spot_img
spot_img

ಜಾರಕಿಹೊಳಿ ಕುಟುಂಬಕ್ಕೆ ಜನರೇ ಬ್ರ್ಯಾಂಡ್: ಸರ್ವೋತ್ತಮ ಜಾರಕಿಹೊಳಿ

Must Read

spot_img

ಅಭಿಮಾನಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡ ಸರ್ವೋತ್ತಮ.

ಗೋಕಾಕ: ಜನರ ಆಶೀರ್ವಾದವೇ ನಮ್ಮ ಕುಟುಂಬಕ್ಕೆ ಶ್ರೀರಕ್ಷೆಯಾಗಿದೆ. ಕಳೆದ ನಾಲ್ಕು ದಶಕಗಳಿಂದ ಸಾರ್ವಜನಿಕ ಕ್ಷೇತ್ರದಲ್ಲಿರುವ ನಮ್ಮ ಕುಟುಂಬಕ್ಕೆ ಎಲ್ಲ ರೀತಿಯ ಸಹಕಾರ ಹಾಗೂ ಬೆಂಬಲ ನೀಡುತ್ತಿರುವ ಜನರೇ ನಮ್ಮ ಕುಟುಂಬಕ್ಕೆ ಬ್ರ್ಯಾಂಡ್ ಆಗಿದ್ದಾರೆಂದು ಯುವ ಮುಖಂಡ ಸರ್ವೋತ್ತಮ ಭೀಮಶಿ ಜಾರಕಿಹೊಳಿ ತಿಳಿಸಿದರು.

ಶನಿವಾರದಂದು ನಗರದ ಮಹಾಲಕ್ಷ್ಮೀ ದೇವಸ್ಥಾನದ ಸಭಾ ಭವನದಲ್ಲಿ ನಡೆದ ತಮ್ಮ 23ನೇ ಹುಟ್ಟು ಹಬ್ಬದ ಸಮಾರಂಭದಲ್ಲಿ ಅಭಿಮಾನಿಗಳಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಜನರ ಪ್ರೀತಿ ವಿಶ್ವಾಸಕ್ಕೆ ಚ್ಯುತಿ ಬರದಂತೆ ಕೆಲಸ ಕಾರ್ಯಗಳನ್ನು ನಿರ್ವಹಿಸಿ ಜನರ ಸೇವೆಯನ್ನು ನಿರಂತರವಾಗಿ ಮಾಡುವುದುದಾಗಿ ತಿಳಿಸಿದರು.

ನಾನು ಜಾರಕಿಹೊಳಿ ಕುಟುಂಬದ ಸದಸ್ಯನಾಗಿ ಅರಭಾಂವಿ ಕ್ಷೇತ್ರದಲ್ಲಿ ಜರುಗುವ ಸಭೆ-ಸಮಾರಂಭಗಳಿಗೆ ಭಾಗಿಯಾಗುತ್ತಿದ್ದೇನೆಯೇ ಹೊರತು ರಾಜಕೀಯದಲ್ಲಿ ಯಾವುದೇ ಮಹತ್ವಾಕಾಂಕ್ಷೆ ಇಟ್ಟುಕೊಂಡಿಲ್ಲ. ಶಾಸಕ ಹಾಗೂ ದೊಡ್ಡಪ್ಪ ಬಾಲಚಂದ್ರ ಜಾರಕಿಹೊಳಿ ಅವರಿಗೆ ಕೆಎಮ್‍ಎಫ್ ಅಧ್ಯಕ್ಷರಾದ ನಂತರ ಹೆಚ್ಚಿನ ಜವಾಬ್ದಾರಿಗಳನ್ನು ನಿಭಾಯಿಸುತ್ತಿರುವುದರಿಂದ ಅವರಿಗೆ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಮಯವನ್ನು ನೀಡಲು ಸಾಧ್ಯವಾಗುತ್ತಿಲ್ಲ ಹೀಗಾಗಿ ಅವರ ಜವಾಬ್ದಾರಿಯನ್ನು ಸ್ವತ: ನಾನೇ ತೆಗೆದುಕೊಂಡು ಅವರ ಮಾರ್ಗದರ್ಶನದಲ್ಲಿ ಕ್ಷೇತ್ರದ ಜನತೆಯ ನಾಡಿ ಮಿಡಿತ ಹಾಗೂ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುವ ಕಾರ್ಯವನ್ನು ಮಾಡುತ್ತಿದ್ದೇನೆ ಎಂದು ಸರ್ವೋತ್ತಮ ಜಾರಕಿಹೊಳಿ ಹೇಳಿದರು.

