spot_img
spot_img

ಪತ್ರಕರ್ತ ಯಾರಿಗೂ ನೋವಾಗದಂತೆ ಸಮಾಜವನ್ನು ತಿದ್ದುವ ಕೆಲಸ ಮಾಡಬೇಕು – ಸಾಹಿತಿ ಮಲ್ಲಿಕಾರ್ಜುನ ಹೆಗ್ಗಳಗಿ

Must Read

- Advertisement -

ಮೂಡಲಗಿ – ಪತ್ರಿಕಾರಂಗವೆಂದರೆ ಜನರನ್ನು ಸರ್ಕಾರಕ್ಕೆ ಪರಿಚಯಿಸುವುದು, ಸರ್ಕಾರವನ್ನು ಜನರಿಗೆ ಪರಿಚಯಿಸುವುದು. ಪತ್ರಕರ್ತರು ಬರೆಯುವಾಗ ಯಾರಿಗೂ ತೊಂದರೆಯಾಗದಂತೆ ಬರೆಯಬೇಕು ಅದು ಸಾಮಾನ್ಯ ಜನರ ಸಮಸ್ಯೆಯನ್ನು ಬಿಂಬಿಸುತ್ತಿರಬೇಕು. ಎಂದು ಖ್ಯಾತ ಸಾಹಿತಿ ಪತ್ರಕರ್ತ ಮಲ್ಲಿಕಾರ್ಜುನ ಹೆಗ್ಗಳಗಿ ಹೇಳಿದರು.

ಅವರು ಸ್ಥಳೀಯ ಚೈತನ್ಯ ವಸತಿ ಶಾಲೆಯ ಸಭಾ ಭವನದಲ್ಲಿ ಮೂಡಲಗಿ ತಾಲೂಕಾ ಪತ್ರಕರ್ತರ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.

- Advertisement -

ಪತ್ರಕರ್ತ ನಮ್ರವಾಗಿ ಇರಬೇಕು ಟೀಕೆ ಮಾಡುವಾಗ ಬಹಳ ವಿಚಾರ ಮಾಡಬೇಕು. ಯಾರಿಗೂ ನೋವಾಗಬಾರದು. ಪಾಟೀಲ ಪುಟ್ಟಪ್ಪ ಹೇಳುವಂತೆ ಪತ್ರಕರ್ತರಿಗೆ ಹಾಗೂ ಪ್ರೀತಿ ಮಾಡುವವರಿಗೆ ಯಾವುದೇ ತರಬೇತಿ ಬೇಕಾಗಿಲ್ಲ ಎಂಬುದನ್ನು ನೆನಪಿಡಬೇಕು ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮೆನ್ನಿಕೇರಿ ಮಾತನಾಡಿ, ಮೂರೂ ಕಾಲಗಳಲ್ಲಿ ಮಾತನಾಡುವ ಕ್ಷೇತ್ರ ಪತ್ರಿಕಾ ಕ್ಷೇತ್ರ. ಪತ್ರಕರ್ತರು ತಮ್ಮ ಬರಹಗಳನ್ನು ತೆಗೆದಿಟ್ಟು ಹಿಂದಿನ ನೆನಪುಗಳನ್ನು ಕೆದಕುವ ಕೆಲಸ ಮಾಡಿದರೆ ತುಂಬಾ ಆಕರ್ಷಕವಾಗಿರುತ್ತದೆ. ನಾಲ್ಕನೆಯ ಅಂಗವಾಗಿ ಮಾಧ್ಯಮ ಕ್ಷೇತ್ರವು ನ್ಯಾಯಾಂಗವನ್ನು ಕೂಡ ತರ್ಕಕ್ಕೆ ಒಳಪಡಿಸುತ್ತದೆ ನಮ್ಮ ಜ್ಞಾನ ವೃದ್ಧಿಗೆ, ಭಾಷಾ ವೃದ್ಧಿಗೆ ಮಾಧ್ಯಮ ಸಹಕಾರಿಯಾಗುತ್ತದೆ ಎಂದರು.

- Advertisement -

ಸಿಪಿಐ ವೆಂಕಟೇಶ ಮುರನಾಳ ಮಾತನಾಡಿ, ಸಮಾಜದಲ್ಲಿನ ಕೆಟ್ಟ ಪದ್ಧತಿಗಳನ್ನು ಪತ್ರಿಕೆಗಳು ಎತ್ತಿತೋರಿಸಿ ಸುಧಾರಣೆಗೆ ಸಹಕರಿಸಬೇಕು ಎಂದರು.

