spot_img
spot_img

ಮಹಾನ್‌ಯೋಗಿ, ತತ್ವಜ್ಞಾನಿ ವೇಮನರು

Must Read

- Advertisement -

ಭರತ ಖಂಡದಲ್ಲಿ ಅನೇಕ ಮಹಾನ್ ವ್ಯಕ್ತಿಗಳು, ಪುರುಷರು, ಶರಣ ಶರಣೆಯರು ಸಾಧು ಸತ್ಪ್ಪುರುಷರು, ಸಂತರು ತಮ್ಮ ಕೆಲಸ ಕಾರ್ಯಗಳಿಂದ, ತಪೋನಿಷ್ಠೆಯಿಂದ ಉಲ್ಲೇಖಿಸಿದ ಉಪದೇಶಗಳು, ಸಾರಿದ ತತ್ವಗಳು ಬರೆದ ಅನೇಕ ಪದ್ಯಗಳಿಂದ, ಈ ಭೂಮಿಯನ್ನು ತಪೋಭೂಮಿಯನ್ನಾಗಿ, ಪುಣ್ಯ ಭೂಮಿಯನ್ನಾಗಿ, ಆಧ್ಯಾತ್ಮರ ನೆಲೆನ್ನಾಗಿ ಭಾರತ ನಾಡನ್ನು ಜಗತ್ತಿನ ಭೂಪಟದಲ್ಲಿ ಗುರುತಿಸುವಂತೆ ಮಾಡಿದ ಅನೇಕ ಮಹಾತ್ಮರು ಜನಿಸಿ, ಬಾಳಿ ಬದುಕಿ, ಇತಿಹಾಸ ಪುಟವನ್ನು ಸೆರಿದ್ದಾರೆ. ಸರ್ವಜ್ಞ, ಬಸವ, ಬುದ್ಧ, ಸಂತ ಶಿಶುನಾಳ ಷರೀಫ, ಜ್ಞಾನೋಬ ಅಂಥ ವ್ಯಕ್ತಿಗಳಲ್ಲಿ ಒಬ್ಬರಾದ ಆಂದ್ರ ಮೂಲದ ವೇಮನ್ ಯೋಗಿ. ರಡ್ಡಿ ವಂಶದಲ್ಲಿ ಜನಿಸಿದರೆಂದ ಮಾತ್ರಕ್ಕೆ ಅವರನ್ನು ಕೇವಲ ಆ ಒಂದೇ ಜಾತಿಗೆ ನೀಮಿತಪಡಿಸಲಾಗದು. ಏಕೆಂದರೆ, ಜಾತಿ, ಮತ ಪಂಥ ಮೀರಿ ನಿಂತ ಈ ಮಹಾನ್ ಯೋಗಿ ಮೇಮನ್ ಒಬ್ಬ ಶ್ರೇಷ್ಠ ಕವಿ. ಮೆಲ್ಮಟ್ಟದ ದಾರ್ಶನಿಕ. ಮರ್ಣಣಿನಲ್ಲಿ ಹುಟ್ಟಿ ಮಹೊನ್ನತ ಶಿಖರವನ್ನು ಮುಟ್ಟಿದ ಮಾನವತಾ ಮೂರ್ತಿ. ಈ ಮಹಾನ್ ವ್ಯಕ್ತಿಯ ಸ್ಮರಣಿಕೆಗಾಗಿ ಇದೇ ೧೯ ರಂದು ಸಾರ್ವತ್ರಿಕವಾಗಿ ಮೇಮನ್ ಯೋಗಿ ಜನ್ಮದಿನ ಆಚರಿಸಲಾಗಿತ್ತಿದೆ.

ಈ ಮಹಾನ್ ವ್ಯಕ್ತಿಯ ಹುಟ್ಟಿನ ಬಗ್ಗೆ ನಿಖರವಾದ ಮಾಹಿತಿ ಸಿಗದಿದ್ದರೂ ಕೆಲವು ಆಧಾರದ ಮುಖಾಂತರ ಈಗ್ಗೆ ಸುಮಾರು ೬೦೦ ವರ್ಷಗಳ ಹಿಂದೆ ವೇಮನ್ ಬಾಳಿ ಬದುಕಿರಬಹುದೆಂದೂ ಜನೇವರಿ ೧೯ನೆಯ ತಾರೀಖಿನಲ್ಲಿ ಅವರು ಜನಿಸಿದರೆಂದು ಕೆಳಗಿನ ಅವರ ಪದ್ಯದಿಂದ ವೇದ್ಯವಾಗುತ್ತದೆ.

