ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಸಾರ್ವಜನಿಕರ ಸಹಭಾಗಿತ್ವ ಅವಶ್ಯವಿದೆ – ಬಾಲರಾಜ್ ಭಜಂತ್ರಿ

Must Read

ಶಿಕ್ಷಕನ ವೃತ್ತಿಯಲ್ಲಿ ಅಧ್ಯಯನ, ಹೊಸ ಆಲೋಚನಾ ಕ್ರಮ, ಕ್ರಿಯಾಶೀಲ ಬೋಧನೆ ಅಗತ್ಯ – ಡಾ. ಅಣ್ಣಾಸಾಹೇಬ ಎಂ. ಗುರವ

ಸವದತ್ತಿ: ಆವಿಷ್ಕಾರ, ಸೃಜನಶೀಲತೆ ಮತ್ತು ಶಿಕ್ಷಣ ಈ ಇವುಗಳಲ್ಲಿ ಒಂದಕ್ಕೊಂದು ಸಂಬಂಧವಿದೆ. ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ಆಸಕ್ತಿ ಮೂಡುವಂತೆ ಮಾಡಲು ಶಿಕ್ಷಕರು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪಠ್ಯವನ್ನು...

ಆದರ್ಶ ವಿದ್ಯಾಲಯದ ಪ್ರಕಟಣೆ

ಸಿಂದಗಿ: ಆದರ್ಶ ವಿದ್ಯಾಲಯಕ್ಕೆ 2021-22ನೇ ಸಾಲಿನ 6ನೇ ತರಗತಿಗೆ ದಾಖಲಾತಿ ಪಡೆಯಲು ನಡೆಸುವ ಪ್ರವೇಶ ಪರೀಕ್ಷೆಯು ಜುಲೈ 27 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ...

ಜಾನುವಾರು ವೈದ್ಯ ಸಿಬ್ಬಂದಿ ಒದಗಿಸಲು ಆಗ್ರಹ

ಸಿಂದಗಿ: ತಾಲೂಕಿನ ಗೋಲಗೇರಿ ಗ್ರಾಮದ ಪಶು ಆಸ್ಪತ್ರೆಗೆ ವೈದ್ಯಾಧಿಕಾರಿ ಸೇರಿದಂತೆ ಸಿಬ್ಬಂದಿ ನೇಮಕ ಮಾಡುವಂತೆ ಆಗ್ರಹಿಸಿ ಕರ್ನಾಟಕ ಟಿಪ್ಪು ಸುಲ್ತಾನ ಮಹಾವೇದಿಕೆ ಕಾರ್ಯಕರ್ತರು ಮತ್ತು ರೈತರು...

ಬೆಳಗಾವಿ– ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಿವಿಧ ತಾಲ್ಲೂಕುಗಳ ಆಶ್ರಯದಲ್ಲಿ ಚ. ಕಿತ್ತೂರು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಘಟಕದ ಸಹಯೋಗದಲ್ಲಿ ಜರುಗಿದ ವೇಬಿನಾರ ಉಪನ್ಯಾಸ ಮಾಲಿಕೆ -3ರ ಕಾರ್ಯಕ್ರಮ ಆಯೋಜನೆಗೊಂಡಿತ್ತು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಪರಮಪೂಜ್ಯ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ರಾಜಗುರು ಸಂಸ್ಥಾನ ಕಲ್ಮಠ ವಹಿಸಿಕೊಂಡಿದ್ದರು.

ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಮಂಗಲ ಮೆಟಗುಡ್ ವಹಿಸಿಕೊಂಡು ಮಾತನಾಡಿ, ಸಾರ್ವಜನಿಕ ಜೀವನದಲ್ಲಿ ಸರ್ಕಾರಗಳ ಯೋಜನೆಗಳು ಪಾತ್ರ ಪ್ರಮುಖವಾಗಿದ್ದು ಅವುಗಳು ಜನರಿಗೆ ತಲುಪಿಸಲು ಜ್ಞಾನದ ಕೊರತೆ ಇದ್ದು ಇಂತಹ ಉಪನ್ಯಾಸಗಳ ಮೂಲಕ ಅನುಭವಿಕರ ಮಾರ್ಗದರ್ಶನದಲ್ಲಿ ಸಮಾಜದ ಇತರೆ ವರ್ಗದ ಜನರಿಗೆ ಸೌಲಭ್ಯಗಳು ದೊರಕುವಂತೆ ಮಾಡಲು ಸಹಕಾರಿಯಾಗಿದೆ, ಎಂದು ನುಡಿದರು.

- Advertisement -

ಉಪನ್ಯಾಸಕರಾಗಿ ಸಾಹಿತಿ ಹಾಗೂ ಲೋಂಡಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಬಾಲರಾಜ ಭಜಂತ್ರಿ ಸರ್ಕಾರದ ಯೋಜನೆಗಳ ಕುರಿತು ಸವಿಸ್ತಾರವಾಗಿ ವಿವರಣೆ ನೀಡಿದರು, ಎನ್ ಆರ್ ಜಿ, ಸ್ವಚ್ಛ ಭಾರತ ಅಭಿಯಾನ, ಶೌಚಾಲಯ ನಿರ್ಮಾಣ, ವಸತಿ ನಿರ್ಮಾಣ, ಕೃಷಿಕರ ಸೌಲಭ್ಯಗಳು, ಜಾಬ್ ಕಾರ್ಡ್, ಕರಕುಶಲ ಕೈಗಾರಿಕೆಗಳ, ಅರಣ್ಯೀಕರಣ, ತೋಟಗಾರಿಕೆ ಮಾಹಿತಿ ಕುರಿತು ವಿವರವಾಗಿ ಮಾಹಿತಿಯನ್ನು ಹಂಚಿಕೊಂಡು ಅದಕ್ಕೆ ಉಪಯುಕ್ತ ಸರ್ಕಾರಿ ಸವಲತ್ತುಗಳ ಪಡೆಯುವ ಕುರಿತು ಮನವರಿಕೆ ಮಾಡಿಕೊಟ್ಟರು,