ಮತ್ತೋರ್ವ ಯುವ ನಾಯಕ ರಾಹುಲ ಸತೀಶ ಜಾರಕಿಹೊಳಿ ಮಾತನಾಡಿ, ಹುಟ್ಟು ಮತ್ತು ಸಾವುಗಳ ಮಧ್ಯೆ ಇರುವ ಜೀವನದಲ್ಲಿ ನಾವು ಮಾಡಿದ ಕಾರ್ಯಗಳು ನಮ್ಮನ್ನು ಬೆಳೆಸುತ್ತವೆ. ಕೆಲವರು ಎಷ್ಟೇ ಅಪಪ್ರಚಾರ ಮಾಡಿದರೂ ಅದಕ್ಕೆ ನಮ್ಮ ಕುಟುಂಬ ಜಗ್ಗುವುದಿಲ್ಲ. ಜಾರಕಿಹೊಳಿ ಸಹೋದರರು ಪ್ರಾಮಾಣಿಕವಾಗಿ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುತ್ತಾ ಬರುತ್ತಿದ್ದಾರೆ ಕಾರಣ ವಿರೋಧಿಗಳ ಅಪಪ್ರಚಾರಗಳಿಗೆ ಯಾರು ಕಿವಿಗೊಡದೇ ನಮ್ಮ ಕುಟುಂಬಕ್ಕೆ ಮುಂದೆಯೂ ಸಹ ಸಹಕಾರ ನೀಡುವಂತೆ ಮನವಿ ಮಾಡಿದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಇಲ್ಲಿಯ ಶೂನ್ಯ ಸಂಪಾದನಾ ಮಠದ  ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ, ಸರ್ವೋತ್ತಮ ಅವರ ವಯಸ್ಸು ಚಿಕ್ಕದಾದರೂ ದೊಡ್ಡ ವಿಚಾರಗಳನ್ನು ತೆಗೆದುಕೊಂಡು ಸಮಾಜವನ್ನು ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಜನರ ಮಧ್ಯೆ ಬೆರೆಯುತ್ತಿರುವುದನ್ನು ನೋಡಿದರೇ ಅವರಲ್ಲಿ ಮುಂದೆ ಭವಿಷ್ಯ ನಾಯಕನಾಗುವ ಎಲ್ಲ ಗುಣ-ಲಕ್ಷಣಗಳು ಇವೆ. ಜಾರಕಿಹೊಳಿ ಸಹೋದರರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಸರ್ವೋತ್ತಮ ಅವರಿಂದ ಸಮಾಜದಲ್ಲಿ ತುಳಿತ್ತಕ್ಕೊಳಗಾದವರನ್ನು ಮೇಲೆತ್ತುವ ಕಾರ್ಯಗಳು ನಡೆಯಲಿ ಎಂದು ಆಶಿಸಿದರು.