“ನಂದನ ಸಂವತ್ಸರಮುನ
ಬೊಂದುಗ ಕಾರ್ತಿಕ ಶುದ್ದ ಪುನ್ನಮನಾಡಿ
ವಿಂದ್ಯಾಂದ್ರಿ ಸೇತು ಬಂಧನ
ಸಂದುನ ನೊಕವೀರುಡೇಲು ಚಾಟರ ವೇಮಾ”

- Advertisement -

ವೇಮನ್ ಹುಟ್ಟು ಕವಿ, ಸಹಜವಾಗಿ ಪದ್ಯಗಳನ್ನು ಕಟ್ಟಿದ ಅವರು ನುಡಿದಿದ್ದೆಲ್ಲಾ ಕಾವ್ಯವೇ. ಅವರ ಪದ್ಯಗಳನ್ನೋ ಪದ್ಯಭಾಗಗಳನ್ನೋ ಗಾದೆಗಳಂತೆ ಬಳಸದ ಆಂದ್ರರೇ ಇಲ್ಲ ಎಂದರೆ ಅತಿಶೋಕ್ತಿಯಾಗಲಾರದು.

ಬುದ್ಧ ಬಸವರಂತೆ ಉಪದೇಶಿಸಿದ ಇವರ ಕವಿತೆಗಳು, ಅಭಿಪ್ರಾಯಗಳು, ಅವರಿಂದ ಭಿನ್ನ ಆಗಿಲ್ಲ. ಬುದ್ಧ ಬಸವ ಹೇಳಿದ್ದನ್ನೇ ಹೇಳಿದ್ದು, ಮೂಢನಂಬಿಕೆ, ದುರಾಭಿಮಾನ ಅನಾಚಾರ, ಬಹಿರಾಡಂಬರಗಳನ್ನು ಖಂಡಿಸಿದರು.

“ಆತ್ಮಶುದ್ದೀಯಿಲ್ಲದಾಚಾರ ವೇತಕೆ?
ಭಾಂಡ ಶುದ್ದಿಯಿಲ್ಲದಡಿಗೆಯೇತಕೆ?
ಚಿತ್ತ ಶುದ್ಧಿಯಿಲ್ಲದ ಶಿವಪೂಜೆ ಏತಕೆ?
ವಿಶ್ವದಾಭಿರಾಮ ಕೇಳುವೇಮಾಟ”

- Advertisement -

ನೈಜವಾದ ಭಕ್ತಿಯಿಲ್ಲದೆ ಡಾಂಭಿಕವಾಗಿ ಪೂಜಾ ವಿಧಿಗಳನ್ನು ಆಚರಿಸುವದರಿಂದ ಶಿವನ ಕೃಪೆ ದೊರೆಯುವದಿಲ್ಲಾ. ಅಶುದ್ದವಾದ ಮಡಿಕೆಯಲ್ಲಿ ಮಾಡಿದ ಅಡುಗೆಯ ಪ್ರಯೋಜನ ಅತ್ಯಲ್ಪ. ಶಿವಪೂಜೆಗೆ ಚಿತ್ತಶುದ್ಧಿ ಅತ್ಯಕವೆಂದು ಹೇಳಿದೆ.

ವೇಮನ ಕಾಲದಲ್ಲಿ ಜಾತಿ ಮತಗಳಲ್ಲಿ ಅಂತಃಕಲಹಗಳಾಗುತ್ತಿದ್ದವು. ಅವುಗಳ ದಾಂದಲೆ ವೇಳೆ ಅನೇಕ ವೇಳೆ ವಿಕೋಪಕ್ಕೆ ಏರುತ್ತಿತ್ತು. ಸಮದರ್ಶಿಯಾದ ವೇಮನನಿಗೆ ಅವುಗಳ ಮೇಲು ಕೀಳು ಕಲ್ಪನೆಗಳು ಅವುಗಳ ಆಚರಣೆ ಜಿಗುಪ್ಸೆ ಉಂಟು ಮಾಡಿತು. ಜಾತಿ ಮತಗಳು ಮಾನವ ನೀರ್ಮಿತವೇ. ಅವು ಹುಟ್ಟಿನಿಂದಾ ದೇಹಕ್ಕೆ ಅಂಟಿಕೊಂಡು ಬಂದವುಗಳಲ್ಲವೆಂದು ಹೇಳುತ್ತಾ

