Homeಸುದ್ದಿಗಳುಜೇವೂರ ಗುರುಗಳು ಶಿಕ್ಷಣದೊಂದಿಗೆ ಸಂಸ್ಕಾರವನ್ನು ನೀಡಿದರು - ಮುಕ್ತಾನಂದ ಪೂಜ್ಯರು

ಜೇವೂರ ಗುರುಗಳು ಶಿಕ್ಷಣದೊಂದಿಗೆ ಸಂಸ್ಕಾರವನ್ನು ನೀಡಿದರು – ಮುಕ್ತಾನಂದ ಪೂಜ್ಯರು

ಮುನವಳ್ಳಿಃ “ಗುರುವನ್ನು ಮೀರಿಸುವ ಶಿಷ್ಯನಿರಬೇಕು.ಅದಕ್ಕೆ ಗುರುವು ಕೂಡ ಸಂತಸ ಪಡುವ ಜೊತೆಗೆ ಇಂತಹ ಶಿಷ್ಯ ದೊರಕಿದ್ದು ನನ್ನ ಭಾಗ್ಯ ಎನ್ನುವಂತೆ ಮುನವಳ್ಳಿಯಲ್ಲಿ ಸಕಲ ಜನರಿಗೆ ಶಿಕ್ಷಣದ ದಾರಿದೀಪವಾಗುವ ಶಿಕ್ಷಣ ಸಂಸ್ಥೆಯನ್ನು ತೆರೆಯುವ ಮೂಲಕ ಜೇವೂರ ಗುರುಗಳು ತಮ್ಮ ಶಿಷ್ಯನಿಗೆ ನೀಡಿದ ಸಂಸ್ಕಾರ ಅವರು ವಿಕಲಚೇತನ ಮಕ್ಕಳ ಶಾಲೆ ತೆರೆಯುವಂತೆ ಆಯಿತು.ಇದು ಗುರುವನ್ನು ಶಿಷ್ಯ ಮೀರಿಸುವ ರೀತಿಯ ಕಾರ್ಯ. ಜೇವೂರ ಗುರುಗಳು ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ನೀಡಿದರು. ಮನುಷ್ಯನಿಗೆ ಶಾಂತಿ ನೆಮ್ಮದಿ ನೀಡುವುದು ಸಂಸ್ಕಾರ ಮತ್ತು ಸಂಸ್ಕೃತಿ.”ಎಂದು ಶ್ರೋತ್ರೀಯ ಬ್ರಹ್ಮನಿಷ್ಠ ಸದ್ಗುರು ಮುಕ್ತಾನಂದ ಪೂಜ್ಯರು ಹೇಳಿದರು.

ಅವರು ಪಟ್ಟಣದ ಶ್ರೀ ರೇಣಮ್ಮತಾಯಿ ಯಲಿಗಾರ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಂಗಳವಾರ  ಜರುಗಿದ ದಿವಂಗತ ವ್ಹಿ.ಪಿ.ಜೇವೂರ ಗುರುಗಳ ೧೦೧ ನೇ ಜಯಂತಿ ಉತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗದಗ ಶಿವಾನಂದ ಮಠದ ಪರಮಪೂಜ್ಯ ಶರಣೆ ಮುಕ್ತಾತಾಯಿಯವರು ಮಾತನಾಡಿ, “ಏನೂ ಇಲ್ಲದವರು ಸಾಧನೆ ಮಾಡುವುದು ಮಹತ್ವದ್ದು ಜೀವನದಲ್ಲಿ ಎಲ್ಲವೂ ಇದ್ದೂ ಕೂಡ ಸಾಧನೆ ಮಾಡಲಾಗದವರನ್ನು ನಾವು ಕಾಣುತ್ತೇವೆ. ಎಲ್ಲ ಸಂಸ್ಕಾರಗಳಲ್ಲಿ ಶಿಕ್ಷಣ ಸಂಸ್ಕಾರ ಮಹತ್ವದ್ದಾಗಿದೆ. ಮನುಷ್ಯನ ಹೃದಯ ವೈಶಾಲ್ಯತೆಗೆ ಕಾರಣವಾಗುವ ಉತ್ತಮ ಶಿಕ್ಷಣವನ್ನು ಜೇವೂರ ಗುರುಗಳು ನೀಡಿದರು ಅದಕ್ಕಾಗಿ ಇಂದು ನೀವೆಲ್ಲ ಅವರ ಜಯಂತಿ ಉತ್ಸವವನ್ನು ಆಚರಿಸುತ್ತಿರುವಿರಿ” ಎಂದು ಶಿಕ್ಷಣದ ಮಹತ್ವದ ಜೊತೆಗೆ ಜೇವೂರ ಗುರುಗಳ ವ್ಯಕ್ತಿತ್ವದ ಕುರಿತು ಮಾತನಾಡಿದರು.

