ಸಿಂದಗಿ: ಅಂತರಂಗದ ಪರಿಸರ ಶುದ್ಧವಾದರೆ ಬಾಹ್ಯ ಪರಿಸರ ತಾನೇ ಶುದ್ಧವಾಗುತ್ತದೆ ಅಂತೆಯೇ ಮೊದಲು ನಮ್ಮ ಹಿರಿಯರು ಊರಿಗೊಂದು ವನ ಹೇಳುತ್ತಿದ್ದರು ಆದರೆ ಇಂದು ಮನೆಗೊಂದು ಮರ ಬೆಳೆಸುವಂತ ಸಂದಿಗ್ದ ಪರಿಸ್ಥಿತಿ ನಿರ್ಮಾಣವಾಗಿದೆ ಹಾಗೆ ನಡೆದುಕೊಳ್ಳದಿದ್ದರೆ ಆಪತ್ತು ಎದುರಾಗುವುದು ಸಂದೇಹವಿಲ್ಲ ಎಂದು ತೋಟಗಾರಿಕೆ ಇಲಾಖೆ ಸಹ ನಿರ್ದೇಶಕ ರಾಘವೇಂದ್ರ ಬಗಲಿ ಹೇಳಿದರು.
ಪಟ್ಟಣದ ಓಂಶಾಂತಿ ಭವನದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಹಾಗೂ ವಿಶ್ವ ಬಂಧು ಪರಿಸರ ಬಳಗದ ವತಿಯಿಂದ ಹಮ್ಮಿಕೊಂಡ ವಿಶ್ವ ಪರಿಸರ ದಿನಾಚರಣೆಯನ್ನು ಸಸಿಗೆ ನೀರುಣಿಸಿ ಮಾತನಾಡಿ, ಉನ್ನತೀಕರಣ, ಕೈಗಾರಿಕಾಕರಣದಿಂದ ಅರಣ್ಯ ನಾಶವಾಗುತ್ತಿದೆ ಕಾರಣ ಅದನ್ನು ಉಳಿಸಿ ಬೆಳೆಸೋಕೆ ಮನೋ ಮಾಲಿನ್ಯವು ಉಳಿದೆಲ್ಲ ಮಾಲಿನ್ಯಗಳ ತಾಯಿ. ಎಲ್ಲ ಮಾಲಿನ್ಯವನ್ನು ದೂರಗೊಳಿಸಲು ಮೊದಲು ಮನೋ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆಯಿದೆ ಈ ಹಿನ್ನೆಲೆಯಲ್ಲಿ ಸಕಾರಾತ್ಮಕ ಜೀವನ ಶೈಲಿಯನ್ನು ನಮ್ಮದಾಗಿಸಿಕೊಳ್ಳಬೇಕು. ಅದಕ್ಕಾಗಿ ಅಧ್ಯಾತ್ಮದ ಶಿಕ್ಷಣದ ಅತ್ಯವಶ್ಯಕತೆ ಇದೆ ಎಂದು ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಸಿ.ಎಂ.ಮನಗೂಳಿ ಕಾಲೇಜಿನ ಪ್ರಾಧ್ಯಾಪಕ ಡಾ. ಬಿ.ಜಿ.ಪಾಟೀಲ ಮಾತನಾಡಿ, ಭೂಮಿಯ ರಕ್ಷಣೆ ಮಾಡುವುದೆಂದರೆ ನಮ್ಮನ್ನು ನಾವು ರಕ್ಷಣೆ ಮಾಡಿಕೊಂಡಂತೆ ಅದನ್ನು ಜಾಗೃತ ಗೊಳಿಸಲು ವಿಶ್ವಸಂಸ್ಥೆ ಪರಿಸರ ದಿನಾಚರಣೆ ಆಚರಣೆ ಹಮ್ಮಿಕೊಳ್ಳಲಾಗುತ್ತಿದೆ. ಇಡೀ ಸಮುದಾಯ ಒಂದಾಗಬೇಕು ಎನ್ನುವ ನಿಟ್ಟಿನಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಆಧ್ಯಾತ್ಮಕ ಶಿಕ್ಷಣವನ್ನು ವಿಶ್ವದಾದ್ಯಂತ 148 ರಾಷ್ಟ್ರಗಳಲ್ಲಿ ತನ್ನ ಸೇವಾ ಕೇಂದ್ರಗಳ ಮೂಲಕ ಮಾನವನ ಜೀವನದ ಅರಿವನ್ನು ಮೂಡಿಸುವುದು, ಪರಿಸರ ಕೇವಲ ಬಾಹ್ಯ ಮಾತ್ರವಲ್ಲದೆ ಅಂತರಂಗದಲ್ಲಿ ಶುದ್ಧವಾಗಬೇಕಿದೆ ಎನ್ನುವ ನಿಟ್ಟಿನಲ್ಲಿ ಈ ಸೇವಾ ಕೇಂದ್ರವು ಹಲವಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದೆ. ಅದರಲ್ಲಿ ಸ್ವಚ್ಛ ಸಮಾಜ ಸ್ವಸ್ಥ ಸಮಾಜ, ಆಧ್ಯಾತ್ಮಿಕ ಬದುಕು ಪರಿಸರವನ್ನು ಸ್ವಚ್ಛಗೊಳಿಸುತ್ತದೆ ಎಂಬ ಹಲವಾರು ಕಾರ್ಯಕ್ರಮಗಳ ಮೂಲಕ ಪರಿಸರ ರಕ್ಷಣಾ ಕಾರ್ಯವನ್ನು ವಿಶ್ವದಾದ್ಯಂತ ಮಾಡುತ್ತಿದೆ ಎಂದರು.
