ಮನುಷ್ಯನ ವಕ್ರದೃಷ್ಟಿಗೆ ಪರಿಸರ ಹಾಳಾಗುತ್ತಿದೆ – ತಹಶೀಲ್ದಾರ ಬಿರಾದಾರ

Must Read

ಪ್ರವಾಹದಿಂದ ಹಾನಿಗೊಳಗಾದ ಮನೆ ಹಾಗೂ ಬೆಳೆ ಹಾನಿಗೆ ಕೂಡಲೇ ಪರಿಹಾರ ಕಲ್ಪಿಸಿಕೊಡಿ : ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ಗೋಕಾಕ: ಕಳೆದ ಜುಲೈ ತಿಂಗಳಲ್ಲಿ ಮಳೆ ಹಾಗೂ ಪ್ರವಾಹದಿಂದಾಗಿ ಹಾನಿಗೊಳಗಾದ ನದಿ ತೀರದ ಗ್ರಾಮಗಳ ಮನೆ ಹಾಗೂ ಬೆಳೆಗಳ ಸಮೀಕ್ಷೆಯನ್ನು ಕೂಡಲೇ ಪೂರ್ಣಗೊಳಿಸಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ...

ನದಿ ಸ್ವಚ್ಛತೆಗೆ ಚಾಲನೆ ನೀಡಿದ ಈರಣ್ಣ ಕಡಾಡಿ

ಗೋಕಾಕ: ಪ್ರಕೃತಿ ಉಚಿತವಾಗಿ ಕೊಟ್ಟಿರುವ ನೀರನ್ನು, ಗಿಡ ಮರಗಳು ಉಚಿತವಾಗಿ ಕೊಟ್ಟಿರುವ ಆಮ್ಲಜನಕವನ್ನು ನಾಶ ಮಾಡುವ ಮೂಲಕ ಸ್ವಯಂಕೃತ ಅಪರಾಧಗೈದ ನಾವೆಲ್ಲ ನದಿ ಸ್ವಚ್ಛತೆ ಮಾಡುವ...

ಮುಷ್ಕರ ಮತ್ತು ಆರ್ಥಿಕ ಪರಿಸ್ಥಿತಿ

ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಪ್ರಚಲಿತದಲ್ಲಿರುವ ಒಂದು ವಿದ್ಯಮಾನಗಳಲ್ಲಿ ಮುಷ್ಕರ ಕೂಡ ಒಂದು. ಬಂದ್ ಬಂದ್ ಬಂದ್.ಏನಿದು?ಏಕೆ ಮಾಡಬೇಕು? ಇದರಿಂದ ಆಗುವ ಬದಲಾವಣೆಗಳೇನು? ಯಾರಿಗೆ ಲಾಭ?...

ಸಿಂದಗಿ : ವಿವಿಧ ಬಾಹ್ಯ ವಸ್ತುಗಳಿಂದ ಕೂಡಿರುವ ಸಂಗಮವೇ ಪರಿಸರ ಇದರೊಂದಿಗೆ ಅನೋನ್ಯತೆಯಿಂದ ಮಾನವನು ಜೀವಿಸುತ್ತಿದ್ದಾನೆ. ಇದೆಲ್ಲದರ ನಡುವೆ ಮಾನವನು ತನ್ನ ಸ್ವಾರ್ಥತೆಯಿಂದ ಈ ಸೃಷ್ಟಿಗೆ ವಕ್ರದೃಷ್ಟಿ ತೋರಿಸುತ್ತಿದ್ದಾನೆ ಹೀಗಾಗಿ ಪರಿಸರವು ತೊಂದರೆಗೆ ಒಳಗಾಗುತ್ತಿದೆ ಎಂದು ತಾಲೂಕಾ ದಂಡಾಧಿಕಾರಿ ನಿಂಗಣ್ಣ ಬಿರಾದಾರ ಹೇಳಿದರು.

ಪಟ್ಟಣದ ಕನಕದಾಸ ಬಡಾವಣೆಯ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ವಿಶ್ವಬಂಧು ಪರಿಸರ ಬಳಗದ ವತಿಯಿಂದ ಹಮ್ಮಿಕೊಂಡ 13 ನೇ ವಾರದ ಸಸಿನೆಡುವ ಕಾರ್ಯಕ್ರಮದಲ್ಲಿ ಸಸಿಗೆ ನೀರೆರೆದು ಅವರು ಮಾತನಾಡಿದರು.

