ಸಿಂದಗಿ: ಯೋಗ ಭಾರತೀಯ ಪ್ರಾಚೀನ ಪರಪಂರೆಯ ಶ್ರೇಷ್ಠವಾದ ಕೊಡುಗೆಯಾಗಿದೆ. ಯೋಗದಿಂದ ಮನಸ್ಸು. ಶರೀರ. ಸಂಯಮ. ಆಲೋಚನೆ. ಹಾಗೂ ಸಾರ್ಥಕತೆ. ಮಾನವ ಹಾಗೂ ನಿಸರ್ಗದ ನಡುವೆ ಸಾಮರಸ್ಯ ಮತ್ತು ಆರೋಗ್ಯ ಹಾಗೂ ಯೋಗಕ್ಷೇಮದ ಕಡೆ ಸಮಗ್ರ ದೃಷ್ಟಿಕೋನಗಳನ್ನು ಒಳಗೊಂಡಿದೆ ಎಂದು ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ (ಮಾಗಣಗೇರಿ) ಹೇಳಿದರು.
ಪಟ್ಟಣದ ಬಸವ ಮಂಟಪದಲ್ಲಿ 8ನೇ ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಇಂದಿನ ದಿನಗಳಲ್ಲಿ ನಾವುಗಳು ಒಳ್ಳೆಯ ಆಹಾರದ ಜೊತೆಗೆ ನಮ್ಮ ಶರೀರಕ್ಕೆ ಯಾವದೇ ಕಾಯಿಲೆಗಳು ಆವರಿಸಿಕೊಳ್ಳದಂತೆ ಪ್ರತಿನಿತ್ಯ ಯೋಗದ ಅಭ್ಯಾಸವನ್ನು ಮಾಡುವದು ಬಹಳ ಮುಖ್ಯವಾಗಿದೆ. ಎಂದರು.
ಡಾ. ಪ್ರಶಾಂತ ಬಮ್ಮಣ್ಣಿ ಮಾತನಾಡಿ, ಇಂದು ಕಲುಷಿತ ಆಹಾರ ಮತ್ತು ಕಲ್ಮಶ ವಾತಾವರಣದಿಂದ ಹೆಸರೇ ಗೊತ್ತಿಲ್ಲದ ಅನೇಕ ಕಾಯಿಲೆಗಳು ಹುಟ್ಟಿಕೊಳ್ಳುತ್ತಿವೆ ಆದ್ದರಿಂದ ನಾವುಗಳು ಅಂತಹ ಕಾಯಿಲೆಗಳನ್ನು ದೂರ ತಳ್ಳಲು ಪ್ರತಿ ನಿತ್ಯ ನಡಿಗೆಯ ಜೊತೆ ಯೋಗ ಮಾಡುವುದು ಬಹಳ ಮುಖ್ಯವಾಗಿದೆ ಎಂದರು.
ಬಿಜೆಪಿಯ ಮಂಡಲ ಅಧ್ಯಕ್ಷ ಈರಣ್ಣ ರಾವುರ ಮತ್ತು ಬಸವದಳದ ಕಾರ್ಯಕರ್ತರು. ಬಸವರಾಜ ಕಲಬುರ್ಗಿ, ಗುರು ತಾರಾಪುರ, ರವಿಗೌಡ ಬಿರಾದಾರ. ರಾಜಶೇಖರ ಪುಜಾರಿ, ಗುರು ತಳವಾರ, ಸುರೇಶ ಮಳಲಿ,ರಾಜು ಗೌಂಡಿ,ಬಸು ಸಜ್ಜನ, ಎಮ್.ಎಸ್.ಮಠ, ಶ್ರೀಕಾಂತ ಚನಗೊಂಡ, ಶಾಮಾಲಾ ಮಂದೆವಾಲಿ ಸೇರಿದಂತೆ ನೂರಾರು ಜನ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಗಣಿತಜ್ಞ ಎಚ್.ಟಿ. ಕುಲಕರ್ಣಿ ಗುರುಗಳಿಗೆ ಹಾಗೂ ಬಸವ ಮಂಟಪದ ಶ್ರೀಗಳಿಗೆ ಸನ್ಮಾನಿಸಿದರು.
ಕೊನೆಯಲ್ಲಿ ಮನೆಗೊಂದು ಮರ ಊರಿಗೊಂದು ವನ ಎಂಬಂತೆ ಪ್ರತಿಯೊಬ್ಬರಿಗೆ ಸಸಿಗಳನ್ನು ವಿತರಿಸಲಾಯಿತು.