ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

Must Read

ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಯೇ ನನ್ನ ಪರಮ ಗುರಿ : ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ

ನಿಪ್ಪಾಣಿಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ಧೇಶಿಸಿ ಪ್ರಚಾರ ಮಾಡಿದ ಲಖನ್ ನಿಪ್ಪಾಣಿ: ಜಿಲ್ಲೆಯ ಸರ್ವತೋಮುಖ ಏಳ್ಗೆಗಾಗಿ ಹಾಗೂ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಲು ಪ್ರಥಮ ಪ್ರಾಶಸ್ತ್ಯದ...

ಸುನಿಲಗೌಡ ಪಾಟೀಲ್ ಅವರ ಪರವಾಗಿ ಕಾಂಗ್ರೆಸ್ ಮುಖಂಡರ ಮತಯಾಚನೆ

ಸಿಂದಗಿ: ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿ ಸುನಿಲಗೌಡ ಪಾಟೀಲ್ ಅವರ ಪರವಾಗಿ ಕಾಂಗ್ರೆಸ್ ನಾಯಕರು ಯರಗಲ್, ಗಬಸಾವಳಗಿ, ಮೋರಟಗಿ, ಬಗಲೂರ ಗ್ರಾಮ...

ರಾಜಕೀಯ ದ್ವೇಷ; ಮಾಜಿ ಪಟ್ಟಣ ಪಂಚಾಯಿತಿಯ ಸದಸ್ಯನ ಭೀಕರ ಹತ್ಯೆ

ಸಿಂದಗಿ: ನೂತನ ತಾಲೂಕು ಆಲಮೇಲ ಪಟ್ಟಣದ ಗಣೇಶ ನಗರದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹತ್ತಿರ ರಾತ್ರಿ 1.30 ಗಂಟೆಯ ಸುಮಾರಿಗೆ ಮಾಜಿ ಪಟ್ಟಣ ಪಂಚಾಯತಿ...

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ.ದೇವೆಗೌಡರ ಮಕ್ಕಳು ಮೊಮ್ಮಕ್ಕಳು ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದೇವೆ ಕೂಲಿ ಕೊಡಿ ಎನ್ನುತ್ತಿರುವುದು ಹಾಸ್ಯಾಸ್ಪದ ಎಂದು ಕೆಪಿಸಿಸಿ ಎಮ್ ಯಾರ ಎಸ್.ಎಂ.ಪಾಟೀಲ ಗಣಿಹಾರ ವ್ಯಂಗ್ಯವಾಡಿದರು.

ಪಟ್ಟಣದ ಸಂಗಮ ಹೋಟೇಲನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕುಮಾರಸ್ವಾಮಿ ಅವರಿಗೆ ಜೆಡಿಎಸ್ ಗೆಲ್ಲಿಸುವುದಲ್ಲ ಜಾತಿ ಜಾತಿಗಳಲ್ಲಿ ವಿಭಜನೆ ಮಾಡಿ ಬಿಜೆಪಿ ಗೆಲ್ಲಿಸುವುದು ಮುಖ್ಯವಾಗಿದೆ. ಅವರಿಗೆ ಮುಸ್ಲೀಂರ ಮೇಲೆ ಅಷ್ಟು ಗೌರವವಿದ್ದರೆ ದಕ್ಷಿಣ ಕರ್ನಾಟಕದಲ್ಲಿ ಒಬ್ಬ ಮುಸ್ಲೀಂ ಅಭ್ಯರ್ಥಿಯನ್ನು ಕಣಕ್ಕಿಳಿಸಲಿ ಎಂದು ಸವಾಲೆಸೆದ ಅವರು ಈ ರಾಜ್ಯದಲ್ಲಿ ಎಲ್ಲ ಉಪಚುನಾವಣೆಗಳು ನಡೆದಿವೆ ಅಲ್ಲಿ ಬಿಜೆಪಿಯ ಜೊತೆ ಮ್ಯಾಚ್‍ಫಿಕ್ಸ್ ಮಾಡಿಕೊಂಡು ರಾಷ್ಟ್ರ ಹಾಗೂ ರಾಜ್ಯದ ಹುದ್ದೆಗಳ ಘನತೆ ಗಾಂಭೀರ್ಯವನ್ನು ಮರೆತು ಬಿಜೆಪಿಯ ಋಣ ತೀರಿಸಲು ಮುಸ್ಲೀಂರಿಗೆ ಗಾಳವಾಗಿ ಉಪಯೋಗಿಸಿ ಕಾಂಗ್ರೆಸ್‍ನ್ನು ಸೋಲಿಸಲು ಕುತಂತ್ರ ನಡೆಸಿದ್ದಾರೆ. ಈ ತಂತ್ರ ಕುತಂತ್ರ ಒಳತಿರುಳು ಜನತೆಗೆ ಗೊತ್ತಾಗಿದೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಟಾಂಗ್ ನೀಡಿದರು.

