spot_img
spot_img

ಗುರುಗಳು ವಿಶ್ವದ ಶಾಂತಿ ಕಾಪಾಡುವ ದೇವರುಗಳು

Must Read

- Advertisement -

ಓಂ ಶ್ರೀ ಗುರುಬ್ಯೋ ನಮ: ವ್ಯಾಸಪೂರ್ಣಿಮೆ, ಗುರುಪೂರ್ಣಿಮೆ ಭಾರತೀಯರಿಗೆ ಪವಿತ್ರವಾದ ದಿನವಾಗಿದೆ. ವೇದಗಳನ್ನು ವಿಂಗಡಣೆ ಮಾಡಿ ಮನುಕುಲಕ್ಕೆ ಸುಗಮವಾದ ದಾರಿ ತೋರಿಸಿದ ಮಹರ್ಷಿ ವೇದವ್ಯಾಸರನ್ನು ಎಲ್ಲಾ ಗುರುವೃಂದ ಪೂಜಿಸುವ ವಿಶೇಷವಾದ ಆಚರಣೆಗಳಿಂದ ತಮ್ಮ ಸಾತ್ವಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಇದು ಸುಸಮಯ.

ಗುರುಗಳಾದವರು ಚಾತುರ್ಮಾಸ ವ್ರತದಿಂದ ಒಂದೆಡೆ ನೆಲೆಸಿ, ಭಕ್ತರಿಗೆ, ಶಿಷ್ಯರಿಗೆ ಆಶೀರ್ವದಿಸುತ್ತಾ ಧಾರ್ಮಿಕ ಕಾರ್ಯನಡೆಸುವ ಕಾರಣ ಭೂಮಿಯ ಸಾತ್ವಿಕ ಶಕ್ತಿ ಹೆಚ್ಚುವುದರಿಂದ ಭಾರತೀಯರಿಗೆ ಬಂದಿರುವ ಸಕಲ ಸಮಸ್ಯೆ, ಸಂಕಟ, ರೋಗಗಳಿಂದ ಬಿಡುಗಡೆ ಸಿಗಲೆಂದು ಆ ಮಹಾಗುರುಗಳನ್ನು ಪ್ರಾರ್ಥಿಸೋಣ. ಗುರು ಎಂದರೆ ಜ್ಞಾನವನ್ನು ನೀಡುವವರು.

ಗು- ಅಂಧಕಾರ ರು- ಬೆಳಕು ಕತ್ತಲಿನಿಂದ ಬೆಳಕಿನೆಡೆಗೆ ನಡೆಸುವವರೆ ಗುರು. ಗು- ಅಂಧಕಾರ ರು- ನಾಶಪಡಿಸುವವನು ಎಂದೂ ಆಗುತ್ತದೆ. ಅಧ್ಯಾತ್ಮ ಗುರುಪರಂಪರೆ ಧಾರ್ಮಿಕ ಸತ್ಯವನ್ನು ಶಿಷ್ಯರಿಗೆ ಶಿಕ್ಷಣ ನೀಡುವುದರ ಮೂಲಕ ಕತ್ತಲೆಯೆಂಬ ಅಜ್ಞಾನವನ್ನು ಹೋಗಲಾಡಿಸಿ ಜ್ಞಾನವೆಂಬ ಬೆಳಕಿನೆಡೆಗೆ ನಡೆಸುವುದರಿಂದ ಜೀವನ್ಮುಕ್ತಿ ಸಿಗುವುದು.

