ಕಲ್ಲೋಳಿ ಬಸವೇಶ್ವರ ಅರ್ಬನ್ ಸೌಹಾರ್ದ ಸೊಸೈಟಿಗೆ ರೂ. 2.42 ಕೋಟಿ ಲಾಭ

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

ಮುಖ್ಯಾಂಶಗಳು:

  • ರೂ. 112 ಕೋಟಿ ವಹೀವಾಟು
  • ನೂರಕ್ಕೆ ನೂರು ಸಾಲ ವಸೂಲಾತಿ
  • ಶೇ. 25 ಲಾಭಾಂಶ ವಿತರಣೆ

ಮೂಡಲಗಿ: ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ನಿ., ಪ್ರಸಕ್ತ ಹಣಕಾಸು ವರ್ಷದಲ್ಲಿ ರೂ. 2.42 ಕೋಟಿ ಲಾಭ ಗಳಿಸಿ ಪ್ರಗತಿಯಲ್ಲಿ ಸಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ಬಾಳಪ್ಪ ಬ ಬೆಳಕೂಡ ಅವರು ತಿಳಿಸಿದರು.

ಸೊಸೈಟಿಯ ಪ್ರಗತಿ ಬಗ್ಗೆ ತಿಳಿಸಲು ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, 2020-21ರ ಆರ್ಥಿಕ ವರ್ಷದಲ್ಲಿ ರೂ 31.07 ಕೋಟಿ ಠೇವಣಿ ಸಂಗ್ರಹಿಸಿ, ರೂ 35.50 ಕೋಟಿ ಸಾಲ ವಿತರಿಸಿದೆ. ರೂ 12 ಕೋಟಿ ಸ್ವಂತ ಬಂಡವಾಳ ಹೊಂದಿದ್ದು, ರೂ 43.84 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ಕಳೆದ 20 ವರ್ಷಗಳಿಂದ ಶೇ 25% ಶೇರು ಲಾಭಾಂಶ ಹಂಚಲಾಗಿದೆ. ಮತ್ತು ಸಂಸ್ಥೆ ಪ್ರಾರಂಭದಿಂದಲೂ ಶೇ 100ಕ್ಕೆ 100ರಷ್ಟು ಸಾಲ ವಸೂಲಾತಿ ಮಾಡಿದ್ದು, ಪ್ರತಿ ವರ್ಷ ಅಡಿಟ್‍ದಲ್ಲಿ ಅ ಶ್ರೇಯಾಂಕ ದೊರೆತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಸೊಸೈಟಿಯ ಎಲ್ಲ ಪ್ರಗತಿಗೆ ಕಾರಣರಾದ ಸಾಲಗಾರ ಸದಸ್ಯರಿಗೆ, ಸಂಸ್ಥೆಯ ಮೇಲೆ ನಂಬಿಕೆ ಇಟ್ಟು ಠೇವಣಿಗಳನ್ನು ಮಾಡಿದ ಸದಸ್ಯರಿಗೆ, ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿರುವ ಆಡಳಿತ ಮಂಡಳಿ, ಶ್ರಮವಹಿಸಿ ಕೆಲಸ ಮಾಡಿದ ಸಿಬ್ಬಂದಿ ವರ್ಗ, ಕಾಲಕಾಲಕ್ಕೆ ಕಾಯ್ದೆ, ನಿಯಮಗಳನ್ನು ತಿಳಿಸುವ ಎಲ್ಲ ಅಧಿಕಾರಿಗಳಿಗೆ ಕಾನೂನು ಸಲಹೆಗಾರರಿಗೆ, ಎಲ್ಲ ಬ್ಯಾಂಕರಗಳಿಗೆ, ಹಿತೈಷಿಗಳಿಗಳ ಪ್ರೋತ್ಸಾಹವನ್ನು ಬೆಳಕೂಡ ಅವರು ಸ್ಮರಿಸಿದರು.

- Advertisement -

ಸೊಸೈಟಿಯ ಉಪಾಧ್ಯಕ್ಷ ಶಿವರುದ್ರ ಬಿ, ಪಾಟೀಲ, ಆಡಳಿತ ಮಂಡಳಿ ಸದಸ್ಯರಾದ ಭೀಮಪ್ಪ ಕಡಾಡಿ, ಬಸಗೌಡ ಪಾಟೀಲ, ಮಲ್ಲಪ್ಪ ಖಾನಾಪೂರ, ರಾಮಪ್ಪ ದಬಾಡಿ, ಹಣಮಂತ ಪರಕನಟ್ಟಿ, ಸುಭಾಸ ಖಾನಾಪೂರ, ಬಸಪ್ಪ ಹೆಬ್ಬಾಳ, ಪ್ರಕಾಶ ಕಲಾಲ, ಮಮ್ಮದಶಫಿ ಮೊಕಾಶಿ, ರವಿಕಾಂತ ಶರಗಾಮವಕರ, ಹಿರಿಯರಾದ ಬಸವಣ್ಣೆಪ್ಪ ಗೋರೋಶಿ, ಬಾಳಣ್ಣಾ ಕಂಕಣವಾಡಿ ಹಾಗೂ ಪ್ರಧಾನ ವ್ಯವಸ್ಥಾಪಕ ಹಣಮಂತ ಖಾನಗೌಡ್ರ ಹಾಗು ಸಿಬ್ಬಂದಿಯವರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!