ಕೃಷಿ ಅಧಿಕಾರಿ ಶಿವಾನಂದ ಹೂವಿನಹಳ್ಳಿ ಮಾತನಾಡಿ, ಜೂನ್ 5 ರಂದು ಆಚರಿಸುವ ಪರಿಸರ ದಿನದಂದು ಪರಿಸರದ ಮಹತ್ವವನ್ನು ತಿಳಿಸಲಾಗುತ್ತದೆ. ಜತೆಗೆ ಕೃಷಿ, ಸ್ವಚ್ಛತೆ ಕಾಪಾಡುವ ಬಗ್ಗೆ ಕೂಡ ಅರಿವು ಮೂಡಿಸಲು ಈ ದಿನವನ್ನು ಮೀಸಲಿಡುತ್ತೇವೆ. ಆದರೆ ಈ ಒಂದು ದಿನ ಮಾತ್ರ ಪರಿಸರ ಸಂರಕ್ಷಣೆಯ ಮೀಸಲಿಡುವ ಬದಲಿ ಪ್ರತಿದಿನವನ್ನೂ ಕೂಡ ಪರಿಸರ ದಿನವನ್ನಾಗಿ ಆಚರಿಸಿದಾಗ ಮಾತ್ರ ಈ ದಿನದ ಮಹತ್ವ ಅರ್ಥಪೂರ್ಣವಾಗುತ್ತದೆ. ಈ ಬಗ್ಗೆ ಯೋಜನೆ, ಯೋಚನೆಯ ಮೂಲಕ ನಾವು ಮುಂದಾಗಬೇಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಾದೇಶಿಕ ಅರಣ್ಯ ಅಧಿಕಾರಿ ಬಿ.ಆಯ್.ಬಿರಾದಾರ, ವಲಯ ಅರಣ್ಯ ಅಧಿಕಾರಿ ಎಂ.ವೈ.ಮಲಕಣ್ಣವರ, ಇಲಾಖಾ ಸಿಬ್ಬಂದಿ ಎಂ.ಎನ್.ಮುಲ್ಲಾ, ಆರ್.ಎಚ್.ಜಮಾದಾರ, ಅಶೋಕ ಲಾಳಸಂಗಿ, ಸೋಮು ಬಬಲೇಶ್ವರ, ವಿ.ಎನ್.ಚನ್ನೂರ ಇವರನ್ನು ಸನ್ಮಾನಿಸಲಾಯಿತು.
ಆಲಮೇಲದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ರೇಣುಕಾ ಅಕ್ಕನವರು ಸಾನ್ನಿಧ್ಯ ವಹಿಸಿದ್ದರು. ಸಿಂದಗಿ ಸೇವಾಕೇಂದ್ರದ ಸಂಚಾಲಕಿ ಪವಿತ್ರಾಜಿ ಸ್ವಾಗತಿಸಿದರು. ಕಾವ್ಯಾ ಪ್ರಾಥನಾಗೀತೆ ಹಾಡಿದರು. ವಿಶ್ವಬಂಧು ಪರಿಸರ ಬಳಗದ ಸಂಚಾಲಕ ಸಿದ್ದಲಿಂಗ ಚೌಧರಿ ಆಶಯ ನುಡಿಗಳನ್ನಾಡಿದರು. ಶಿಕ್ಷಕ ಎಸ್ ವಾಯ್ ಬಿರಾದಾರ ನಿರೂಪಿಸಿದರು. ಶಿಕ್ಷಕ ಬಸವರಾಜ ಅಗಸರ ವಂದಿಸಿದರು
ಈ ಸಂದರ್ಭದಲ್ಲಿ ಶಕುಂತಲಾ ಹಿರೇಮಠ, ಸಬಿಯಾ ಮರ್ತುರ, ಡಾ ಅನೀಲ ನಾಯಕ, ಮಹಾಂತೇಶ ನೂಲಾನವರ, ಡಾ.ಪ್ರಕಾಶ ರಾಗರಂಜಿನಿ ಮಾದೇವಿ ಹಿರೇಮಠ, ವಿಜಯಲಕ್ಷ್ಮಿ ಮಠ, ಪಂಡಿತ ಯಂಪುರೆ, ವಿಜಯಕುಮಾರ ತೇಲಿ, ಎಂ,ಆರ್,ಡೋಣಿ, ಸಂಗನಗೌಡ ಹಚ್ಚಡದ, ಎಂ.ಎಂ.ಕೆಂಭಾವಿ, ಡಿ.ಎಂ.ಮಾವೂರ, ಸಿಂತುಜಾ ಪಾಟೀಲ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.