spot_img
spot_img

ಮಾತೃ ಹೃದಯದ ಸಂಚಲನವನ್ನು ಶಾರದಾ ಮಾತೆಯವರಲ್ಲಿ ಕಾಣಬಹುದಾಗಿತ್ತು – ಶರಣೆ ಇಂದ್ರಕ್ಕ ಕದಂ

Must Read

- Advertisement -

ಸವದತ್ತಿ: “ಶ್ರೀ ಶಾರದಾದೇವಿಯವರ ‘ಜೀವನ ಗಂಗೆ’ಯಲ್ಲಿ ಮಿಂದವರಿಗೆ ಅರಿವಾಗುತ್ತದೆ.ಅವರು ಎಂತಹ ಸರಳರು ಎಂದು.ಯಾವುದೇ ರೀತಿಯ ಆಡಂಬರ,ತೋರ್ಪಡಿಕೆ,ಬಿಗುಮಾನ ಇತ್ಯಾದಿಗಳಿಲ್ಲದೇ ಸರಳರಲ್ಲಿ ಸರಳರಾಗಿ ಸದಾ ಆಧ್ಯಾತ್ಮ ಜೀವನದಲ್ಲಿ ಕಠೋರ ಸಾಧನೆ,ತಪಸ್ಸು,ಇತ್ಯಾದಿಗಳಲ್ಲಿ ನಿರತರಾಗಿದ್ದಾಗ್ಯೂ ‘ಅಮ್ಮ’ ಎಂದು ಯಾರೇ ಕರೆದರೂ ಅವರ ಹೃದಯ ತಕ್ಷಣ ಸ್ಪಂಧಿಸುತ್ತಿತ್ತು.ಮಾತೃ ಹೃದಯದ ಒಂದು ಸಂಚಲನವನ್ನೇ ತಾಯಿ ಶಾರದಾ ಮಾತೆಯವರಲ್ಲಿ ಕಾಣಬಹುದಾಗಿತ್ತು.’ಎಂದು ಶಿವಶರಣೆ ಇಂದ್ರಕ್ಕ ಕದಂ ತಿಳಿಸಿದರು. ಅವರು ರವಿವಾರ ಸಂಜೆ ಸಿಂದೋಗಿಯ ಶ್ರೀ ನಿತ್ಯಾನಂದ ಸತ್ಸಂಗ ಆಶ್ರಮದಲ್ಲಿ ಜರುಗಿದ ಮುಖಾಮುಖಿ ಮತ್ತು ಗೂಗಲ್ ಮೀಟ್ ಸತ್ಸಂಗದಲ್ಲಿ ಶಾರದಾಮಾತೆಯವರ ಬದುಕಿನ ದೃಷ್ಟಾಂತವೊಂದನ್ನು ತಿಳಿಸುತ್ತ ಅವರ ವ್ಯಕ್ತಿತ್ವ ಎಂತಹದು ಎಂಬುದನ್ನು ತಿಳಿಸಿದರು.

ಶಾರದಾದೇವಿಯವರ ಬದುಕಿನಲ್ಲಿ ನಡೆದ ದೃಷ್ಟಾಂತವನ್ನು ತಿಳಿಸುತ್ತ ಬೇಲೂರು ಮಠದಿಂದ ಒಂದು ದಿನ ನಾಲ್ವರು ಬ್ರಹ್ಮಚಾರಿಗಳು ಜಯರಾಂಬಟಿಗೆ ಬಂದಿಳಿದರು.ಅವರು ಬೇಲೂರು ಮಠದ ತಾರಕ ಅವರ ಅನುಮತಿ ಪಡೆಯದೇ ಬಂದಿದ್ದರು.ಅವರು ಕಾಶಿಗೆ ಹೋಗಿ ತಪಸ್ಸನ್ನು ಆಚರಿಸುವ ಇಚ್ಚೆಯುಳ್ಳವರಾಗಿದ್ದರು.ಆದರೆ ಬೇಲೂರು ಮಠದಲ್ಲಿ ಕೆಲವೇ ದಿನಗಳಲ್ಲಿ ದುರ್ಗಾಪೂಜೆ ಜರುಗುವುದಿದ್ದು. ಅಲ್ಲಿ ಕೆಲಸ ಕಾರ್ಯಗಳಲ್ಲಿ ತೊಡಗಿ ನಂತರ ಅನುಮತಿ ಪಡೆದು ಬಂದಿದ್ದರೆ ಒಳ್ಳೆಯದಿತ್ತು ಎಂದು ಹಲವು ರೀತಿಯಲ್ಲಿ ಅವರಿಗೆ ತಿಳಿಸಿದರೂ ಅವರು ಮರಳಿ ಮಠಕ್ಕೆ ಹೋಗುವ ಬಗ್ಗೆ ಯೋಚಿಸದೇ ಕಾಶಿಗೆ ತೆರಳಿದ ಘಟನೆಯನ್ನು ಅಲ್ಲಿ ಅವರು ಮತ್ತೆ ಮರಳಿ ಬರುವಂತಾಗುವ ಸನ್ನಿವೇಶವನ್ನು ಅದರ ಜೊತೆಗೆ ಹಿರಿಯರ ಕಿವಿಮಾತು ಕೇಳದೇ ಇದ್ದರೆ ಏನಾಗಬಹುದು ಎಂಬುದಕ್ಕೆ ಹಲವು ದೃಷ್ಟಾಂತಗಳನ್ನು ತಿಳಿಸುತ್ತ ಸತ್ಸಂಗದಲ್ಲಿ ಸೇರಿದ ಸದ್ಭಕ್ತರಿಗೆ ಶಾರದಾಮಾತೆಯವರ ವ್ಯಕ್ತಿತ್ವವನ್ನು ತಿಳಿಸದರು.

