spot_img
spot_img

ಧಾರ್ಮಿಕ ಜಗತ್ತಿನಲ್ಲಿ ಪೂರ್ಣ ಸತ್ಯ ಅಗತ್ಯ

Must Read

- Advertisement -

ಶನಿವಾರದಂದು ಶುಭವಾಗಲು ಶುಭಕಾರ್ಯಮಾಡಬೇಕು.ಆದರೆ,ನಾವು ಆದಿನ ಅಶುಭವೆಂದು ಪರಿಗಣಿಸಿ ಶುಭಕಾರ್ಯಕ್ಕೆ ದೂರ ಇಟ್ಟಿದ್ದೇವೆ. ಕರ್ಮಕಾರಕ ಶನಿಮಹಾತ್ಮ ಸತ್ಯಧರ್ಮದ ಕರ್ಮ ಅಗತ್ಯ.

ವಾರವಿಡೀ ಶುಭಕಾರ್ಯ ಮಾಡಿ ಕೊನೆಯಲ್ಲಿ ಅಶುಭವೆಂದು ಅಕರ್ಮ ಮಾಡಿದರೆ ಪರಮಾತ್ಮ ಒಲಿಯುವುದಿಲ್ಲ.ಆದರೂ ನಾವು ಸರಿತಪ್ಪು ಗಳ ಲೆಕ್ಕಾಚಾರದ ವ್ಯವಹಾರದಲ್ಲಿ ಹೊರಪ್ರಪಂಚದಲ್ಲಿ ಮುನ್ನಡೆದು ಹೊರಗಿನ ಆಚರಣೆಗಳ ಸರಮಾಲೆ ಬೆಳೆದಿದೆ.

ಅದರಲ್ಲೂ ಭ್ರಷ್ಟಾಚಾರ ಅಸತ್ಯ,ಅನ್ಯಾಯ, ಅಧರ್ಮ ಬೆಳೆದಿರೋದು ನಮ್ಮ ಚೌಕಟ್ಟಿನ ಒಳಗೇ ಜೋಪಾನವಾಗಿಟ್ಟು ಸಹಕಾರ ನೀಡಿದರೆ, ಭಗವಂತನಿಗೆ ಕಾಣುವುದಿಲ್ಲವೆ?.

- Advertisement -

ಪರಮಾತ್ಮರ ಸಮೂಹವೆ ಭಗವಂತ. ಇಲ್ಲಿ ಎಲ್ಲರೂ ಸೇರಿಯೇ ಬೆಳೆಸಿರೋ ಅಧರ್ಮದ ರಾಜಕೀಯಕ್ಕೆ ಎಲ್ಲರ ಸಹಕಾರವಿದೆ.ಕೆಲವರು ನೇರವಾಗಿ ಸಹಕರಿಸಿದರೆ, ಹಲವರು ಅಪರೋಕ್ಷವಾಗಿ ಸಹಕರಿಸಿ ಮುನ್ನಡೆದಿರೋವಾಗ ರಾಜಕಾರಣಿಗಳ ಜಾತಕದ ಭವಿಷ್ಯ ಜನರ ಭವಿಷ್ಯದೊಳಗಿದೆ.

ದೇಶದೊಳಗಿದ್ದು ನನಗೂ ದೇಶಕ್ಕೂ ಸಂಬಂಧವಿಲ್ಲವೆಂದರೆ ಅಸತ್ಯ.ಹಾಗೆ ರಾಜಕೀಯಕ್ಕೂ ಧಾರ್ಮಿಕ ಕ್ಷೇತ್ರಕ್ಕೂ ಸಂಬಂಧವಿಲ್ಲವೆನ್ನುವುದೂ ಅಸತ್ಯ. ಶ್ರೀ ಶಂಕರರ ಅದ್ವೈತ, ಮದ್ವರ ದ್ವೈತ,ರಾಮಾನುಜರ ವಿಶಿಷ್ಟಾದ್ವೈತ ಎಲ್ಲವೂ ದೇಶದೊಳಗೇ ಹುಟ್ಟಿದೆ ಬೆಳೆದಿದೆ ಬೆಳೆಯುತ್ತಲಿದೆ.

ಆದರೆ ಬೆಳೆಸುವವರಿಗೇ ಅದರ ಸತ್ಯಾಸತ್ಯತೆ ತಿಳಿಯದಿದ್ದರೆ ಧರ್ಮರಕ್ಷಣೆ ಸಾಧ್ಯವಿಲ್ಲ. ಕಲಿಯುಗದಲ್ಲಿ ಅಧರ್ಮಕ್ಕೆ ಹೆಚ್ಚಿನ ಸ್ಥಾನಮಾನ ಎಂದರೆ ನಾವು ಸ್ಥಾನಮಾನಕ್ಕಾಗಿ ಅಧರ್ಮವನ್ನ ಹಿಡಿಯಬೇಕು. ಇದರಿಂದ ಮುಕ್ತಿ ಸಿಗುವುದೆ?

