿದ್ದರೆ ಅದೇ ದೊಡ್ಡ ಸಮಸ್ಯೆಗೆ ಮೂಲವಾಗಿರುತ್ತದೆ. ಶಿಕ್ಷಣ ಬದಲಾವಣೆಗೆ ಎಲ್ಲರ ಸಹಕಾರ ಇಲ್ಲವಾದರೇನು? ನಮ್ಮ ಮಕ್ಕಳಿಗೆ ಮನೆಯಲ್ಲಿದ್ದೇ ಕಲಿಸಲು ಸ್ವಾತಂತ್ರ್ಯವಿಲ್ಲವೆ?

ಸರ್ಕಾರಿ ಶಾಲೆಗಳನ್ನು ಬಿಟ್ಟು ಖಾಸಗಿ ಶಾಲೆಯಲ್ಲಿ ಲಕ್ಷ ಕೊಟ್ಟು ಮಕ್ಕಳಿಗೆ ಶಿಕ್ಷಣ ನೀಡುವವರು ಲಕ್ಷಾಧೀಶ್ವರರೆ? ಅಥವಾ ಲಕ್ಷ ಸಾಲ ಮಾಡಿ ಶಿಕ್ಷಣ ನೀಡುವ ಪೋಷಕರೆ.

ಶಿಕ್ಷಣದಿಂದ ಆತ್ಮಜ್ಞಾನ,ಆತ್ಮನಿರ್ಭರ ಭಾರತ ಹೆಚ್ಚಾಗಿದ್ದರೆ ಲಕ್ಷ ಕೊಟ್ಟು ಸಾರ್ಥಕ. ಆದರೆ, ಕೆಲಸವಿಲ್ಲದೆ ಅಲೆದು ಕೊನೆಗೆ ವಿದೇಶಿಗಳ ಕೈ ಕೆಳಗೇ ದುಡಿದು ಲಕ್ಷ ಲಕ್ಷ ಸಂಪಾದಿಸಿ ಹಿಂದಿನ ಸಾಲ ತೀರಿಸುವುದರಿಂದ  ಪೋಷಕರೆ ಸುಸ್ತಾಗಿರುತ್ತಾರೆ. ಭಾರತದ ಶಿಕ್ಷಣದಲ್ಲಿ ಸ್ವತಂತ್ರ ಜ್ಞಾನವಿತ್ತು.

ವಿಜ್ಞಾನ ಜಗತ್ತನ್ನು ಸ್ವತಂತ್ರವಾಗಿದ್ದು ಭೂಮಿ ಮೇಲಿದ್ದು ಯಾವುದೇ ತಂತ್ರ ಯಂತ್ರದ ಸಹಾಯವಿಲ್ಲದೆ ಯೋಗಶಕ್ತಿಯಿಂದಲೇ ನಭೋಮಂಡಲದ ಸತ್ಯವನ್ನು, ಗ್ರಹಗಳ ಚಲನ ವಲನ, ದೇವತೆಗಳ ಬಗ್ಗೆ ತಿಳಿಸುತ್ತಿದ್ದ ಅಂದಿನ ಆತ್ಮಜ್ಞಾನಿಗಳನ್ನು ಊಹಿಸಿಕೊಳ್ಳಲು ನಮ್ಮ ಬುದ್ದಿಶಕ್ತಿಗೆ ಅಸಾಧ್ಯ.

ಹಾಗಂತ ಇದನ್ನು ಅಸತ್ಯ ಎನ್ನಲಾಗುವುದೆ? ಯಾರಿಗೂ ನಷ್ಟ ಕಷ್ಟ ಇಲ್ಲದೆ ಸತ್ಯದ ಕಡೆಗೆ ನಡೆಯುವುದೇ ಆಧ್ಯಾತ್ಮ. ಭೌತಿಕ ವಿಜ್ಞಾನ ಜೀವನದಲ್ಲಿ ಹೆಚ್ಚು ಹೆಚ್ಚು ಬಳಸಿಕೊಂಡಂತೆ ಒಳಗಿನ ಶಕ್ತಿ ದುರ್ಬಳಕೆ ಆಗುತ್ತದೆ. ದೈಹಿಕ ಸುಖಾಭೋಗ ಹೆಚ್ಚಾದಂತೆ ಮಾನಸಿಕ ಆರೋಗ್ಯವೂ ಹಾಳಾಗುತ್ತದೆ.

