spot_img
spot_img

ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವುದೇ ಸಂಘದ ಪರಮೋಚ್ಚಗುರಿ – ಎಸ್. ಎಸ್. ವಾಘೇರಿ

Must Read

ಸವದತ್ತಿ: ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ-ಶಿಕ್ಷಕರ ಸಂಘ (ರಿ) ಬೆಂಗಳೂರು, ತಾಲೂಕು ಘಟಕ ಸವದತ್ತಿ 2022 – 27ನೇ ಸಾಲಿಗೆ ಚುನಾಯಿತರಾದ ಸಂಘದ ಪದಾಧಿಕಾರಿಗಳಿಗೆ ಹಾಗೂ ನಾಮನಿರ್ದೇಶನಗೊಂಡ ಸದಸ್ಯರಿಗೆ ಸದಸ್ಯತ್ವ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ಹಾಗೂ ಅಭಿನಂದನ ಸಮಾರಂಭವನ್ನು ಸವದತ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ನೂತನ ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷರಾದ ಎಸ್.ಎಸ್. ವಾಘೇರಿ ಶಿಕ್ಷಣ, ಸಂಘಟನೆ ಮತ್ತು ಸೇವೆ ಈ ಮೂರು ವೈಚಾರಿಕ ತಳಹದಿಯ ಮೇಲೆ ಎಲ್ಲಾ ಶೈಕ್ಷಣಿಕ ಸಂಘಟನೆಗಳು ರಚನೆಯಾಗಿವೆ. ಸಂಘದ ಮಹತ್ವವೇನು ಹಾಗೂ ಸಂಘಟನೆಯ ಅವಶ್ಯಕತೆ ಏನು ಸಂಘ ಹೇಗಿರಬೇಕು ಎಂಬುದನ್ನು ತಿಳಿಸಿದರು. ಸಂಘಟನೆಗೆ ಬಂದ ಮೇಲೆ ಸಂಘದ ಪದಾಧಿಕಾರಿಗಳು ಯಾವ ರೀತಿಯಲ್ಲಿ ಶಿಕ್ಷಣದ ಗುಣಾತ್ಮಕ ಬೆಳವಣಿಗೆಗೆ ಸಹಕರಿಸುತ್ತಾ ಶಿಕ್ಷಕರ ಸಮಸ್ಯೆಗಳು ಮತ್ತು ಆಶೋತ್ತರಗಳಿಗೆ ಹೇಗೆ ಸ್ಪಂದನಶೀಲರಾಗಿ ವರ್ತಿಸಬೇಕು ಮತ್ತು ಅಧಿಕಾರಗಳ ಜೊತೆಗೆ ಹೇಗೆ ಒಡನಾಟವನ್ನು ಹೊಂದಿರಬೇಕು ಮತ್ತು ಶಿಕ್ಷಣ ಇಲಾಖೆಯ ಎಲ್ಲ ಯೋಜನೆಗಳನ್ನು ಯಾವ ರೀತಿಯಲ್ಲಿ ಕಾರ್ಯರೂಪಕ್ಕೆ ತರಬೇಕು ಎಂದು ತಿಳಿಸಿದರು.

ಅಧಿಕಾರಿಗಳ ಸಹಾಯ ಸಹಕಾರವನ್ನು ಪಡೆದುಕೊಂಡು ಹಿರಿಯ ಶಿಕ್ಷಕರ ಮತ್ತು ಮುಖ್ಯೋಪಾಧ್ಯಾಯರ ಮಾರ್ಗದರ್ಶನವನ್ನು ಪಡೆದುಕೊಂಡು ಸಂಘದ ಚಟುವಟಿಕೆಗಳನ್ನ ಕಾರ್ಯಗತಗೊಳಿಸುವ ಮಾರ್ಗಗಳನ್ನು ಅವರು ತಮ್ಮ ಮಾತುಗಳಲ್ಲಿ ತಿಳಿಸಿದರು. ಅದೇ ರೀತಿ ಶಿಕ್ಷಣ ಇಲಾಖೆ ಮತ್ತು ಶಿಕ್ಷಕರ ಸಂಘಟನೆಗಳು “ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ” ಅವು ಪರಸ್ಪರ ಹೇಗೆ ಸಹಕರಿಸಬೇಕು ಮತ್ತು ಶಿಕ್ಷಕರ ಸಮಸ್ಯೆಗಳ ಪರಿಹಾರದ ಜೊತೆಗೆ ಶಿಕ್ಷಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ಕಾಲಮಿತಿಯಲ್ಲಿ ಹೇಗೆ ತಲುಪಿಸುವ ಪ್ರಯತ್ನ ಮಾಡಬೇಕೆಂದು ತಿಳಸಿದರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಎಸ್. ಸಿ. ಕರಿಕಟ್ಟಿ ಅವರು “ಸಂಘ – ಸಂಘಟನೆಗಳು ಶಿಕ್ಷಕರ ಆಶೋತ್ತರಗಳಿಗೆ ಕಿವಿಯಾಗಬೇಕು ಮತ್ತು ಇಲಾಖೆಯ ಎಲ್ಲ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಕೈಜೋಡಿಸಬೇಕೆಂದರು. ಜೊತೆಗೆ ಇಲಾಖೆ ಸದಾಕಾಲ ಶಿಕ್ಷಕರ ಸಂಘದೊಂದಿಗೆ ಸಹಕಾರವನ್ನು ನೀಡುವುದಾಗಿ ಹೇಳಿದರು ಮತ್ತು ನೂತನ ಪದಾಧಿಕಾರಿಗಳಿಗೆ ಶುಭಾಶಯವನ್ನು” ತಿಳಿಸಿದರು.

