spot_img
spot_img

ಮಾನವ ಒಂದು ನೆನೆದರೆ ದೈವ ಒಂದು ಕೊಡುವುದು

Must Read

spot_img
- Advertisement -

ಭೌತವಿಜ್ಞಾನ ಅಧ್ಯಾತ್ಮ ವಿಜ್ಞಾನ ಎರಡೂ ಒಂದೇ ನಾಣ್ಯದ ಎರಡು ಮುಖಗಳಾದರೂ, ಒಂದರ ಹಿಂದೆ ಇನ್ನೊಂದು ಇರುವುದರಿಂದ ಒಟ್ಟಿಗೆ ಕಾಣೋದು ಕಷ್ಟ.ಆದರೆ, ನಾಣ್ಯ ಬಿಟ್ಟು ವ್ಯವಹಾರ ನಡೆಸೋದು ಅಸಾಧ್ಯ.

ವ್ಯವಹಾರಿಕ ಜಗತ್ತಿನಲ್ಲಿ ಸತ್ಯಾಸತ್ಯತೆ,ಧರ್ಮಾಧರ್ಮ ಎರಡೂ ಹೊರಗಿದೆ. ಹಾಗೆಯೇ ಒಳಗಿನ ಜಗತ್ತಿನಲ್ಲಿಯೂ ಇದೆ. ಕಣ್ಣಿಗೆ ಕಾಣುವ ಹೊರಗಿನ‌ ವ್ಯವಹಾರ ಮನುಕುಲಕ್ಕೆ ಸ್ಫರ್ಧೆ ನಡೆಸುವಷ್ಟು ಬೆಳೆಸಿದರೆ, ಒಳಗಿನ ಜಗತ್ತು ಸ್ಪರ್ಧೆ ನಡೆಸಲಾಗದೆ ಸೋಲಿಸುತ್ತದೆ. ಹೀಗಾಗಿ ಮಾನವ ಒಳಗೆ ನಡೆದಷ್ಟೂ ಜೀವನದಲ್ಲಿ ವೈರಾಗ್ಯ ಹೆಚ್ಚಾಗುತ್ತಾ ಒಮ್ಮೆ ಎಲ್ಲಾ ಭೌತಿಕ ಆಸೆ,ಆಕಾಂಕ್ಷೆಗಳನ್ನು ಬಿಟ್ಟು ದೂರವಾಗುತ್ತಾನೆ. ಮಾನವನ ಆಸೆ ಆಕಾಂಕ್ಷೆಗಳನ್ನು ನೆರವೇರಿಸಿಕೊಳ್ಳಲು ದೈವ ಸಹಾಯವಿದ್ದರೂ, ಎಲ್ಲಾ ಪಡೆದ ಮೇಲೆ ಸಿಗದ ಆತ್ಮತೃಪ್ತಿ ಯನ್ನು ಕೊಡುವುದಕ್ಕೆ ಎಲ್ಲವನ್ನೂ ದಾನ ಮಾಡಲೇಬೇಕು.

ಇದೊಂದು ಆಧ್ಯಾತ್ಮದ ಸತ್ಯ.ಮಾನವ ಜೀವ ಇರೋವಾಗಲೇ ಎಲ್ಲಾ ದಾನ ಮಾಡಿಕೊಂಡು ಸಮಾಜದಲ್ಲಿ ಜೀವನ ನಡೆಸೋದು ಬಹಳ ಕಷ್ಟ. ಹೀಗಾಗಿ ಜೀವನದ ಕೊನೆಯಲ್ಲಿ ದಾನ ಮಾಡಿದರಾಯಿತು ಅಲ್ಲಿಯವರೆಗೆ ತನ್ನ ಆಸ್ತಿಯನ್ನು ತಾನು ಅನುಭವಿಸಿಕೊಂಡಿರಬಹುದೆನ್ನುವವರಿದ್ದಾರೆ, ಇನ್ನೂ ಕೆಲವರು ಮಕ್ಕಳು, ಮೊಮ್ಮಕ್ಕಳವರೆಗೆ ಆಸ್ತಿ ಹಂಚಿಕೆಯಾಗುವ  ತಯಾರಿ ಮಾಡಿಟ್ಟುಕೊಂಡು ಕೊನೆಗಾಲಕ್ಕೆ ಕಾಯುತ್ತಾರೆ. ಹಲವರಿಗೆ ದಾನ ಯಾರಿಗೆ ಹೇಗೆ ಯಾಕೆ,ಯಾವಾಗ ಮಾಡಬೇಕೆನ್ನುವುದರ ಅರಿವಿಲ್ಲದೆ ಎಲ್ಲಾ ತನಗಾಗಿಯೇ ಎಂದು ಕೂಡಿಟ್ಟು ಕೊನೆಯುಸಿರೆಳೆಯುತ್ತಾರೆ.