ನಾಟಕ ರಚನಾಕಾರ , ಸಾಹಿತಿ ರಾಯಬಾಗದ ಕುಮಾರ್ ಅವಳೆ, ಅವರು, ಆಶಯ ನುಡಿಗಳನ್ನು ಆಡಿದರು, ಯಶಸ್ವಿ ಮೂರನೇ ಕಾರ್ಯಕ್ರಮವನ್ನು ಆಯೋಜನೆ ಮಾಡಿ ಪ್ರಾಸ್ತಾವಿಕವಾಗಿ, ಚ. ಕಿತ್ತೂರು ತಾಲ್ಲೂಕು ಕಸಾಪ ಅಧ್ಯಕ್ಷರಾದ ಡಾ ಶೇಖರ ಹಲಸಗಿ ಅವರು ಕಾರ್ಯಕ್ರಮ ಸಂಯೋಜಿಸಿ ಪ್ರಾರಂಭದಲ್ಲಿ ಎಲ್ಲರನ್ನೂ ಸ್ವಾಗತಿಸಿದರು.

ವೆಬಿನಾರ ಉಪನ್ಯಾಸ ಮಾಲಿಕೆ ಯಲ್ಲಿ ಬೆಳಗಾವಿ ಜಿಲ್ಲಾ ಕ ಸಾ ಪ ಗೌರವ ಕಾರ್ಯದರ್ಶಿಗಳಾದ ಎಂ ವೈ ಮೆಣಸಿನಕಾಯಿ, ಶ್ರೀಮತಿ ಜ್ಯೋತಿ ಬಾದಾಮಿ ಹಾಗೂ ಕೋಶಾಧ್ಯಕ್ಷರಾದ, ಶ್ರೀಮತಿ ರತ್ನಪ್ರಭಾ ಬೆಲ್ಲದ ಉಪಸ್ಥಿತರಿದ್ದರು. ಅತ್ಯಂತ ಆಸಕ್ತಿಯಿಂದ ಆಲಮಟ್ಟಿಯ ಡಾ ಯಲ್ಗುರೇಶ ಸಂಕನಾಳ ರವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರಾರಂಭದಲ್ಲಿ ಕನ್ನಡದ ಕಣ್ವ ಕಾಗವಾಡದ ದಾದಾ ಅಲಾಸೆ ಯವರು ಕನ್ನಡದ ಭುವನೇಶ್ವರಿಯ ಹಾಡನ್ನು ಹಾಡಿದರು. ಕೊನೆಯಲ್ಲಿ ಕಸಾ ಪ ಗೌರವ ಕಾರ್ಯದರ್ಶಿ ಡಾ. ಎಸ್ ಬಿ ದಳವಾಯಿಯವರು ವಂದಿಸಿದರು.

ಯಶಸ್ವಿ ಕಾರ್ಯಕ್ರಮದಲ್ಲಿ ಶ್ರೀಕಾಂತ ಗಣಾಚಾರಿ ದಾನೇಶ್ವರ ಸಾಣಿಕೊಪ್ಪ, ಖಾನಾಪುರ್ ತಾಲೂಕ ಅಧ್ಯಕ್ಷರಾದ ವಿಜಯ ಬಡಿಗೇರ್, ಲೇಖಕಿ ಶಬಾನ ಅಣ್ಣಿ ಗೇರಿ ಪ್ರಕಾಶ್ ಹಲಸಗಿ, ಶ್ರೀಮತಿ. ಲಲಿತಾ ಕ್ಯಾಸ ನವರ, ಯರಗಟ್ಟಿ ತಾಲೂಕಾ ಅಧ್ಯಕ್ಷರಾದ ರಾಜೇಂದ್ರ ವಾಲಿ ಮಹಾಂತೇಶ್ ಯರಗಟ್ಟಿ ವೀರಕುಮಾರ್ ಹಲಸಗಿ ಅನ್ನಪೂರ್ಣ ಕನೋಜ್, ಡಾ ಎಸ ಕೆ ಉಕ್ಕಲಿ ಡಾ ಚಂದ್ರಣ್ಣ ಗಣಾಚಾರಿ ಮುಂತಾದವರು ಪಾಲ್ಗೊಂಡಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಶಿಕ್ಷಕನ ವೃತ್ತಿಯಲ್ಲಿ ಅಧ್ಯಯನ, ಹೊಸ ಆಲೋಚನಾ ಕ್ರಮ, ಕ್ರಿಯಾಶೀಲ ಬೋಧನೆ ಅಗತ್ಯ – ಡಾ. ಅಣ್ಣಾಸಾಹೇಬ ಎಂ. ಗುರವ

ಸವದತ್ತಿ: ಆವಿಷ್ಕಾರ, ಸೃಜನಶೀಲತೆ ಮತ್ತು ಶಿಕ್ಷಣ ಈ ಇವುಗಳಲ್ಲಿ ಒಂದಕ್ಕೊಂದು ಸಂಬಂಧವಿದೆ. ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ಆಸಕ್ತಿ ಮೂಡುವಂತೆ ಮಾಡಲು ಶಿಕ್ಷಕರು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪಠ್ಯವನ್ನು...
- Advertisement -

More Articles Like This

- Advertisement -
close
error: Content is protected !!