ದಿವ್ಯ ಸಾನ್ನಿಧ್ಯ ವಹಿಸಿದ್ದ ತಾರೀಹಾಳದ ಅಡವೀಶ ದೇವರು ಮಾತನಾಡಿ, “ಹತ್ತು ದೇವರಿಗಿಂತ ಹೆತ್ತ ತಾಯಿಯನ್ನು ಪೂಜಿಸಿರಿ. ಮನುಷ್ಯನಲ್ಲಿ ಉತ್ತಮ ಸಂಸ್ಕಾರವನ್ನು ನೀಡುವ ಶಿಕ್ಷಣ ಬದುಕಿನ ಮೌಲ್ಯಗಳನ್ನು ಕಲಿಸಿಕೊಡುವುದು.ವಿವಿಧ ಸಾಧಕರ ಸನ್ಮಾನ ಕೂಡ ಈ ಸಂದರ್ಭದಲ್ಲಿ ಮಾಡಿರುವುದು ಕೂಡ ಶ್ಲಾಘನೀಯ” ಎಂದರು.

ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಗುರಮ್ಮ ಶ್ರೀಶೈಲ ಗೋಪಶೆಟ್ಟಿ ನಿಕಟಪೂರ್ವ ಅಧ್ಯಕ್ಷರು ಅಕ್ಕನಬಳಗ, ಮುನವಳ್ಳಿ ವಹಿಸಿ ಮಾತನಾಡಿ, “ಜೇವೂರ ಗುರುಗಳು ನಮ್ಮ ಊರಿನ ಶಿಕ್ಷಣ ಕ್ಷೇತ್ರಕ್ಕೆ ಕಳಶಪ್ರಾಯರಾಗಿರುವರು. ಅವರ ಬದುಕಿನ ಆದರ್ಶಗಳನ್ನು ನಾವೆಲ್ಲರೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರ ಸ್ಮರಣೆಯನ್ನು ನೆನೆಯೋಣ” ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ವಿಭೂಷಿತ ಪ್ರೌಢಶಾಲಾ ಶಿಕ್ಷಕ ಸುಧೀರ ವಾಘೇರಿ,ವಿಶ್ರಾಂತ ಗುರುಮಾತೆಯರಾದ ಶ್ರೀಮತಿ ಜಿ.ಎಲ್.ಗುಣಾರಿ, ಪ್ರಗತಿಪರ ರೈತರಾದ ಬಸವರಾಜ ಚಂದರಗಿ, ಅಖಿಲ ಕರ್ನಾಟಕ ಸಾಂಸ್ಕೃತಿಕ ಸಾಹಿತ್ಯ ಪರಿಷತ್ ಸವದತ್ತಿ ತಾಲೂಕ ಘಟಕದ ಅಧ್ಯಕ್ಷರಾದ ಶ್ರೀಮತಿ ಅನುರಾಧ ಬೆಟಗೇರಿ, ಗಡಿನಾಡು ಸಾಧಕಿ ಪ್ರಶಸ್ತಿ ವಿಭೂಷಿತ ಶ್ರೀಮತಿ ಅನ್ನಪೂರ್ಣ ಲಂಬೂನವರ, ಗಡಿನಾಡು ಸಾಧಕ ಪ್ರಶಸ್ತಿ ವಿಭೂಷಿತ ಮೂರ್ತಿ ಕಲಾವಿದರಾದ ಮಹಾಂತಯ್ಯಾ ಶಾಸ್ತ್ರೀ ಸಂಬಾಳಮಠ, ಗಡಿನಾಡ ಸಾಧಕ ಪ್ರಶಸ್ತಿ ವಿಭೂಷಿತ ವಿಜಯವಾಣಿ ಪತ್ರಕರ್ತರಾದ ಪ್ರಶಾಂತ ತುಳಜಣ್ಣವರ, ಗಡಿನಾಡು ಸಾಧಕ ಪ್ರಶಸ್ತಿ ವಿಭೂಷಿಕ ಸಾಮಾಜಿಕ ಕಾರ್ಯಕರ್ತರಾದ ಬಾಳು ಹೊಸಮನಿ, ಗಡಿನಾಡು ಸಾಧಕ ಪ್ರಶಸ್ತಿ ವಿಭೂಷಿತ ಯೋಗಪಟು ಕಾರ್ತಿಕ ಬೆಲ್ಲದ, ಗಡಿನಾಡು ಸಾಧಕ ಪ್ರಶಸ್ತಿ ವಿಭೂಷಿತ ನೃತ್ಯ ಸಂಯೋಜಕರಾದ ವಿನೋದ ವೇದಿಕೆಯಲ್ಲಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಗೋಮಾಡಿ ಉಪಸ್ಥಿತರಿದ್ದರು.