ಇದೇ ಕಾರಣಕ್ಕಾಗಿಯೇ ಏನೇ ವಿಚಾರವಾಗಿದ್ದರೂ ತಿಳಿದ ಮೇಲೆ ಅದರ ಪರಿಣಾಮವನ್ನು ಅರ್ಥ ಮಾಡಿಕೊಳ್ಳಲು ಜ್ಞಾನ ಅಗತ್ಯವೆಂದರು. ಯಾರೋ ಎಲ್ಲೋ ಯಾವಾಗಲೋ ಹೇಳಿದ್ದಾರೆ, ಹೇಳುತ್ತಾರೆ, ಮಾಡಿದ್ದಾರೆ, ಮಾಡಿಸುತ್ತಾರೆ ಎಂದರೆ ಅದು ನಮ್ಮೊಳಗಿನ ಆತ್ಮವಂಚನೆ ಎಂದೆನಿಸಿದರೆ ಅದನ್ನು ಬೆಳೆಸದೆ ಇರೋದು ಉತ್ತಮ.

ನಮ್ಮ ಜೀವನದಲ್ಲಿ ತಪ್ಪು ಮಾಡಿ ಕಷ್ಟ ನಷ್ಟ ಅನುಭವಿಸಿದ ಅನುಭವ ಇದ್ದಾಗ ಮಕ್ಕಳಿಗೆ ಆ ದಾರಿಯಲ್ಲಿ ನಡೆಯಲು ನಮ್ಮ ಸಹಕಾರ ಇರೋದಿಲ್ಲ. ಹಾಗೆಯೇ ಸರ್ಕಾರಗಳೂ ಹಿಂದಿನವರಂತೆಯೇ ಭ್ರಷ್ಟಾಚಾರಕ್ಕೆ ಸಹಕರಿಸುತ್ತಿದ್ದರೆ ದೇಶಕ್ಕಾಗಿ ನಾವು ಏನು ಮಾಡಬಹುದೆನ್ನುವ ಬಗ್ಗೆ ಚಿಂತನೆ ನಡೆಸುವುದು ಜ್ಞಾನಿಗಳ ಲಕ್ಷಣ.

ನಮಗೆ ಇಷ್ಟು ವರ್ಷದಿಂದಲೂ ಆಗಿರುವ ಅನುಭವ ಎಲ್ಲರಿಗೂ ಆಗದಿದ್ದರೂ ದೇಶ ಭ್ರಷ್ಟಾಚಾರಕ್ಕೆ ಸಿಲುಕಿರುವಾಗ ,ಭ್ರಷ್ಟರಿಗೆ ಮತ್ತೆ ಶಕ್ತಿ ನಮ್ಮ ಸಹಕಾರದಿಂದ ಹೆಚ್ಚಾಗುತ್ತಿದೆ ಎಂದರೆ ಇದಕ್ಕೆ ಕಾರಣ ನಮ್ಮ ಅಜ್ಞಾನದ ಅಹಂಕಾರ, ಸ್ವಾರ್ಥದ ಜೀವನ.