ಜಾತ್ಯತೀತ ಕಾಂಗ್ರೆಸ್ ಪಕ್ಷದಿಂದ ಮುಸ್ಲೀಂರಿಗೆ ಅಭದ್ರತೆ ಕಾಡಲಿಲ್ಲ. ಆದರೆ ಬಿಜೆಪಿ ಕೋಮುವಾದಿ ಪಕ್ಷ ಬಂದ ಬಳಿಕ ಕರಾಳ ದಿನಗಳನ್ನು ತಂದು ಪರಿಸ್ಥಿತಿ ಹದಗೆಡಿಸುತ್ತಿದ್ದಾರೆ. ಕಾಂಗ್ರೆಸ್ ಸಂಸ್ಕೃತಿ ಉಗ್ರವಾದಿಗಳಿಗೆ ಬಿರ್ಯಾನಿ ತಿನ್ನಿಸುವುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರು ಹೇಳಿಕೆ ನೀಡಿದ್ದು ಉಗ್ರರನ್ನು ಪೋಷಿಸಿ ಬೆಳೆಸಿದ್ದೆ ಬಿಜೆಪಿ. ಉಗ್ರರನ್ನು ಧಮನ ಮಾಡುವ ಕಾನೂನುಗಳು ಕಾಂಗ್ರಸ್‍ನಲ್ಲಿವೆ ಆದರೆ ಕಂದಹಾರದಲ್ಲಿ ನಡೆದ ಪ್ರಕರಣದಲ್ಲಿ ಕಾನೂನು ಪಾಲನೆ ಮಾಡಲು ಆಸಕ್ತಿ ವಹಿಸುತ್ತಿಲ್ಲ ಎಂದು ದೂರಿದರು.

ಸಿ.ಎ.ಎನ್.ಆರ್.ಸಿ ಜಾರಿಗೆ ತಂದು ಮುಸ್ಲೀಂರ ಮೇಲೆ ತೂಗುಕತ್ತಿ ನೇತಾಡುವಂತೆ ಮಾಡಿದ್ದು ಬಿಜೆಪಿ ಅದಕ್ಕೆ ಮುಸ್ಲೀಂರು ಸ್ವಾಭಿಮಾನ ಜೀವನಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ನಾವೆಲ್ಲರು ಬೆಂಬಲಿಸಬೇಕಾಗಿದೆ. ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಅಪಪ್ರಚಾರದ ಹುನ್ನಾರ ನಡೆಸಿದೆ ಇದಕ್ಕೆ ಈ ಕ್ಷೇತ್ರದ ಜನರು ಸೊಪ್ಪು ಹಾಕುವುದಿಲ್ಲ ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸುಭಾಷ ಛಾಯಾಗೋಳ ವಕೀಲರು, ನಾಗರಾಜ ಲಂಬು, ನೂರಹ್ಮದ ಅತ್ತಾರ ಸೇರಿದಂತೆ ಅನೇಕರಿದ್ದರು.

- Advertisement -
- Advertisement -

Latest News

ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಯೇ ನನ್ನ ಪರಮ ಗುರಿ : ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ

ನಿಪ್ಪಾಣಿಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ಧೇಶಿಸಿ ಪ್ರಚಾರ ಮಾಡಿದ ಲಖನ್ ನಿಪ್ಪಾಣಿ: ಜಿಲ್ಲೆಯ ಸರ್ವತೋಮುಖ ಏಳ್ಗೆಗಾಗಿ ಹಾಗೂ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಲು ಪ್ರಥಮ ಪ್ರಾಶಸ್ತ್ಯದ...
- Advertisement -

More Articles Like This

- Advertisement -
close
error: Content is protected !!