ಪ್ರತಿಭಾ ಪುರಸ್ಕಾರವನ್ನು ಮಾರ್ಚ ೨೦೨೧ ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕುಮಾರಿ ಚೈತ್ರಾ ಬಸನಗೌಡ ಪಾಟೀಲಳನ್ನು ಸನ್ಮಾನಿಸಲಾಯಿತು.

ದಿವಂಗತ ವ್ಹಿ.ಪಿ.ಜೇವೂರರವರ ಜಯಂತಿ ಉತ್ಸವದ ನಿಮಿತ್ತ ಪ್ರೌಢಶಾಲೆ ಮತ್ತು ಕಾಲೇಜ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ ಜರುಗಿಸಿದ ಭಾಷಣ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವನ್ನು ವೇದಿಕೆಯಲ್ಲಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಜೇವೂರ ಸ್ಮಾರಕ ಪ್ರತಿಷ್ಠಾನದ ಉಪಾಧ್ಯಕ್ಷರಾದ ವೈ.ಬಿ.ಕಡಕೋಳ, ಶ್ರೀಮತಿ ಎಂ.ಜಿ.ಹೊಸಮಠ, ಖಜಾಂಚಿ ವೀರಣ್ಣ ಕೊಳಕಿ, ಮಲ್ಲಿಕಾರ್ಜುನ ಅಷ್ಠಗಿಮಠ,ಶಿವೂ ಕಾಟೆ, ವೀರೂ ಕಳಸನ್ನವರ,ಅಜಯ ಕಂಬನ್ನವರ, ಲಾಲಸಾಬ ವಟ್ನಾಳ,ರಾಧಾ ಕುಲಕರ್ಣಿ, ಬಿ.ಬಿ.ನಾವಲಗಟ್ಟಿ, ವಾಯ್.ಎಫ್.ಶಾನುಭೋಗ, ಮೋಹನ ಸರ್ವಿ,ಉಮೇಶ ಬಡೆಮ್ಮಿ, ಬಸವರಾಜ ಮಾದರ, ಸುಮಾ ಯಲಿಗಾರ ಮೊದಲಾದವರು ಉಪಸ್ಥಿತರಿದ್ದರು.

ಗುರುಮಾತೆ ಅನಿತಾ ಯಲಿಗಾರ ಕಾರ್ಯಕ್ರಮದ ಪ್ರಾರಂಭದಲ್ಲಿ ಸ್ವಾಗತಿಸಿದರು. ಭವಾನಿ ಖೊಂದುನಾಯ್ಕ ನಿರೂಪಿಸಿ ವಂದಿಸಿದರು.

RELATED ARTICLES

Most Popular

error: Content is protected !!
Join WhatsApp Group