- Advertisement -

ಒಟ್ಟಿನಲ್ಲಿ ದೇವರು ಕೊಟ್ಟರೂ ಪೂಜಾರಿ ಬಿಡಲ್ಲ. ಎನ್ನುವಂತೆ ದೇವರು ಬೇಡಿದ್ದೆಲ್ಲಾ ಕೊಡುತ್ತಾನೆ.ಸಿಕ್ಕ ಮೇಲೆ ದೇವರನ್ನೇ ಆಳಲು ಪೂಜಾರಿ ಹೋದರೆ ದೇವರು ಕೊಡುವ ಶಿಕ್ಷೆಯೂ ಮೊದಲು ಪೂಜಾರಿ ಅನುಭವಿಸಲೇಬೇಕಲ್ಲವೆ? ನಮ್ಮ ಆಸೆಗಳಿಗೆ ಕಡಿವಾಣ ಹಾಕಿಕೊಳ್ಳಲು ಜಗತ್ತು ಬಿಡದು.

ಹೀಗಾಗಿ ಹೊರಗೆ ಬಂದ ಮೇಲೆ ಆಸೆಗೆ ತಕ್ಕಂತೆ ಅಧಿಕಾರ,ಸ್ಥಾನ, ಹಣವೆಲ್ಲವನ್ನೂ ನಿಧಾನವಾಗಿಯಾದರೂ ಜೀವಕ್ಕೆ ಸಿಗುತ್ತದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಲು ಬೇಕು ಜ್ಞಾನ. ಒಳಗೆ ಹೊರಗೆ ಆವರಿಸಿರುವ ದೇವಾಸುರರ ಹಿಡಿತಕ್ಕೆ ಸಿಕ್ಕಿದ ಜೀವ ಕಾರಣಮಾತ್ರನಾದರೂ, ಅನುಭವಿಸುವಾಗ ಯಾವ ಶಕ್ತಿ ನಮಗೆ ಸಹಕಾರ ನೀಡುತ್ತದೆ? ಇಲ್ಲ? ಎಂದು ಭೌತಿಕ ಜಗತ್ತು ಅಳೆಯುತ್ತದೆ.

ಕಷ್ಟಕಾಲದಲ್ಲಿ ಸಹಾಯ ಮಾಡೋರೆ ದೇವರು ಎಂದಾಗ ಕಷ್ಟ ತಂದಿಟ್ಟಿರೋದು ಅಸುರರೆ? ಅತಿಯಾದ ಆಸೆ,ಆಕಾಂಕ್ಷೆಗಳು, ಸಾಲದ ಕಡೆಗೆ ಜೀವವನ್ನು ನಡೆಸುತ್ತದೆ. ಕೊನೆಗೆ ಸಾಲವೇ ಶೂಲವಾಗುತ್ತದೆ. ನಮ್ಮ ಬೇಡಿಕೆಗಳ ಹಿಂದಿರುವ ಉದ್ದೇಶ ಸಾತ್ವಿಕವಾಗಿದ್ದರೆ ಬೇಡಿಕೆ ನಿಧಾನವಾಗಿ ಈಡೇರುತ್ತದೆ. ಶೀಘ್ರವಾಗಿ ಆಗಬೇಕಾದರೆ ಇನ್ನೊಬ್ಬರನ್ನು ಆಶ್ರಯಿಸಲೇಬೇಕು.

