ಮೂಡಲಗಿ: ಆಷಾಢ ಮಾಸದ ಪ್ರಯುಕ್ತ ಭಕ್ತರ ವಿನಂತಿ ಮೇರೆಗೆ ಹುಬ್ಬಳ್ಳಿಯಿಂದ ಮಹಾರಾಷ್ಟ್ರದ ಪಂಡರಾಪುರಕ್ಕೆ ಹೆಚ್ಚುವರಿಯಾಗಿ ಬಿಟ್ಟಿರುವ ರೈಲ್ವೆಯನ್ನು ಭಕ್ತರ ಅನುಕೂಲಕ್ಕಾಗಿ ಇನ್ನೂ ಒಂದು ವಾರ ಓಡಿಸಬೇಕೆಂದು ರಾಜ್ಯಸಭಾ ಸದಸ್ಯ ಹಾಗೂ ನೈರುತ್ಯ ರೈಲ್ವೆ ಸಲಹ ಸಮಿತಿ ಸದಸ್ಯರಾದ ಈರಣ್ಣ ಕಡಾಡಿಯವರು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರ ಜತೆ ಚರ್ಚೆ ಮಾಡಿದ ನಂತರ ರೈಲ್ವೆಯನ್ನು ಜುಲೈ 14ರ ತನಕ ಓಡಿಸಲು ಕೇಂದ್ರ ರೈಲ್ವೆ ಇಲಾಖೆ ಅನುಮತಿ ನೀಡಿದೆ.
ಈ ಹೆಚ್ಚುವರಿ ರೈಲ್ವೆ ಸೌಲಭ್ಯವನ್ನು ಸರ್ವ ಭಕ್ತಾದಿಗಳು ಪಡೆದುಕೊಳ್ಳಬೇಕೆಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ತಿಳಿಸಿದ್ದಾರೆ. ತಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ರೈಲ್ವೆ ಇಲಾಖೆಯನ್ನು ಕಡಾಡಿಯವರು ಅಭಿನಂದಿಸಿದರು.