- Advertisement -

ಭೂಮಿ ಮೇಲೆ ಬಂದಿರುವ ಮಾನವನಿಗೆ ತನ್ನ ಜೀವನದ ಗುರಿ ಯಾವುದೆನ್ನುವುದರ ಅರಿವಿಲ್ಲದಿದ್ದರೆ ವ್ಯರ್ಥ. ಹೀಗಾಗಿ ಗುರುವೇ ದೈವ ಎಂದಿರೋದು. ನಿಜವಾದ ಗುರು ಜೀವಕ್ಕೆ ಸರಿಯಾದ ದಾರಿ ತೋರಿಸಿ ಗುರಿ ತಲುಪಲು ಸಹಕರಿಸುತ್ತಾರೆ. ಅಧ್ಯಾತ್ಮ ಗುರು ಬೇರೆ ಭೌತಿಕ ಗುರು ಬೇರೆ ಎನ್ನುವಾಗಲೆ ದ್ವಂದ್ವವಿದ್ದರೆ ಗುರಿ ತಲುಪುವಾಗ ಎಷ್ಟೋ ಕಷ್ಟ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ.

ಹೀಗಾಗಿ ಸದ್ಗುರುವಿನ‌ ಮಾರ್ಗದರ್ಶನವಿದ್ದರೆ ಸುಖವಾಗಿ ಗುರಿ ತಲುಪಬಹುದು. ಹಿಂದಿನ ಶಿಕ್ಷಣ ಪದ್ದತಿಯು ಗುರುಕುಲದಲ್ಲಿ ನಡೆಸಲಾಗುತ್ತಿತ್ತು. ಅಂದು ಶಿಷ್ಯರ ಆಂತರಿಕ ಶಕ್ತಿಯನ್ನು ಗುರುವಾದವರು ಮೊದಲೇ ತಿಳಿದು ಅದಕ್ಕೆ ತಕ್ಕಂತೆ ಶಿಕ್ಷಣ ನೀಡಿ ಸ್ವಾವಲಂಬನೆ ಕಡೆಗೆ ಜೀವ ನಡೆದು ಸ್ವಾಭಿಮಾನ, ಸ್ವಾತಂತ್ರ್ಯ, ಸತ್ಯ ಧರ್ಮದ ಹಾದಿಯಲ್ಲಿ ನಡೆಯುತ್ತಾ ಜೀವನ್ಮುಕ್ತಿ ಪಡೆದವರನ್ನು ನಾವೀಗ ಮಹಾತ್ಮರೆಂದು ಪೂಜಿಸಲಾಗುತ್ತದೆ.

ಆದರೆ, ಕಲಿಪ್ರಭಾವದಿಂದಾಗಿ ಅಜ್ಞಾನ ಹೆಚ್ಚಾದಂತೆ ಬೌತಿಕ ಜಗತ್ತು ಮುಂದೆ ನಡೆಯುತ್ತಾ ಧಾರ್ಮಿಕ ಕ್ಷೇತ್ರದಲ್ಲಿಯೂಬದಲಾವಣೆ ಆಗಿದೆ. ಕೆಲವೆಡೆ ಉತ್ತಮವಾಗಿದ್ದರೂಭಾರತದಂತಹ ದೇಶದಲ್ಲಿ ಅಧರ್ಮ ಬೆಳೆದಿರೋದಕ್ಕೆಕಾರಣವೆ ಆಧ್ಯಾತ್ಮದ ಕೊರತೆ. ಆಧ್ಯಾತ್ಮದ ವಿಚಾರವನ್ನು ಬಿಟ್ಟು ನೇರವಾಗಿ ಭೌತಿಕಾಸಕ್ತಿ ಬೆಳೆಸುವ ಶಿಕ್ಷಣದಿಂದ ಮನುಕುಲಕ್ಕೆ ರೋಗ ಹೆಚ್ಚಾಗಿದೆ ಇದಕ್ಕೆ ಪ್ರಕೃತಿವಿಕೋಪಗಳು ಹೆಚ್ಚಾಗುತ್ತಿದೆ.

