spot_img
spot_img

ಬಣ್ಣದ ಬದುಕಿನ ಚಿನ್ನದ ದಿನಗಳು ಕೃತಿ ಬಿಡುಗಡೆ

Must Read

ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ ,ರಂಗಸಂಪದ ಬೆಳಗಾವಿ ಮತ್ತು ಚಂದ್ರಕಾಂತ ಕುಸನೂರ ಸಾಂಸ್ಕೃತಿಕ ಪ್ರತಿಷ್ಠಾನ ಬೆಳಗಾವಿರವರ ಸಹಯೋಗದೊಂದಿಗೆ ಹಿರಿಯ ರಂಗಕರ್ಮಿ ಏಣಗಿ ಬಾಳಪ್ಪನವರ ಸಂಘ ಅನುಭವಗಳ ಕುರಿತು ಗಣೇಶ ಅಮೀನಗಡ ನಿರೂಪಿಸಿದ ‘ಬಣ್ಣದ ಬದುಕಿನ ಚಿನ್ನದ ದಿನಗಳು’ ಕೃತಿಯ ಎಂಟನೇ ಮುದ್ರಣದ ಬಿಡುಗಡೆ ಸಮಾರಂಭವು ದಿನಾಂಕ ೨೨ ರಂದು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನೆರವೇರಿತು.

ಕೃತಿ ಬಿಡುಗಡೆ ಮಾಡಿ ಮಾತನಾಡಿದ ಡಾ. ಸರಜೂ ಕಾಟ್ಕರ್, ಕೃತಿ ರಚನಕಾರರಾದ ಗಣೇಶ್ ಅಮೀನಗಡ ಅವರು ಒಬ್ಬ ಅದ್ಭುತ ನಾಟಕ ಬರಹಗಾರರು. ಇದೇ ಕೃತಿಯು ೨೦೦೭ ರಲ್ಲಿ ೩ ಆವೃತ್ತಿಯಲ್ಲಿ ಪ್ರಕಟಗೊಂಡಿತ್ತು. ಏಣಗಿ ಬಾಳಪ್ಪನವರ ನಾಟಕ ಅನುಭವಗಳ ಜೊತೆಗೆ ಜೀವನದಲ್ಲಿರುವ ನೋವು ನಲಿವುಗಳ ಮಿಶ್ರಣ ಇಲ್ಲಿದೆ.ಬಾಳಪ್ಪನವರು ಬಸವಣ್ಣನ ಪಾತ್ರದಲ್ಲಿ ಪ್ರಖ್ಯಾತಿಯನ್ನು ಗಳಿಸಿದ್ದರು. ಸ್ವಾತಂತ್ರ್ಯದ ಭಾವನೆಗಳನ್ನು ಮತ್ತು ಕರ್ನಾಟಕ ಏಕೀಕರಣದ ಜಾಗೃತಿಯನ್ನು ಮೂಡಿಸುವ ಉದ್ದೇಶವನ್ನು ಆಗಿನ ನಾಟಕಗಳು ಹೊಂದಿದ್ದವು ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಹೇಮಾವತಿ ಸೋನೊಳ್ಳಿ ಮಾತನಾಡಿ, ತಾವು ಚಿಕ್ಕವರಿರುವಾಗ ಏಣಗಿ ಬಾಳಪ್ಪನವರ ನಾಟಕಗಳನ್ನು ನೋಡಿದ ಅನುಭವಗಳನ್ನು ಹಂಚಿಕೊಂಡರು.ಅಲ್ಲದೆ ಅವರೊಂದಿಗೆ ಮಾತನಾಡಿದ ಕ್ಷಣಗಳನ್ನು ನೆನಪಿಸಿಕೊಂಡರು.

ಅತಿಥಿಗಳಾದ ಆಶಾ ಕಡಪಟ್ಟಿ ಮಾತನಾಡಿ, ಲೇಖಕಿಯರ ಸಂಘದ ಅನೇಕ ಜನ ಮಹಿಳೆಯರು ಏಣಗಿ ಬಾಳಪ್ಪರವರಿಂದ ರಂಗ ಗೀತೆಗಳನ್ನು ಕಲಿತು ಹಾಡು ಹಾಡುವ ಕಲಾವಿದರಾಗಿ ಬೆಳೆದಿದ್ದಾರೆ ಎನ್ನಲು ಆನಂದವೆನಿಸುತ್ತದೆ ಎಂದರು.ಅಂದಿನ ಕಾಲದಲ್ಲಿ ಚಲನಚಿತ್ರಗಳನ್ನು ನೋಡದೆ ಕೇವಲ ನಾಟಕಗಳನ್ನು ಮಾತ್ರ ನಾನು ನೋಡುತ್ತಿದ್ದೆ ಎಂದು ನೆನಪಿಸಿಕೊಂಡರು.

