spot_img
spot_img

ಬೆಳಗಾವಿ ಜಿಲ್ಲಾ ಕಸಾಪದಿಂದ ದಿ. ಉಮೇಶ ಕತ್ತಿ ನಿವಾಸಕ್ಕೆ ಭೇಟಿ

Must Read

spot_img

ಕುಟುಂಬದವರಿಗೆ ಸಾಂತ್ವನ ; ಶೋಕ ವ್ಯಕ್ತ

ಬೆಳಗಾವಿ: ಇತ್ತೀಚೆಗೆ ಅಗಲಿದ ಆಹಾರ ಮತ್ತು ನಾಗರಿಕ ಪೂರೈಕೆ ಮತ್ತು ಅರಣ್ಯ ಸಚಿವ ದಿವಂಗತ ಉಮೇಶ ಕತ್ತಿ ಅವರ ಹುಕ್ಕೇರಿ ನಿವಾಸಕ್ಕೆ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಮತ್ತು ಎಲ್ಲಾ ತಾಲೂಕಾ ಅಧ್ಯಕ್ಷರುಗಳು ಭೇಟಿ ನೀಡಿ ಅಗಲಿದ ಉಮೇಶ ಕತ್ತಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಿದರಲ್ಲದೇ ಅವರ ನಿಧನಕ್ಕೆ ಅಪಾರ ಶೋಕ ವ್ಯಕ್ತಪಡಿಸಿದರು.

ಈ ಸಂಧರ್ಭದಲ್ಲಿ ಮಾತನಾಡಿದ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಶ್ರೀಮತಿ ಮಂಗಲಾ ಮೆಟಗುಡ್ಡ, ಉಮೇಶ ಕತ್ತಿಯವರು ಅಪಾರ ಕನ್ನಡ ಪ್ರೇಮಿಯಾಗಿದ್ದು ಕನ್ನಡದ ಕೆಲಸಗಳಿಗೆ ಬೆನ್ನೆಲುಬಾಗಿ ನಿಂತು ಕನ್ನಡ-ಕನ್ನಡಿಗರ ಶ್ರೇಯೋಭಿವೃದ್ದಿಗಾಗಿ  ಧ್ವನಿ ಎತ್ತುವವರಲ್ಲಿ ಮೊದಲಿಗರಾಗಿದ್ದರು ಅಲ್ಲದೇ ಕನ್ನಡ ಸಾಹಿತ್ಯ ಪರಿಷತ್ ನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಅವರು ಕನ್ನಡ ಸಾಹಿತ್ಯ ಪರಿಷತ್ ಕಾರ್ಯಗಳಿಗೆ ಬಹಳಷ್ಟು ಬೆಂಬಲ ನೀಡುತ್ತಿದ್ದರು ಎಂದರಲ್ಲದೇ ಅವರ ಅಗಲಿಕೆಯಿಂದಾಗಿ ಕನ್ನಡ ನಾಡಿಗೆ ಅಪಾರ ನಷ್ಟವುಂಟಾಗಿದೆ ಎಂದು ಶೋಕ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನ ವಿವಿಧ ತಾಲೂಕಿನ ಅಧ್ಯಕ್ಷರುಗಳಾದ ಪ್ರಕಾಶ ಅವಲಕ್ಕಿ, ಡಾ. ಸುರೇಶ ಉಕ್ಕಲಿ, ಶ್ರೀಮತಿ ಭಾರತಿ ಮಗದುಮ್, ಈರಣ್ಣ ಶಿರಗಾವಿ, ಎಂ. ಈ. ಕನಶೆಟ್ಟಿ, ಡಾ. ಸಂಜಯ ಶಿಂದಿಹಟ್ಟಿ, ಪಾಂಡುರಂಗ ಜಟಗನ್ನವರ,  ಜಿಲ್ಲಾ ಗೌರವ ಕಾರ್ಯದರ್ಶಿ ಎಂ. ವೈ. ಮೆಣಶಿನಕಾಯಿ, ಕಿರಣ ಸಾವಂತನವರ, ಶಿವಾನಂದ ತಲ್ಲೂರ, ಆಕಾಶ್ ಥಬಾಜ, ವೀರಭದ್ರ ಅಂಗಡಿ, ಎ. ಹೆಚ್. ವಂಟಗುಡಿ, ಬಿ. ವೈ ಶಿವಾಪೂರ ಒಳಗೊಂಡಂತೆ ಇನ್ನಿತರ ಕರ್ಯಕಾರಿ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.


ವರದಿ: ಆಕಾಶ ಅರವಿಂದ ಥಬಾಜ
ಜಿಲ್ಲಾ ಸಹ ಮಾಧ್ಯಮ ಪ್ರತಿನಿಧಿ
ಕನ್ನಡ ಸಾಹಿತ್ಯ ಪರಿಷತ್

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!