ಹೀಗೇ ಪ್ರತಿಯೊಂದು ಕ್ಷೇತ್ರದಲ್ಲಿಯೂ ನಡೆಯುತ್ತಿದ್ದು ಅದೀಗ ಮನೆ ಮನೆಯ ಕಥೆ ಆಗಿ ಪ್ರಚಾರಕರಿಗೆ ಒಳ್ಳೆಯ ಅವಕಾಶ ನೀಡುತ್ತಿದೆ.ನಮ್ಮ ಆಂತರಿಕ ಸಮಸ್ಯೆಗೆ ಕಾರಣವೆ ಅಜ್ಞಾನ. ಅಜ್ಞಾನ ಎಂದರೆ ಜ್ಞಾನವೇ ಇಲ್ಲ ಎಂದಲ್ಲ. ಜ್ಞಾನವನ್ನು ರಾಜಕೀಯವಾಗಿ ಬಳಸಿರೋದು. ಜನರ ಸಾಮಾನ್ಯಜ್ಞಾನ ಹಿಂದುಳಿಸಿ ದಾರಿ ತಪ್ಪಿಸಿದರೆ ಆಳೋದಕ್ಕೆ ಇದು ರಾಜಪ್ರಭುತ್ವ ವಲ್ಲ. ಉಳಿಸಿಕೊಳ್ಳಲು ಇಲ್ಲಿ ಯಾರೂ ಸೇವಕರಲ್ಲ. ಆಧ್ಯಾತ್ಮ ಶಿಕ್ಷಣವೆಂದರೆ ವೇದ ಪುರಾಣಗಳೆಂದರೆ ತಪ್ಪು.

ಇದು ಬ್ರಾಹ್ಮಣ ವರ್ಗದವರಿಗೆಅಗತ್ಯವೇ ಹೊರತು ಶ್ರಮಜೀವಿಗಳಿಗಲ್ಲ. ಕಾಯಕವೇ ಕೈಲಾಸ ಮಂತ್ರದಿಂದಲೇ ಎಷ್ಟೋ ಮಹಾತ್ಮರುಗಳು ಮುಕ್ತಿ ಪಡೆದಿರೋದನ್ನು ಪ್ರಚಾರಕ್ಕೆ ಸೀಮಿತ ಮಾಡಿಕೊಂಡು ಹಣ ಅಧಿಕಾರ, ಸ್ಥಾನಮಾನ ಪಡೆದರೆ ಜೀವಕ್ಕೆ ಮುಕ್ತಿ ಎಂದರೆ ಇದು ಅರ್ಧಸತ್ಯ ವಷ್ಟೆ.

ಸ್ಥಿತಿಗೆ ಕಾರಣವೇ ನಾನೇ ಸರಿ ಎನ್ನುವ ಅತಿಯಾದ ಅಹಂಕಾರ. ಬೌತಿಕದಲ್ಲಿ ಹೆಸರುಗಳಿಸಿ ಹಣಗಳಿಸಿದ್ದರೂ ಇವೆಲ್ಲವೂ ಜನರ ಸಹಕಾರದ ಋಣ. ಇಲ್ಲಿ ನನ್ನದೇನಿದೆ? ಸತ್ಯವನ್ನು ನನ್ನಲ್ಲಿ ಅಳವಡಿಸಿಕೊಳ್ಳಲು ಕಷ್ಟ. ಸತ್ಯವಂತರನ್ನು ಪೂಜಿಸಿ ಬೇಡೋದು ಸುಲಭ. ಭೂಮಿಗೆಸತ್ಯಜ್ಞಾನಿಗಳ ಅಗತ್ಯವಿದೆ. ಧರ್ಮಜ್ಞಾನದ ಅಗತ್ಯವಿದೆ.

ಇಲ್ಲಿ ಯಾವುದು ಹೆಚ್ಚಾಗಿದೆ? ಇದಕ್ಕಾಗಿಯೇ ಕೊರೋನಾ ಮಹಾತಾಯಿ ಬಂದು ಒಳ್ಳೆಯವರು ಕೆಟ್ಟವರೆನ್ನದೆ ಕರೆಸಿಕೊಂಡು ತನ್ನ ಒಡಲು ತುಂಬಿಸಿಕೊಂಡು ತನ್ನ ಅಸ್ತಿತ್ವ ಮಾನವನಿಗೆ ತೋರಿಸುತ್ತಿದ್ದಾಳೆ. ಇದರಲ್ಲಿಯೂ ದುಷ್ಟರ ಅಮಾನವೀಯ ರಾಜಕೀಯತೆ ಎದ್ದು ಕಾಣುತ್ತಿರುವುದು ಕಾಲದ ಮಹಿಮೆ.