ಅರಭಾಂವಿ ದುರದುಂಡೇಶ್ವರ ಮಠದ ಸಿದ್ದಲಿಂಗ ಮಹಾಸ್ವಾಮಿಗಳು, ಹುಣಶ್ಯಾಳ ಪಿ.ಜಿ. ಕೈವಲ್ಯಾಶ್ರಮದ ನಿಜಗುಣಾನಂದ ದೇವರು, ಸುಣಧೋಳಿಯ ಶಿವಾನಂದ ಮಹಾಸ್ವಾಮಿಗಳು, ಬೈಲಹೊಂಗಲದ ಮಹಾಂತೇಶ ಶಾಸ್ತ್ರಿಗಳು, ಮನ್ನಿಕೇರಿಯ ವಿಜಯಸಿದ್ದೇಶ್ವರ ಸ್ವಾಮಿಗಳು ಈ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಸರ್ವೋತ್ತಮ ಜಾರಕಿಹೊಳಿ ಅವರನ್ನು ಸತ್ಕರಿಸಿ ಪುಷ್ಪಾರ್ಚನೆ ಮಾಡಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ, ಎಲ್‍ಇಟಿಯ ವ್ಯವಸ್ಥಾಪಕ ನಿರ್ದೇಶಕ ಸನತ ಭೀಮಶಿ ಜಾರಕಿಹೊಳಿ, ಪ್ರಭಾ ಶುಗರ್ಸ ಅಧ್ಯಕ್ಷ ಅಶೋಕ ಪಾಟೀಲ, ಲೆಕ್ಕ ಪರಿಶೋಧಕ ಸೈದಪ್ಪ ಗದಾಡಿ, ಮುಖಂಡರಾದ ಬಸಗೌಡ ಪಾಟೀಲ, ಕೆಂಚನಗೌಡ ಪಾಟೀಲ, ರಾಜೇಂದ್ರ ಸಣ್ಣಕ್ಕಿ, ಅಶೋಕ ನಾಯಿಕ, ರಾಮಣ್ಣ ಮಹಾರಡ್ಡಿ, ಎಮ್.ಆರ್.ಭೋವಿ, ಬಿ.ಡಿ.ಪಾಟೀಲ, ಬಸವರಾಜ ಕಲ್ಯಾಣಶೆಟ್ಟಿ, ವಿಠ್ಠಲ ಸವದತ್ತಿ, ಪರ್ವತಗೌಡ ಪಾಟೀಲ, ಜಯಾನಂದ ಹುಣಚ್ಯಾಳಿ, ಬಸವರಾಜ ಸಾಯಣ್ಣವರ, ಅಬ್ಬಾಸ ದೇಸಾಯಿ, ಗಣಪತಿ ಈಳಿಗೇರ, ಮಲೀಕ ಹುಣಶ್ಯಾಳ, ರಮೇಶ ಮಾದರ, ರವಿ ಪರುಶೆಟ್ಟಿ, ಮುತ್ತೆಪ್ಪ ಕುಳ್ಳೂರ, ಮಹಾದೇವ ಪತ್ತಾರ, ಬಿ.ಎಚ್.ಪಾಟೀಲ, ರಾಮಚಂದ್ರ ಕಾಕಡೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಶಿಕ್ಷಕ ಅವಣ್ಣ ಕೋಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸರ್ವೋತ್ತಮ ಜಾರಕಿಹೊಳಿ ಅವರನ್ನು ಗೋಕಾಕ ಮತ್ತು ಅರಭಾಂವಿ ಮತಕ್ಷೇತ್ರದ ಸಾವಿರಾರು ಅಭಿಮಾನಿಗಳು ಸತ್ಕರಿಸಿದರು.

ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ತ ಸದಸ್ಯ ಲಖನ್ ಜಾರಕಿಹೊಳಿ ಆಗಮಿಸಿ ಸರ್ವೋತ್ತಮ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದರು.

- Advertisement -
- Advertisement -

Latest News

ಸೈನಿಕರಂತೆ ಸದಾ ಸೇವೆ ಸಲ್ಲಿಸುವ ಪೊಲೀಸರ ಕಾರ್ಯ ಸ್ತುತ್ಯರ್ಹ- ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಸಾರ್ವಜನಿಕರ ನೆಮ್ಮದಿ ಬದುಕಿಗೆ ಪೊಲೀಸರು ರಕ್ಷಕರಾಗಿ ಸೇವೆ ಸಲ್ಲಿಸುತ್ತಿರುವುದು ಸ್ತುತ್ಯರ್ಹವೆಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ ವ್ಯಕ್ತಪಡಿಸಿದರು. ರವಿವಾರದಂದು ತಾಲೂಕಿನ ಕುಲಗೋಡ...
- Advertisement -

More Articles Like This

- Advertisement -
close
error: Content is protected !!