ಸವದತ್ತಿ ತಾಲೂಕ ನೂತನ ಘಟಕದ ಅಧ್ಯಕ್ಷರಾಗಿ ಎಸ್. ಎಸ್. ವಾಘೇರಿ, ಉಪಾಧ್ಯಕ್ಷರಾಗಿ ಮಂಜುನಾಥ್ ಕಾಜಗಾರ, ಪ್ರಧಾನ ಕಾರ್ಯದರ್ಶಿಯಾಗಿ ದಾನಯ್ಯ ಹಿರೇಮಠ, ಖಜಾಂಚಿಯಾಗಿ ರುದ್ರಪ್ಪ ನೀಲೂಗಲ್, ರಾಜ್ಯ ಪರಿಷತ್ ಸದಸ್ಯರಾಗಿ ಡಾ|| ಕುಮಾರ್ ದಾಸರ್, ಸಂಘಟನಾ ಕಾರ್ಯದರ್ಶಿಯಾಗಿ ಆನಂದ್ ಬಾಣಿ ಹಾಗೂ ನಾಮ ನಿರ್ದೇಶಿತರಾಗಿ ಐ.ಜಿ.ಸುಬ್ಬಾಪುರಮಠ, ಎಂ. ಡಿ. ಹುದ್ದಾರ್, ಉಮೇಶ್ ಅಗಸಿಮನಿ, ಮಂಜುನಾಥ್ ಕಮ್ಮಾರ, ಬಸವರಾಜ ಗಡೇಕಾರ, ತುಳಸಿಗೇರಿ ದಾಸರ, ಲಕ್ಷ್ಮಣ ನಾಗಣ್ಣವರ, ಶಕೀಲಾ ಚೂರಿಖಾನ, ಬಸವಣ್ಣೆಪ್ಪ ತೋರಣಗಟ್ಟಿ, ಬಿ.ಎಸ್.ಪಾಟೀಲ, ಎಸ್.ವ್ಹಿ.ಶೆಟ್ಟರ, ಆರ್.ಎಸ್.ಸಣ್ಣಮನಿ, ಮಂಜುನಾಥ ಸಂಗಟಿ, ಮತ್ತು ಪ್ರಕಾಶ ಸಾಸ್ವಿಹಳ್ಳಿ ಪ್ರಮಾಣಪತ್ರ ಸ್ವೀಕರಿಸಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷರಾದ ಎಚ್.ಆರ್.ಪೆಟ್ಲೂರ, ಪ್ರಧಾನ ಕಾರ್ಯದರ್ಶಿ ಎಫ್.ಜಿ.ನವಲಗುಂದ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಪ್ರೌಢಶಾಲೆ ಪ್ರತಿನಿಧಿ ವ್ಹಿ.ಬಿ.ದೇವರಡ್ಡಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಗೌರವಾಧ್ಯಕ್ಷರಾದ ಬಿ.ಬಿ.ನಾವಲಗಟ್ಟಿ, ದೈಹಿಕ ಶಿಕ್ಷಣ ಪರಿವೀಕ್ಷಕರಾದ ಮಾರಾ, ಶಿಕ್ಷಣ ಸಂಯೋಜಕರಾದ ಗುರುನಾಥ ಕರಾಳೆ ಹಾಗೂ ಮುಖ್ಯೋಪಾಧ್ಯಾಯರು, ಹಿರಿಯ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರ ಸಂಘದವರು, ಸ್ಕೌಟ್ ನ ತಾಲೂಕು ಕಾರ್ಯದರ್ಶಿಯಾದ ಎನ್.ಎನ್.ಕಬ್ಬೂರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಿಬ್ಬಂದಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷ ಸುಧೀರ್ ವಾಘೇರಿ ಸ್ವಾಗತಿಸಿದರು,
ದಾನಯ್ಯ ಹಿರೇಮಠ ನಿರೂಪಿಸಿದರು, ಬಸವರಾಜ ಗಡೇಕಾರ ವಂದಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!