ಖಾಸಗಿ ಶಿಕ್ಷಣವಾಗಲಿ,ಸರ್ಕಾರಿ ಶಿಕ್ಷಣವಾಗಲಿ ಒಂದೇ ಪಠ್ಯ ಪುಸ್ತಕವಿದ್ದರೂ ವಿಚಾರ ತಿಳಿಸುವುದರಲ್ಲಿ ವ್ಯತ್ಯಾಸವಷ್ಟೆ. ಬುದ್ದಿವಂತ, ಜ್ಞಾನವಂತ, ಶ್ರಮಪಡುವ ಶಕ್ತಿ ಬಡವರಲ್ಲಿ  ಹೆಚ್ಚು ಹೀಗಾಗಿ ಸರ್ಕಾರದ ಶಾಲೆಯಲ್ಲಿ ಕಲಿತವರೂ ಹೆಚ್ಚಿನ ಅಂಕ ಪಡೆದು ಉನ್ನತ ಹುದ್ದೆಗೆ ಹಿಂದೆ ಏರಿದ್ದರು.

ಈಗ ಮಕ್ಕಳಿಗೆ ಸಾಲದ ಹೊರೆ ಏರಿಸಿ ಪೋಷಕರು ಖಾಸಗಿ ಶಾಲೆಗೆ ಕಳಿಸಿ ಕಲಿಸಿದ್ದರೂ ಯಾವ ಕೆಲಸವಿಲ್ಲದೆ ಪರದಾಡುವ ಯುವಕ ಯುವತಿಯರಿಗೆ ಎಲ್ಲಿ ತಪ್ಪಿದೆವೆನ್ನುವ ಅರಿವಾಗದೆ ಅಡ್ಡ ದಾರಿ ಹಿಡಿದರೆ ಇದಕ್ಕೆ ಕಾರಣ ತಿಳಿಯುವುದು ಇಂದಿನ ಸಣ್ಣ ಮಕ್ಕಳ ಪೋಷಕರ ಧರ್ಮ.

ಮಕ್ಕಳ ಮೂಲ ಶಿಕ್ಷಣದಲ್ಲಿ ಸತ್ಯ, ಸತ್ವ, ನೀತಿ, ಧರ್ಮದ ಜೊತೆಗೆ ಮಕ್ಕಳ ಒಳಗಿನ ಪ್ರತಿಭೆ ಜ್ಞಾನಕ್ಕೆ ಒತ್ತುಕೊಡುವ‌ ವಿಷಯಗಳಿರಬೇಕಿತ್ತು. ಎಷ್ಟು ವಿಚಾರ, ವಿಷಯ ತಲೆಗೆ ತುಂಬಿದ್ದೇವೆನ್ನುವ‌ ಬದಲು ಎಂತಹ ವಿಷಯಗಳಿಂದ ಮಕ್ಕಳ ಆಂತರಿಕ ಜ್ಞಾನಶಕ್ತಿ ಹೆಚ್ಚುವುದೆನ್ನುವ ಜ್ಞಾನ ಪೋಷಕರಲ್ಲಿದ್ದರೆ ಪ್ರಾಥಮಿಕ ಶಿಕ್ಷಣ ಅತ್ಯುತ್ತಮ ಜ್ಞಾನಿಗಳನ್ನು ಹುಟ್ಟಿಸಬಹುದು. ಇದು ಭಾರತೀಯ ಮೂಲ ಶಿಕ್ಷಣದ ಉದ್ದೇಶವಾಗಿತ್ತು. ಇಲ್ಲಿ ಹಣದಿಂದ ಎಲ್ಲವೂ ಇಲ್ಲಜ್ಞಾನದಿಂದ ಎಲ್ಲಾ ನಡೆದಿದೆ.

