- Advertisement -
ಬೀದರ ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಮಹಿಳೆಯೊಬ್ಬಳನ್ನು ದುಷ್ಕರ್ಮಿಗಳು ವೈರ್ ಬಿಗಿದು ಕೊಲೆ ಮಾಡಿ ಶವವನ್ನು ಅರ್ಧಂಬರ್ಧ ಸುಟ್ಟು ಹೊಲದಲ್ಲಿ ಬಿಟ್ಟು ಹೋಗಿರುವ ಆಘಾತಕಾರಿ ಘಟನೆ ವರದಿಯಾಗಿದೆ.
ಸುಮಾರು 38 ವರ್ಷದ ಮಹಿಳೆ ಭೀಕರವಾಗಿ ಕೊಲೆಯಾದ ದುರ್ದೈವಿ ಇವಳನ್ನು ತೆಲಂಗಾಣ ರಾಜ್ಯದ ಮೊಗಾ ಮದನೂರು ಗ್ರಾಮದಿಂದ ಕರೆದುಕೊಂಡು ಬಂದು ಬೀದರ್ ತಾಲೂಕಿನ ಮಂದಕನಳ್ಳಿ ಗ್ರಾಮದ ಕಬ್ಬಿನ ಹೊಲದಲ್ಲಿ ಕೊಲೆ ಮಾಡಿ ಸುಟ್ಟುಹಾಕಲಾಗಿದೆ.
- Advertisement -
ಅನೈತಿಕ ಸಂಬಂಧ ಹಾಗೂ ಮೃತಳಿಗೆ ಆರೋಪಿ ಹಣ ನೀಡದ ಕಾರಣ ವೈಮನಸ್ಸಿನಿಂದ ಕೊಲೆಗೆ ಸ್ಕೆಚ್ ಹಾಕಿ ತೆಲಂಗಾಣದಿಂದ ಬೀದರ್ ಗೆ ಕರೆದುಕೊಂಡು ಬಂದು ಕೊಲೆ ಮಾಡಿರುವ ಮೂರು ಜನ ಆರೋಪಿಗಳ ಪೈಕಿ ಇಬ್ಬರು ಆರೋಪಿಗಳು ಬಂಧಿಸಲಾಗಿದೆ, ಓರ್ವ ಆರೋಪಿ ಪರಾರಿಯಾಗಿದ್ದಾನೆಂದು ಜಿಲ್ಲಾ ಎಸ್ಪಿ ಚೆನ್ನಬಸವಣ್ಣ ಲಂಗೋಟಿ ಮಾಹಿತಿ ನೀಡಿದರು.
ಈ ಕುರಿತು ಬಗದಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ನಂದಕುಮಾರ ಕರಂಜೆ, ಬೀದರ