spot_img
spot_img

ಪರಿಸರವು ಜೀವರಾಶಿಗೆ ಲಭಿಸಿರುವ ಅತ್ಯಂತ ಅಮೂಲ್ಯ ಕೊಡುಗೆ- ಶ್ರೀಶೈಲ ಕರೀಕಟ್ಟಿ

Must Read

ಸವದತ್ತಿ: “ಪರಿಸರವು ಜೀವರಾಶಿಗೆ ಲಭಿಸಿರುವ ಅತ್ಯಂತ ಅಮೂಲ್ಯ ಕೊಡುಗೆ. ಪ್ರಕೃತಿಯಲ್ಲಿನ ಗಾಳಿ, ನೀರು, ಮಣ್ಣು, ಮರಗಳಿಲ್ಲದೇ ಮನುಷ್ಯ ಸಂಕುಲವಿಲ್ಲ.ಗಿಡಗಳನ್ನು ನೆಡುವ ಜೊತೆಗೆ ಅವುಗಳ ಸಂರಕ್ಷಣೆ ಜವಾಬ್ದಾರಿ ನಮ್ಮ ಮೇಲಿದೆ,ಪರಿಸರ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೇ ಅದು ನಿತ್ಯ ನಿರಂತರವಾಗಬೇಕು. ಆ ದಿಸೆಯಲ್ಲಿ ನಾವೆಲ್ಲರೂ ಪರಸರ ಕಾಳಜಿ ವಹಿಸೋಣ” ಎಂದು ಸವದತ್ತಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಶೈಲ ಕರೀಕಟ್ಟಿ ತಿಳಿಸಿದರು.

ಅವರು ಸವದತ್ತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ವಿವಿಧ ಗಿಡಗಳನ್ನು ತಮ್ಮ ಎಲ್ಲ ಸಿಬ್ಬಂಧಿಯೊಂದಿಗೆ ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಿದರು.

ಈ ಸಂದರ್ಭದಲ್ಲಿ ಕಾರ್ಯಾಲಯದ ಶಿಕ್ಷಣ ಸಂಯೋಜಕರಾದ ಎಂ.ಡಿ.ಹುದ್ದಾರ, ಜಿ.ಎಂ.ಕರಾಳೆ, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಂ.ಬಿ.ಬಳಿಗಾರ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಡಾ.ಬಿ.ಐ.ಚಿನಗುಡಿ, ರಾಜು ಭಜಂತ್ರಿ, ರತ್ನಾ ಸೇತಸನದಿ, ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ವೈ.ಬಿ.ಕಡಕೋಳ, ಎಸ್.ಬಿ.ಬೆಟ್ಟದ, ಸಿ.ವ್ಹಿ.ಬಾರ್ಕಿ, ದೈಹಿಕ ಶಿಕ್ಷಣಾಧಿಕಾರಿಗಳಾದ ಎಂ.ಬಿ.ಕೊಪ್ಪದ. ಕಾರ್ಯಾಲಯದ ಸಿಬ್ಬಂದಿಗಳಾದ ಎಲ್.ಎಸ್.ಹಿರೇಮಠ, ಐ.ಎಂ.ಮಕಾನದಾರ, ಬಿ.ಎಚ್.ಮಾಳಗಿ, ಪ್ರಶಾಂತ ಮೋಟೆಕರ, ಎನ್.ಎಸ್.ವಗೆನ್ನವರ, ಎನ್.ಎನ್.ಮುಜಾವರ, ವಿದ್ಯಾ ಗಾಣಗಿ, ರಾಜು ಹನಸಿ, ರಮೇಶ ತಳವಾರ, ಆಯೇಶಾ ಜಾಗೀರದಾರ, ಎಪ್.ಎಚ್.ಮಾವುತ, ಐ.ಎಂ.ಬಾರೀಗಿಡದ, ಎನ್.ಎಸ್.ಕಾರಬಾರಿ, ವಿನೋದ ಹೊಂಗಲ, ಮಲ್ಲಿಕಾರ್ಜುನ ಹೂಲಿ, ಬಸು ದೊಡಮನಿ, ಜೆ.ಎಸ್.ಸಿದ್ಲಿಂಗನವರ, ಟಿ.ಬಿ.ಏಗನಗೌಡರ, ಡಿ.ಜಿ.ಆವುಟಿ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ ರತ್ನಾ ಸೇತಸನದಿ ಸ್ವಾಗತಿಸಿದರು. ಡಾ.ಬಿ.ಐ.ಚಿನಗುಡಿ ನಿರೂಪಿಸಿದರು. ರಾಜು ಭಜಂತ್ರಿ ವಂದಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕವಿ ನಾಗೇಶ್ ನಾಯಕಗೆ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ದತ್ತಿ ಪ್ರಶಸ್ತಿ ಪ್ರದಾನ

ಸವದತ್ತಿಃ ಸಮೀಪದ ಉಡಿಕೇರಿಯ ರಾಮಲಿಂಗೇಶ್ವರ ಪ್ರೌಢಶಾಲೆಯ ಕವಿ, ಶಿಕ್ಷಕ ನಾಗೇಶ್ ಜೆ. ನಾಯಕ ಅವರಿಗೆ ಇತ್ತೀಚೆಗೆ ಬೆಳಗಾವಿ ಹಿಂದವಾಡಿಯ ಐ.ಎಂ.ಇ.ಆರ್. ಸಭಾಭವನದಲ್ಲಿ ಜರುಗಿದ ಬೆಳಗಾವಿ ಜಿಲ್ಲಾ...
- Advertisement -

More Articles Like This

- Advertisement -
close
error: Content is protected !!