- Advertisement -

ಶನಿಮಹಾತ್ಮನಿಗೆ ಧರ್ಮದಿಂದ ಸತ್ಯದಿಂದ ನಡೆಯಬೇಕು. ಧಾರ್ಮಿಕ ಜಗತ್ತಿನಲ್ಲಿ ಪೂರ್ಣಸತ್ಯ ಅಗತ್ಯ. ಪೂರ್ಣಸತ್ಯ ಎಲ್ಲಾ ಧರ್ಮದ ಮೂಲದಲ್ಲಿದೆ. ಅದೇ ಮಾನವ ಧರ್ಮ. ಮಾನವೀಯತೆಯಿಂದ ಸ್ಥಾನದ ಜೊತೆಗೆ ಮಾನವೂ ಉಳಿಯಬಹುದು.ಇದು ಭೂಮಿಯಲ್ಲಿ ಬದುಕಲು ಅಗತ್ಯ.

ಭೂಮಿತಾಯಿ ಭಾರತಾಂಬೆ, ಕನ್ನಡಾಂಬೆ, ಹೆತ್ತತಾಯಿಯ ಋಣ ತೀರಿಸಲು ಧರ್ಮ ಕರ್ಮದಲ್ಲಿ ಸಮಾನತೆ,ಸತ್ಯ ಇರಬೇಕು. ಎಲ್ಲವೂ ನಡೆದಿದೆ. ಸತ್ಯ ತಿಳಿದರೂ ಅದರ ಹಿಂದೆ ನಡೆಯಲು ಸಮಾಜವೇ ಅಡ್ಡವಾಗಿ ನಿಂತಿದೆ. ಸಂಸಾರದೊಳಗೇ ಅಧರ್ಮದ ರಾಜಕೀಯ ವ್ಯವಹಾರ ಎಲ್ಲರನ್ನೂ ಭೋಗ ಜಗತ್ತಿನಲ್ಲಿ ನಡೆಸಿದೆ.

ಆದರೆ,ಕೆಲವರಿಗೆ ಯೋಗವಿದ್ದೂ ಯೋಗಿಗಳಂತೆ ಬದುಕದಿರೋದೆ ಕರ್ಮಫಲ. ಶನಿಮಹಾತ್ಮ ಮನುಷ್ಯನನ್ನು ಮಹಾತ್ಮನಾಗಿಸುತ್ತಾನೆ. ಆದರೆ,ಮಾನವ ಅವನು ಹತ್ತಿರ ಬರದಂತೆ ಅನೇಕ ರೀತಿಯ ದಾನ ಧರ್ಮ ಸತ್ಕರ್ಮದಿಂದ ತಡೆಯಬಹುದು.

ಆದರೆ,ಇದು ಮೋಕ್ಷಕ್ಕೆ,ಜ್ಞಾನಕ್ಕೆ ತಡೆಯಾಗಬಹುದು.ಜೀವಾತ್ಮನನ್ನ ಉಳಿಸಲು ಪರಮಾತ್ಮನ ಸಹಕಾರಪಡೆದು ,ಅಧರ್ಮವನ್ನೇ ಬೆಳೆಸಿದರೆ, ಕಷ್ಟ. ತಪ್ಪಿಸಲು ಪರಮಾತ್ಮನಿರೋಲ್ಲ. ಮಕ್ಕಳ ಕೆಟ್ಟ ಸ್ವಭಾವ ಸರಿಪಡಿಸದೆ, ಅವರಿಗೆ ಎಲ್ಲಾ ರೀತಿಯ ಸುಖ ‌ ಸಂತೋಷ ನೀಡಲು ಸಾಲ ಮಾಡಿ ಬೆಳೆಸಿದರೆ, ಮುಂದೆ ಅವರೇ ಕಷ್ಟಪಟ್ಟು ಸಾಲ ತೀರಿಸಬೇಕು. ಪೋಷಕರು ಮಕ್ಕಳಿಗೆ ಜ್ಞಾನ ಕೊಟ್ಟು ನಡೆದರೆ ಮುಕ್ತಿ. ಸಾಲ ಬಿಟ್ಟು ನಡೆದರೆ ಅಮುಕ್ತಿ.


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group