spot_img
spot_img

ಮುಖ್ಯ ಶಿಕ್ಷಕರನ್ನು ಅಮಾನತ್ತುಗೊಳಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ

Must Read

ಸಿಂದಗಿ: ತಾಲೂಕಿನ ಬಮ್ಮನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಶರಣಪ್ಪ ದೊಡ್ಡಪ್ಪ ಬಿದನೂರ ಇವರು ಕರ್ತವ್ಯ ಲೋಪ ಮತ್ತು ಆರ್ಥಿಕ ನಷ್ಟ ಎಸಗಿರುವ ಕಾರಣ ಇವರ ವಿಚಾರಣೆಯನ್ನು ಕಾದಿರಿಸಿ ಅಮಾನತ್ತು ಆದೇಶ ಹೊರಡಿಸಲಾಗಿದೆ ಎಂದು ಬಿಇಓ ಎಚ್.ಎಂ.ಹರನಾಳ ತಿಳಿಸಿದ್ದಾರೆ

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಮ್ಮನಹಳ್ಳಿ ಗ್ರಾಮಸ್ಥರ ದೂರಿನನ್ವಯ ಜೂ.10 ರಂದು ವಿಷಯ ಹಾಗೂ ಉಲ್ಲೇಖಗಳಿಗೆ ಸಂಬಂಧಿಸಿದಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳು ಶಾಲೆಯ ಅಕ್ಷರದಾಸೋಹ ಯೋಜನೆಯ ಆಹಾರ ಸಾಮಗ್ರಿಗಳನ್ನು ರಾತ್ರಿ 10.30 ಗಂಟೆಗೆ ಬೇರೆ ಕಡೆಗೆ ದುರುದ್ದೇಶ ಪೂರ್ವಕವಾಗಿ ಸಾಗಿಸುವ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಊರಿನ ಹಿರಿಯರು ಶಾಲೆಗೆ ಬಂದು ಅದನ್ನು ತಡೆದು ಜೂ. 10-06-2022 ರಂದು ಬೆಳಿಗ್ಗೆ 9.30 ಕ್ಕೆ ದೂರವಾಣಿ ಮುಖಾಂತರ ತಿಳಿಸಿದರನ್ವಯ ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಯೋಜನೆ ತಾ.ಪಂ ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿ ದೇವರನಾವದಗಿ ಶಾಲೆಗೆ ಖುದ್ದಾಗಿ ಬೇಟಿ ನೀಡಿ ಪರಿಶೀಲನೆ ಮಾಡಲಾಗಿ ಅಂದಾಜು ರೂ.44900=00 ಗಳ ಆಹಾರ ಸಾಮಗ್ರಿಗಳನ್ನು ಕರ್ತವ್ಯ ಲೋಪ ಎಸಗಿ ಹಾಳು ಮಾಡಿ ಆರ್ಥಿಕ ನಷ್ಟ ಉಂಟು ಮಾಡಿರುವುದು ಕಂಡುಬಂದಿದ್ದು ಹಾಗೂ ಬಳಕೆಗೆ ಯೋಗ್ಯವಾದ ಆಹಾರ ಸಾಮಗ್ರಿ ಬೇರೆ ಕಡೆಗೆ ಸಾಗಿಸುವ ದುರಾಲೋಚನೆ ಕೂಡಾ ಸಾಬೀತಾಗಿದ್ದು ಶಾಲೆಯಲ್ಲಿ ಆಹಾರ ಧಾನ್ಯ ಸ್ಟಾಕ್ ರಜಿಸ್ಟರ ಉದ್ದೇಶಪೂರ್ವಕವಾಗಿ ನಿರ್ವಹಣೆ ಮಾಡದೇ ಇರುವದು ಮತ್ತು ಶಾಲೆಯಲ್ಲಿ ಯಾವುದೇ ಶೈಕ್ಷಣಿಕ ಚಟುವಟಿಕೆಗಳನ್ನು ಮಾಡದೇ ತರಗತಿಗಳನ್ನು ತೆಗೆದುಕೊಳ್ಳದೇ ಸಂಪೂರ್ಣ ಕರ್ತವ್ಯ ಲೋಪ ಎಸಗಿರುವ ಹಿನ್ನಲೆಯಲ್ಲಿ ಮುಖ್ಯಶಿಕ್ಷಕ ಶರಣಪ್ಪ ದೊಡ್ಡಪ್ಪ ಬಿದನೂರ ಮೇಲೆ ಶಿಸ್ತು ಕ್ರಮ ಜರುಗಿಸುವುದು ಅತಿ ಅವಶ್ಯವೆಂದು ಪರಿಗಣಿಸಿ ಕರ್ನಾಟಕ ನಾಗರಿಕ ಸೇವೆ (ವರ್ಗಿಕರಣ, ನಿಯಂತ್ರಣ, ಮತ್ತು ಅಪೀಲ) ನಿಯಮ 1957 ರ ನಿಯಮ 10 (1)-ಎ ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸುತ್ತಾ ನಾನು ಎಚ್ ಎಮ್ ಹರನಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇಲಾಖಾ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತಿನಲ್ಲಿರಿಸಿ ಉಪನಿರ್ದೇಶಕರು (ಆಡಳಿತ), ಸಾರ್ವಜನಿಕ ಶಿಕ್ಷಣ ಇಲಾಖೆ ವಿಜಪುರ ರವರ ಆದೇಶದಂತೆ ಕ್ರಮವಹಿಸಿ ಘಟನೋತ್ತರ ಅನುಮತಿಗಾಗಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.

ಸದರಿಯವರು ಕರ್ನಾಟಕ ಸರಕಾರಿ ನಾಗರಿಕ ಸೇವಾ ನಿಯಮ 98(ಎ) ರಂತೆ ಜೀವನಾಂಶ ಭತ್ಯೆ ಪಡೆಯಲು ಅರ್ಹರಿರುತ್ತಾರೆ ಹಾಗೂ ಕರ್ನಾಟಕ ಸರಕಾರಿ ನಾಗರಿಕ ಸೇವಾ ನಿಯಮ 104 ರನ್ವಯ ಸಕ್ಷಮ ಪ್ರಾಧೀಕಾರದ ಅನುಮತಿ ಇಲ್ಲದೇ ಕೇಂದ್ರ ಸ್ಥಾನ ಬಿಡತಕ್ಕದ್ದಲ್ಲ ಎಂದೂ ಅವರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕವಿ ನಾಗೇಶ್ ನಾಯಕಗೆ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ದತ್ತಿ ಪ್ರಶಸ್ತಿ ಪ್ರದಾನ

ಸವದತ್ತಿಃ ಸಮೀಪದ ಉಡಿಕೇರಿಯ ರಾಮಲಿಂಗೇಶ್ವರ ಪ್ರೌಢಶಾಲೆಯ ಕವಿ, ಶಿಕ್ಷಕ ನಾಗೇಶ್ ಜೆ. ನಾಯಕ ಅವರಿಗೆ ಇತ್ತೀಚೆಗೆ ಬೆಳಗಾವಿ ಹಿಂದವಾಡಿಯ ಐ.ಎಂ.ಇ.ಆರ್. ಸಭಾಭವನದಲ್ಲಿ ಜರುಗಿದ ಬೆಳಗಾವಿ ಜಿಲ್ಲಾ...
- Advertisement -

More Articles Like This

- Advertisement -
close
error: Content is protected !!