- Advertisement -

ಮಾನವ ಸಂಘ ಜೀವಿ. ಸಂಘಟನೆಗಳು ಸತ್ಯ, ಧರ್ಮದ ಪರವಿದ್ದರೆ ದೈವರಕ್ಷಣೆ. ನಾವೀಗ ಭಾರತದ ಪ್ರಜೆಗಳಾಗಿದ್ದು ಭಾರತದ ಉದ್ದಾರಕ್ಕಾಗಿ ದೇವರನ್ನು ಬೇಡಿಕೊಂಡರೂ ವಿದೇಶಿಗಳ ಉದ್ದಾರ ಆಗುತ್ತಿದೆ ಎಂದರೆ ಆತ್ಮಾವಲೋಕನ ಮಾಡಿಕೊಳ್ಳಬೇಕಷ್ಟೆ. ನಮ್ಮೊಳಗಿರುವ ಶಿಕ್ಷಣಜ್ಞಾನ, ಶಕ್ತಿ, ಹಣ, ಬಂಡವಾಳವೆಲ್ಲವೂ ವಿದೇಶಿಗರದ್ದೇ ಹೆಚ್ಚಾಗಿದ್ದರೆ ದೇವರು ಕೊಡುವುದು ಸರಿಯೆ? ಆದರೆ ನಾನು ಬದಲಾಗದೆ ದೇಶ ಬದಲಾಗಲು ಕಷ್ಟ.

ಕೊರೊನ ಮಹಾಮಾರಿ ನಮ್ಮನ್ನು ಬಿಟ್ಟು ಹೋಗುತ್ತೇನೆಂದರೂ ಮಾಧ್ಯಮಗಳು, ಮಧ್ಯವರ್ತಿಗಳು ಅದನ್ನು ಮಧ್ಯೆ ನಿಲ್ಲಿಸಿ ಹೋಗಿಲ್ಲ ಹೋಗಿಲ್ಲ ಎಂದು ಮನೆ ಮನೆಗೆ ಕಳಿಸುತ್ತಿದ್ದರೆ ಶಕ್ತಿಯಾದರೂ ಏನುಮಾಡಲು ಸಾಧ್ಯ? ದೇವರಿರೋದು ಮಾನವನೊಳಗೆ, ಅವನು ಏನು ಬೇಡುವನೋ,ತಿಳಿಯುವನೋ, ಹೇಳುವನೋ, ಮಾಡುವನೋ , ಪ್ರಚಾರವಾಗುತ್ತಾ ಅಲೆ ಅಲೆಯಾಗಿ ಗಾಳಿಯಲ್ಲಿ ಸುಳಿಯುತ್ತಿರುತ್ತದೆ.ಅದೇ ಗಾಳಿ ಪಡೆದು ಉಸಿರಾಡುವ ಮಾನವನಿಗೆ ಸಕಾರಾತ್ಮಕವಾಗಿ ಚಿಂತನೆ ನಡೆಸುವ ಶಕ್ತಿ ಇದ್ದರೆ ಆರೋಗ್ಯ.

ಇಲ್ಲವಾದರೆ ರೋಗ. ಒಟ್ಟಿನಲ್ಲಿ ಆಧ್ಯಾತ್ಮ ಸತ್ಯ ಭೌತಿಕ ಸತ್ಯಕ್ಕಿಂತ ಎತ್ತರದಲ್ಲಿದ್ದರೂ ಭೂಮಿಯಲ್ಲಿ ಎತ್ತರಕ್ಕೆ ನೋಡುವುದಕ್ಕೆ ಕಣ್ಣಿನ ಎರಡೂ ಶಕ್ತಿ ಬೇಕು. ಒಂದು ಆಂತರಿಕ ಇನ್ನೊಂದು ಭೌತಿಕ ಕಣ್ಣು. ಸಮಾನತೆಯ ಜೀವನದಿಂದ ಮಾನವೀಯತೆ ಬೆಳೆಯುತ್ತದೆ. ಅಸಮಾನತೆಯಿಂದ ಅಸುರತೆ ಬೆಳೆಯುತ್ತದೆ.

