- Advertisement -
ಸಿಂದಗಿ: ವಿದ್ಯಾರ್ಥಿಗಳು ಕಲುಷಿತ ವಾತಾವರಣದಿಂದ ಹೊರಬಂದು ಸರ್ವಪಲ್ಲಿ ರಾಧಾಕೃಷ್ಣನ್‍ರವರ ತತ್ವಾದರ್ಶಗಳನ್ನು ಪಾಲಿಸಿ, ದೇಶದ ಸತ್ಪ್ರಜೆಗಳಾಗಿ ಬಾಳಬೇಕೆಂದು ಶ್ರೀಮತಿ ಪ್ರೇಮಾ ಭೀ. ಕರ್ಜಗಿ ಕಲಾ ಹಾಗೂ ವಾಣಿಜ್ಯ ಪದವಿ ಕಾಲೇಜಿನ ಪ್ರಾಚಾರ್ಯರಾದ ಜಿ.ಎಸ್. ಕಡಣಿಯವರು ಹೇಳಿದರು.
ಪಟ್ಟಣದ ಹೊರವಲಯದಲ್ಲಿರುವ ಪೀರಪ್ಪ ಸಂಗಪ್ಪ ಕರ್ಜಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಡಾ|| ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆಯ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಆರ್.ಡಿ. ಪಾಟೀಲ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ಉಪನ್ಯಾಸಕರಾದ ಕೆ.ಎಚ್. ಸೋಮಾಪುರ ವಹಿಸಿದ್ದರು.
- Advertisement -
ಕುಮಾರಿ ಲಕ್ಷ್ಮೀ ಬಿರಾದಾರ ಕಾರ್ಯಕ್ರಮ ನಿರೂಪಿಸಿದರು ಹಾಗೂ ಮುಖ್ಯೋಪಾಧ್ಯಾಯ ಶಾಂತು ಕುಂಬಾರ ಅವರು ವಂದಿಸಿದರು. ಶಿಕ್ಷಕಿಯರಾದ ಶಾರದಾ ಗಾಡದ, ಸುರೇಖಾ ದೇಸಾಯಿ, ಕಾಶಿಬಾಯಿ ಟಕ್ಕಳಕಿ, ಪೂಜಾ ಪಾಟೀಲ, ಸವಿತಾ ರಾಠೋಡ, ಅಶ್ವಿನಿ ಅಂಕದ ಅವರು ಉಪಸ್ಥಿತರಿದ್ದರು.