spot_img
spot_img

ಹೈಟೆಕ್ ಶೌಚಾಲಯ ಸಂಕೀರ್ಣ ಉದ್ಘಾಟನೆ

Must Read

ಇಂದು ರಾಜಲಕ್ಷ್ಮಿ ಚಿಲ್ಡ್ರನ್ ಫೌಂಡೇಶನ್ ನ ಸಂಸ್ಥಾಪಕ ನಿರ್ದೇಶಕರಾದ ಡಾ. ವಿಜಯಲಕ್ಷ್ಮಿ ಎಸ್. ಕುಲಗೋಡ ಹಾಗೂ ಡಾ. ಶಶಿಕಾಂತ ವಾಯ್. ಕುಲಗೋಡ ರವರು ತಮ್ಮ ಸುಪುತ್ರ ಡಾ. ವಿಶಾಲ ರವರ ವಿವಾಹದ ಸವಿನೆನಪಿನ ಕೊಡುಗೆಯಾಗಿ ನಿರ್ಮಿಸಿರುವ ನಾವಿನ್ಯಯುತ ನೂತನ ಹೈಟೆಕ್ ಶೌಚಾಲಯ ಸಂಕೀರ್ಣವನ್ನು ನೂತನ ದಂಪತಿಗಳಾದ ಡಾ. ವಿಶಾಲ ಹಾಗೂ ಡಾ.ಶಿವಾನಿ ಯವರು ಉದ್ಘಾಟಿಸಿ ಕೆ ಎಚ್ ಪಿ ಎಸ್ ನಂ 7 ಫುಲಬಾಗ ಗಲ್ಲಿ ಶಾಲೆಗೆ ಹಸ್ತಾಂತರಿಸಿದರು.

ಇದೇ ಸಂದರ್ಭದಲ್ಲಿ ಡಾ. ವಿಜಯಲಕ್ಷ್ಮಿ ಎಸ್. ಕುಲಗೋಡ, ಡಾ. ಶಶಿಕಾಂತ ವಾಯ್. ಕುಲಗೋಡ ಹಾಗೂ ಕುಮಾರ ಆಕಾಶ ಎಸ್. ಕುಲಗೋಡ ರವರು ರಾಜಲಕ್ಷ್ಮಿ ಚಿಲ್ಡ್ರನ್ ಫೌಂಡೇಶನ್ ವತಿಯಿಂದ ನಿರ್ಮಿಸಿರುವ ನೂತನ ಸಾಂಸ್ಕೃತಿಕ ವೇದಿಕೆ ಮತ್ತು ಹೈಟೆಕ್ ಕೈತೊಳೆಯುವ ಘಟಕಗಳನ್ನು ಉದ್ಘಾಟಿಸಿದರು.

ಅಭಿಯಂತರರಾದ ಗಿರಿಧರ ಜೋಗಿನ ರವರು ನೈಪುಣ್ಯಯುತ ತಾಂತ್ರಿಕತೆಯ ಮೂಲಕ ಈ ಕಾಮಗಾರಿಗಳ ನಿರ್ಮಾಣ ಕಾರ್ಯ ಮಾಡಿದ್ದಾರೆ.

ಡಾ, ರವೀಂದ್ರ ಎನ್. ಗುರವನ್ನವರ, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಆಯ್ ಡಿ. ಹಿರೇಮಠ, ಬಿ ಆರ್ ಪಿ. ರಿಜ್ವಾನ್ ನಾವಗೇಕರ, ಸಿ ಆರ್ ಪಿ ಶ್ರೀಮತಿ ಮಂಜುಳಾ ಶಿರೆಪ್ಪನವರ, ಪ್ರಧಾನಗುರುಗಳಾದ ಎ ಡಿ. ಸಾಗರ, ಸಂಜಯ ಪಾಟೀಲ ಮೊದಲಾದವರು ಉಪಸ್ಥಿತರಿದ್ದರು.

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!