- Advertisement -

ಈ ಸಂದರ್ಭದಲ್ಲಿ ಸತ್ಸಂಗಿಗಳಾದ ಚನ್ನಮ್ಮ ಹಲಗತ್ತಿ.ಯಲವ್ವ ಕುಸುಗಲ್(ಕಂಕಣವಾಡಿ).ಸವಿತಕ್ಕ ಕೆಂದೂರ.ಪವಿತ್ರ ಹನಸಿ.ಬಸಮ್ಮ ಬಿಕ್ಕನಗೌಡರ.ಪಾರ್ವತಿ(ಕಮಲಕ್ಕ) ಗುಂಡ್ಲೂರ.ಹನುಮವ್ವ ಬಿಕ್ಕನಗೌಡರ.ಚನ್ನವ್ವ ಬಿಕ್ಕನಗೌಡರ.ಪಂಚವ್ವ ಹನಸಿ.ಶಾಂತಕ್ಕ ತಿಗಡಿ.ಬಸಮ್ಮ ನಲವಡೆ.ಸೇರಿದಂತೆ ಹಲವು ಸತ್ಸಂಗಿಗಳು ಮುಖಾಮುಖಿ ಸತ್ಸಂಗದಲ್ಲಿ ಉಪಸ್ಥಿತರಿದ್ದರು.ಗೂಗಲ್ ಮೀಟ್ ಸತ್ಸಂಗದಲ್ಲಿ ವೈ.ಬಿ.ಕಡಕೋಳ.ಅನುರಾಧ ಬೆಟಗೇರಿ ಶಂಕರೆವ್ವ ಚೌಡಾಪೂರ. ಕವಿತಾ ಶಲ್ಲೇದ.ಲತಾ ಗೌಡರ.ರಾಜಶ್ರೀ ಜವಳಿ.ಶಿವಾನಂದ ವನಹಳ್ಳಿ. .ವಿಜಯಲಕ್ಷ್ಮೀ ಬಂಡಿ.ರಜನಿ ನಾಯ್ಕ. ಗೌರಿ ಜಾವೂರ.ಜಯಶ್ರೀ ಕುಲಕರ್ಣಿ. ಅನುಪಮಾ ಬಡಿಗೇರ. ಸೇರಿದಂತೆ 30 ಕ್ಕೂ ಹೆಚ್ಚು ಸತ್ಸಂಗಿಗಳು ಹಾಜರಿದ್ದರು.ಈ ಗೂಗಲ್ ಮೀಟ್ ಸತ್ಸಂಗದಲ್ಲಿ ಶ್ರೋತ್ರೀಯ ಬ್ರಹ್ಮನಿಷ್ಟ ಸದ್ಗುರು ಮುಕ್ತಾನಂದ ಪರಮ ಪೂಜ್ಯರು ದಿವ್ಯ ಸಾನಿಧ್ಯವನ್ನು ವಹಿಸಿದ್ದರು.ಕಾರ್ಯಕ್ರಮದ ಪ್ರಾರಂಭದಲ್ಲಿ ಅನಸೂಯ ಹೊನ್ನಳ್ಳಿ.ಸುಧಕ್ಕ ಗೌಡರ ಪ್ರಾರ್ಥನಾ ಗೀತೆಯನ್ನು ಹಾಡಿದರು. ವೀರಣ್ಣ ಕೊಳಕಿ ಶಿಕ್ಷಕರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಕಾರ್ಯಕ್ರಮ ಮುಗಿದ ನಂತರ ಗೋಕಾಕದ ಯೋಗಮಯ ಜೀವನ ಪರಿಸರದ ಶ್ರೀಮಾತೆ ಪರಮಹಂಸ ಪರಿವ್ರಾಜಕಾಚಾರ್ಯ ಸತ್ಯಮೇಧಾವಿ (ಯೋಗಿನಿ ಸತ್ಯಂ) ಅನಿರೀಕ್ಷಿತವಾಗಿ ಶ್ರೀಮಠಕ್ಕೆ ದರ್ಶನ ನೀಡಿದರು.ಇವರನ್ನು ಸತ್ಕರಿಸಿ ಆದರಿಸಲಾಯಿತು. ಸ್ವಲ್ಪ ಹೊತ್ತು ಸತ್ಸಂಗಿಗಳೊಂದಿಗೆ ಯೋಗಕ್ಷೇಮ ವಿಚಾರಿಸಿದ ಸತ್ಯಮೇಧಾವಿಯವರು ಶ್ರೀಮಠದ ನಂಟನ್ನು ಕುರಿತು ತಿಳಿಸಿದರು. ತಮ್ಮ ಕೃತಿ ಒಕ್ಕಲಿಗ ಮುದ್ದಣ್ಣ ಹಾಗೂ ಪ್ರಸಾದವನ್ನು ಸತ್ಸಂಗಿಗಳಿಗೆ ನೀಡಿದರು.ನಂತರ ಶ್ರೀಮಠದಿಂದ ಬೀಳ್ಕೊಟ್ಟರು.

- Advertisement -

ವೈ.ಬಿ.ಕಡಕೋಳ
ಶಿಕ್ಷಕ, ಸಂಪನ್ಮೂಲ ವ್ಯಕ್ತಿಗಳು
ಮುನವಳ್ಳಿ 591117

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group