- Advertisement -

ಆದರೆ ನಮ್ಮ ಆಚರಣೆಗಳಲ್ಲಿ ಸತ್ಯ ಸತ್ವ ಹೆಚ್ಚಾದರೆ ಸಮಸ್ಯೆಗಳಿಗೆ ಪರಿಹಾರವಿರುತ್ತದೆ. ತಾಯಿಯೇ ಮೊದಲ ಗುರು. ಆ ತಾಯಿಗೆ ಜ್ಞಾನದ ಶಿಕ್ಷಣ ನೀಡುವುದರಿಂದ ಬದಲಾವಣೆ ಸಾಧ್ಯವಿದೆ. ಮಕ್ಕಳ ಭವಿಷ್ಯ ಅವರವರ ಮೂಲ ಧರ್ಮ ಕರ್ಮದಲ್ಲಿದೆ. ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ.

ಇಲ್ಲಿ ಗುರುವನ್ನು  ವ್ಯಕ್ತಿಯಾಗಿ ಪರಿಗಣಿಸೋ ಬದಲಾಗಿ ಶಕ್ತಿಯಾಗಿ ಕಂಡು ಅನುಸರಿಸಿದರೆ ಅರಿವೇಗುರುವಾಗುತ್ತದೆ. ಪ್ರತಿಯೊಂದು ಧರ್ಮದವರಿಗೂ ಗುರುವಿದ್ದ ಹಾಗೆಯೇ ಪ್ರತಿಯೊಬ್ಬ ಮಾನವನಿಗೂ ಗುರಿ ತಲುಪಿಸಲು ಗುರು ಅಗತ್ಯವಿದೆ. ಗುರುವಿನಲ್ಲಿಯೇ ಧೋಷ ಕಂಡುಬಂದರೆ ಅದು ಶಿಷ್ಯರ ಅಜ್ಞಾನವೂ ಆಗಬಹುದು. ಅಥವಾ ಅಹಂಕಾರವೂ ಆಗಬಹುದು. ಎಲ್ಲಾ ಗುರುಗಳಲ್ಲಿಯೂ ಒಂದೇ ಶಕ್ತಿ ಇರೋದಿಲ್ಲ.

ವೇದವ್ಯಾಸರ ವೇದಗಳ ಪ್ರಕಾರ ನಾಲ್ಕುವೇದಗಳನ್ನು ಅವರವರ ಧರ್ಮ ಕರ್ಮಕ್ಕೆ ತಕ್ಕಂತೆ ವಿಂಗಡಿಸಲಾಗಿತ್ತು. ಕಾಲಕ್ರಮೇಣಧರ್ಮ ಕರ್ಮಗಳೆ ವಿರುದ್ದ ದಿಕ್ಕಿನಲ್ಲಿ ನಡೆದಾಗ ಉತ್ತಮ ಗುರುಗಳ ಮಾರ್ಗದರ್ಶನ ಸಿಗದೆ ಜೀವ ಅತಂತ್ರಸ್ಥಿತಿಗೆ ತಲುಪಿ ಭೌತಿಕದಲ್ಲಿ ಹೆಚ್ಚು ಮುಳುಗಿದ ಕಾರಣವೆ ಶಿಕ್ಷಣ ಭೌತಿಕ ಜಗತ್ತಿನಲ್ಲಿ ಗುರುವರ್ಗ ಸ್ವತಂತ್ರವಾಗಿ ಬೆಳೆದಿದೆ.

ಆದರೆ ಧಾರ್ಮಿಕ ಕ್ಷೇತ್ರದಲ್ಲಿ ಇದಕ್ಕೆ ಅವಕಾಶ ಕಡಿಮೆಯಿರುವುದರಿಂದ ಶಿಷ್ಯರಾದವರು ಬೌತಿಕ ಆಸಕ್ತಿ ಹೆಚ್ಚಿಸಿಕೊಂಡಂತೆ ಆಧ್ಯಾತ್ಮ ಸತ್ಯ ಹಿಂದುಳಿಯುತ್ತದೆ. ಇದಕ್ಕೆ ಕಾರಣವೆ ಶಿಕ್ಷಣದಲ್ಲಿ ನೇರವಾಗಿ ವೈಜ್ಞಾನಿಕ ಜಗತ್ತನ್ನು ಬೆಳೆಸಿಕೊಂಡಿರೋದು. ಗುರು ನಮ್ಮೊಳಗಿನ ಆತ್ಮಜ್ಞಾನ ಬೆಳೆಸುವ ದೇವರು. ಗುರುವೇ ದೈವ.