ಕೃತಿ ರಚನಕಾರರಾದ ಗಣೇಶ್ ಅಮೀನಗಡ ಮಾತನಾಡಿ, ಬಾಳಪ್ಪ ನವರೊಂದಿಗೆ ಒಡನಾಟವನ್ನು ಹೇಳುತ್ತಾ ಬೆಳಗಾವಿಯ ಎಲ್ಲ ಹಿರಿಯ ಸಾಹಿತಿಗಳ ಸಂಬಂಧಗಳ ಬಗ್ಗೆ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲೆಯ ಹಿರಿಯ ಸಾಹಿತಿ ಬಿ ಎಸ್ ಗವಿಮಠ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕನ್ನಡ ರಂಗಭೂಮಿಯ ಇತಿಹಾಸ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥದ್ದು. ಆಗಿನ ಕಾಲದಲ್ಲಿ ಬೆಳಗಾವಿಯಲ್ಲಿರುವ ಶಿವಾನಂದ ರಂಗಮಂದಿರದಲ್ಲಿ ನಾಟಕ ನೋಡಿದ ಸುಖಾನುಭವದ ಮಾತುಗಳನ್ನು ವಿವರಿಸಿದರು. ಇಂಥ ಅದ್ಭುತ ಕಲಾವಿದನನ್ನು ಪಡೆದ ನಮ್ಮ ಜಿಲ್ಲೆ ಅತ್ಯಂತ ಶ್ರೇಷ್ಠವಾದದ್ದು. ಅಮೋಘ ನಟನಾ ಸಾಮರ್ಥ್ಯವನ್ನು ಹೊಂದಿದ್ದ ದಿ. ಬಾಳಪ್ಪನವರಿಗೆ ನಮ್ಮ ರಾಜ್ಯ ಸರ್ಕಾರದಿಂದ ಇನ್ನೂ ಅನೇಕ ಪ್ರಶಸ್ತಿಗಳು ಬರಬೇಕಾಗಿತ್ತು. ಸರಕಾರ ಇಂತಹ ಕಲಾವಿದರ ಬಗ್ಗೆ ಗಮನಹರಿಸಬೇಕು.ಆಡಳಿತಗಾರರಾಗಿ ಸಾಹಿತಿಗಳಾಗುವುದು ಬಹಳ ಕಷ್ಟಕರ ಅಂತಹದರಲ್ಲಿ ಗಣೇಶ ಅಮೀನಗಡ ಒಬ್ಬ ಪತ್ರಕರ್ತನಾಗಿ ಕೃತಿ ರಚನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಡಾ.ಬಸವರಾಜ ಜಗಜಂಪಿ, ಡಾ ಹೆಚ್. ಬಿ. ಕೋಲಕಾರ, ಡಾ. ಹೆಚ್. ಬಿ. ರಾಜಶೇಖರ, ಪ್ರೊ. ಎಸ್. ಎಂ. ಗಂಗಾಧರಯ್ಯ,ಎಸ್. ಎಸ್. ಅಂಗಡಿ, ಗುರುದೇವಿ ಹುಲೆಪ್ಪನವರಮಠ, ಸುನಂದಾ ಎಮ್ಮಿ, ಪಾರ್ವತಿ ಪಿಟಗಿ, ಜಯಶ್ರೀ ನಿರಾಕಾರಿ,ಉಮಾ ಅಂಗಡಿ,ಜ್ಯೋತಿ ಮಾಳಿ,ಅನ್ನಪೂರ್ಣ ಹಿರೇಮಠ,ಆರ್. ಬಿ. ಕಟ್ಟಿ, ಪ್ರಕಾಶ ಗಿರಮಲ್ಲನವರ, ,ಶ್ರೀರಂಗ ಜೋಶಿ, ಎಂ. ವೈ. ಮೆಣಸಿನಕಾಯಿ, ವೀರಭದ್ರ ಅಂಗಡಿ, ಪತ್ರಕರ್ತರಾದ ಮುರುಗೇಶ ಶಿವಪೂಜಿ, ರಮೇಶ ಮಗದುಮ,ಶಿವಾನಂದ ತಲ್ಲೂರ ಸೇರಿದಂತೆ ಲೇಖಕಿಯರ ಸಂಘದ ಸದಸ್ಯರು, ಸಾಹಿತಿಗಳು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ನೈನಾ ಗಿರಿಗೌಡರ ರಂಗಗೀತೆ ಮೂಲಕ ಪ್ರಾರ್ಥಿಸಿದರು. ಹಮೀದಾಬೇಗಂ ದೇಸಾಯಿ ಸ್ವಾಗತಿಸಿದರು. ಬಸವರಾಜ ಗಾರ್ಗಿ ಕಾರ್ಯಕ್ರಮ ನಿರೂಪಿಸಿದರು. ಸುನಿತಾ ದೇಸಾಯಿ ವಂದಿಸಿದರು.

- Advertisement -
- Advertisement -

Latest News

ಶಿಕ್ಷಕರ ಸೇವಾ ಪುಸ್ತಕ ಸರಿಪಡಿಸಲು “ಗುರುಸ್ಪಂದನ” ಕಾರ್ಯಕ್ರಮ ಆಯೋಜಿಸಿ; ಭೂಸನೂರ

ಸಿಂದಗಿ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಪುಸ್ತಕಗಳು  ಅಪೂರ್ಣವಾಗಿರುವ ಸೇವಾ ವಿವರ ಹಾಗೂ ಮಾಹಿತಿಯನ್ನು ಪೂರ್ಣಗೊಳಿಸಲು "ಗುರುಸ್ಪಂದನ" ಕಾರ್ಯಕ್ರಮವನ್ನು  ಆಯೋಜಿಸುವ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ...
- Advertisement -

More Articles Like This

- Advertisement -
close
error: Content is protected !!