ಇಡೀ ವಿಶ್ವದಲ್ಲಿ ಮನುಷ್ಯ ಜೀವಿ ಏಕಾಂಗಿಯಲ್ಲ ಈ ಸೃಷ್ಟಿ ಮನುಷ್ಯನೊಬ್ಬನ ಸ್ವತ್ತು ಅಲ್ಲವೇ ಅಲ್ಲ. ಪ್ರಾಣಿ- ಪಕ್ಷಿ ಕಾಡು-ಮೇಡು ಬೆಟ್ಟ-ಗುಡ್ಡ, ನದಿ, ಹಳ್ಳ -ಕೊಳ್ಳ ಸಮುದ್ರ ಸಾಗರ ಗಾಳಿ-ಮಳೆ ಆಕಾಶ-ಬೆಳಕು ಇವೆಲ್ಲಗಳ ಸಮೂಹವೇ ಪರಿಸರ. ಆದರೆ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ತನಗೆ ಸೂಕ್ತವಾದ ರೀತಿಯಲ್ಲಿ ಪರಿವರ್ತನೆ ಮಾಡಿಕೊಂಡು ಈ ಸುಂದರ ವ್ಯವಸ್ಥೆಯನ್ನು ಹಾಳು ಮಾಡಿ ತನ್ನ ಅಂತ್ಯವನ್ನು ತಾನೇ ಮಾಡಿಕೊಳ್ಳುತ್ತಿದ್ದಾನೆ ಎಂದರು.

- Advertisement -

ಯಂಕಂಚಿ ಪಿಯು ಕಾಲೇಜಿನ ಉಪನ್ಯಾಸಕ ರಮೇಶ ಸದಾಶಿವಪ್ಪಗೋಳ ಮಾತನಾಡಿ, ಭವಿಷ್ಯಕ್ಕೆ ಸ್ಫೂರ್ತಿಯಾಗಿರುವ ಪರಿಸರ ವಿನಾಶದಿಂದ ದುಷ್ಪರಿಣಾಮಗಳನ್ನು ಮನಗಂಡಿರುವ ನಾವು ಪರಿಸರ ಸಂರಕ್ಷಣೆ ಕಾಳಜಿ ಪೂರ್ವಕವಾಗಿ ಮಾಡುವ ಮೂಲಕ ಮನೆಗೊಂದು ಮರ ಊರಿಗೊಂದು ವನ ಬೆಳೆಸೋಣ. ಪರಿಸರ ಪ್ರೀತಿ ಮಾಡೋಣ ಎಂದರು

ವಿಶ್ವಬಂಧು ಪರಿಸರ ಬಳಗದ ಸಂಚಾಲಕ ಸಿದ್ದಲಿಂಗ ಚೌಧರಿ ಪ್ರಾಸ್ತಾವಿಕ ಮಾತನಾಡಿದರು. ಸೈನಾಬಿ ಮಸಳಿ ಪ್ರಾರ್ಥಿಸಿದರು. ಶಾಲಾ ಮುಖ್ಯಗುರು ಮಾತೆ ಜೆ.ಎಸ್.ಗೋಲಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ಬಸವರಾಜ ಅಗಸರ ನಿರೂಪಿಸಿದರು. ಸಾಯಬಣ್ಣ ದೇವರಮನಿ ವಂದಿಸಿದರು.

ಇದೇ ಸಂದರ್ಭದಲ್ಲಿ ಮಹಾದೇವಿ ಹಿರೇಮಠ, ಸಬೀಯಾ ಮರ್ತೂರ, ಎಸ್.ಆರ್.ಪಾಟೀಲ, ಅಜಯ ಯಲಗಟ್ಟಿ, ಎಂ.ಆರ್.ಡೋಣಿ, ಶಾಲಾ ಶಿಕ್ಷಕರಾದ ಎಸ್.ಎಂ.ಬಿರಾದಾರ, ಎಸ್.ವ್ಹಿ.ಉಪ್ಪಿನ, ಬಿ.ಎಂ.ಸಿಂದಗಿ, ಎ.ಟಿ.ಬಜಂತ್ರಿ, ಬಿ.ಎಸ್.ರುಕುಂಪೂರ, ಸಿ.ಜಿ.ಪಡಗಾನೂರ, ಜಿ.ಎ.ಮುಲ್ಲಾ, ಎಸ್‍ಡಿಎಂಸಿ ಅಧ್ಯಕ್ಷ ಶರಣಪ್ಪ ಪೂಜಾರಿ, ಉಪಾಧ್ಯಕ್ಷ ಶಿವಾನಂದ ಗಣಿಹಾರ ಸೇರಿದಂತೆ ಇನ್ನಿತರರು ಇದ್ದರು.

- Advertisement -
- Advertisement -

Latest News

ಪ್ರವಾಹದಿಂದ ಹಾನಿಗೊಳಗಾದ ಮನೆ ಹಾಗೂ ಬೆಳೆ ಹಾನಿಗೆ ಕೂಡಲೇ ಪರಿಹಾರ ಕಲ್ಪಿಸಿಕೊಡಿ : ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ಗೋಕಾಕ: ಕಳೆದ ಜುಲೈ ತಿಂಗಳಲ್ಲಿ ಮಳೆ ಹಾಗೂ ಪ್ರವಾಹದಿಂದಾಗಿ ಹಾನಿಗೊಳಗಾದ ನದಿ ತೀರದ ಗ್ರಾಮಗಳ ಮನೆ ಹಾಗೂ ಬೆಳೆಗಳ ಸಮೀಕ್ಷೆಯನ್ನು ಕೂಡಲೇ ಪೂರ್ಣಗೊಳಿಸಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ...
- Advertisement -

More Articles Like This

- Advertisement -
close
error: Content is protected !!