ದೇವರನ್ನು ತೋರಿಸುವವರೆ ಮಹಾಗುರುಗಳು. ಭಾರತ ವಿಶ್ವ ಗುರುವಾಗಬೇಕಾದರೆ ಭಾರತೀಯ ಪ್ರಜೆಗಳಿಗೆ ತಮ್ಮ ಮೂಲ ಶಿಕ್ಷಣ ನೀಡಬೇಕು. ಮನೆಯೊಳಗಿರುವ ತಾಯಿಯೇ ಮೊದಲ ಗುರು. ಮನೆಯೇಮೊದಲ ಪಾಠ ಶಾಲೆ, ಇವೆಲ್ಲವೂ ಹಿಂದುಳಿದಿರೋದು ವಿಜ್ಞಾನ ಜಗತ್ತಿನ ಪ್ರಗತಿಯಾದರೆ ಆಧ್ಯಾತ್ಮ ಜಗತ್ತಿನ ದುರ್ಗತಿ ಎಂದರ್ಥ.

ಮಾನವ ಎಷ್ಟೇ ಬೌತಿಕ ಸಾಧನೆ ಮಾಡಿದ್ದರೂ ಅದು ತಾತ್ಕಾಲಿಕವಷ್ಟೆ. ಆಧ್ಯಾತ್ಮ ಪ್ರಗತಿಯಾಗದೆ ಜೀವನ್ಮುಕ್ತಿ ಸಿಗಲು ಅಸಾಧ್ಯವೆನ್ನುವುದು ಸತ್ಯಜ್ಞಾನ. ಸತ್ಯವೇ ದೇವರು. ಸತ್ಯದರ್ಶನ ಮಾಡಿಸುವವರೆ ನಿಜವಾದ ಗುರು. ಗುರುಪೂರ್ಣಿಮೆಯಂದು ಎಲ್ಲಾ ಗುರುವೃಂದದವರ ಆಶೀರ್ವಾದ ಪಡೆದು ಜೀವನ್ಮುಕ್ತಿಮಾರ್ಗದಲ್ಲಿ ನಡೆಯುವ ಸಂಕಲ್ಪ ಮಾಡೋದು ಶಿಷ್ಯರ ಗುರಿಯಾಗಬೇಕಿದೆ.

ಕಲಿಗಾಲದಲ್ಲಿ ಮಾನವನಿಗೆ ಗುರಿ ತೋರಿಸುವುದು ಬಹಳ ಕಷ್ಟ. ಅದರಲ್ಲಿಯೂ ಇಂದಿನ ಪ್ರಜಾಪ್ರಭುತ್ವದಲ್ಲಿ ಸ್ವತಂತ್ರ ವಾಗಿ ಜೀವನ ನಡೆಸುತ್ತಾಆಧ್ಯಾತ್ಮ ಸಾಧನೆ ಮಾಡೋದು ಕಷ್ಟ. ಹೀಗಾಗಿ ಕಷ್ಟಪಟ್ಟು ಮುಂದೆ ನಡೆಯುವುದರಿಂದ ಮಾತ್ರ ಗುರುದರ್ಶನ. ಗುರಿ ದರ್ಶನ.ಜ್ಞಾನವಿಲ್ಲದ ಜೀವನ ವ್ಯರ್ಥ.