“ರಾಮನಾಮ ಪರನಜೆ ವಾಲ್ಮೀಕಿ
ಪರಗ ಬೋರಯುಡಯ್ಯ ಬಾಪಡೆಯ್ಯೆ
ಕುಲಮು ಘನಮುಗಾರದು ಗುಣಮು ಘನಂಬುರಾ
ವಿಶ್ವದಭಿರಾಮ ವಿನುರ ಮೇವು”

ಎಲ್ಲ ಮಾನವರ ರಕ್ತ ಮಾಂಸಗಳು, ಏಕರೂಪದಲ್ಲಿ ಇರುವಾಗ ಹೊಲೆಯನೆಂದೇಕೆ ಅವರನ್ನು ಪ್ರತ್ಯೇಕಿಸಿ ನಿಂದಿಸಬೇಕು? ಕುಲದಿಂದ ಆಗಬೇಕಾದುದಾದರೂ ಏನು? ಹೃದಯಾಂತರ್ಗಾಮಿಯಾದ ಪರಬ್ರಹ್ಮನ ಕುಲವಾದರೂ ಯಾವುದು? ಎಂದು ಪ್ರಶ್ನಿಸುತ್ತಾ ವೇಮನ ಮಾನವತಾವಾದವನ್ನು ಹೀಗೆ ವ್ಯಾಖ್ಯಾನಿಸಿದ್ದಾರೆ.

“ಮೂಲಮಡೈನನು ಮಾರಿಯತ್ಮ ಮೀಡನೆ
ಮನಸು ನಿಲಿಪೆ ನೆನಿ ಮೊಲಗಾಡು
ಮನಸು ನಿಲುಪುಕುನ್ನ ಮಹಿಮೀದಮಲಡಾ
ವಿಶ್ವದಾಭಿಮಾರಾಮ ವಿನುರ ವೇಮ.”

ಹೀಗೆ ಜಾತಿ ಮತಾಂಧರನ್ನು ಖಂಡಿಸುತ್ತಾ, ಮೂಢನಂಬಿಕೆಗಳನ್ನು ವಿಗ್ರಹಾರಾಧನೆಯನ್ನು ಖಂಡಿಸುವದರಲ್ಲಿ ವೇಮನ ಕಬೀರರು ಒಂದೇ. ನಾವು ಆರಾಧಿಸಬೇಕಾಗಿರುವದು ಪ್ರಾಣರಹಿತವಾದ ಕಲ್ಪವನ್ನಲ್ಲ. ಪ್ರಾಣ ಸಹಿತವಾದ ಎಲ್ಲ ಚೈತನ್ಯ ವಸ್ತುಗಳನ್ನು ಎಂದು ವೇಮನ ಹೇಳಿದ್ದಾರೆ.

ದಾನವನ್ನು ಮಾಡದೇ, ನೀರಿನಲ್ಲಿ ಮುಳುಗಿ ಸ್ನಾನವನ್ನು ಮಾಡುವದರಿಂದ ಸ್ವಲ್ಪವೂ ಫಲವಿಲ್ಲ. ನೀರು ಕೋಳಿ ಯಾವಾಗಲೂ ನೀರಿನಲ್ಲಿ ಮುಳುಗುತ್ತಾ ಇರುವುದಲ್ಲವೇ? ಇದರ ಸ್ನಾನದ ಫಲವಾದರೂ ಎನು? ಜೀವನ ಮತ್ತು ಅದರ ಸಮಸ್ಯೆಗಳ ಬಗ್ಗೆ ವೇಮನ ಮತ್ತು ಕಬೀರರು ಹಿಡಿದಮಾರ್ಗ, ಬೋಧಿಸಿದ ಸತ್ಯ ಒಂದೇ.