ಜ್ಞಾನವಿಜ್ಞಾನದ ಮಧ್ಯೆ ಇದ್ದಸಾಮಾನ್ಯಜ್ಞಾನದ ಕೊರತೆ ಇದಕ್ಕೆ ಕಾರಣವಲ್ಲವೆ? ಈಗಲೂ ಆತ್ಮಾವಲೋಕನ ಮಾಡಿಕೊಂಡು ನಡೆಯೋ ಅವಕಾಶವಿದೆ. ಸರ್ಕಾರ ಈಗ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸುವುದಕ್ಕೆ ಜನರ ಸಹಕಾರವಿದ್ದರೆ ಭಾರತದ ಹಲವಾರು ಸಮಸ್ಯೆಗಳಿಗೆ ಮನೆ ಒಳಗಿದ್ದೇ ಪರಿಹಾರ ಸಿಗುತ್ತದೆನ್ನಬಹುದು.

ಬಗಲಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಊರೆಲ್ಲಾ ತಿರುಗಿದರಂತೆ ಎಂದ ಹಾಗಾಗಿದೆ ಭಾರತೀಯರ ಪರಿಸ್ಥಿತಿ. ಭಗವಂತನ ಇಚ್ಚೆಯಿಲ್ಲದೆ ಏನೂ ನಡೆಯದು ಎಂದ ಮೇಲೆ ಕೊರೊನ ವೂ ಅವನ ಇಚ್ಚೆಯೇ. ಇದರ ಉದ್ದೇಶ ಒಳ್ಳೆಯದಾಗಿದ್ದರೂ ವೈಜ್ಞಾನಿಕವಾಗಿ ಅರ್ಥ ಮಾಡಿಕೊಂಡು ಆಧ್ಯಾತ್ಮ ಸತ್ಯದಿಂದ ದೂರ ಹೋಗಿ ರಾಜಕೀಯ ನಡೆಸಿದರೆ ಇದರ ಪ್ರತಿಫಲ ಕೆಟ್ಟದ್ದೆ ಆಗಿರುತ್ತದಲ್ಲವೆ? ಜೀವ ಒಳಗಿದೆ.

ಕೊರೊನ ಒಳಗೆ ಕೂರಿಸಿ ರಕ್ಷಣೆ ಮಾಡಿದೆ. ಸತ್ಯಜ್ಞಾನ ಒಳಗಿದೆ. ಒಳಗಿದ್ದಾಗ ಸತ್ಯ ತಿಳಿಯೋ ಬದಲು ರಾಜಕೀಯ ನಡೆಸಿದರೆ ವಿಜ್ಞಾನ ಏನೂ ಮಾಡಲಾಗೋದಿಲ್ಲ. “ಬಂದದ್ದೆಲ್ಲಾ ಬರಲಿ ಗೋವಿಂದ ನ ದಯೆವೊಂದಿರಲಿ” ಈಗ ಮಕ್ಕಳ ಸರದಿ.ಮೂರನೆ ಅಲೆ ಹೊರಬರುವ ಸಮಯ. ಹೆಚ್ಚು ತಿಂದು ಶಕ್ತಿ ಬರುವುದೆಂದರೆ ತಪ್ಪು. ಹೆಚ್ಚು ಯೋಗಶಕ್ತಿ ಬೆಳೆಸಿಕೊಂಡರೆ ಉತ್ತಮ ರಕ್ಷಣೆ. ಔಷಧ ಒಳಗಿನ ವಿಷಯದಲ್ಲಿದೆ. ವಿಷಯಗಳಲ್ಲಿ ಅಮೃತತ್ವವಿದ್ದರೆ ಆರೋಗ್ಯ.ವಿಷವಿದ್ದರೆ ರೋಗ.
ನಮ್ಮೊಳಗೆ ಏನಿದೆ?

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...
- Advertisement -

More Articles Like This

- Advertisement -
close
error: Content is protected !!