spot_img
spot_img

ಕರ್ಪೂರ ದೀಪದ ಮಹತ್ವ ಮತ್ತು ಅದರ ಲಾಭ

Must Read

🤩🤩ಪಂಚೋಪಚಾರ ಪೂಜೆಯಲ್ಲಿ ‘ಕರ್ಪೂರದೀಪ ಹಚ್ಚುವ ಉಪಚಾರ’ ಇಲ್ಲದಿದ್ದರೂ, ಕರ್ಪೂರವು ಸಾತ್ತ್ವಿಕವಾಗಿರುವುದರಿಂದ ಕರ್ಪೂರದೀಪವನ್ನು ಹಚ್ಚುವುದರಿಂದ ಹೆಚ್ಚಿನ ಸಾತ್ತ್ವಿಕತೆ ಸಿಗಲು ಸಹಾಯವಾಗುತ್ತದೆ. ಇದಕ್ಕಾಗಿ ನೈವೇದ್ಯ ಅರ್ಪಿಸಿದ ನಂತರ ಕರ್ಪೂರದೀಪವನ್ನು ಹಚ್ಚಬಹುದು.

“ಲಾಭ”

🌼🌼‘ಕರ್ಪೂರ’ ದೀಪವನ್ನು ಹಚ್ಚುವುದರಿಂದ ಅಶ್ವಮೇಧ ಯಾಗದ ಪುಣ್ಯವು ಸಿಗುತ್ತದೆ.

ಅಶ್ವಮೇಧ ಯಾಗದ ವೈಶಿಷ್ಟ್ಯ

🌼🌼‘ಅಶ್ವಮೇಧವು ಎಲ್ಲಕ್ಕಿಂತ ದೊಡ್ಡ ಯಾಗವಾಗಿದೆ. ಅಶ್ವವು (ಕುದುರೆ) ಶಕ್ತಿ ಮತ್ತು ವೇಗದ ಪ್ರತೀಕವಾಗಿದೆ. ‘ಪ್ರಜಾಪತಿಯ ಎಲ್ಲ ಶಕ್ತಿಯು ಅಶ್ವದಲ್ಲಿ ಒಟ್ಟುಗೂಡಿರುತ್ತದೆ’ ಎಂದು ಹೇಳುತ್ತಾರೆ. ಅಶ್ವಮೇಧ ಯಾಗದಿಂದ ಉತ್ಪನ್ನವಾಗುವ ಶಕ್ತಿಯನ್ನು ವಿರಾಟಪುರುಷರೂಪಿ ಶಿವರೂಪಿ ಈಶ ತತ್ತ್ವದೊಂದಿಗೆ ತುಲನೆ ಮಾಡಲಾಗುತ್ತದೆ.

🌼🌼ಕರ್ಪೂರ ರೂಪ ದೀಪದಿಂದ ಸ್ವಯಂ ಶಿವರೂಪಿ ಪುರುಷ ಶಕ್ತಿಯು ಜಾಗೃತವಾಗುವುದರಿಂದ ಅದರ ಸಹವಾಸವು ನಮಗೆ ದೊರಕಿ ನಾವು ಬಲಶಾಲಿ ಮತ್ತು ಕ್ರಿಯೆಯಲ್ಲಿ ಅಶ್ವದಂತೆಯೇ ವೇಗವಂತರಾಗುತ್ತೇವೆ. ಈ ದೀಪದ ಸಹವಾಸದಿಂದ ಅಶ್ವಮೇಧ ಮಾಡಿದ ನಂತರ ಸಿಗುವ ಶಕ್ತಿಯಂತೆ ಪುಷ್ಟಿವರ್ಧಕ ಶಿವರೂಪಿ ಶಕ್ತಿಯು ಸಿಗುತ್ತದೆ; ಆದುದರಿಂದ ಕರ್ಪೂರದೀಪಕ್ಕೆ ಮಹತ್ವದ ಸ್ಥಾನ ನೀಡಿರುವುದು ಕಂಡುಬರುತ್ತದೆ.

🌼🌼ವಾಯುಮಂಡಲದಲ್ಲಿನ ತ್ರಾಸದಾಯಕ ಸ್ಪಂದನಗಳು ಲಯವಾಗಲು ಸಹಾಯವಾಗುವುದು ಮತ್ತು ಅತ್ಯಂತ ಕಡಿಮೆ ಕಾಲಾವಧಿಗಾಗಿ ಕಾರ್ಯನಿರತವಾಗುವ ಕರ್ಪೂರದೀಪವು ಅವ್ಯಕ್ತ ಭಾವದ ಸ್ತರದಲ್ಲಿನ ಜೀವಕ್ಕೇ ಲಾಭವಾಗುವುದು.

🌼🌼ಕರ್ಪೂರದೀಪದ ಬಳಿ ಶಿವರೂಪಿ ವಿರಾಟ ಪುರುಷರೂಪಿ ತೇಜದ ವಾಸ್ತವ್ಯವಿರುವುದರಿಂದ, ಇಂತಹ ದೀಪದ ಸಾನ್ನಿಧ್ಯದಿಂದ ವಾಯುಮಂಡಲದಲ್ಲಿನ ತ್ರಾಸದಾಯಕ ಸ್ಪಂದನಗಳು ಲಯವಾಗಲು ಸಹಾಯವಾಗುತ್ತದೆ.

🌼🌼ಲಯವಾಗುವ ಪ್ರಕ್ರಿಯೆಯು ಪುನರ್ನಿರ್ಮಿತ ರಹಿತವಾಗಿರುವುದರಿಂದ ಈ ದೀಪದ ಸಾನ್ನಿಧ್ಯವು ವಿಶೇಷ ಲಾಭದಾಯಕವಾಗಿದೆ, ಆದರೆ ಕರ್ಪೂರದೀಪವು ಅತ್ಯಂತ ಕಡಿಮೆ ಕಾಲಾವಧಿಗಾಗಿ ಕಾರ್ಯನಿರತವಾಗುವುದರಿಂದ ಅದರಲ್ಲಿನ ಶಿವರೂಪಿ ತೇಜದ ಸಹವಾಸವನ್ನು ದೀರ್ಘಕಾಲ ಪಡೆದುಕೊಳ್ಳಲು ಅವ್ಯಕ್ತ ಭಾವದ ಸ್ತರದಲ್ಲಿರಬೇಕಾಗುತ್ತದೆ.


🚩ಶ್ರೀ ಭಗವಂತ ಪರಶುರಾಮ🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ

L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.
ph no :9480916387

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!