ಮೂಡಲಗಿ: ಇಲ್ಲಿಯ ಶ್ರೀ ಸಾಯಿ ನೂತನ ದೇವಸ್ಥಾನದ ಮುಖ್ಯದ್ವಾರದ ಚೌಕಟ್ಟನ್ನು ಶುಕ್ರವಾರ ಬೆಳಿಗ್ಗೆ ವಿವಿಧ ಪೂಜಾ ವಿಧಿವಿಧಾನಗಳೊಂದಿಗೆ ಪ್ರತಿಷ್ಠಾಪಿಸಲಾಯಿತು.
ಶುದ್ಧ ಸಾಗವಾಣಿಯಲ್ಲಿ ನಿರ್ಮಿಸಿರುವ ಮುಖ್ಯ ದ್ವಾರದ ಚೌಕಟ್ಟನ್ನು ದಾಂಡೇಲಿಯಲ್ಲಿ ಸಿದ್ದಗೊಳಿಸಿರುವರು.
ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಸದಸ್ಯ ಸಂತೋಷ ಸೋನವಾಲಕರ, ಬಸವರಾಜ ವಿ. ಗುಲಗಾಜಂಬಗಿ, ಭೀಮಶಿ ಹೊಸಕೋಟಿ ಹಾಗೂ ನೂರಾರು ಸಂಖ್ಯೆಯಲ್ಲಿ ಸಾಯಿ ಭಕ್ತರು ಭಾಗವಹಿಸಿದ್ದರು.