ಬ್ರಹ್ಮಜ್ಞಾನ ಬ್ರಹ್ಮಸೃಷ್ಟಿಸಿದ ಪ್ರತಿಯೊಂದು ಜೀವಿಯಲ್ಲಿಯೂ ಒಂದು ವಿಶೇಷರೀತಿಯಲ್ಲಿದ್ದರೂ ಆರನೆ ಅರಿವಿರುವ ಮಾನವನಿಗೆ ಮಾತ್ರವೇ ಜೀವನ್ಮುಕ್ತಿಗಾಗಿ ಜೀವನ ನಡೆಸೋ ವಿಶೇಷಶಕ್ತಿ ಇರುವುದು. ಹಾಗೆ ಮಾನವನಲ್ಲಿ ಇರೋ ಹಾಗೆ ಅತಿಯಾದ ಆಸೆ, ಆಕಾಂಕ್ಷೆಗಳು, ಅಹಂಕಾರ, ಸ್ವಾರ್ಥ ವನ್ನು ಬೇರೆಯಾವ ಜೀವಿಯಲ್ಲಿಯೂ ಕಾಣೋದಿಲ್ಲ.

ಹೀಗಾಗಿ ಭೂಮಿಯಲ್ಲಿ ಹೇಗೆ,ಯಾಕೆ ಜೀವಿಸಬೇಕೆಂಬುದರ ಅರಿವು ಮೂಡಿಸುವ ಪ್ರತ್ಯಕ್ಷ ಗುರುಗಳ ಸಂಗ,ಸಹಕಾರ ಆಶೀರ್ವಾದ, ಮಾರ್ಗದರ್ಶನ ಅತಿ ಮುಖ್ಯವಾಗಿದೆ. ಒಂದರಿವಿನ ಜೀವಿಯಿಂದ ಹಿಡಿದು ಆರನೆ ಅರಿವಿನ ಮಾನವನವರೆಗೆ ಸೂಕ್ಮವಾಗಿ ಅಡಗಿರುವ ಜ್ಞಾನಶಕ್ತಿ ಗುರುತಿಸಿರುವ ಶ್ರೀ ದತ್ತಾತ್ರೇಯರ ಮಹಾಜ್ಞಾನವನ್ನು ಈವರೆಗೆ ಸರಳವಾಗಿ ತಿಳಿಯದ ಕಾರಣವೆ ಅಜ್ಞಾನ.

ವಿಶೇಷಜ್ಞಾನವನ್ನು ಪಡೆಯಲು ಹೊರಗೆ ಹೋಗಿ ಓದಿ, ಕೇಳಿ, ಬೇಡಿ ಮಾಡಬೇಕು. ಆದರೆ ನಮ್ಮೊಳಗೇ ಇರುವ ಸಾಮಾನ್ಯಜ್ಞಾನವನ್ನು ಬೆಳೆಸಿಕೊಳ್ಳಲು ಮೊದಲು ನಮ್ಮಲ್ಲಿ ಯಾವ ರೀತಿಯ ಜ್ಞಾನವಿದೆ ಎನ್ನುವುದನ್ನು ತಿಳಿದು ಅದಕ್ಕೆ ತಕ್ಕಂತೆ ಗುರು,ಶಿಕ್ಷಣ ನೀಡಿದರೆ ಪೂರ್ಣಸತ್ಯ ಅರ್ಥವಾಗುತ್ತದೆ. ಪೂರ್ಣಸತ್ಯ ಎಂದರೆ ನಮ್ಮಲ್ಲಿ ಇರುವ ಲೋಪದೋಷಗಳನ್ನು ನಾವೇ ತಿಳಿದುನಡೆಯೋ ಸತ್ಯಜ್ಞಾನ.