ಕವಿಯಾಗಿ, ಯೋಗಿಯಾಗಿ, ದಾರ್ಶನಿಕವಾಗಿ ವೇಮನ ಪ್ರಖ್ಯಾತ ಪುರುಷನಾದ. ಎಲ್ಲ ದೇಶಗಳಿಗೂ ಎಲ್ಲಕಾಲಕ್ಕೂ ಎಲ್ಲ ಜನರಿಗೂ ಅವನೊಂದು ವಿಶ್ವವ್ಯಾಪಿ ಸಂದೇಶವನ್ನು ಕೊಟ್ಟಿದ್ದಾನೆ. ಈಗಿನ ಸಂದಿಗ್ದ ಕಾಲದಲ್ಲಿ ಅವನ ಸಂದೇಶದ ಅವಶ್ಯಕತೆ ಬಹಳ ಹೆಚ್ಚಾಗಿದೆ. ಮಾನವ ಮಾನವನಂತೆ ಬದುಕಿದರೆ, ಭೂಲೋಕ ಸ್ವರ್ಗವಾಗುವುದು. ನಮಗೆ ಕಾಣದ ಪುರಾಣಗಳಿಂದ ತಿಳಿದು ಬರುವ ಸ್ವರ್ಗವನ್ನು ಹುಡುಕುತ್ತಾ ನಾವು ವಾಸಿಸುತ್ತಿರುವ ಭೂಲೋಕವನ್ನು  ಮರೆಯುವದು ಮೂರ್ಖತನ ಎಂದು ಹೇಳಿದ ಸಂದೇಶ, ಪ್ರೀತಿಯ ಸಂದೇಶ, ಪ್ರೀತಿಯ ಭಾವ, ಗೆಳೆತನ, ಹೊಂದಾಣಿಕೆ ಇವನ್ನು ಮಾನವರಲ್ಲಿ ಬೆಳೆಸಬೇಕು. ಒಡನಾಡಿಗಳ ಸುಖ ದುಃಖಗಳು ತನ್ನದೆಂದು ಭಾವಿಸುವಂತೆ ಮಾಡಿ ಅವರನ್ನು ನಿಜವಾದ ಮಾನವರನ್ನಾಗಿಸಬೇಕು. ಮಾನವರಲ್ಲಿ ಎಲ್ಲಾ ಸದ್ಗುಣ ಬೆಳೆಸಲು ಪ್ರಯತ್ನಿಸಿ ವಿಶ್ವ ಭ್ರಾತೃತ್ವವು ನೆಲೆಗೊಳ್ಳುವಂತೆ ಮಾಡಬೇಕು. ಇದುವೇ ವೇಮನನ ಸಂದೇಶ.

ಹೀಗೆ ಜಗತ್ತನ್ನು  ಸುಧಾರಿಸಲು ಜನ್ಮಿಸಿ ಆ ಕಾರ್ಯವನ್ನು ದಿಟ್ಟತನದಿಂದ ಮಾಡಿ, ಪರಂಧಾಮವನ್ನು ಗಳಿಸಿದ ಪರಂಜ್ಯೋತಿಯೇ ವೇಮನ್ ಈ ಮಹಾಚೇತನದ ಜನ್ಮದಿನೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಆ ಮಹಾ ಚೈತನ್ಯಕ್ಕೆ ಶರಣು


ಎ.ವ್ಹಿ.ಗಿರೆಣ್ಣವರ.
ಪ್ರಧಾನ ಗುರುಗಳು
ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ತುಕ್ಕಾನಟ್ಟಿ.
ತಾ: ಮೂಡಲಗಿ ಜಿ: ಬೆಳಗಾವಿ

- Advertisement -
- Advertisement -

Latest News

ಸ್ವಾಮಿ ವಿವೇಕಾನಂದರ ಬೆಳಗಾವಿ ಭೇಟಿಯ ಸ್ಮಾರಕ ಭವನ

ಬೆಳಗಾವಿ- ಭಾರತದ ಶೂರ ಸನ್ಯಾಸಿ ಸ್ವಾಮಿ ವಿವೇಕಾನಂದ ಅವರು ಸನ್ ೧೮೯೨ ರಲ್ಲಿ ಕರ್ನಾಟಕದ ಬೆಳಗಾವಿಗೆ ಭೇಟಿ ಕೊಟ್ಟು ಅಕ್ಟೋಬರ್ ೧೬ ರಿಂದ ೨೭ ರ...
- Advertisement -

More Articles Like This

- Advertisement -
close
error: Content is protected !!
Join WhatsApp Group