ಯುದ್ದವಾದರೆ ಎರಡೂ ಶಕ್ತಿ ಹೋರಾಡುತ್ತದೆ. ಅಂತ್ಯ ಎರಡಕ್ಕೂ ಇರುತ್ತದೆ. ಆದರೆ, ಭೂಮಿಯಲ್ಲಿ ಶಾಂತಿ ಕಾಪಾಡಲು ಆಧ್ಯಾತ್ಮ ದ ಅಗತ್ಯವಿದೆ.ನಿನ್ನ ನೀ ತಿಳಿದು ನಡೆದಂತೆಲ್ಲಾ ಆ ಪರಾಶಕ್ತಿಯ ಕಡೆಗೆ ಜೀವ ನಡೆಯುತ್ತದೆ. ಕೊಡೋದು ಪಡೆಯೋದೆಲ್ಲಾ ಅದೇ ಶಕ್ತಿಯಾದಾಗ ಬೇಡೋದು ಯಾರು? ಏನನ್ನು ಬೇಡಬೇಕು? ಜ್ಞಾನವೆಂಬ ಆಸ್ತಿ ಬೇಕಾದರೆ ಹಣವನ್ನು ದಾನ ಮಾಡಬೇಕು. ದಾನ ಮಾಡುವುದಕ್ಕೆ ಜ್ಞಾನವಿರಬೇಕು.

ಜ್ಞಾನಿಗಳಲ್ಲಿ ನಾನೆಂಬ ಅಹಂಕಾರ,ಸ್ವಾರ್ಥ ಹೆಚ್ಚಾಗಿರೋದಿಲ್ಲ.ಹೀಗಾಗಿ ಏನೇ ಮಾಡಿದರೂ ಅದೊಂದು ಪರಮಾತ್ಮನ ಪ್ರೇರಣಾಶಕ್ತಿಯಾಗಿರುತ್ತದೆ. ಇಂತಹ ಜ್ಞಾನ ಶಿಕ್ಷಣದೊಳಗಿರಬೇಕು.ಶಿಕ್ಷಣ ನೀಡುವವರು ಅನುಭವ ಜ್ಞಾನ ಹೊಂದಿರಬೇಕು. ಅನುಭವಿಸದೆ ಸತ್ಯದರ್ಶನ ಆಗೋದಿಲ್ಲ.ಸತ್ಯ ತಿಳಿಯದೆ ದೇವರು ಕಾಣೋದಿಲ್ಲ.ಕಾರಣ ಸತ್ಯವೆ ದೇವರು. ನಮ್ಮ ಮೂಲ ಧರ್ಮ ಕರ್ಮವೆ ನಮ್ಮನ್ನು ಹುಟ್ಟಿಸಿ, ಬೆಳೆಸಿ, ನಡೆಸಿದ್ದರೂ ಅದನ್ನು ಬಿಟ್ಟು ಹೊರಬಂದ ಜೀವಕ್ಕೆ ತಿರುಗಿ ನಡೆಯಲಾಗದೆ ಅತಂತ್ರವಾಗಿದ್ದರೆ, ಕಷ್ಟಪಟ್ಟು ಒಳಗೆ ನಡೆಯಬೇಕಷ್ಟೆ.  ಇಲ್ಲ ನಡೆಯುವವರಿಗೆ ಸಹಕಾರ ನೀಡಿದರೂ ಉತ್ತಮ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -

More Articles Like This

- Advertisement -
close
error: Content is protected !!
Join WhatsApp Group