ಇದನ್ನು ಭೂಮಿಯಲ್ಲಿ ಸದ್ಬಳಕೆ ಮಾಡಿಕೊಂಡರೆ ಮುಕ್ತಿ. ಹೀಗಾಗಿ ಗುರುವನ್ನು ಅರಸುತ್ತಾ ಇಂದು ಹೆಚ್ಚು ಹೆಚ್ಚುಜನರು ಹೊರಗೆ ಹೋಗಿ ತಿರುಗಿ ಬರೋದಕ್ಕೆ ಕಷ್ಟಪಡುವ ಬದಲಾಗಿ ಮನೆ ಒಳಗಿರುವ ಪೋಷಕರು ತಮ್ಮ ಜೀವನದ ಉದ್ದೇಶ ತಿಳಿದು ಸನ್ಮಾರ್ಗದಲ್ಲಿ ನಡೆದರೆ ಮಕ್ಕಳ ಜ್ಞಾನವೂ ಬೆಳೆದು ಇದ್ದಲ್ಲಿಯೇ ಗುರುದರ್ಶನವಾಗುತ್ತದೆ. ಇದಕ್ಕೆ ಬೇಕು ಸತ್ಯ ಧರ್ಮದ ಜೀವನ. ಎಲ್ಲಾ ಸಮಾನ ಎನ್ನುವಒಗ್ಗಟ್ಟು.

ಒಂದರಲ್ಲಿ ಒಮ್ಮತ ಒಗ್ಗಟ್ಟು ಏಕತೆ,ಐಕ್ಯತೆ ಇರೋವಾಗ ಅನೇಕವನ್ನು ಬೆಳೆಸಿಕೊಳ್ಳುವ ಮೊದಲು ಒಂದನ್ನು ಗಟ್ಟಿಯಾಗಿ ಹಿಡಿದುಕೊಂಡರೆ ಒಳಗಿರುವ ಗುರುದೇವರು ನಡೆಸದಿರುವನೆ?. ಮೂಲದ ಗುರು ಹಿರಿಯರ ಧರ್ಮ ಕರ್ಮಕ್ಕೆ ವಿರುದ್ದ ನಿಂತು ಹೊರಗಿನ ಗುರುಗಳನ್ನು ಬೇಡಿದರೆ ಒಮ್ಮೆ ತಿರುಗಿ ಬರಲೇ ಬೇಕು. ರಾಜಕೀಯಕ್ಕೆ ಗುರುವಾದವರು ಹೋಗಬಾರದೆನ್ನುತ್ತಾರೆ.ಕಾರಣವಿಷ್ಟೆ ಅಲ್ಲಿ ಭೇಧಭಾವವಿದ್ದು ದ್ವಂದ್ವದಿಂದ ಜನರಲ್ಲಿ ದ್ವೇಷ, ಅಸೂಯೆ, ಸ್ವಾರ್ಥ ಹೆಚ್ಚಾದಂತೆ ಧರ್ಮಹಾಗು ಸತ್ಯ ಕುಸಿಯುತ್ತದೆ.

ಪ್ರಜಾಪ್ರಭುತ್ವದಲ್ಲಿ ಈಗ ಪ್ರಜೆಗಳೇ ಸ್ವತಃ ಚಿಂತನೆ ನಡೆಸೋ ಜ್ಞಾನವಿದ್ದರೂ ಅದನ್ನು ವ್ಯವಹಾರಕ್ಕೆ ಬಳಸಿಕೊಂಡು ಇನ್ನಷ್ಟು ಸಾಲಗಾರರಾಗಿ ತನ್ನ. ಜೀವನದ ಮುಖದಯ ಉದ್ದೇಶ ಮರೆತು ಹೊರಗೆ ನಡೆಯುವಹಾಗಾಗಿರೋದಕ್ಕೆ ಶಿಕ್ಷಣ ಕಾರಣ. ಶಿಕ್ಷಣವು ಆಂತರಿಕ ಜ್ಞಾನವನ್ನು ಬೆಳೆಸುತ್ತಾ ಭೌತಿಕ ದಲ್ಲಿ ಹೇಗೆ ಜೀವನ ನಡೆಸಬೇಕೆಂದು  ತಿಳಿಸಬೇಕಿತ್ತು.ಪುರಾಣ ಇತಿಹಾಸದ ರಾಜಕೀಯ ಎತ್ತಿ ಹಿಡಿದರೆ ರಾಜಕೀಯವೆ ಅಧರ್ಮದೆಡೆಗೆ ನಡೆದರೆ ಕಾಯೋರು ಯಾರು?