ಮೂಡಲಗಿ ತಹಶೀಲ್ದಾರ ಡಿ ಜೆ ಮಹಾತ್ ಅವರು ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಪನ್ಮೂಲ ಶಿಕ್ಷಕರು ವೈ ಬಿ ಪಾಟೀಲ ಮಾತನಾಡಿದರು.

ಹಿರಿಯ ಪತ್ರಕರ್ತ ಬಾಲಶೇಖರ ಬಂದಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಮೂಡಲಗಿಯಲ್ಲಿ ಪತ್ರಿಕಾ ಕ್ಷೇತ್ರ ಸಾಕಷ್ಟು ಬೆಳೆಯುತ್ತಿದೆ ಪತ್ರಕರ್ತರು ಹೆಚ್ಚಾಗುತ್ತಿದ್ದಾರೆ ಆದ್ದರಿಂದ ನಗರದಲ್ಲಿ ಒಂದು ಪತ್ರಕರ್ತರ ಭವನ ನಿರ್ಮಾಣವಾಗುವ ಅಗತ್ಯವಿದೆ ಎಂದರಲ್ಲದೆ, ಪತ್ರಿಕಾ ರಂಗದ ಇತಿಹಾಸ ಹಾಗೂ ಬೆಳವಣಿಗೆಯ ಬಗ್ಗೆ ಹೇಳಿದರು ಹಾಗೆಯೇ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಿರಿಯ ಸಾಹಿತಿ, ಪತ್ರಕರ್ತ ಮಲ್ಲಿಕಾರ್ಜುನ ಹೆಗ್ಗಳಗಿಯವರ ಸಂಕ್ಷಿಪ್ತ ಪರಿಚಯ ಮಾಡಿಕೊಟ್ಟರು.

ಈ ಸಂದರ್ಭದಲ್ಲಿ ಪತ್ರಕರ್ತ ಮಲ್ಲಿಕಾರ್ಜುನ ಹೆಗ್ಗಳಗಿಯವರನ್ನು ಪತ್ರಕರ್ತರು ಸನ್ಮಾನಿಸಿದರು.

ಸಮಾರಂಭದಲ್ಲಿ ಮುಖ್ಯ ವೈದ್ಯಾಧಿಕಾರಿ ಡಾ. ಭಾರತಿ ಕೋಣಿ, ಪುರಸಭಾ ಅಧ್ಯಕ್ಷ ಹಣಮಂತ ಗುಡ್ಲಮನಿ, ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ಪಿವೆಸ್ ಐ. ಎಚ್ ವೈ ಬಾಲದಂಡಿ, ತಾಪಂ ಅಧ್ಯಕ್ಷ ಹಣಮಂತ ಬಳಿಗಾರ ಅತಿಥಿಗಳಾಗಿ ಉಪಸ್ಥಿತರಿದ್ದರು.

ವೇದಿಕೆಯ ಮೇಲೆ ಪತ್ರಕರ್ತರಾದ ಎಲ್ ವೈ ಅಡಿಹುಡಿ, ಉಮೇಶ ಬೆಳಕೂಡ ಹಾಗೂ ಅಕ್ಬರ್ ಪೀರಜಾದೆ ಉಪಸ್ಥಿತರಿದ್ದರು.

ಸಾನ್ನಿಧ್ಯವನ್ನು ಶ್ರೀ ದತ್ತಾತ್ರೇಯ ಬೋಧ ಸ್ವಾಮೀಜಿ ವಹಿಸಿದ್ದರು. ಆರಂಭದಲ್ಲಿ ಕು.ಐಶ್ವರ್ಯ ತಳವಾರ ಸ್ವಾಗತ ಗೀತೆ ಹಾಡಿದರು. ಸಿದ್ದಣ್ಣ ದುರದುಂಡಿ ಕಾರ್ಯಕ್ರಮ ನಿರೂಪಿಸಿದರು. ತಾಲೂಕಾ ಪ್ರೆಸ್ ಅಸೋಸಿಯೇಶನ್ ಅಧ್ಯಕ್ಷ ಲಕ್ಷ್ಮಣ ಅಡಿಹುಡಿ ಸ್ವಾಗತಿಸಿದರು. ಪತ್ರಕರ್ತ ಮಲ್ಲು ಬೋಳನವರ ವಂದಿಸಿದರು

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group