ದೇವರಿಗಿಂತ ಗುರುವೇ ದೊಡ್ಡವರು ಎನ್ನುತ್ತಾರೆ. ಗುರುಗಳು ದೇಶದ, ವಿಶ್ವದ ಶಾಂತಿ ಕಾಪಾಡುವ ದೇವರಾಗಿರುತ್ತಾರೆ. ಕಾಲ ಬದಲಾಗಿದ್ದರೂ ಭೂಮಿ ಒಂದೇ, ದೇಶ ಒಂದೇ, ಧರ್ಮ ಒಂದೇ, ರಾಜ್ಯ, ಗ್ರಾಮ, ಮನೆ,ಮನಸ್ಸು…ಒಂದೇ ಎನ್ನುವ ಅರಿವಿಲ್ಲದೆ ಅಸಂಖ್ಯಾತ ದೇವರುಗಳಿದ್ದಾರೆ, ಧರ್ಮವಿದೆ ಆದರೆ ಭೂಮಿಯನ್ನು ಮಾತ್ರ ಅಧರ್ಮಕ್ಕೆ ಬಳಸಿಕೊಂಡು ಆಳಿದರೆ ಧರ್ಮಕ್ಕೆ ಬೆಲೆ ಎಲ್ಲಿರುತ್ತದೆ? ಕಾಲಚಕ್ರ ತಿರುಗಿದಂತೆ ಮೇಲಿನವರು ಕೆಳಗಿರುತ್ತಾರೆ ಕೆಳಗಿನವರು ಮೇಲಿರುತ್ತಾರೆ.

ಹೀಗಾಗಿ ಅವರವರ ಧರ್ಮ ಕರ್ಮವೇ ಅವರನ್ನು ಒಂದು ಗುರಿ ತಲುಪಲು ಸಹಕರಿಸುವಾಗ ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಬೇಕಷ್ಟೆ. ಪ್ರಜಾಪ್ರಭುತ್ವದಲ್ಲಿ ಸ್ವತಂತ್ರ ವಾಗಿ ಸತ್ಯ ತಿಳಿದು ನಡೆಯಲು ಬೇಕಿದೆ ಸ್ವತಂತ್ರ ಜ್ಞಾನದ ಶಿಕ್ಷಣ. ಇದನ್ನು ಗುರುವೃಂದದವರು ಒಗ್ಗಟ್ಟಿನಿಂದ ಸರ್ಕಾರದ ಸಹಾಯದಿಂದ ಪ್ರಜೆಗಳಿಗೆ ನೀಡಿದಾಗಲೆ ದೇಶೋದ್ದಾರ.ಧರ್ಮೊದ್ದಾರ.


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಸೌರ ವಿದ್ಯುತ್ ಉತ್ಪಾದನೆ ಮಾಹಿತಿ ಕಾರ್ಯಾಗಾರ

ಕ್ಯಾಷುಟೆಕ್ ನಿರ್ಮಿತಿ ಕೇಂದ್ರ ಶಕ್ತಿನಗರದ ಅಭಿಯಂತರುಗಳಿಗೆ ಹಾಗೂ, ರಾಯಚೂರು ಜಿಲ್ಲೆಯ ವಿವಿಧ ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ "ಸುಸ್ಥಿರ ಹಸಿರು ವಿದ್ಯುಚ್ಛಕ್ತಿ ಉತ್ಪಾದನೆಗೆ ಸೌರಶಕ್ತಿ ಬಳಕೆ"...
- Advertisement -

More Articles Like This

- Advertisement -
close
error: Content is protected !!
Join WhatsApp Group